ಬ್ರೇಕಿಂಗ್ ನ್ಯೂಸ್
22-09-26 08:30 pm HK News Staffer ಕರ್ನಾಟಕ
ಬೆಂಗಳೂರು, ಸೆ 22: ಅರಣ್ಯ ಇಲಾಖೆ ಎಂದರೆ ಅರಣ್ಯ ಸಂರಕ್ಷಣೆಗಿಂತ, ಜನರಿಗೆ ಕಷ್ಟ ಕೊಡುವ ಇಲಾಖೆಯಾಗಿದೆ. ನಮ್ಮ ಜಿಲ್ಲೆಯಲ್ಲಿ ನಕ್ಸಲ್ ಬೆಳೆದಿದ್ದು ಇದೇ ಕಾರಣಕ್ಕೆ ಎಂದು ಶಾಸಕ ಸುನೀಲ್ ಕುಮಾರ್ ತಿಳಿಸಿದರು
ವಿಧಾನಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಸಂಬಂಧ ವಿಶೇಷ ಚರ್ಚೆ ವೇಳೆ ಮಾತನಾಡಿದ ಅವರು, ಪಶ್ಚಿಮಘಟ್ಟ ಸೆಲ್ಫಿ ಪಾಯಿಂಟ್ ಅಲ್ಲ. ನಮಗೆ ಬದುಕು ಕಟ್ಟಿಕೊಳ್ಳುವ ಪಾಯಿಂಟ್. ಅನೇಕ ಹುಳು, ಉಪ್ಪಟೆಗಳ ಜೊತೆ ನಾವು ಬದುಕುತ್ತಿದ್ದೇವೆ. ಕಸ್ತೂರಿ ರಂಗನ್ ವರದಿಯಿಂದ ಬಹಳ ವಿಚಾರ ಎದುರಿಸಿದ್ದೇವೆ. ನಾನು ಮುಖ್ಯಮಂತ್ರಿಗಳ ಭಾಷಣ ಗಮನಿಸಿದ್ದೇನೆ. ನಾನು ಜನರ ಭಾವನೆಗಳ ಮೇಲೆ ಆಡಳಿತ ಮಾಡಲ್ಲ. ಜನರ ಬದುಕಿನ ಮೇಲೆ ಆಡಳಿತ ನಡೆಸ್ತಿದ್ದೇನೆ ಅಂತ ಹೇಳಿದ್ದಾರೆ. ನಾವು ಬದುಕು, ಭಾವನೆ ಎರಡರ ಮೇಲೂ ಜೀವನ ಮಾಡ್ತಿದ್ದೇವೆ ಎಂದರು.
ಜನ ಸಂಸ್ಕೃತಿ ತೆಗೆದು ಪರಿಸರ ಉಳಿಸ್ತೇನೆ ಎಂಬುದು ಮೂರ್ಖತನ. ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡ ಸಂಸ್ಕೃತಿ ಇದೆ. ಪರಿಸರ ಉಳಿಸುವುದರಲ್ಲಿ ನಾವು ಮೊದಲಿಗರು. ಮನೆ ಕೋಳಿಗಿಂತ ನವಿಲು ನಮ್ಮ ಮನೆ ಅಂಗಳದಲ್ಲಿ ಓಡಾಡ್ತಿವೆ. ನಗರಗಳಲ್ಲಿ ಕುಳಿತವರು ಏನೆಲ್ಲ ಮಾತನಾಡುತ್ತಾರೆ. ಇಕೋ ಸೆನ್ಸಿಟಿವ್ ಝೋನ್ನಲ್ಲಿ ಮನೆ ಕಟ್ಟಿ ನೋಡಿ. ಬೆಂಗಳೂರಿನಲ್ಲಿ ಕುಳಿತು ಸೆನ್ಸಿಟಿವ್ ಝೋನ್ ಉಳಿಸಬೇಕು ಅಂತ ಮಾತಾಡ್ತಾರೆ ಎಂದು ಟೀಕಿಸಿದರು.
ಅರಣ್ಯ ಇಲಾಖೆ ಅಂದ್ರೆ ಅರಣ್ಯ ಸಂರಕ್ಷಣೆಗಿಂತ, ಜನರಿಗೆ ಕಷ್ಟ ಕೊಡುವ ಇಲಾಖೆಯಾಗಿದೆ. ನಮ್ಮ ಜಿಲ್ಲೆಯಲ್ಲಿ ನಕ್ಸಲ್ ಬೆಳೆದಿದ್ದು ಇದೇ ಕಾರಣಕ್ಕೆ. ಆದರೆ ನಮ್ಮ ಜನ ನಕ್ಸಲರಿಗೆ ಬೆಂಬಲ ಕೊಡಲಿಲ್ಲ. ಕಾಡಲ್ಲಿದ್ದವರಿಗೆ ಬೆಂಬಲ ಕೊಟ್ರು. ಇಲ್ಲದಿದ್ದರೆ ಬೇರೆಯದೇ ಪರಿಣಾಮ ಆಗ್ತಿತ್ತು. ರಾಮಲಿಂಗಾರೆಡ್ಡಿ ಅವರು ಗಮನಿಸಬೇಕು. ಅರಣ್ಯ ಇಲಾಖೆ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಿ. ಮೈಸೂರಿನಲ್ಲಿ ರೀಜನಲ್ ಕಮಿಷನರ್ ಕೂತಿರ್ತಾರೆ. ತಿಂಗಳಲ್ಲಿ ಒಂದೆರಡು ಬಾರಿ ಸಭೆ ಮಾಡ್ತಾರೆ. ಮನೆ ಪಕ್ಕದಲ್ಲಿ ಅಡುಗೆ ಮನೆಯೋ, ರೂಮ್ ಕಟ್ಟಬೇಕು ಎಂದರೆ ಅನುಮತಿ ಪಡೆಯಲು ಮೈಸೂರಿಗೆ ಹೋಗಬೇಕು. ಅಡುಗೆ ಮನೆ ಕಟ್ಟಬೇಕು ಅಂತ ಹೇಳಿದ್ರೆ, ವಾಣಿಜ್ಯ ಚಟುವಟಿಕೆಗೆ ಬಳಕೆ ಮಾಡಲಾಗುತ್ತೆ ಅಂತ ರಿಜೆಕ್ಟ್ ಮಾಡ್ತಾರೆ ಎಂದು ಆಕ್ಷೇಪಿಸಿದರು.
ರಸ್ತೆ ಮಾಡಲು ಬಿಡಲ್ಲ, ಕೋಣೆ ಕಟ್ಟಲು ಬಿಡಲ್ಲ. ಸರ್ಕಾರಿ ಉದ್ದೇಶಕ್ಕಾಗಿ ಅರಣ್ಯ ಇಲಾಖೆಗೆ ಎಷ್ಟು ಅರ್ಜಿ ಹೋಗಿದೆ, ಎಷ್ಟು ಪೆಂಡಿಂಗ್ ಇದೆ ಚೆಕ್ ಮಾಡಿ. ಕುಡಿಯುವ ನೀರಿಗೆ ಪೈಪ್ ಲೈನ್ ಹಾಕಲು ಬಿಡೋದಿಲ್ಲ. ಹಾಗಾದರೆ ಪಶ್ಚಿಮ ಘಟ್ಟದಲ್ಲಿರೋರಿಗೆ ನೀರು ಕೊಡಲ್ವಾ?. ನಮ್ಮ ಭಾಗದಲ್ಲಿ ಹುಟ್ಟೋ ನೀರನ್ನು, ನಮ್ಮವರಿಗೆ ಕೊಡಲ್ಲ. ಬೇರೆಯ ಕಡೆ ನೀರು ಕೊಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸರ್ವಾನುಮತದಿಂದ ತಿರಸ್ಕಾರ ಮಾಡಿದರೆ, ಕೇಂದ್ರಕ್ಕೆ ನಿಯೋಗ ಹೋದರೆ. ನಮ್ಮ ಮನವಿಯನ್ನು NGT ಕಸದ ಬುಟ್ಟಿಗೆ ಹಾಕತ್ತದೆ. ಕಸ್ತೂರಿ ರಂಗನ್ ವರದಿಯಲ್ಲಿ ಯಾವ ಅಂಶವನ್ನು ಈಗ ಒಪ್ಪಲು ಸಾಧ್ಯವಿಲ್ಲ. ಕಾರಣ ಪಟ್ಟಿಮಾಡಬೇಕು. ಕಾರಣ ಸಹಿತ ವರದಿ ನೀಡಬೇಕು. ಇಲ್ಲದಿದ್ದರೆ ಜನರ ಬದುಕಿನ ಜೊತೆ ಚೆಲ್ಲಾಟವಾಗತ್ತದೆ. ಗಾಡ್ಗಿಲ್ ವರದಿ ಜಾರಿಯಾದರೆ ತೀರ ಕಷ್ಟವಾಗಲಿದೆ. ಸರ್ಕಾರ ಕಸ್ತೂರಿ ರಂಗನ್ ವರದಿ ತಿರಸ್ಕಾರ ಎನ್ನುವ ತೀರ್ಮಾನ ಮಾಡಿದರೆ ಪ್ರಯೋಜನವಿಲ್ಲ ಎಂದರು.
22-09-26 08:58 pm
HK News Staffer
ಅರಣ್ಯ ಇಲಾಖೆ ಎಂದರೆ ಜನರಿಗೆ ಕಷ್ಟ ಕೊಡುವ ಇಲಾಖೆ ; ನ...
22-09-26 08:30 pm
ಎಡಪಂಥೀಯ ಉಗ್ರವಾದ ಹೆಸರಲ್ಲಿ 'ಮಿಷನರಿ ಚಟುವಟಿಕೆ' ;...
21-09-26 12:58 pm
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
22-09-26 08:32 pm
HK News Staffer
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
22-09-26 09:00 pm
HK News Staffer
ಅತಿ ವೇಗದ ಚಾಲನೆ ; ಮರೋಳಿಯಲ್ಲಿ ಹೈಟೆನ್ಶನ್ ವಿದ್ಯುತ...
22-09-26 07:05 pm
ದುಬೈನಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ಶವ...
22-09-26 06:59 pm
ಪೆರ್ನೆಯಲ್ಲಿ ಇಬ್ಬರು ಮಕ್ಕಳ ಬಾವಿಗೆ ಎಸೆತ ಪ್ರಕರಣ :...
22-09-26 02:57 pm
ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತಕ್ಕೆ ಟ್ರಾಪ್ ಆದ ಬಜ್ಪ...
21-09-26 08:21 pm