ಬ್ರೇಕಿಂಗ್ ನ್ಯೂಸ್
07-12-24 08:19 pm Mangalore Correspondent ಕರಾವಳಿ
ಮಂಗಳೂರು, ಡಿ.7 : ದೇಶದ ಅತ್ಯಂತ ಹಳೆಯ ಮತ್ತು ಶತಮಾನ ಕಂಡಿರುವ ಮಂಗಳೂರಿನ ಕಾಸ್ಮೋಪಾಲಿಟನ್ ಕ್ಲಬ್ ಆಯೋಜಿಸಿರುವ ಅಂತರ್ ಜಿಲ್ಲಾ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಪಂದ್ಯಾಟವನ್ನು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಇಂದು (ಡಿ.7) ಉದ್ಘಾಟಿಸಿದರು.
1901ರಲ್ಲಿ ಸ್ಥಾಪನೆಗೊಂಡಿರುವ ಮಂಗಳೂರಿನ ಕಾಸ್ಮೋಪಾಲಿಟನ್ ಕ್ಲಬ್ ಬ್ರಿಟಿಷರ ಕಾಲದಿಂದ ನಡೆದುಬಂದಿದ್ದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸ್ನೂಕರ್ ಚಾಂಪಿಯನ್‌ಗಳು ಈ ಕ್ಲಬ್‌ನಲ್ಲಿ ಆಟವಾಡಿದ್ದಾರೆ. ಮಾಜಿ ಸಚಿವರು, ಶಾಸಕರು ಸೇರಿದಂತೆ ಸಮಾಜದ ಅತಿ ಗಣ್ಯರು ಈ ಕ್ಲಬ್‌ನ ಸದಸ್ಯರಾಗಿ ಇದನ್ನು ಕಟ್ಟಿ ಬೆಳೆಸಿದ್ದಾರೆ ಎಂದು ಕ್ಲಬ್‌ನ ಟೂರ್ನಮೆಂಟ್ ಚೇರ್ಮನ್ ಆಗಿರುವ ರಾಜಗೋಪಾಲ್ ರೈ ಪ್ರಾಸ್ತಾವಿಕ ಮಾತಿನಲ್ಲಿ ತಿಳಿಸಿದರು.
ಸ್ನೂಕರ್ ಮತ್ತು ಬಿಲಿಯರ್ಡ್ಸ್ ಪ್ರಸಿದ್ಧ ಕ್ರೀಡೆ. 1978ರಲ್ಲಿ ಬಿ.ಆರ್ ರಮಾನಂದ ಅಡ್ಯಂತಾಯರು ಇಲ್ಲಿ ಆಟವಾಡಿ ರಾಜ್ಯ ಮಟ್ಟದ ಚಾಂಪಿಯನ್ ಆಗಿದ್ದಾರೆ. ಅಂತಾರಾಷ್ಟ್ರೀಯ ಆಟಗಾರ ಮೈಕೆಲ್ ಪಿರೇರಾ 1966ರಲ್ಲಿ ಇದೇ ಟೇಬಲ್ ನಲ್ಲಿ ಆಟವಾಡಿ ಚಾಂಪಿಯನ್ ಆಗಿದ್ದಾರೆ. ಲಂಡನ್‌ನಲ್ಲಿ ತಯಾರಾದ ಈ ಟೇಬಲ್ ಕೂಡ ಶತಮಾನದ ಇತಿಹಾಸ ಹೊಂದಿದೆ. ಅಂತಹ ಒಂದು ಇತಿಹಾಸವಿರುವ ಈ ಕ್ಲಬ್ ಪ್ರತಿ ವರ್ಷ ಹಲವು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುತ್ತ ಬಂದಿದೆ. ಈ ವರ್ಷ ಡಿಸೆಂಬರ್ 14ರಂದು ಕ್ಲಬ್‌ನ 123ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಅಂತರ್ ಜಿಲ್ಲಾ ಸ್ನೂಕರ್- ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಪಂದ್ಯವನ್ನು ಆಯೋಜಿಸಲಾಗಿದೆ ಎಂದು ರಾಜಗೋಪಾಲ್ ರೈ ಮಾಹಿತಿ ನೀಡಿದರು.
ಈ ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 10 ಕ್ಲಬ್‌ಗಳಿಂದ 35 ಜನ ಆಟಗಾರರು ಈ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸುತ್ತಿದ್ದಾರೆ. ಆಯಾ ಕ್ಲಬ್‌ಗಳಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ಮಾತ್ರ ಆಹ್ವಾನಿಸಿ ಈ ಟೂರ್ನಮೆಂಟ್ ನಡೆಸಲಾಗುತ್ತಿದೆ. ಒಂದು ವಾರದ ಹಿಂದಿನಿಂದಲೇ ಆಯ್ಕೆ ಹಂತದ ಸ್ಪರ್ಧೆಗಳು ನಡೆದಿದ್ದು, ಪ್ರಸ್ತುತ ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಮತ್ತು ಫೈನಲ್ ಹಂತದ ಸ್ಫರ್ಧೆಗಳು ನಡೆಯುತ್ತಿವೆ ಎಂದು ಅವರು ಮಾಧ್ಯಮಗಳಿಗೆ ವಿವರಿಸಿದರು.
ಟೂರ್ನಮೆಂಟ್ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಮುಗಿಲನ್, ದಕ್ಷಿಣ ಭಾರತದ ಐತಿಹಾಸಿಕ ಹಿನ್ನೆಲೆ ಇರುವ ಕ್ಲಬ್. ಇಂತಹ ಕ್ಲಬ್ ದೇಶದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಇರಬಹುದು. ಅಧ್ಯಕ್ಷ ಡಾ. ಸದಾನಂದ ಶೆಟ್ಟಿ, ಕಾರ್ಯದರ್ಶಿ ಯೋಗೀಶ್ ಕುಮಾರ್, ಟೂರ್ನಮೆಂಟ್ ಚೇರ್ಮನ್ ರಾಜಗೋಪಾಲ್ ರೈ ಅವರಂತಹ ಕ್ರೀಡಾಪ್ರೇಮಿಗಳು ಈ ಕ್ಲಬ್‌ನಲ್ಲಿ ಸಾಕಷ್ಟು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತುಳು ಕಲಿತರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಬಹುದು ಎಂಬ ವಿಚಾರವನ್ನು ಉದಾಹರಣೆಗಳ ಸಹಿತ ಪ್ರಸ್ತಾಪಿಸಿದ ಅವರು, ಈ ಕ್ಲಬ್ ಬರೀ ಇತಿಹಾಸದಲ್ಲಿ ಮಾತ್ರ ಉಳಿದುಕೊಳ್ಳದೆ, ಈಗಿನ ಕಾಲಕ್ಕೂ ಸಲ್ಲುವಂತೆ ಬೆಳೆದು ಬಂದಿದೆ. ಶತಮಾನ ಕಂಡ ಕ್ಲಬ್ ಆಗಿದ್ದರೂ ಎಳೆಯ ವಯಸ್ಸಿನ ಪ್ರತಿಭೆಗಳಿಗೂ ಪ್ರೋತ್ಸಾಹ ನೀಡುತ್ತ ಮುಂದುವರಿಯುತ್ತಿರುವುದು ಖುಷಿಯ ವಿಚಾರ ಎಂದು ಹೇಳಿದರು.
123rd Anniversary of British Era Cosmopolitan Club of Mangalore, Inter District Snooker, Billiards Tournament inaugurated.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm