ಬ್ರೇಕಿಂಗ್ ನ್ಯೂಸ್
10-01-25 06:23 pm Mangalore Correspondent ಕರಾವಳಿ
ಮಂಗಳೂರು, ಜ.10: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ, ದ.ಕ. ಮತ್ತು ಉಡುಪಿ ಜಿಲ್ಲಾಡಳಿತ ಸಹಭಾಗಿತ್ವದಲ್ಲಿ ರಾಜ್ಯ ಮಟ್ಟದ ಕರ್ನಾಟಕ ಕ್ರೀಡಾಕೂಟ -2025 ಜನವರಿ 17ರಿಂದ 23ರ ವರೆಗೆ ನಡೆಯಲಿದೆ. ಒಟ್ಟು 25 ವಿವಿಧ ಕ್ರೀಡೆಗಳಲ್ಲಿ 3247 ಸ್ಪರ್ಧಿಗಳು, 599 ತಾಂತ್ರಿಕ ಅಧಿಕಾರಿಗಳು, ಸಂಘಟಕರು ಸೇರಿದಂತೆ 4250 ಮಂದಿ ಭಾಗವಹಿಸಲಿದ್ದಾರೆ ಎಂದು ವಿಧಾನಸಭೆ ಸ್ವೀಕರ್ ಯುಟಿ ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಮಂಗಳೂರಿನಲ್ಲಿ 12 ಕ್ರೀಡೆಗಳು, ಉಡುಪಿ ಮತ್ತು ಮಣಿಪಾಲದಲ್ಲಿ 11 ಕ್ರೀಡೆಗಳು, ಬೆಂಗಳೂರಿನಲ್ಲಿ ಎರಡು ಕ್ರೀಡೆಗಳು ನಡೆಯಲಿವೆ. ಜ.17ರಂದು ಸಂಜೆ 5 ಗಂಟೆಗೆ ಮಂಗಳಾ ಕ್ರೀಡಾಂಗಣದಲ್ಲಿ ಉದ್ಘಾಟನೆ, ಜ.23ರಂದು ಸಂಜೆ 4.30ಕ್ಕೆ ಉಡುಪಿ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾರೋಪ ನಡೆಯಲಿದೆ. ಕ್ರೀಡಾಕೂಟಕ್ಕೆ ಇಲಾಖೆಯಿಂದ 5 ಕೋಟಿ ರೂ. ಅನುದಾನ ನೀಡಿದೆ ಎಂದು ತಿಳಿಸಿದರು.
5 ದಿನಗಳ ಕ್ರೀಡಾಕೂಟಕ್ಕೆ ಉಪ ಮುಖ್ಯಮಂತ್ರಿ, ಗೃಹ ಸಚಿವರು, ಸಚಿವರು, ಶಾಸಕರು, ಸಂಸದರು ಆಗಮಿಸಲಿದ್ದಾರೆ. ಜ.17ರಂದು ಸಂಜೆ ಪಿವಿಎಸ್ ವೃತ್ತದಿಂದ ಮಂಗಳಾ ಸ್ಟೇಡಿಯಂ ವರೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ವೈವಿಧ್ಯ ಬಿಂಬಿಸುವ ಮೆರವಣಿಗೆ ನಡೆಯಲಿದೆ ಎಂದರು. ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಡಾ.ಕೆ. ಗೋವಿಂದರಾಜ್ ಮಾತನಾಡಿ, ಪ್ರತಿ ಕ್ರೀಡೆಯಲ್ಲಿ ಹಲವು ವಿಭಾಗದ ಸ್ಪರ್ಧೆ ನಡೆಯಲಿದೆ. ಒಟ್ಟು 631 ಚಿನ್ನ ಮತ್ತು ಬೆಳ್ಳಿ ಪದಕ, 827 ಕಂಚಿನ ಪದಕಗಳಿಗಾಗಿ ಸ್ಪರ್ಧೆ ನಡೆಯಲಿದೆ. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಅಗ್ರ ಎಂಟು ಸ್ಪರ್ಧಿಗಳನ್ನು ಈ ಟೂರ್ನಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಗೆದ್ದ ಸ್ಪರ್ಧಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎಂದರು.
ಕ್ರೀಡಾಪಟುಗಳು ಮತ್ತು ತೀರ್ಪುಗಾರರ ವಾಸ್ತವ್ಯಕ್ಕಾಗಿ ದಕ್ಷಿಣ ಕನ್ನಡ, ಉಡುಪಿಯಲ್ಲಿ ಒಂದು ಸಾವಿರಕ್ಕೂ ಹೊಟೇಲ್ ರೂಮ್ ಬುಕ್ ಮಾಡಲಾಗಿದೆ. ಮಂಗಳೂರಿನ ಮಂಗಳಾ ಕ್ರೀಡಾಂಗಣ, ನೆಹರು ಮೈದಾನ, ಎಮ್ಮೆಕೆರೆ ಈಜುಕೊಳ, ಮರೀನಾ ಒಳಾಂಗಣ ಕ್ರೀಡಾಂಗಣ ಅತ್ತಾವರ, ಯು.ಎಸ್ ಮಲ್ಯ ಕ್ರೀಡಾಂಗಣ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಭಾಭವನ, ಅಂಬೇಡ್ಕರ್ ಭವನ, ಉಡುಪಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು, ಎಂಜಿಸಿ ಮೈದಾನ ಮಣಿಪಾಲ, ಬಾಸ್ಕೆಟ್ ಬಾಲ್ ಅಂಕಣ, ಹಾಕಿ ಅಂಕಣ ಮಣಿಪಾಲ, ಟೆನಿಸ್ ಅಂಕಣ ಉಡುಪಿ, ಸ್ವರ್ಣಾ ನದಿ ಅಳಿವೆಕೋಡಿ ಬ್ರಹ್ಮಾವರ, ಗೋಪಾಲನ್ ಸ್ಪೋರ್ಟ್ಸ್ ಸೆಂಟರ್ ಬೆಂಗಳೂರು, ಸಾಯಿ ಶೂಟಿಂಗ್ ರೇಂಜ್ ಬೆಂಗಳೂರಿನಲ್ಲಿ ಸ್ಪರ್ಧೆಗಳು ನಡೆಯಲಿವೆ.
ಮಂಗಳೂರಿನಲ್ಲಿ ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಫೆನ್ಸಿಂಗ್, ಫುಟ್ಬಾಲ್, ಹ್ಯಾಂಡ್ ಬಾಲ್, ಖೋಖೋ, ನೆಟ್ ಬಾಲ್, ಈಜು, ಟೇಕ್ವಾಂಡೋ, ವಾಲಿಬಾಲ್, ವೇಟ್ ಲಿಫ್ಟಿಂಗ್, ವುಶು ಸ್ಪರ್ಧೆ ಇರಲಿವೆ. ಉಡುಪಿಯಲ್ಲಿ ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಸೈಕ್ಲಿಂಗ್, ಜೂಡೋ, ಕಬಡ್ಡಿ, ಕುಸ್ತಿ, ಕಯಾಕಿಂಗ್ ಮತ್ತು ಕುನೋಯಿಂಗ್ ಸ್ಪರ್ಧೆಗಳಿವೆ. ಮಣಿಪಾಲದಲ್ಲಿ ಹಾಕಿ, ಲಾನ್ ಟೆನಿಸ್, ಟೇಬಲ್ ಟೆನಿಸ್, ಬೆಂಗಳೂರಿನಲ್ಲಿ ಜಿಮ್ನಾಸ್ಟಿಕ್, ಶೂಟಿಂಗ್ ಇರಲಿವೆ.
The State Level Karnataka Games-2025 will be held from January 17 to 23 in partnership with the Department of Youth Empowerment and Sports, Karnataka Olympic Association, D.K. and Udupi District Administration. A total of 324 athletes in 25 different sports will compete.
21-08-25 10:31 pm
Bangalore Correspondent
Dharmasthala, Acharya Sri Gunadharanandi Maha...
21-08-25 10:21 pm
ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲು ;...
21-08-25 06:24 pm
"ಧರ್ಮದ ಉಳಿವಿಗಾಗಿ ಧರ್ಮ ಯುದ್ಧ" ; ರಾಜ್ಯದ ಎಲ್ಲ ವ...
21-08-25 06:02 pm
Mandya Police Torture, Suicide: ಪೊಲೀಸ್ ಠಾಣೆಯ...
21-08-25 02:03 pm
21-08-25 06:09 pm
HK News Desk
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
21-08-25 09:35 pm
HK News Desk
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
21-08-25 11:00 pm
Mangalore Correspondent
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm