ಬ್ರೇಕಿಂಗ್ ನ್ಯೂಸ್
21-04-25 01:03 pm Bangalore Correspondent ಕ್ರೈಂ
ಬೆಂಗಳೂರು, ಎ.21 : ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ನಾನಾ ರೀತಿಯ ಅನುಮಾನಗಳನ್ನು ಹುಟ್ಟುಹಾಕಿದೆ. ಆಸ್ತಿ ಕಲಹ, ದಂಪತಿ ನಡುವೆ ಮನಸ್ತಾಪ, ಕೌಟುಂಬಿಕ ವಿಚಾರಗಳು ಥಳುಕು ಹಾಕುತ್ತಿದ್ದು ಮೇಲ್ನೋಟಕ್ಕೆ ಪತ್ನಿ ಮತ್ತು ಮಗಳು ಸೇರಿ ಕೊಲೆಗೈದಿರುವ ಸಂಶಯ ಬಂದಿದೆ. ಪತ್ನಿ ತಾನೇ ಕೊಲೆಗೈದಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಪೊಲೀಸರು ಪತ್ನಿ ಪಲ್ಲವಿ ಮತ್ತು ಪುತ್ರಿ ಕೃತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪದೇ ಪದೇ ಗನ್ ತಂದು ಮಗಳಿಗೆ ಹಾಗೂ ನನಗೆ ಬೆದರಿಕೆ ಹಾಕುತ್ತಿದ್ದರು. ಭಾನುವಾರವೂ ಬೆಳಗ್ಗೆಯಿಂದಲೇ ಮನೆಯಲ್ಲಿ ಜಗಳ ಆಗಿದೆ. ಮಧ್ಯಾಹ್ನ ಜಗಳ ವಿಕೋಪಕ್ಕೆ ಹೋಗಿ ನಮ್ಮನ್ನೇ ಕೊಲೆ ಮಾಡಲು ಯತ್ನಿಸಿದರು. ನಮ್ಮ ಜೀವ ಉಳಿಸಿಕೊಳ್ಳಲು ನಾವು ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದು ಬಳಿಕ ಚೂರಿಯಲ್ಲಿ ಇರಿದು ಕೊಲೆ ಮಾಡಿದ್ದೇವೆ ಎಂಬುದಾಗಿ ಪತ್ನಿ ಪಲ್ಲವಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ನಮ್ಮ ಜೀವ ಉಳಿಸಿಕೊಳ್ಳಲು ಹೋರಾಡಿದ್ದು, ಖಾರದ ಪುಡಿ ಹಾಗೂ ಅಡುಗೆ ಎಣ್ಣೆ ಎರಚಿದೆವು. ಕೈಕಾಲು ಕಟ್ಟಿ ಚಾಕುವಿನಿಂದ ಚುಚ್ಚಿದೆವು. ತೀವ್ರ ರಕ್ತಸ್ರಾವದಿಂದ ಓಂ ಪ್ರಕಾಶ್ ಸಾವಿಗೀಡಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಘಟನೆ ನಂತರ ಸಂಜೆ ನಾಲ್ಕು ಗಂಟೆ ವೇಳೆಗೆ ಸ್ಥಳೀಯ ಪೊಲೀಸರಿಗೆ ಪಲ್ಲವಿ ಮಾಹಿತಿ ನೀಡಿದ್ದರು. ಪ್ರಕರಣದಲ್ಲಿ ಪಲ್ಲವಿ ಮೊದಲ ಆರೋಪಿಯಾಗಿದ್ದು ಎರಡನೇ ಆರೋಪಿಯೆಂದು ಮಗಳನ್ನು ಗುರುತಿಸಲಾಗಿದೆ. ಘಟನೆ ಸಂಬಂಧ ಓಂಪ್ರಕಾಶ್ ಪುತ್ರ ನೀಡಿದ ದೂರಿನಂತೆ ತನಿಖೆ ನಡೆಸಲಾಗುತ್ತಿದೆ.
ಪಲ್ಲವಿ ಅವರು ಓಂಪ್ರಕಾಶ್ ಕಣ್ಣಿಗೆ ಕಾರದ ಪುಡಿ ಎರಚಿ, ಮನಸೋ ಇಚ್ಛೆ ಚಾಕುವಿನಿಂದ ಚುಚ್ಚಿ ಚಿತ್ರಹಿಂಸೆ ಕೊಟ್ಟಿದ್ದಾರೆ. ಎದೆ, ಕೈಗಳು, ಹೊಟ್ಟೆಯ ಭಾಗಕ್ಕೆ 10ಕ್ಕೂ ಹೆಚ್ಚು ಬಾರಿ ಚಾಕು ಇರಿದಿದ್ದು ದೇಹದಲ್ಲಿ ಗಾಯದ ಗುರುತು ಕಂಡುಬಂದಿದೆ. ಹೊಟ್ಟೆಗೆ ನಾಲ್ಕರಿಂದ ಐದು ಬಾರಿ ಚಾಕು ಇರಿದಿರುವ ಕಾರಣ ತೀವ್ರ ರಕ್ತಸ್ರಾವವಾಗಿದೆ. ಕೊಲೆ ನಡೆದಿರುವ ಹಾಲ್‌ನಲ್ಲಿ ರಕ್ತದ ಕೋಡಿ ಹರಿದಿದೆ. ತೀವ್ರ ರಕ್ತಸ್ರಾವದಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಅಂತಿಮವಾಗಿ ಓಂಪ್ರಕಾಶ್ ಮೃತಪಟ್ಟ ಬಳಿಕ ಹಿರಿಯ ಐಪಿಎಸ್ ಅಧಿಕಾರಿಯ ಪತ್ನಿಗೆ ಹಾಗೂ ಸ್ಥಳೀಯ ಎಚ್‌ಎಸ್‌ಆರ್ ಠಾಣೆಗೆ ಕರೆ ಮಾಡಿ ಕೊಲೆ ವಿಚಾರ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆ ಜವಾಬ್ದಾರಿಯನ್ನು ಮಡಿವಾಳ ಠಾಣೆ ಎಸಿಪಿ ವಾಸುದೇವ್ ಅವರಿಗೆ ವಹಿಸಲಾಗಿದೆ.
ತಾಯಿ, ಮಗಳು ಇಬ್ಬರನ್ನೂ ಭಾನುವಾರ ರಾತ್ರಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಸೋಮವಾರ ಬೆಳಗ್ಗೆ ಠಾಣೆಗೆ ಕರೆತಂದಾಗ ರಂಪಾಟ ನಡೆಸಿದ್ದು 'ನಮ್ಮನ್ನು ಏಕೆ ವಶಕ್ಕೆ ಪಡೆದಿದ್ದೀರಿ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಪೊಲೀಸ್ ಜೀಪಿನಿಂದ ಕೆಳಕ್ಕಿಳಿಯದೇ ಜೀಪಿನಲ್ಲೇ ಕುಳಿತಿದ್ದರು. ಸೋಮವಾರ ಸಂಜೆ ಇಬ್ಬರನ್ನೂ ಕೋರ್ಟ್‌ಗೆ ಹಾಜರು ಪಡಿಸುವ ಸಾಧ್ಯತೆಯಿದೆ.
ಕೋಟ್ಯಂತರ ಮೌಲ್ಯದ ಆಸ್ತಿಯದ್ದೇ ಕಲಹ
ಆಸ್ತಿ ಹಾಗೂ ಕೌಟುಂಬಿಕ ಕಲಹವೇ ಭೀಕರ ಹತ್ಯೆಯ ಹಿಂದಿದೆ ಎನ್ನಲಾಗುತ್ತಿದೆ. ಓಂಪ್ರಕಾಶ್ ಡಿಜಿಪಿ ಆಗಿದ್ದಾಗ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಖರೀದಿಸಿದ್ದ ಕೋಟ್ಯಂತರ ಬೆಲೆ ಬಾಳುವ ಭೂಮಿಯೇ ಕಲಹಕ್ಕೆ ಕಾರಣ ಎನ್ನುವ ಅನುಮಾನ ಇದೆ. ಓಂಪ್ರಕಾಶ್ 2017 ರಲ್ಲಿ ಸೇವೆಯಿಂದ ನಿವೃತ್ತಿಗೊಂಡಿದ್ದು ಅದಕ್ಕು ಮೊದಲು ಹಾಗೂ ನಂತರದಲ್ಲಿ ಬೆಂಗಳೂರು ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿ ಖರೀದಿಸಿದ್ದರು. ಪತ್ನಿ ಪಲ್ಲವಿ, ಪುತ್ರಿ ಕೃತಿ ಹಾಗೂ ಪುತ್ರನ ಹೆಸರಿನಲ್ಲೂ ಆಸ್ತಿ ನೊಂದಾಯಿಸಿದ್ದರು.
ತಂಗಿ ಹೆಸರಿನಲ್ಲಿದ್ದ ಆಸ್ತಿ ಮೇಲೆ ಕಣ್ಣು !
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಓಂಪ್ರಕಾಶ್ ಖರೀದಿಸಿದ್ದ ಜಮೀನನ್ನು ಸೋದರಿಯರ ಹೆಸರಿನಲ್ಲಿ ನೋಂದಾಯಿಸಿದ್ದರು. ಇದಕ್ಕೆ ಓಂ ಪ್ರಕಾಶ್ ಪತ್ನಿ ಪಲ್ಲವಿ ಆಕ್ಷೇಪ ಎತ್ತಿದ್ದರು. ಈ ಕುರಿತಾಗಿ ಪದೇ ಪದೇ ಜಗಳವಾಗಿದ್ದು ಇದೇ ವಿಚಾರ ಹತ್ಯೆಗೆ ಕಾರಣವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Former Karnataka Police chief Om Prakash, who was found dead at his Bengaluru home yesterday, fought with his wife Pallavi in the afternoon. During this fight, she allegedly threw chilli powder at him, tied him up and then stabbed him to death, sources have said. The 68-year-old was also attacked with a glass bottle.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm