Mangalore Valencia Church, Fr Cyprian Pinto: ವೆಲೆನ್ಸಿಯಾ ಚರ್ಚ್ ಪಾದ್ರಿ ವಿರುದ್ಧ 50ಕ್ಕೂ ಹೆಚ್ಚು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಆರೋಪ ; ಒಡನಾಡಿ ಸಂಸ್ಥೆಯಿಂದ ಮಂಗಳೂರು ಕಮಿಷನರಿಗೆ ದೂರು

14-10-26 08:55 pm       Mangaluru Staffer   ಕ್ರೈಂ

ಮಂಗಳೂರು ನಗರದ ವೆಲೆನ್ಸಿಯಾದ ಚರ್ಚ್ ಪಾದ್ರಿಯೊಬ್ಬರು 50ಕ್ಕೂ ಹೆಚ್ಚು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯವರು ಮಂಗಳೂರು ಪೊಲೀಸ್ ಕಮಿಷನರಿಗೆ ದೂರು ನೀಡಿದ್ದು, ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಮಂಗಳೂರು, ಅ.14: ಮಂಗಳೂರು ನಗರದ ವೆಲೆನ್ಸಿಯಾದ ಚರ್ಚ್ ಪಾದ್ರಿಯೊಬ್ಬರು 50ಕ್ಕೂ ಹೆಚ್ಚು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯವರು ಮಂಗಳೂರು ಪೊಲೀಸ್ ಕಮಿಷನರಿಗೆ ದೂರು ನೀಡಿದ್ದು, ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ವೆಲೆನ್ಸಿಯಾದ ಸೇಂಟ್ ವಿನ್ಸೆಂಟ್ ಚರ್ಚ್ ಫಾದರ್ ಸಿಪ್ರಿಯನ್ ಪಿಂಟೋ ಎಂಬವರು ಚರ್ಚಿನಲ್ಲಿ ಪೂಜಾ ವಿಧಿಗಳಿಗೆ ಸಹಕರಿಸುತ್ತಿದ್ದ ಅಪ್ರಾಪ್ತ ಬಾಲಕರನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿದ್ದಾರೆಂದು ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸ್ವತಃ ಸಂತ್ರಸ್ತರು ಮಂಗಳೂರು ಬಿಷಪರಿಗೂ ದೂರು ನೀಡಿದ್ದಾರೆಂದು ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟಾನ್ಲೀ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಬಿಷಪ್ ಪೀಟರ್ ಪೌಲ್ ಸಲ್ದಾನ ಅವರಿಗೆ ಪೋಷಕರು ಲಿಖಿತ ದೂರು ನೀಡಿದ್ದು, ಇದಾಗಿ ಎರಡು ತಿಂಗಳು ಕಳೆದಿದೆ. ಬಿಷಪರು ದೂರಿನ ಬಗ್ಗೆ ವ್ಯಾಟಿಕನ್ನಲ್ಲಿರುವ ಪೋಪ್ ಗಮನಕ್ಕೆ ತಂದು ಕ್ರಮ ಜರುಗಿಸುತ್ತೇನೆಂದು ಹೇಳಿ ಪೋಷಕರನ್ನು ಕಳುಹಿಸಿದ್ದಾರೆ. ಆದರೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪೋಕ್ಸೋ ಕಾಯ್ದೆಯಡಿ ಬರುವುದರಿಂದ ಈ ರೀತಿಯ ಪ್ರಕರಣಗಳನ್ನು ಪೊಲೀಸರ ಗಮನಕ್ಕೆ ತರದೆ ಮುಚ್ಚಿಡುವುದು ಅಪರಾಧವಾಗಿದ್ದು, ಬಿಷಪ್ ಅವರ ಮೇಲೂ ಕೇಸು ದಾಖಲಿಸಬೇಕೆಂದು ಸ್ಟಾನ್ಲೀ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಕೆಲವು ಪೋಷಕರು ಈ ಬಗ್ಗೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಗಮನಕ್ಕೆ ತಂದಿದ್ದು ನಿರ್ದೇಶನಾಲಯದಿಂದ ಮಂಗಳೂರಿನ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತನಿಖೆಗೆ ನಿರ್ದೇಶನ ಬಂದಿದೆ ಎನ್ನುವ ಮಾಹಿತಿಗಳಿದ್ದು, ಇವೆಲ್ಲ ನಡೆದು ಒಂದು ತಿಂಗಳಾದರೂ ಯಾವುದೇ ಕಾನೂನು ಕ್ರಮ ನಡೆದಿಲ್ಲ. ಪ್ರಕರಣದ ಬಗ್ಗೆ ತಿಳಿದಿದ್ದರೂ ಮಕ್ಕಳ ಹಕ್ಕುಗಳ ಘಟಕದವರು ನಿರ್ಲಕ್ಷ್ಯ ವಹಿಸಿರುವ ಬಗ್ಗೆಯೂ ಪೊಲೀಸರು ಕ್ರಮ ಜರುಗಿಸಬೇಕೆಂದು ಸ್ಟಾನ್ಲೀ ಆಗ್ರಹಿಸಿದ್ದಾರೆ.

ಈ ಬಗ್ಗೆ ಹೆಡ್ ಲೈನ್ ಕರ್ನಾಟಕಕ್ಕೆ (Headline Karnataka) ಮಾತನಾಡಿರುವ ಸ್ಟಾನ್ಲೀ, ಪೊಲೀಸ್ ಕಮಿಷನರಿಗೆ ದೂರು ನೀಡಿದ್ದು, ಫೋನ್ ನಲ್ಲಿ ಮಾತನಾಡಿದ್ದೇನೆ. ಎಫ್ಐಆರ್ ಜರುಗಿಸಿದ್ದು ಕಂಡುಬಂದಿಲ್ಲ. ಪೋಕ್ಸೋ ಕಾಯ್ದೆಯಡಿ ದೌರ್ಜನ್ಯ ಮಾಹಿತಿ ತಿಳಿದರೂ ಮುಚ್ಚಿಡುವುದು 2012ರ ಪೋಕ್ಸೋ ಕಾಯ್ದೆ ಸೆಕ್ಷನ್ 19 ಮತ್ತು 21ರ ಪ್ರಕಾರ ತಪ್ಪಾಗುತ್ತದೆ. ಧಾರ್ಮಿಕ ಸಂಸ್ಥೆಯೊಂದರ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ಇಂತಹ ಹೀನ ಕೃತ್ಯ ಎಸಗಿರುವುದರ ಬಗ್ಗೆ ಮಂಗಳೂರಿನ ಜನರು ಧ್ವನಿ ಎತ್ತಬೇಕು ಎಂದು ಹೇಳಿದ್ದಾರೆ.

Serious allegations of sexual abuse involving more than 50 children have surfaced against Fr. Cyprian Pinto, a priest associated with St. Vincent Church in Valencia, Mangaluru. The Mysuru-based child rights organisation Odanadi Seva Samsthe has reportedly lodged a complaint with the Mangaluru Police Commissioner, demanding registration of a case under the POCSO Act and a thorough investigation.