ಬ್ರೇಕಿಂಗ್ ನ್ಯೂಸ್
15-10-26 06:46 pm HK News Desk ಕರಾವಳಿ
ಮಂಗಳೂರು, ಅ.15: ರಾಜ್ಯ ರಾಜಕಾರಣದಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಶನ್ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಎಂ ಡಿಕೆ ಶಿವಕುಮಾರ್ ನಿರಾಕರಿಸಿದ್ದು ಆ ಬಗ್ಗೆ ತನಗೇನೂ ಗೊತ್ತಿಲ್ಲ, ಮಾಹಿತಿ ಇಲ್ಲವೆಂದು ಹೇಳುತ್ತ ಸಚಿವ ಯುಟಿ ಖಾದರ್ ಅವರತ್ತ ಕೈ ತೋರಿಸಿ ರಕ್ಷಣೆ ಕೇಳಲು ಯತ್ನಿಸಿದ್ದಾರೆ.
ಮಂಗಳೂರು ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಿಎಂ ಡಿಕೆಶಿ ಅವರಿಗೆ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿದ ಸ್ಟಿಂಗ್ ಬಗ್ಗೆ ಪ್ರಶ್ನೆ ಕೇಳಲಾಯಿತು. ಸ್ಟಿಂಗ್ ಹಿಂದೆ ಸಿಎಂ ಡಿಕೆಶಿಯದ್ದೇ ಕೈವಾಡ ಇದೆಯೆಂದು ಕೇಂದ್ರ ಸಚಿವ ಎಚ್ಡಿಕೆ ಹೇಳಿರುವುದರಿಂದ ಸಿಎಂ ಡಿಕೆಶಿ ಹೇಳಿಕೆ ಮುಖ್ಯವಾಗಿತ್ತು. ಆದರೆ ಈ ಬಗ್ಗೆ ಪ್ರಶ್ನೆ ಬರುತ್ತಲೇ ಮೊದಲೇ ಮಾತನಾಡಿಕೊಂಡು ಬಂದ ರೀತಿ ತನಗೇನೂ ಗೊತ್ತಿಲ್ಲ ಎನ್ನುತ್ತ ಸಚಿವ ಖಾದರ್ ಕಡೆಗೆ ಕೈತೋರಿಸಿದ್ದಾರೆ.

ಗೃಹ ಸಚಿವರೂ ಅಲ್ಲದ ಯು.ಟಿ ಖಾದರ್ ಸಿಎಂ ಡಿಕೆಶಿ ರಕ್ಷಣೆಗೆ ಬಂದ ರೀತಿ ತೋರಿಸಿಕೊಂಡಿದ್ದು ಮುಖ್ಯಮಂತ್ರಿಗೆ ಕೇಳಿದ ಪ್ರಶ್ನೆಗೆ ಖಾದರ್ ಉತ್ತರಿಸಲು ಯತ್ನಿಸಿದ್ದಾರೆ. ಸ್ಟಿಂಗ್ ವಿಚಾರದ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಎಲ್ಲವೂ ಹೊರಬರಲಿದೆ. ತನಿಖೆಯ ಬಳಿಕ ಉತ್ತರ ಸಿಗಲಿದೆ. ಅವರೇ ತನಿಖೆಯಾಗಲಿ ಅಂತಾ ಹೇಳಿದ್ದಾರಲ್ಲಾ.. ತನಿಖೆ ಆದ್ಮೇಲೆ ಯಾರು ಏನು ಅಂತ ಗೊತ್ತಾಗುತ್ತದೆ ಎಂದು ಹೇಳಿ ಪ್ರಶ್ನೆಗೆ ನುಣುಚಿಕೊಳ್ಳುವ ಉತ್ತರ ನೀಡಿದರು.
ಎಚ್ಡಿ ಕುಮಾರಸ್ವಾಮಿ ಅವರು ಈ ಸ್ಟಿಂಗ್ ಹಿಂದೆ ರಾಕೇಶ್ ಶೆಟ್ಟಿ ಮತ್ತು ಕೃಪಾ ಆಳ್ವ ಇದ್ದಾರೆಂದು ಹೇಳಿಕೆ ನೀಡಿರುವುದರಿಂದ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ಇರಿಸುಮುರಿಸಿಗೆ ಒಳಗಾಗಿದ್ದಾರೆ. ಸ್ಟಿಂಗ್ ವಿಚಾರ ಮೊದಲು ಎತ್ತಿದ್ದ ಸಿಎಂ ಡಿಕೆಶಿ ಅವರೇ ಈಗ ಅದರಿಂದ ತಪ್ಪಿಸಿಕೊಳ್ಳಲು ಯತ್ನಿಸಿರುವುದು ಸ್ಪಷ್ಟವಾಗಿದೆ.
ರಾಜರ ಕಾಲದಲ್ಲಿ ದಸರಾಗೆ ಕಂಬಳ ಆಗುತ್ತಿತ್ತು !
ಇದಕ್ಕೂ ಮೊದಲು ಮಾತನಾಡಿದ ಸಿಎಂ ಡಿಕೆಶಿ, ಮಂಗಳೂರು ದಸರಾಗೆ ಬರಬೇಕು ಅಂತ ತುಂಬಾ ವರ್ಷದ ಹಿಂದೆ ಪೂಜಾರಿಯವರು ಹೇಳಿದ್ದರು. ದಸರಾ ತುಂಬಾ ವಿಜೃಂಭಣೆಯಿಂದ ಮಾಡುತ್ತಿದ್ದಾರೆ. ದಸರಾ ಎಲ್ಲರನ್ನೂ ಒಗ್ಗೂಡಿಸುವ ಹಬ್ಬ. ನವದುರ್ಗೆಯರು ದುಃಖವನ್ನು ದೂರ ಮಾಡುತ್ತಾರೆ. ಮೈಸೂರಿನಲ್ಲಿ ದಸರಾ ಸಂಧರ್ಭದಲ್ಲಿ ಹೊಸ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಮೂರು ಸೇನೆಯ ಯೋಧರು ಈ ಸಲ ಪಥಸಂಚಲನ ಮಾಡಲಿದ್ದಾರೆ. ಹೊಸ ಆನೆಯ ಮೇಲೆ ಅಂಬಾರಿಯ ಮೆರವಣಿಗೆ ಆಗುತ್ತದೆ. ಬೇರೆ ಬೇರೆ ಕಲಾವಿದರು ಭಾಗವಹಿಸುತ್ತಾರೆ. ದಸರಾದಲ್ಲಿ ಕಂಬಳವೂ ಈ ಬಾರಿ ನಡೆಯಲಿದೆ. ಈ ಹಿಂದೆಯೂ ರಾಜರ ಕಾಲದಲ್ಲಿ ದಸರಾ ವೇಳೆ ಕಂಬಳ ನಡೆಯುತ್ತಿತ್ತು. ಈಗ ಎಲ್ಲರಿಗೂ ನನ್ನ ಮಾತು ಅರ್ಥ ಆಗುತ್ತಿದೆ ಎಂದು ಹೇಳಿದರು.
Chief Minister DK Shivakumar declined to comment on the sting operation that has triggered a political storm in Karnataka, saying he had no information about the matter and gesturing towards Minister UT Khader when questioned by reporters. Shivakumar, who arrived in Mangaluru to participate in the Mangaluru Dasara celebrations, was asked about the sting operation allegedly targeting Chief Minister Siddaramaiah.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 06:46 pm
HK News Desk
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm