ಬ್ರೇಕಿಂಗ್ ನ್ಯೂಸ್
18-04-25 02:21 pm HK News Desk ದೇಶ - ವಿದೇಶ
ನವದೆಹಲಿ, ಎ.18: ದೇಶದ ಸರ್ವೋಚ್ಚ ಹುದ್ದೆಯಲ್ಲಿರುವ ರಾಷ್ಟ್ರಪತಿಗೆ ಸುಪ್ರೀಂಕೋರ್ಟ್ ಕಾಲಮಿತಿ ಹಾಕಿ ಆದೇಶ ಹೊರಡಿಸುವ ಅಧಿಕಾರ ಹೊಂದಿಲ್ಲ. ಮಸೂದೆಯ ಬಗ್ಗೆ ಕಾಲಮಿತಿಯಲ್ಲಿ ಪರಿಗಣಿಸಬೇಕೆಂದು ನಿರ್ದೇಶನ ಮಾಡುವಂತೆಯೂ ಇಲ್ಲ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟಪ್ರತಿಗೆ ಆದೇಶ ಮಾಡಲು ಸುಪ್ರೀಂಕೋರ್ಟ್ ಗೆ ಯಾವ ಅಧಿಕಾರ ಇದೆ ಎಂದು ಪ್ರಶ್ನಿಸಿದ್ದಾರೆ.
ಉಪರಾಷ್ಟ್ರಪತಿ ಧನ್ಕರ್ ಅವರು ಸಾಂವಿಧಾನಿಕ ಕಾನೂನಿನ ಗಣನೀಯ ಪ್ರಶ್ನೆಗಳನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ ಪೀಠಕ್ಕೆ ಅವಕಾಶ ನೀಡುವ ಆರ್ಟಿಕಲ್ 145(3) ಅನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸಿದ್ದಾರೆ. “ನೀವು ಭಾರತದ ರಾಷ್ಟ್ರಪತಿಗಳಿಗೆ ನಿರ್ದೇಶಿಸುವ ಪರಿಸ್ಥಿತಿಯನ್ನು ಒಪ್ಪಲು ಸಾಧ್ಯವಿಲ್ಲ. ಅದು ಯಾವ ಆಧಾರದ ಮೇಲೆ ಎಂಬುದು ಮುಖ್ಯ. ಸಂವಿಧಾನದ ಅಡಿಯಲ್ಲಿ ನೀವು ಹೊಂದಿರುವ ಏಕೈಕ ವಿಶೇಷ ಅಧಿಕಾರವೆಂದರೆ ಆರ್ಟಿಕಲ್ 145(3) ನೇ ವಿಧಿಯ ಅಡಿಯಲ್ಲಿ ಸಂವಿಧಾನವನ್ನು ವ್ಯಾಖ್ಯಾನಿಸುವುದು. ಅಲ್ಲಿ ಐದು ಅಥವಾ ಹೆಚ್ಚಿನ ನ್ಯಾಯಾಧೀಶರು ಇರಬೇಕು” ಎಂದು ಅವರು ಹೇಳಿದ್ದಾರೆ.
ನಮ್ಮಲ್ಲಿ ಶಾಸನ ರಚಿಸುವ, ಕಾರ್ಯಕಾರಿ ಕಾರ್ಯಗಳನ್ನು ನಿರ್ವಹಿಸುವ, ಸೂಪರ್ ಪಾರ್ಲಿಮೆಂಟ್ ಆಗಿ ಕಾರ್ಯ ನಿರ್ವಹಿಸುವ ನ್ಯಾಯಾಧೀಶರು ಇದ್ದಾರೆ ಮತ್ತು ಅವರಿಗೆ ಯಾವುದೇ ಹೊಣೆಗಾರಿಕೆ ಇಲ್ಲ. ಏಕೆಂದರೆ ಈ ನೆಲದ ಕಾನೂನು ಅವರಿಗೆ ಅನ್ವಯಿಸುವುದಿಲ್ಲ” ಎಂದು ಅವರು ವಾಗ್ದಾಳಿ ನಡೆಸಿದರು. ಇದೇ ವೇಳೆ, ಇತ್ತೀಚೆಗೆ ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿ ಯಶ್ವಂತ್ ವರ್ಮಾ ಅವರ ಮನೆಯಲ್ಲಿ ಕೋಟ್ಯಂತರ ರೂ. ಪತ್ತೆಯಾಗಿದ್ದ ಪ್ರಕರಣವನ್ನು ಉಲ್ಲೇಖಿಸಿದ ಅವರು, ನ್ಯಾಯಮೂರ್ತಿಗಳ ಮನೆಯಲ್ಲಿ ಹಣ ಸಿಕ್ಕಿದ್ದು ಮೇ 14 ಹಾಗೂ 15ರ ನಡುವಿನ ಮಧ್ಯರಾತ್ರಿ. ಆದರೆ, ಅದು ಬೆಳಕಿಗೆ ಬಂದಿದ್ದು ಒಂದು ವಾರದ ನಂತರ. ಆ ಒಂದು ವಾರ ವಿಚಾರವನ್ನು ಮುಚ್ಚಿಟ್ಟಿದ್ದು ಯಾಕೆ ? ಈ ಘಟನೆ ನಮ್ಮಲ್ಲಿ ಹಲವಾರು ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಧನ್ಕರ್ ಹೇಳಿದ್ದಾರೆ.
ದಾಖಲೆಗಳಿಲ್ಲದ ಹಣ ನ್ಯಾ. ವರ್ಮಾ ಅವರ ನಿವಾಸದಲ್ಲಿ ಸಿಕ್ಕರೂ ಅವರ ವಿರುದ್ಧ ಯಾಕೆ ಇದುವರೆಗೆ ಎಫ್ಐಆರ್ ದಾಖಲಾಗಿಲ್ಲ’’ ಎಂದು ಪ್ರಶ್ನಿಸಿರುವ ಧನ್ಕರ್, “ಈ ದೇಶದ ವ್ಯಾಪ್ತಿಯಲ್ಲಿ ಯಾರೇ ತಪ್ಪು ಮಾಡಿದರೂ ಅವರ ವಿರುದ್ದ ಎಫ್ಐಆರ್ ದಾಖಲಾಗುತ್ತದೆ. ಆದರೆ, ಜಡ್ಜ್ ಗಳು ತಪ್ಪು ಮಾಡಿದಾಗ ಮಾತ್ರ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಂಗದ ಅನುಮತಿ ಬೇಕು. ಇದು ಸಂವಿಧಾನದಲ್ಲಿ ಇಲ್ಲ, ಆದರೆ ನ್ಯಾಯಾಂಗ ಮಾಡಿಕೊಂಡಿರುವ ವ್ಯವಸ್ಥೆ’’ ಎಂದು ಕಿಡಿಕಾರಿದ್ದಾರೆ.
Vice President Jagdeep Dhankhar on Thursday questioned the lack of an FIR in the case regarding the cash discovered from high court judge Yashwant Varma's Delhi residence, saying that the independence of the judiciary is not a cover against a probe.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 10:51 am
Mangalore Correspondent
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm