ಬ್ರೇಕಿಂಗ್ ನ್ಯೂಸ್
20-04-25 05:42 pm Mangalore Correspondent ಕರಾವಳಿ
ಬೆಳ್ತಂಗಡಿ, ಎ.20 : ಜಗತ್ತಿನ ಬೇರಾವುದೇ ರಾಷ್ಟ್ರದಲ್ಲಿ ಭಾರತದಲ್ಲಿರುವ ಸ್ಥಿತಿ ಇಲ್ಲ. ಅಲ್ಲಿನ ಬಹುಸಂಖ್ಯಾತರು ಹೇಳಿದ್ದೇ ಕಾನೂನು. ನಾವು ಬಹುಸಂಖ್ಯಾತರಾದ್ರೂ ಮತಾಂತರ ನಿಷೇಧ ಮಾಡಿ ಎಂದು ಗೋಗರೆಯುವ ಸ್ಥಿತಿಯಾಗಿದೆ. ಈಗ ಸರ್ಕಾರವೇ ಮತಾಂತರ ನಿಷೇಧ ಕಾನೂನು ತೆಗೆದು ಹಾಕಿದೆ. ಹಾಗಾಗಿ ಹಿಂದುಗಳು ಕೂಡ ಬೇರೆ ಧರ್ಮೀಯರನ್ನು ಮತಾಂತರ ಮಾಡಬೇಕು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದಾರೆ.
ಉಜಿರೆಯಲ್ಲಿ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಷಣ ಮಾಡಿ ಬಹಿರಂಗ ಮತಾಂತರಕ್ಕೆ ಕರೆ ನೀಡಿದ್ದಾರೆ. ಜನಸಂಖ್ಯೆ ಜಾಸ್ತಿಯಾಗಲು ನಮ್ಮ ಜನ ಎರಡು ಮೂರು ಮಕ್ಕಳನ್ನ ಮಾಡ್ತಾರೇನ್ರೀ? ನಮ್ಮ ಜನರಿಗೆ ತಮ್ಮ ಮಕ್ಕಳನ್ನು ಪಂಚರ್ ಹಾಕಲು ಕಳುಹಿಸಲು ಇಷ್ಟ ಇಲ್ಲ. ಅವರಿಗೆ ನಮ್ಮ ಮಕ್ಕಳು ಚೆನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್ ಆಗಬೇಕು ಅಷ್ಟೇ. ಹಾಗಾಗಿ ಓದಿಸೋ ಕೆಪಾಸಿಟಿ ಇಲ್ಲದ ಕಾರಣ ಒಂದು ಸಾಕು, ಎರಡು ಸಾಕು ಅಂತಾರೆ. ಹಾಗಾಗಿ ಸರ್ಕಾರ ನಮಗಾಗಿ ಮಾಡಿರೋ ಕಾನೂನುಗಳನ್ನು ಬಳಸಿಕೊಳ್ಳಬೇಕು. ಇದು ಸರ್ಕಾರ ಕೊಟ್ಟಿರೋ ಕಾನೂನು, ನಮ್ಮದಲ್ಲ. ಬಿಜೆಪಿ ಸರ್ಕಾರ ಇದ್ದಾಗ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ಹೊಸ ಸರ್ಕಾರ ಬಂದು ಆ ಕಾನೂನು ತೆಗೆದು ಹಾಕಿದೆ. ಇದರರ್ಥ ನೀವು ಮತಾಂತರ ಮಾಡಬಹುದು ಅಂತಾನೇ ಅಲ್ವಾ.. ಸರ್ಕಾರವೇ ಹೇಳಿದ ಮೇಲೆ ಮತಾಂತರ ಮಾಡಬೇಕಲ್ವಾ?
ಆದರೆ ಜಗತ್ತಿನ ಯಾವ ರಾಷ್ಟ್ರದಲ್ಲೂ ಈ ರೀತಿಯ ಪರಿಸ್ಥಿತಿ ಇಲ್ಲ. ಬೇರೆ ರಾಷ್ಟ್ರಗಳಲ್ಲಿ ಅಲ್ಲಿನ ಬಹುಸಂಖ್ಯಾತರೇ ಮತಾಂತರ ಮಾಡುತ್ತಿರುವುದರಿಂದ ಅಲ್ಪಸಂಖ್ಯಾತರು ಮತಾಂತರ ನಿಷೇಧ ಕಾನೂನು ತರುವಂತೆ ಹೇಳುತ್ತಿದ್ದಾರೆ. ನಮ್ಮಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಹಾಗಾಗಿ ನಾವು ಕೂಡ ಮತಾಂತರ ಕೆಲಸವನ್ನೇ ಮಾಡಬೇಕಾಗಿದೆ. ನಾನು ಜಗತ್ತಿನ ಅತ್ಯಂತ ಶ್ರೇಷ್ಠ ಹಿಂದೂ ಧರ್ಮಕ್ಕೆ ಸೇರಿದವನು. ಜಗತ್ತಿನಲ್ಲಿ ಅನೇಕ ಮತ ಪಂಥಗಳಿವೆ, ಆದರೆ ಅವರಿಗೆಲ್ಲಾ ಒಬ್ಬನೇ ದೇವರು. ಒಬ್ಬ ದೇವರಿಗೆ ಸಮಸ್ಯೆಯಾದ್ರೆ ಆ ಧರ್ಮವೇ ಹೋಯಿತೆಂದು ಹಲಬುವವರು ನಮ್ಮಲ್ಲಿದ್ದಾರೆ. ಆದರೆ ನಮಗೆ 33 ಕೋಟಿ ದೇವತೆಗಳಿದ್ದಾರೆ.
ನೀವು ರಾಮನನ್ನ ಬೈದರೆ ನಾನು ಸೀತೆಯನ್ನ ಹಿಡಿದುಕೊಳ್ತೀನಿ. ನೀವು ಸೀತೆಗೆ ಕಳಂಕ ತರುವ ಪ್ರಯತ್ನ ಪಟ್ಟರೆ ಶ್ರೀಕೃಷ್ಣ ಇದಾನೆ. ಕೃಷ್ಣನಿಗೆ ಕಳಂಕ ತರುವ ಪ್ರಯತ್ನ ಪಟ್ಟರೆ ನಮಗೆ ಮಂಜುನಾಥ ಸ್ವಾಮಿ ಇದಾನೆ. ನೀವು ಮಂಜುನಾಥನಿಗೆ ಕಳಂಕ ತರುವ ಪ್ರಯತ್ನ ಪಟ್ಟರೆ ನನಗೆ ಊರಲ್ಲೊಂದು ದೇವಸ್ಥಾನ ಇದರ ಅಂತ ಎಲ್ಲಿ ಬೇಕಾದರೂ ಹೋಗ್ತೀನಿ. ಹಾಗಾಗಿ ಅವರಿಗೆ ಹೇಳಿ, ಒಂದೇ ದೇವರು ಒಳ್ಳೆಯದೋ ಅಥವಾ 33 ಕೋಟಿ ದೇವರು ಒಳ್ಳೆಯದೋ ಅಂಥ.
ಮಿತ್ರರೇ ಅವರು ಬಂದು ಹೇಳ್ತಾರೆ, ನಮ್ಮದೊಂದೇ ಪುಸ್ತಕ ನಿಮ್ಮತ್ರ ಬಹಳ ಪುಸ್ತಕ ಇದೆ ಅಂತ. ಆಗ ನೀವು ಹೇಳಿ, ನಮ್ಮತ್ರ ಲೈಬ್ರರಿ ಇದೆ, ಯಾವುದೋ ಒಂದು ಪುಸ್ತಕ ಸುಡೋದ್ರಿಂದ ಹಿಂದೂ ಧರ್ಮ ಸಾಯಲ್ಲ. ನಿಮ್ಮ ಮತ, ಪಂಥಗಳಲ್ಲಿ ಹೆಣ್ಮಕ್ಕಳಿಗೆ ಗೌರವ ಇಲ್ಲ ಅಂತ ಅವರಿಗೆ ಹೇಳಿ. ಇಲ್ಲಿರೋ ಹೆಣ್ಮಕ್ಕಳಿಗೆ ಮುಖ ಮುಚ್ಚಿಕೊಳ್ಳಿ ಅಂತ ಹೇಳಿಲ್ಲ, ಗಂಡು ಮಕ್ಕಳ ಪಕ್ಕದಲ್ಲಿ ಕೂರಬೇಡಿ ಅಂತ ಹೇಳಿಲ್ಲ. ಬರೋರಿಗೆ ಬನ್ನಿ ಅಂತ ಹೇಳಿ, ಬರುವವರನ್ನು ಮುಕ್ತ ಕಂಠದಿಂದ ಸ್ವಾಗತಿಸಿ.
ಸಂಖ್ಯೆ ವೃದ್ದಿಸಲು ಮಕ್ಕಳೇ ಆಗಬೇಕೆಂದಿಲ್ಲ, ನಮ್ಮ ಹೃದಯ ಸ್ವಲ್ಪ ವಿಶಾಲ ಆಗಬೇಕಿದೆ. ಸೇವೆ ಮಾಡೋದು ನಿಮ್ಮ ಸಮಾಜ ಮಾತ್ರ ಅಲ್ಲ, ನಮ್ಮ ಸಮಾಜ ಮಾಡೋ ಸೇವೆ ಯಾವ ಧರ್ಮ ಮಾಡಿದೆ. ಇಂಥ ಸೇವೆ ಮಾಡೋ ಸಮಾಜ ಮತ್ತೊಂದಿಲ್ಲ ಅಂತ ಹೇಳಿ, ಅವರನ್ನೂ ನಮ್ಮ ಸಮಾಜಕ್ಕೆ ಕರೆಯಿರಿ. ನಮ್ಮ ಸಮಾಜದ ಎಲ್ಲಾ ಪ್ರಮುಖರು ಈ ಬಗ್ಗೆ ಒಂದು ಘೋಷಣೆ ಹೊರಡಿಸಿ. ಯಾರಾದರೂ ನಮಗೆ ಮತಾಂತರ ಆಗಬೇಕು ಅಂದರೆ ನಮ್ಮ ಸಮಾಜ ಅವರನ್ನ ಪ್ರೀತಿಯಿಂದ ಸ್ವಾಗತಿಸುತ್ತೆ ಬನ್ನಿ ಅಂತ ಕರೀರಿ. ಸಮಾಜದ ಸ್ವಾಮೀಜಿಗಳ ಮೂಲಕ ಘೋಷಣೆ ಕೊಡಲಿ, ಯಾರಾದ್ರೂ ಬರ್ತೀರಿ ಅಂತಾದರೆ ಅವರ ಜಾತಿ ಕೇಳದೇ ಕರೆಯಿರಿ. ನೀವು ಒಂದು ಸಲ ಮುಕ್ತ ಕಂಠದಿಂದ ಕರೀರಿ, ಎಷ್ಟು ಜನ ಸೈಲೆಂಟಾಗಿ ಸೇರಿಕೊಳ್ತಾರೆ ನೋಡಿ. ಜನಸಂಖ್ಯೆ ಜಾಸ್ತಿ ಮಾಡಲು ಸರ್ಕಾರವೇ ಕೊಟ್ಟ ಇಂಥ ಕಾನೂನುಗಳು ನಮ್ಮಲ್ಲಿವೆ. ಮುಂದಿನ ಪೀಳಿಗೆಗೆ ಭಾರತವನ ಬಿಟ್ಟು ಹೋಗುವಾಗ ಅದಕ್ಕೆ ಸ್ವಲ್ಪ ಪಾಕಿಸ್ತಾನ, ಬಾಂಗ್ಲಾದೇಶ, ಅಗತ್ಯ ಬಿದ್ದರೆ ನೇಪಾಳವನ್ನೂ ಸೇರಿಸೋಣ. ಎಲ್ಲರನ್ನೂ ಒಂದುಗೂಡಿಸಿ ಭಾರತ ಮಾಡೋಣ ಎಂದು ಸೂಲಿಬೆಲೆ ಹೇಳಿದ್ದಾರೆ.
Chakravarti Sulibele has ignited a wave of controversy with his provocative comments regarding religious conversions. During his speech at Ujre, Sulibele suggested that if individuals are unable to have children, they should focus on converting everyone to Hinduism.
06-11-25 03:06 pm
Bangalore Correspondent
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
06-11-25 02:08 pm
Mangalore Correspondent
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm