ಬ್ರೇಕಿಂಗ್ ನ್ಯೂಸ್
20-02-26 02:31 pm Mangalore Correspondent ಕ್ರೈಂ
ಮಂಗಳೂರು, ಫೆ.20: ಬಿಎಸ್ಸೆನ್ನೆಲ್ ಸಂಸ್ಥೆಯ ವತಿಯಿಂದ ಸುಮಾರು 30-40 ವರ್ಷಗಳ ಹಿಂದೆ ಹಾಕಲಾಗಿದ್ದ ತಾಮ್ರದ ವೈರ್ ಗಳನ್ನು ಹೊಂದಿರುವ ಕೇಬಲನ್ನು ಮಣ್ಣಿನಡಿಯಿಂದ ತೆಗೆದು ಅಕ್ರಮವಾಗಿ ಮಾರಾಟ ಮಾಡಿದ ಕೃತ್ಯ ಬೆಳಕಿಗೆ ಬಂದಿದ್ದು, ಬಿಎಸ್ಸೆನ್ನೆಲ್ ಸಂಸ್ಥೆಗೆ ಸೇರಿದ ಮೂವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಪಾಂಡೇಶ್ವರ ಬಿಎಸ್ಸೆನ್ನೆಲ್ ಕಂಪನಿಯ ಕಚೇರಿಯಲ್ಲಿ ಟೆಲಿಕಾಂ ಟೆಕ್ನೀಶಿಯನ್ ಆಗಿರುವ ಕೆಕೆ ಚಾಮಿ(55), ಕಚೇರಿಯಲ್ಲಿ ಸಹಾಯಕ ಅಧೀಕ್ಷಕ ಹುದ್ದೆಯಲ್ಲಿದ್ದ ತನ್ವೀರ್ ಪಾಷಾ)48) ಮತ್ತು ಕೇಬಲ್ ಆಪರೇಟರ್ ಗುತ್ತಿಗೆ ನೌಕರನಾಗಿರುವ ಮಂಜುನಾಥ್ (35) ಎಂಬವರನ್ನು ಬಂಧಿಸಲಾಗಿದೆ. ಮಂಜುನಾಥ್ ಬಿಎಸ್ಸೆನ್ನೆಲ್ ಕಂಪನಿಯಲ್ಲಿ ಗುತ್ತಿಗೆ ನೌಕರನಾಗಿದ್ದು, ಎಲ್ ಅಂಡ್ ಟಿ ಕಂಪನಿಯಲ್ಲು ಕೇಬಲ್ ಜಾಯಿಂಟರ್ ಆಗಿ ಕೆಲಸ ಮಾಡುತ್ತಿದ್ದ.
ಹಿಂದೆ ಬಿಎಸ್ಸೆನ್ನೆಲ್ ಲ್ಯಾಂಡ್ ಫೋನ್ ಬಳಕೆಯಲ್ಲಿದ್ದಾಗ ಕೇಬಲನ್ನು ಭೂಗತವಾಗಿ ಹಾಕಲಾಗಿತ್ತು. ಪ್ರತಿ ಬಳಕೆದಾರನಿಗೂ ಪ್ರತ್ಯೇಕ ತಾಮ್ರದ ಕೇಬಲ್ ವೈರನ್ನು ಒಂದೇ ಪೈಪ್ ಒಳಗಡೆ ಹಾಕಿ ಸಂಪರ್ಕ ನೀಡಲಾಗುತ್ತಿತ್ತು. ಆದರೆ ಈಗ ಮೊಬೈಲ್ ಇನ್ನಿತರ ಖಾಸಗಿ ಕಂಪನಿಗಳ ದೂರವಾಣಿ ಚಾಲ್ತಿಗೆ ಬಂದಿರುವುದರಿಂದ ಹಳೆ ಮಾದರಿಯ ಲ್ಯಾಂಡ್ ಫೋನ್ ಅಗತ್ಯವಿಲ್ಲದೆ ಅದರ ಬಳಕೆ ಇಲ್ಲವಾಗಿದೆ.
ಇದರ ಬಗ್ಗೆ ಮಾಹಿತಿಯಿದ್ದ ಬಿಎಸ್ಸೆನ್ನೆಲ್ ಸಂಸ್ಥೆಯ ಟೆಕ್ನೀಶಿಯನ್ ಕೆಕೆ ಚಾಮಿ ಮತ್ತು ಕಚೇರಿ ಅಧೀಕ್ಷಕ ತನ್ವೀರ್ ಪಾಷಾ, ಮಂಜುನಾಥ್ ಜೊತೆಗೂಡಿ ಹಳೆ ಕಾಲದ ತಾಮ್ರದ ಕೇಬಲನ್ನು ತೆಗೆದು ಮಾರಾಟ ಮಾಡುತ್ತಿದ್ದರು. ನೆಹರು ಮೈದಾನ ಆಸುಪಾಸಿನಲ್ಲಿ ಸೇರಿದಂತೆ ಹಲವೆಡೆ ಹಾಕಿದ್ದ ಕೇಬಲನ್ನು ಒಂದೂವರೆ ವರ್ಷಗಳಿಂದ ತೆಗೆದು ಮಾರಾಟ ಮಾಡಿದ್ದು, ಇದರ ಈಗಿನ ಮಾರುಕಟ್ಟೆ ಮೌಲ್ಯ 70 ಲಕ್ಷ ಆಗಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಪಾಂಡೇಶ್ವರ ಬಿಎಸ್ಸೆನ್ನೆಲ್ ಕಚೇರಿಯ ಜೂನಿಯರ್ ಟೆಲಿಕಾಂ ಆಫೀಸರ್ ವಿನೋದ್ ಶೇಖರ್ ನಾಯ್ಕ್ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಅವರ ಬಳಿಯಿದ್ದ 45 ಕೇಜಿ ತಾಮ್ರದ ಕೇಬಲ್ ಮತ್ತು ಕೇಬಲ್ ಮಾರಾಟ ಮಾಡಿ ಬಂದಿದ್ದ 10 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
16-08-26 08:29 pm
HK News Staffer
McDonald's City Centre Raid, Mangalore: ಕೆಎಫ್...
16-08-26 08:20 pm
ಫೈವ್ ಸ್ಟಾರ್ ಹೊಟೇಲ್ ರೈಡ್ ಆದ್ರೂ ಕೊಳೆತ ಮಾಂಸ ಇಟ್ಕ...
16-08-26 04:14 pm
ಸ್ವಾತಂತ್ರ್ಯ ದಿನಾಚರಣೆ ವೇಳೆ ವಂದೇ ಮಾತರಂ ಗೀತೆಗೆ ಸ...
16-08-26 03:47 pm
ಚರಕದಿಂದ ನೂಲು ತೆಗೆದು, ಸಮುದ್ರ ಕಿನಾರೆಯಲ್ಲಿ ಉಪ್ಪು...
15-08-26 10:08 pm
15-08-26 09:06 pm
HK News Staffer
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm