ಬ್ರೇಕಿಂಗ್ ನ್ಯೂಸ್
02-11-26 09:47 pm HK News Staffer ಕರಾವಳಿ
ಮಂಗಳೂರು, ನ.2: ಸುರತ್ಕಲ್ ಪೊಲೀಸರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾದ ಮೊಗವೀರ ಸಮಾಜದ ಸೋಮನಾಥ ಪುತ್ರನ್ ಅವರ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಮೊಗವೀರ ಸಂಯುಕ್ತ ಸಭಾ 48 ಗಂಟೆಗಳ ಗಡುವು ನೀಡಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಬೇಡಿಕೆ ಈಡೇರದಿದ್ದಲ್ಲಿ ಕರಾವಳಿಯಾದ್ಯಂತ ಉಗ್ರ ಜನಾಂದೋಲನ ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಉರ್ವ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಭರತ್ ಉಳ್ಳಾಲ್ ಹಾಗೂ ಸಮುದಾಯದ ಪ್ರಮುಖರು ಈ ಕಠಿಣ ನಿರ್ಧಾರ ಪ್ರಕಟಿಸಿದ್ದಾರೆ. ಭರತ್ ಉಳ್ಳಾಲ್ ಮಾತನಾಡಿ “ಅಕ್ಟೋಬರ್ 27ರಂದು ಆತ್ಮಹತ್ಯೆ ಮಾಡಿಕೊಂಡ ಸೋಮನಾಥ ಪುತ್ರನ್ ಯಾವುದೇ ಅಪರಾಧ ಹಿನ್ನೆಲೆ ಹೊಂದಿರದ ಮುಗ್ಧ ವ್ಯಕ್ತಿ ಹಾಗೂ ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದರು. ತಮ್ಮ ಮನೆಯಂಗಳದಲ್ಲಿ ರಾತ್ರಿ 11 ಗಂಟೆಯ ಸುಮಾರಿಗೆ ಅನ್ಯಕೋಮಿನ ಯುವಕ (ರಿಯಾಝ್) ಹಾಗೂ ದೆಹಲಿ ಮೂಲದ ಯುವತಿ (ಕಾಜೋಲ್) ಅನುಮಾನಾಸ್ಪದ ರೀತಿ ತೊಡಗಿಕೊಂಡಿದ್ದನ್ನು ನೋಡಿ ಸ್ಥಳದಿಂದ ತೆರಳುವಂತೆ ಸೋಮನಾಥ್ ಎಚ್ಚರಿಸಿದ್ದರು.
ಇಬ್ಬರೂ ಇಂಗ್ಲಿಷ್‌ನಲ್ಲಿ ನಿಂದಿಸಿದರೂ ಸೋಮನಾಥ್ ಯಾವುದೇ ದೌರ್ಜನ್ಯ ಎಸಗಿರಲಿಲ್ಲ. ಆದರೆ ಪೊಲೀಸರು 11:30 ರ ಸುಮಾರಿಗೆ ಬಂದು ಸೋಮನಾಥ್ ಅವರನ್ನು ಠಾಣೆಗೆ ಕರೆದೊಯ್ದು ತೀವ್ರ ಮಾನಸಿಕ ಕಿರುಕುಳ ನೀಡಿದ್ದಾರೆ. ಯುವತಿಯೇ ತನಗೆ ಯಾವುದೇ ಹಲ್ಲೆಯಾಗಿಲ್ಲ, ಎಫ್‌ಐಆರ್ ಮಾಡಬೇಡಿ ಎಂದಿದ್ದರೂ ಮುಗಿದ ಪ್ರಕರಣವನ್ನು ಮತ್ತೆ ಕೆದಕಿ, ಪೊಲೀಸರು ನೀಡಿದ ಟಾರ್ಚರ್‌ಗೆ ಹೆದರಿ ತಮ್ಮ ಹೆಂಡತಿ-ಮಕ್ಕಳಿಗೆ ತೊಂದರೆಯಾಗಬಾರದೆಂದು ಡೆತ್ ನೋಟ್ ಬರೆದಿಟ್ಟು ಸೋಮನಾಥ್ ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಆರೋಪಿಸಿದರು.

ಪ್ರಕರಣವನ್ನು ನಿವೃತ್ತ ಅಥವಾ ಹಾಲಿ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಅಥವಾ ಸಿಐಡಿ ತನಿಖೆಗೆ ವಹಿಸಿ, 30 ದಿನಗಳಲ್ಲಿ ತನಿಖಾ ವರದಿಯನ್ನು ಸಾರ್ವಜನಿಕಗೊಳಿಸಬೇಕು. ಸೋಮನಾಥ್ ಅವರ ಆತ್ಮಹತ್ಯೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳು ಹಾಗೂ ಇಲಾಖಾ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಿ ತಕ್ಷಣ ಅಮಾನತುಗೊಳಿಸಬೇಕು. ದೂರಿನಲ್ಲಿ ಉಲ್ಲೇಖಿಸಲಾಗಿರುವ ದೆಹಲಿ ಮೂಲದ ಕಾಜೋಲ್ ಮತ್ತು ಕೇರಳ ಮೂಲದ ರಿಯಾಝ್ ಅವರನ್ನು 48 ಗಂಟೆಗಳ ಒಳಗೆ ಬಂಧಿಸಬೇಕು.
ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ (CMRF) ₹2 ಕೋಟಿ ಪರಿಹಾರ ನೀಡಬೇಕು ಹಾಗೂ ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು.
ಸುರತ್ಕಲ್ ಠಾಣೆಯ ಸಿಸಿಟಿವಿ ದೃಶ್ಯಾವಳಿ ಹಾಗೂ ಜನರಲ್ ಡೈರಿಯನ್ನು ತಕ್ಷಣವೇ ಉನ್ನತ ಅಧಿಕಾರಿಗಳು ವಶಕ್ಕೆ ಪಡೆಯಬೇಕು. ಕರಾವಳಿಯ ಪೊಲೀಸ್ ಠಾಣೆಗಳಲ್ಲಿ ‘ಮೀನುಗಾರರ ರಕ್ಷಣಾ ಕೋಶ’ (Fishermen Protection Cell) ಸ್ಥಾಪಿಸಿ, ಪೊಲೀಸರಿಗೆ ಮೀನುಗಾರರೊಂದಿಗೆ ನಡೆದುಕೊಳ್ಳುವ ಕುರಿತು ವಿಶೇಷ ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು.
ಸಮುದಾಯದ ಮುಖಂಡ ಚರಣ್ ಮಾತನಾಡಿ, “ಸಮುದ್ರದಲ್ಲಿ ಯಾರಾದರೂ ಮುಳುಗಿದರೆ ಹೆಣ ತೆಗೆಯಲು, ಶವ ಮಹಜರು ಸಂದರ್ಭ ಸಹಿ ಹಾಕಲು ಮೀನುಗಾರರು ಬೇಕು. ಆದರೆ ನಮ್ಮನ್ನೇ ಪೋಲಿಸರು ಈ ರೀತಿ ನಡೆಸಿಕೊಳ್ಳುವುದು ಅಕ್ಷಮ್ಯ. ನಮ್ಮ ಸಮುದಾಯದ ಅಸ್ಮಿತೆಗೆ ಧಕ್ಕೆಯಾದರೆ ನಾವು ಸುಮ್ಮನೆ ಕೂರುವುದಿಲ್ಲ. ನ್ಯಾಯಾಂಗ ತನಿಖೆಯಾಗಿ ನ್ಯಾಯ ಸಿಗದಿದ್ದರೆ ಕರಾವಳಿಯಾದ್ಯಂತ ಬೃಹತ್ ಹೋರಾಟಕ್ಕೆ ಇಳಿಯುತ್ತೇವೆ” ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
30-10-26 08:26 pm
HK News
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
'ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು' ತನ್ನ ಹೇಳಿಕ...
28-10-26 10:52 pm
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
02-11-26 09:47 pm
HK News Staffer
ಆಳ ಸಮುದ್ರದಲ್ಲಿ ನೀರಿಗೆ ಬಿದ್ದು ಅಪಾಯಕ್ಕೀಡಾದ ಮೀನು...
02-11-26 05:34 pm
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ; ಆರಿಫ್...
01-11-26 10:49 pm
ಮಂಗಳೂರಿನ ಮಂಜುಗಡ್ಡೆ ತಯಾರಿಕಾ ಘಟಕಕ್ಕೆ ಆಹಾರ ಸುರಕ್...
01-11-26 10:13 pm
ದೇಶದಲ್ಲಿ ಆಡಳಿತ ಬದಲಿಸುವುದಕ್ಕೇ ನಮ್ಮ ಹೋರಾಟ ; ರಂಗ...
31-10-26 09:40 pm
02-11-26 09:48 pm
HK News Staffer
ಬೈಕಂಪಾಡಿಯಲ್ಲಿ ಲಾರಿ- ಸ್ಕೂಟರ್ ಡಿಕ್ಕಿ ; ಸವಾರ ತೀವ...
02-11-26 09:44 pm
ಕಾಪುವಿನ ಹೋಂಸ್ಟೇ ಮೇಲೆ ದುಷ್ಕರ್ಮಿಗಳ ದಾಳಿ: ಕಟ್ಟಡ...
02-11-26 11:31 am
ಪ್ರೀತಿಸುತ್ತಿದ್ದ ಯುವತಿಯ ಖಾಸಗಿ ಫೋಟೊ ಜಾಲತಾಣದಲ್ಲಿ...
01-11-26 04:08 pm
ಪ್ರೇಮ ಪ್ರಕರಣ ; ಪ್ರೀತಿಸುತ್ತಿದ್ದ ಯುವತಿ ಮನೆಗೆ ಕರ...
31-10-26 01:16 pm