ಬ್ರೇಕಿಂಗ್ ನ್ಯೂಸ್
09-07-22 01:25 pm Mangalore Correspondent ಕ್ರೈಂ
ಮಂಗಳೂರು, ಜುಲೈ 9: ವೈದ್ಯಕೀಯ ಉಪಕರಣಗಳನ್ನು ಪೂರೈಸುವುದಾಗಿ ಹೇಳಿ 29 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಬಗ್ಗೆ ನಗರದ ಬರ್ಕೆ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.
ಮುರಲೀಧರ ಶೆಟ್ಟಿ ಎಂಬವರು ಮಂಗಳೂರಿನಲ್ಲಿ ವೈದ್ಯಕೀಯ ಉಪಕರಣಗಳ ಮಾರಾಟ ಮತ್ತು ಸರ್ವಿಸ್ ನೀಡುವ ಗುತ್ತಿಗೆ ಹೊಂದಿದ್ದಾರೆ. ಇವರು 2020ರಲ್ಲಿ ಪುಣೆಯ ಅಮಿತ್ ಸುರೇಶ್ ಸೆಹವಾಲೆ ಎನ್ನುವ ವ್ಯಕ್ತಿಯ ಬಳಿ 12 ಲಕ್ಷದ ಕೆಲವು ವೈದ್ಯಕೀಯ ಪರಿಕರಗಳನ್ನು ಕಳಿಸಿಕೊಡುವಂತೆ ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕಾಗಿ 12 ಲಕ್ಷ ರೂಪಾಯಿ ನೀಡಿದ್ದರು. ಆದರೆ ಯಾವುದೇ ಪರಿಕರಗಳನ್ನು ನೀಡದೆ ವಂಚಿಸಿದ್ದಾರೆ.
ಈ ಬಗ್ಗೆ ಮುರಲೀಧರ್ ಶೆಟ್ಟಿ ಪುಣೆಗೆ ತೆರಳಿ ಹಲವು ಬಾರಿ ತನ್ನ ಹಣ ವಾಪಸ್ ನೀಡುವಂತೆ ಕೇಳಿದ್ದರು. ಆದರೆ ಆರೋಪಿ ಚೆಕ್ ನೀಡಿ ಕಳುಹಿಸಿಕೊಟ್ಟಿದ್ದಾರೆ. ಚೆಕ್ ಬೌನ್ಸ್ ಆಗಿದ್ದು ತನಗೆ ಹಣ ಸಿಗದೆ ವಂಚನೆಯಾಗಿದೆ. ಈ ನಡುವೆ, 2021ರಲ್ಲಿ ಮತ್ತೊಮ್ಮೆ ಇದೇ ರೀತಿ ವೈದ್ಯಕೀಯ ಪರಿಕರ ಒದಗಿಸಿಕೊಡುವುದಾಗಿ ಪ್ರತ್ಯೇಕ ಒಪ್ಪಂದ ಮಾಡಿಕೊಂಡಿದ್ದರು. ಅದರಲ್ಲಿಯೂ 15.39 ಲಕ್ಷ ರೂಪಾಯಿ ಹಣವನ್ನು ಸಂಸ್ಥೆಯಿಂದ ಪಡೆದಿದ್ದು ಉಪಕರಣಗಳನ್ನು ಒದಗಿಸದೆ ವಂಚಿಸಿದ್ದಾರೆ. ಒಟ್ಟು 29.39 ಲಕ್ಷ ರೂಪಾಯಿ ವಂಚಿಸಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮುರಲೀಧರ ಶೆಟ್ಟಿ ಬರ್ಕೆ ಠಾಣೆಗೆ ದೂರು ನೀಡಿದ್ದಾರೆ.
A case is registered in Barke police station of the city of cheating to the tune of Rs 27.39 lac by a person who promised to supply medical equipment to a dealer.Muralidhar Shetty, who deals in sales and service of medical equipment had given Rs 12 lac to the accused Amit Suresh Shewale in 2020 for supply of medical equipment on an agreement. However, he allegedly did not supply the goods and cheated Muralidhar.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm