ಬ್ರೇಕಿಂಗ್ ನ್ಯೂಸ್
14-10-25 03:40 pm Mangalore Correspondent ಕರಾವಳಿ
ಮಂಗಳೂರು, ಅ.14 : ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಈಜುಕೊಳದಲ್ಲಿ ನಡೆದ ಗಾಲ -2025 ಈಜು ಸ್ಪರ್ಧೆಯಲ್ಲಿ ವೀ ಒನ್ ಆಕ್ವಾ ಈಜು ತಂಡವು 449 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ಸ್ಪರ್ಧೆಯಲ್ಲಿ ಆಯಾ ವಿಭಾಗಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಈಜು ಪಟುಗಳಾದ ರಿಯಾನ್ನ ಧೃತಿ ಫರ್ನಾಂಡಿಸ್, ಸಾನ್ವಿ, ಯಶ್ವಿ ಬಿ.ಹೆಚ್, ಅಲೀಟಾ ಡಿಸೋಜ, ರೀಮಾ ಎ ಎಸ್, ಪ್ರದ್ಯುಮ್ನ ಇವರು ವೈಯಕ್ತಿಕ ಚಾಂಪಿಯನ್ ಗಳಾಗಿ ಮೂಡಿ ಬಂದರು. ಒಟ್ಟು 65 ಚಿನ್ನ, 24 ಬೆಳ್ಳಿ, 23 ಕಂಚಿನ ಪದಕಗಳೊಂದಿಗೆ ತಂಡವು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಬಾಲಕರ ವಿಭಾಗದಲ್ಲಿ ಆಲಿಸ್ಟಾರ್ ಸ್ಯಾಮ್ಯುಯೆಲ್ ರೇಗೊ ಎರಡು ಬೆಳ್ಳಿ, ಒಂದು ಕಂಚು, ಅವನೀಶ್ ನಾಯಕ್ ಸುಜೀರ್ ಎರಡು ಬೆಳ್ಳಿ, ಒಂದು ಕಂಚು, ಸ್ನಿತಿಕ್ ಎನ್. ಒಂದು ಬೆಳ್ಳಿ 2 ಕಂಚು, ಶಶಾಂಕ್ ಡಿ.ಎಸ್ ಎರಡು ಚಿನ್ನ, ಒಂದು ಕಂಚು, ಪ್ರದ್ಯುಮ್ನ ಎರಡು ಚಿನ್ನ ಒಂದು ಬೆಳ್ಳಿ, ದಿವಿಜ್ ಕೊಟ್ಟಾರಿ ಒಂದು ಬೆಳ್ಳಿ, ನಂದನ್ ಕರ್ಕೇರಾ ಒಂದು ಕಂಚು, ಸನ್ನಿ ಉಳ್ಳಾಲ್ ಒಂದು ಚಿನ್ನ ಒಂದು ಬೆಳ್ಳಿ, ಶ್ರೀವತ್ಸ ಒಂದು ಬೆಳ್ಳಿ, ನೀಲ್ ಎಂಜಿ ಒಂದು ಬೆಳ್ಳಿ , ಸುಧನ್ವ ಶೆಟ್ಟಿ ಒಂದು ಚಿನ್ನ,
ತನ್ಮಯ್ ಒಂದು ಚಿನ್ನ ಒಂದು ಕಂಚು.


ಬಾಲಕಿಯರ ವಿಭಾಗದಲ್ಲಿ ರಿಯಾನಾ ಧೃತಿ ಫರ್ನಾಂಡಿಸ್ ಮೂರು ಚಿನ್ನ , ದ್ವಿಶಾ ಶೆಟ್ಟಿ ಒಂದು ಕಂಚು, ದಿಯಾ ನಾಯಕ್ ಒಂದು ಕಂಚು, ಸಾನ್ವಿ ಎರಡು ಚಿನ್ನ, ಒಂದು ಬೆಳ್ಳಿ, ಪೋಷಿಕ ಒಂದು ಬೆಳ್ಳಿ ಒಂದು ಕಂಚು, ರೀಮಾ ಎ.ಎಸ್ ಎರಡು ಚಿನ್ನ ಒಂದು ಬೆಳ್ಳಿ, ಸಾರಾ ಎಲಿಷಾ ಪಿಂಟೋ ಮೂರು ಬೆಳ್ಳಿ, ಕುಶಿ ಕುಮಾರ್ ಒಂದು ಬೆಳ್ಳಿ, ದೇವಿಕಾ ಎಂ. ಎರಡು ಚಿನ್ನ, ಯಶ್ವಿ ಬಿ.ಎಚ್ ಎರಡು ಚಿನ್ನ ಒಂದು ಬೆಳ್ಳಿ, ಹಂಸ್ವಿ ಮೆಂಡನ್ ಒಂದು ಚಿನ್ನ, ಲಿಪಿಕಾ ಒಂದು ಚಿನ್ನ, ಒಂದು ಕಂಚು, ಅಲಿಟಾ ಡಿಸೋಜ ಮೂರು ಚಿನ್ನ, ನಿಷ್ಕಾ ಸೋನೋರಾ ಫರ್ನಾಂಡಿಸ್ ಒಂದು ಬೆಳ್ಳಿ, ಒಂದು ಕಂಚು, ಶಿಪ್ರ ಶೆಟ್ಟಿ ಒಂದು ಚಿನ್ನ ಒಂದು ಕಂಚು, ಪಂಚಮಿ ನಾಯಕ್ ಬಾಬುಮೂಲೆ ಒಂದು ಕಂಚು, ಪ್ರಕೃತಿ ಕೆ ಒಂದು ಬೆಳ್ಳಿ, ಶ್ರಾವ್ಯ ಕೆ ಒಂದು ಕಂಚು, ರೊನ್ನಿಕಾ ಮೈರಾ ಒಂದು ಚಿನ್ನ, ಧ್ವನಿ ಅಂಬರ್ ಒಂದು ಕಂಚು ಹಾಗೂ ಆಲಿಸ್ಟಾರ್ ಸ್ಯಾಮ್ಯುಯೆಲ್ ರೇಗೊ, ಧೃತಿ ಫರ್ನಾಂಡಿಸ್, ಪ್ರಹ್ಲಾದ್ ಶೆಟ್ಟಿ ಹಾಗೂ ದೇವಿಕಾ ಅವರನ್ನು ಒಳಗೊಂಡ ಮಿಕ್ಸೆಡ್ ರಿಲೆ ಸ್ಪರ್ಧೆಯಲ್ಲಿ ಫ್ರೀ ಸ್ಟೈಲ್ ಹಾಗೂ ಮೆಡ್ಲೆ ರಿಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯಿತು.
ಗುಂಪು ಒಂದು ಬಾಲಕಿಯರ ವಿಭಾಗದಲ್ಲಿ ದೃತಿ ಸಾನ್ವಿ ಯಶ್ವಿ ಪೋಷಿಕ ಒಳಗೊಂಡ ಮಿಕ್ಸೆಡ್ ರಿಲೆ ಸ್ಪರ್ಧೆಯಲ್ಲಿ ಫ್ರೀ ಸ್ಟೈಲ್ ಹಾಗೂ ಮೆಡ್ಲೆ ರಿಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯಿತು. ಗುಂಪು ಒಂದು ಬಾಲಕರ ವಿಭಾಗದ ಮೆಡ್ಲೇ ರಿಲೆಯಲ್ಲಿ ರೋನನ್ , ಡಿವಿಜ್ ನೀಲ್ ಡೈಲಾನ್ ಅವರನ್ನು ಒಳಗೊಂಡ ತಂಡ ಕಂಚಿನ ಪದಕ ಗಳಿಸಿತು. ಗುಂಪು ಎರಡು ಹಾಗೂ ಮೂರು ವಿಭಾಗದ ಮೆಡ್ಲೆ ಹಾಗೂ ಫ್ರೀ ಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಶಶಾಂಕ್, ಸುಧನ್ವ, ನಂದನ್, ದೈವಿಕ್ ಅವರನ್ನು ಒಳಗೊಂಡ ತಂಡ ಪ್ರಥಮ ಪ್ರಶಸ್ತಿ ಗಳಿಸಿತು. ಗುಂಪು ಎರಡು ಮತ್ತು ಮೂರು ಬಾಲಕಿಯರ ವಿಭಾಗದ ಫ್ರೀ ಸ್ಟೈಲ್ ಹಾಗೂ ಮೆಡ್ಲೇ ರಿಲೇ ಸ್ಪರ್ಧೆಯಲ್ಲಿ ಪ್ರೇಮಾ, ಅನಿತಾ, ನಿಷಿಕಾ, ಲಿಪಿಕಾ ಇವರನ್ನೊಳಗೊಂಡ ತಂಡ ಪ್ರಥಮ ಬಹುಮಾನ ಹಾಗೂ ಧ್ವನಿ, ಹನ್ಸ್ವಿ, ದಿವ್ಯಂಶಿ, ಶಮಿತ ಇವರ ತಂಡವು ತೃತೀಯ ಸ್ಥಾನ ಗಳಿಸಿತು. ಗುಂಪು ನಾಲ್ಕು ಐದು ಆರು ವಿಭಾಗದಲ್ಲಿ ಕಿಕ್ ರಿಲೇಯಲ್ಲಿ ಪ್ರದ್ಯುಮ್ನ ಆಯುಷ್, ಶ್ರೀವತ್ಸ, ಏದಂತ್ ಬಾಲಕರ ರಿಲೇ ತೃತೀಯ ಸ್ಥಾನವನ್ನು ಮತ್ತು ಶಿಪ್ರ, ಸಾರಾ, ರೊನ್ನಿಕಾ ಅವರು ದ್ವಿತೀಯ ಸ್ಥಾನ ಗೆದ್ದಿದ್ದಾರೆ.
ಇವರಿಗೆ ಮುಖ್ಯ ತರಬೇತುದಾರರಾದ ಲೋಕರಾಜ್ ವಿಟ್ಲ ಮತ್ತು ಅಭಿಲಾಶ್ ಹಾಗೂ ತರಬೇತುದಾರರಾದ ಸ್ಕಂದ ಸುಧೀನ್ ರಾಜ್, ಗಗನ್ ಜಿ ಪ್ರಭು, ಸಂಜು, ಆರೋಮಲ್, ಪ್ರಣಾಮ್ ಸಂಜಯ್ ಉಳ್ವೇಕರ್ ಇವರಲ್ಲಿ ತರಬೇತಿ ಪಡೆಯುತ್ತಿದ್ದರು. ಇವರನ್ನು ನಿರ್ದೇಶಕರಾದ ನವೀನ್ ಹಾಗೂ ರೂಪ ಜಿ ಪ್ರಭು ಇವರು ಅಭಿನಂದಿಸಿದ್ದಾರೆ.
The V One Aqua Swimming Team clinched the overall championship title at the GAAL-2025 swimming competition held at the Mangala Swimming Pool, organized by Mangaluru City Corporation. The team secured 449 points, winning 65 gold, 24 silver, and 23 bronze medals.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm