ಬ್ರೇಕಿಂಗ್ ನ್ಯೂಸ್
19-04-25 12:24 pm HK News Desk ಕರ್ನಾಟಕ
ಶಿವಮೊಗ್ಗ, ಎ.19: ಇಲ್ಲಿನ ಆದಿಚುಂಚನಗಿರಿ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದ ಪ್ರಕರಣ ವಿವಾದಕ್ಕೆ ಕಾರಣವಾಗುತ್ತಲೇ ಇದಕ್ಕೆ ಕಾರಣವಾದ ಇಬ್ಬರು ಹೋಮ್ ಗಾರ್ಡ್ ಗಳನ್ನು ಜಿಲ್ಲಾಡಳಿತ ಅಮಾನತು ಮಾಡಿದೆ. ಬ್ರಾಹ್ಮಣ ಸಂಘದ ದೂರಿನಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದಾರೆ.
ತಪಾಸಣೆ ವೇಳೆ ಒಬ್ಬ ಅಭ್ಯರ್ಥಿ ಜನಿವಾರವನ್ನು ತಾನೇ ತೆಗೆದು ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸುತ್ತಾನೆ. ಇನ್ನೊಬ್ಬ ಜನಿವಾರ ತೆಗೆಯದೇ ಹೊರಗಡೆ ಕಾಯುತ್ತಿದ್ದ. ಇದನ್ನು ಗಮನಿಸಿ ಕೇಂದ್ರದ ಮೇಲ್ವಿಚಾರಕರು ಸ್ಥಳಕ್ಕೆ ದೌಡಾಯಿಸಿ ಹೋಮ್ ಗಾರ್ಡ್‌ಗೆ ಬುದ್ಧಿ ಹೇಳುತ್ತಾರೆ. ಬಳಿಕ ಆ ಅಭ್ಯರ್ಥಿಯನ್ನು ಒಳಕ್ಕೆ ಬಿಟ್ಟಿದ್ದಾರೆ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರ ಹಂತದಲ್ಲಿ ಕರ್ತವ್ಯಲೋಪ ಆಗಿಲ್ಲ. ಹೀಗಾಗಿ, ಜನಿವಾರ ತೆಗೆಯಲು ಸೂಚನೆ ನೀಡಿದ ಇಬ್ಬರು ಹೋಮ್ ಗಾರ್ಡ್‌ಗಳನ್ನು ಅಮಾನತುಗೊಳಿಸಿದ್ದು, ಇಲಾಖಾ ತನಿಖೆ ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಶಿವಮೊಗ್ಗ ಹಾಗೂ ಬೀದರ್ ನಲ್ಲಿ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಘಟನೆಗಳು ನಡೆದಿದ್ದವು. ಏ.17ರಂದು ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳು ಸಹಜವಾಗಿ ಅವರ ಜಾತಿಗೆ ತಕ್ಕಂತೆ ಶಿವದಾರ, ಜನಿವಾರ ಧರಿಸಿದ್ದರು. ಆದರೆ, ಪರೀಕ್ಷೆ ಹಾಲ್ ಗೆ ಪ್ರವೇಶಿಸುವ ಮುನ್ನ ಹೋಂ ಗಾರ್ಡ್ ಗಳು ಅಭ್ಯರ್ಥಿಗಳನ್ನು ಚೆಕ್ ಮಾಡುವಾಗ ಕಟ್ಟಿಕೊಂಡಿದ್ದ ತಾಯತ ಅಥವಾ ಯಾವುದೇ ದಾರಗಳನ್ನು ತೆಗೆದು ಹಾಕುವಂತೆ ಸೂಚಿಸಿದ್ದರು. ಅದೇ ವೇಳೆ, ಕೆಲವು ಅಭ್ಯರ್ಥಿಗಳ ಜನಿವಾರಗಳನ್ನೂ ಸಹ ತೆಗೆಯುವಂತೆ ಸೂಚಿಸಿದ್ದು ವಿವಾದಕ್ಕೆ ಕಾರಣವಾಗಿದೆ.
Two home guards deployed at a Common Entrance Test (CET) examination centre in Shivamogga, Karnataka, have been suspended after they allegedly forced two students to remove their janivara (sacred thread) before entering the exam hall. The incident occurred on April 16 at Aadichunchanagiri Independent PU College in Sharavathinagara, sparking outrage from the local Brahmin community and prompting swift action from district authorities.
17-10-25 08:39 pm
HK News Desk
ಆರೆಸ್ಸೆಸ್ ಚಟುವಟಿಕೆ ಕಡಿವಾಣಕ್ಕೆ ಕೌಂಟರ್ ; ಸಾರ್ವಜ...
17-10-25 05:27 pm
ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಬ್ರೇಕ...
16-10-25 09:04 pm
ನವೆಂಬರಲ್ಲಿ ಅಧಿಕಾರ ಬಿಡಲು ಹೈಕಮಾಂಡ್ ಹೇಳಿಲ್ಲ, ಸಿದ...
16-10-25 04:44 pm
ಆರೆಸ್ಸೆಸ್ ಚಟುವಟಿಕೆ ನಿಷೇಧ ; ಸಚಿವ ಪ್ರಿಯಾಂಕ ಖರ್ಗ...
16-10-25 04:40 pm
17-10-25 05:25 pm
HK News Desk
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
17-10-25 09:36 pm
Mangalore Correspondent
1971ರ ಭಾರತ - ಪಾಕ್ ಯುದ್ಧದಲ್ಲಿ ಹೆಲಿಕಾಪ್ಟರ್ ನಿಂದ...
16-10-25 10:37 pm
ತಲೆಮರೆಸಿಕೊಂಡ ಆರೋಪಿಗಳ ಬೆನ್ನುಬಿದ್ದ ಮಂಗಳೂರು ಪೊಲೀ...
16-10-25 08:26 pm
ಪ್ರಿಯಾಂಕ ಖರ್ಗೆ ಮಾತು ಸರಿಯಾಗಿಯೇ ಇದೆ, ಸಮಾಜದಲ್ಲಿ...
16-10-25 05:09 pm
ತೆಂಕುತಿಟ್ಟಿನ ಪ್ರಸಿದ್ಧ ಭಾಗವತ, ಗಾನ ಕೋಗಿಲೆ ದಿನೇಶ...
16-10-25 01:11 pm
18-10-25 03:48 pm
Mangalore Correspondent
Fake Gold Scam, Belthangady Anugraha Society:...
18-10-25 03:27 pm
Illegal Arms Case, Mahesh Shetty Timarodi: ಅಕ...
18-10-25 01:52 pm
ಪ್ರೀತಿ ನಿರಾಕರಿಸಿದ ಕಾಲೇಜು ಯುವತಿಯನ್ನು ನಡುರಸ್ತೆಯ...
17-10-25 03:27 pm
Vitla Honeytrap case, Police, Mangalore: ಬಶೀರ...
17-10-25 03:23 pm