No GST on UPI Payments: ಎರಡು ಸಾವಿರಕ್ಕಿಂತ ಮೇಲಿನ ಯುಪಿಐಗೆ ಜಿಎಸ್ಟಿ ವಿಧಿಸುವುದು ಸತ್ಯವೇ ? ಕೇಂದ್ರ ಸರ್ಕಾರ ಸ್ಪಷ್ಟನೆ

20-04-25 08:42 pm       HK News Desk   ದೇಶ - ವಿದೇಶ

ಎರಡು ಸಾವಿರಕ್ಕಿಂತ ಮೇಲಿನ ಯುಪಿಐ ಪಾವತಿಗಳಿಗೆ ಜಿಎಸ್ಟಿ ಹಾಕಲಾಗುತ್ತದೆ ಎಂಬ ವದಂತಿಯನ್ನು ಕೇಂದ್ರ ಹಣಕಾಸು ಸಚಿವಾಲಯ ತಳ್ಳಿಹಾಕಿದೆ. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಮೂಲಕ ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದ್ದು, ಈ ರೀತಿಯ ವದಂತಿ ಕೇವಲ ಕಾಲ್ಪನಿಕ ಮತ್ತು ತಪ್ಪು ಮಾಹಿತಿಯಿಂದ ಕೂಡಿರುತ್ತದೆ ಎಂದಿದೆ.

ನವದೆಹಲಿ, ಎ.20 : ಎರಡು ಸಾವಿರಕ್ಕಿಂತ ಮೇಲಿನ ಯುಪಿಐ ಪಾವತಿಗಳಿಗೆ ಜಿಎಸ್ಟಿ ಹಾಕಲಾಗುತ್ತದೆ ಎಂಬ ವದಂತಿಯನ್ನು ಕೇಂದ್ರ ಹಣಕಾಸು ಸಚಿವಾಲಯ ತಳ್ಳಿಹಾಕಿದೆ. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಮೂಲಕ ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದ್ದು, ಈ ರೀತಿಯ ವದಂತಿ ಕೇವಲ ಕಾಲ್ಪನಿಕ ಮತ್ತು ತಪ್ಪು ಮಾಹಿತಿಯಿಂದ ಕೂಡಿರುತ್ತದೆ ಎಂದಿದೆ.

ಕೇಂದ್ರ ಸರಕಾರ ಎರಡು ಸಾವಿರಕ್ಕಿಂತ ಮೇಲಿನ ಯುಪಿಐ ಪಾವತಿಗಳಿಗೆ ಜಿಎಸ್ಟಿ ವಿಧಿಸುತ್ತದೆ ಎಂಬ ಮಾಹಿತಿ ತಪ್ಪು ಕಲ್ಪನೆಯಿಂದ ಕೂಡಿರುತ್ತದೆ. ಯಾವುದೇ ಆಧಾರ ರಹಿತ ಮತ್ತು ಜನರನ್ನು ತಪ್ಪು ದಾರಿಗೆಳೆಯುವಂಥದ್ದು. ಸದ್ಯಕ್ಕೆ ಸರಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾಪ ಇಲ್ಲ ಎಂದು ಯುಪಿಐ ಬಳಕೆದಾರರಿಗೆ ಸ್ಪಷ್ಟಪಡಿಸಿದೆ.

ಭಾರತ ಸರಕಾರವು ಯುಪಿಐ ಮೂಲಕ ಡಿಜಿಟಲ್ ಪೇಮೆಂಟ್ ಅನ್ನು ಉತ್ತೇಜಿಸುತ್ತದೆ ಎಂದು ಹೇಳಿರುವ ಸಚಿವಾಲಯವು, ಜಿಎಸ್ ಟಿ ಎನ್ನುವುದು ನಿರ್ದಿಷ್ಟ ವಸ್ತು, ಸರಕುಗಳಿಗೆ ಮಾರಾಟದ ಮೇಲಷ್ಟೇ ವಿಧಿಸುವ ತೆರಿಗೆಯಾಗಿರುತ್ತದೆ ಎಂದು ಹೇಳಿದೆ. ಕೇಂದ್ರ ಸರಕಾರವು 2020ರ ಜನವರಿಯಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಪದ್ದತಿಯನ್ನು ಜಾರಿಗೆ ತಂದಿತ್ತು. ಆನಂತರ, ದೇಶಾದ್ಯಂತ ನೇರ ತೆರಿಗೆ ಅಂದರೆ, ಎಲ್ಲ ರಾಜ್ಯಗಳಲ್ಲೂ ಏಕಪ್ರಕಾರದ ತೆರಿಗೆ ವಿಧಿಸಬಲ್ಲ ಜಿಎಸ್ಟಿ ಜಾರಿಗೆ ಬಂದಿತ್ತು. ಇದೇ ವೇಳೆ, ವ್ಯಾಪಾರಿ ಮತ್ತು ಗ್ರಾಹಕರ ನಡುವಿನ ಮರ್ಚಂಟ್ ಡಿಸ್ಕೌಂಟ್ ರೇಟ್ ತೆಗೆದುಹಾಕಲಾಗಿತ್ತು.

Social media platforms have been flooded with posts claiming that the Union government is planning to impose an 18% Goods and Services Tax (GST) on Unified Payments Interface (UPI) transactions above Rs 2,000. These claims have spread rapidly across WhatsApp, X (formerly Twitter), Instagram, LinkedIn, and Facebook, causing confusion among digital payment users. Those who make transactions daily through UPI platforms using popular services like Google Pay, PhonePe, Paytm, and others could face an additional tax. Is this true? Here is a fact check. What is the Reality of GST Charges on UPI Transactions? Understanding Facts Here A closer look at the matter reveals that these claims are completely false and misleading. The government has not issued any official announcement or notification about imposing GST on UPI transactions of any amount. Digital payments through UPI remain free for users, and no GST is charged on the money being transferred, whether for personal or commercial use.