ಬ್ರೇಕಿಂಗ್ ನ್ಯೂಸ್
15-05-23 01:50 pm Mangalore Correspondent ಕರಾವಳಿ
ಮಂಗಳೂರು, ಮೇ 15: ಪುತ್ತೂರಿನಲ್ಲಿ ಶುರುವಾದ ಹಿಂದು ಕಾರ್ಯಕರ್ತರ ಬಂಡಾಯ ಇಡೀ ಜಿಲ್ಲೆಗೆ ಆವರಿಸತೊಡಗಿದೆ. ಪುತ್ತೂರಿನಲ್ಲಿ ಯಾವುದೇ ಸ್ಟಾರ್ ಪ್ರಚಾರಕರಿಲ್ಲದೆ, ಭಾರೀ ಹವಾ ಎಬ್ಬಿಸಿದ್ದಲ್ಲದೆ, ಬಿಜೆಪಿಯನ್ನು ಬದಿಗೊತ್ತಿ ಕಾಂಗ್ರೆಸಿಗೆ ಠಕ್ಕರ್ ಕೊಟ್ಟಿರುವ ಅರುಣ್ ಪುತ್ತಿಲ ಅಂಡ್ ಟೀಮ್ ಇಡೀ ಕರಾವಳಿಯಲ್ಲಿ ಸ್ಟಾರ್ ಗಿರಿ ಗಿಟ್ಟಿಸಿದೆ. ಬಿಜೆಪಿ, ಆರೆಸ್ಸೆಸ್ ನಾಯಕರ ತೇಜೋವಧೆ, ಅಪಪ್ರಚಾರವನ್ನೇ ಮೆಟ್ಟಿಲಾಗಿಸಿ ಪುತ್ತಿಲ ನಿಕಟ ಸ್ಪರ್ಧೆ ಒಡ್ಡಿದ್ದನ್ನು ಕೇಸರಿ ಕಾರ್ಯಕರ್ತರು ಮೆಚ್ಚಿಕೊಂಡಿದ್ದಾರೆ. ಇದೀಗ ಕಾರ್ಯಕರ್ತರು ಮುಂದಿನ ಲೋಕಸಭೆಗೂ ಪುತ್ತಿಲ ಸ್ಪರ್ಧಿಸಬೇಕೆಂದು ಒತ್ತಾಯ ಮುಂದಿಡುತ್ತಿದ್ದಾರೆ.
ಲೋಕಸಭೆಗೆ ಅರುಣ್ ಪುತ್ತಿಲ ಅವರನ್ನೇ ಬಿಜೆಪಿ ಅಭ್ಯರ್ಥಿ ಮಾಡಬೇಕೆಂಬ ಒತ್ತಾಯವನ್ನು ಪ್ರಧಾನಿ ಮೋದಿ ಅವರಿಗೆ ತಲುಪಿಸುವ ಪ್ರಯತ್ನ ನಡೆದಿದೆ. ಇದೇ ವೇಳೆ, ಚುನಾವಣೆ ನಡೆದು ಎರಡೇ ದಿನದಲ್ಲಿ ಜಿಲ್ಲೆಯಾದ್ಯಂತ 50ಕ್ಕೂ ಹೆಚ್ಚು ವಾಟ್ಸಪ್ ಗ್ರೂಪ್ ಗಳನ್ನು ರಚಿಸಲಾಗಿದ್ದು, ಸ್ವಯಂಪ್ರೇರಿತರಾಗಿ ಕಾರ್ಯಕರ್ತರು ಗ್ರೂಪ್ ಸೇರ್ಪಡೆ ಆಗುತ್ತಿದ್ದಾರೆ. ಸಂಸದ ನಳಿನ್ ಕುಮಾರ್ ವಿರುದ್ಧ ಎದ್ದಿರುವ ಈ ಬಂಡಾಯ ಈಗ ಲೋಕಸಭೆ ಚುನಾವಣೆಗೆ ವಿಸ್ತರಣೆಯಾಗುವ ಸುಳಿವು ವ್ಯಕ್ತವಾಗಿದ್ದು ಬಿಜೆಪಿಯಲ್ಲೇ ಒಡಕು ಸೃಷ್ಟಿಸಿದೆ.

ಈಗಂತೂ ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋತಿರುವುದರಿಂದ ರಾಜ್ಯಾಧ್ಯಕ್ಷನೇ ಹೊಣೆಯೆಂದು ಕೇಸರಿ ಕಾರ್ಯಕರ್ತರು ಹಿಡಿಶಾಪ ಹಾಕುತ್ತಿದ್ದಾರೆ. ಮೇಲಾಗಿ ಪುತ್ತೂರಿನಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗಲು ರಾಜ್ಯಾಧ್ಯಕ್ಷನೇ ಕಾರಣ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ನಡುವಲ್ಲೇ, ಪುತ್ತಿಲ ಅಭಿಮಾನಿಗಳು ಅಭಿಯಾನ ಮುಂದುವರಿಸಿದ್ದು ಲೋಕಸಭೆ ಚುನಾವಣೆಗೂ ಪುತ್ತಿಲ ಸ್ಪರ್ಧಿಸಲಿದ್ದಾರೆ, ಒಂದೋ ಬಿಜೆಪಿ ಟಿಕೆಟ್ ಕೊಡಬೇಕು. ಇಲ್ಲದಿದ್ದರೆ ಪಕ್ಷೇತರ ಸ್ಪರ್ಧಿಸುವುದು ಖಚಿತ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.

ಮತ್ತೊಂದೆಡೆ, ಇಷ್ಟೆಲ್ಲ ರಾದ್ಧಾಂತ ಆಗುತ್ತಿದ್ದರೂ ನಳಿನ್ ಕುಮಾರ್ ಅಂತಹದ್ದೇನೂ ಆಗೇ ಇಲ್ಲವೆಂದು ಸುಮ್ಮನಿದ್ದಾರೆ. ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೂ ರಾಜಿನಾಮೆ ನೀಡಿಲ್ಲ. ಸಂಘಟನಾ ಕಾರ್ಯದರ್ಶಿ ಮತ್ತು ರಾಜ್ಯ ಬಿಜೆಪಿಯನ್ನು ಕೈಗೊಂಬೆ ಮಾಡಿಕೊಂಡಿರುವ ಬಿ.ಎಲ್.ಸಂತೋಷ್, ನಳಿನ್ ಕುಮಾರ್ ಪಾಲಿಗೆ ಗಾಡ್ ಫಾದರ್ ಇದ್ದಂತೆ. ಸಂತೋಷ್ ಕೂಡ ಬಿಜೆಪಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿಲ್ಲ. ರಾಜ್ಯ ಬಿಜೆಪಿಯನ್ನು ಪೂರ್ತಿ ಬರ್ಖಾಸ್ತು ಮಾಡಿ ಬದಲಾವಣೆ ಮಾಡಬೇಕೆಂದು ಕಾರ್ಯಕರ್ತರು ಆಗ್ರಹ ಮಾಡುತ್ತಿದ್ದರೂ, ರಾಜ್ಯ ನಾಯಕರಾಗಲೀ, ಕೇಂದ್ರ ನಾಯಕರಾಗಲೀ ಮೌನ ವಹಿಸಿದ್ದಾರೆ. ಇದರ ನಡುವಲ್ಲೇ ಕರಾವಳಿಯಲ್ಲಿ ನಳಿನ್ ಹಠಾವೋ, ಬಿಜೆಪಿ ಬಚಾವೋ ಪೋಸ್ಟ್ ಗಳು, ನಳಿನ್ ವಿರುದ್ಧ ಟ್ರೋಲ್ ಗಳು ಹೆಚ್ಚತೊಡಗಿವೆ. ಕೇಸರಿ ಕಾರ್ಯಕರ್ತರು ಮುಂದಿನ ಚುನಾವಣೆಯಲ್ಲೂ ಬಿಜೆಪಿಗೆ ಠಕ್ಕರ್ ಕೊಡಲು ಸದ್ದಿಲ್ಲದೆ ತಂತ್ರ ಹೂಡುತ್ತಿದ್ದಾರೆ.
ಇವೆಲ್ಲ ನೋಡಿದರೆ, ದಕ್ಷಿಣ ಕನ್ನಡ ಬಿಜೆಪಿ ಮತ್ತು ಕೇಸರಿ ಕಾರ್ಯಕರ್ತರ ಒಳಗಡೆಯೇ ಒಡಕು ಸೃಷ್ಟಿಯಾಗಿದೆ. ಇಡೀ ಜಿಲ್ಲಾ ಬಿಜೆಪಿಯನ್ನು ನಳಿನ್ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿರುವುದು ಕೂಡ ಕಾರ್ಯಕರ್ತರ ಒಳಗಡೆ ವಿರೋಧಕ್ಕೆ ಕಾರಣವಾಗಿದೆ. ಇದಕ್ಕಾಗಿಯೇ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಪುತ್ತಿಲ ಪರ ದನಿ ಎತ್ತುತ್ತಿದ್ದಾರೆ.
Puttur Arun Puthila to be next MP Candidate from Mangaluru campiagn on social media begans, Naleen Kateel Hatao posters have started going viral on social media.
30-12-25 11:12 pm
HK News Desk
ಬಯೋಕಾನ್ ಕಂಪನಿ ಟೆಕ್ಕಿ ಆಫೀಸ್ ಕಟ್ಟಡದ ಆರನೇ ಮಹಡಿಯಿ...
30-12-25 10:14 pm
ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ವಜಾಗೊಳಿಸುವ ಅಧಿಕಾ...
30-12-25 06:34 pm
ಪ್ರಿಯಾಂಕ ಗಾಂಧಿ ಪುತ್ರ ರೈಹಾನ್ ಮದುವೆ ನಿಶ್ಚಿತಾರ್ಥ...
30-12-25 05:44 pm
ಕೇರಳದಲ್ಲಿ ಚುನಾವಣೆಯಾದ್ರೆ ಪಿಣರಾಯಿಗೆ ಕರ್ನಾಟಕದಲ್ಲ...
30-12-25 05:10 pm
30-12-25 06:48 pm
HK News Desk
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
30-12-25 10:43 pm
Mangalore Correspondent
ಯುವತಿಗೆ ಮಗು ಕರುಣಿಸಿದ ಪ್ರಕರಣ ; ಬಿಜೆಪಿಯಿಂದ ಜಗನ್...
29-12-25 11:03 pm
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
ಹಿಂದುತ್ವದ ನೆಲೆ ಅನ್ನೋರಿಗೆ ನಾಚಿಕೆಯಾಗಬೇಕು, ವಿಶ್ವ...
29-12-25 07:37 pm
ಉಡುಪಿ ; ಬುದ್ದಿ ಮಾತು ಹೇಳಿದ್ದಕ್ಕೆ 17 ವರ್ಷದ ಯುವತ...
29-12-25 01:24 pm
30-12-25 10:40 pm
Mangalore Correspondent
ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ;...
30-12-25 12:42 pm
ಯೆಯ್ಯಾಡಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕರಿಮಣಿ...
29-12-25 03:02 pm
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm