ಬ್ರೇಕಿಂಗ್ ನ್ಯೂಸ್
23-09-26 09:32 am HK News Staffer ಕ್ರೈಂ
ಕಾಸರಗೋಡು, ಸೆ.22: ಡಿಜಿಟಲ್ ಬಂಧನ ಹೆಸರಿನಲ್ಲಿ 80 ವರ್ಷ ಪ್ರಾಯದ ವೈದ್ಯರೊಬ್ಬರನ್ನು ಬೆದರಿಸಿ 1.19 ಕೋಟಿ ಅಧಿಕ ಹಣವನ್ನು ಪೀಕಿಸಿಕೊಂಡು ವಂಚಿಸಿದ ಪ್ರಕರಣದಲ್ಲಿ ಆರೋಪಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಯನ್ನು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಸರಗೋಡು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಮಲಪ್ಪುರಂ ಜಿಲ್ಲೆಯ ಎಡೆಯತ್ತೂರು ನಿವಾಸಿ ಶಂಸದ್ ಚುಕ್ರುತ್ ಬಂದಿತ ಆರೋಪಿ. ತನಿಖೆ ವೇಳೆ ಆರೋಪಿ ವಿದೇಶದಲ್ಲಿ ಕೆಲಸ ಮಾಡುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಆತನ ಪಾಸ್ ಪೋರ್ಟ್ ವಿವರಗಳನ್ನು ಸಂಗ್ರಹಿಸಿ ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು. 2026ರ ಸೆ.17 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ವಲಸೆ ಅಧಿಕಾರಿಗಳು ಅವನನ್ನು ತಡೆದು ಕಾಸರಗೋಡು ಸೈಬರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಕಾಸರಗೋಡು ಪೊಲೀಸರು ಹೈದರಾಬಾದ್‌ಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಬಳಿಕ ಕಾಸರಗೋಡು ನ್ಯಾಯಾಲಯಕ್ಕೆ ಹಾಜರು ಈ ಪಡಿಸಿದಾಗ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
2025ರ ನ. 24ರಿಂದ ಡಿ.17ರ ನಡುವೆ ಬೇರೆ ಬೇರೆ ಅವಧಿಯಲ್ಲಿ ವೈದ್ಯರನ್ನು ಫೋನ್ ಮತ್ತು ವಾಟ್ಸ್ ಆ್ಯಪ್ ವೀಡಿಯೋ ಕರೆ ಮೂಲಕ ಸಂಪರ್ಕಿಸಿದ್ದ ಆರೋಪಿಗಳು ತಾವು ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಹಣ ಅಕ್ರಮ ವರ್ಗಾವಣೆ ಪ್ರಕರಣದಲಿ ನೀವು ಭಾಗಿಯಾಗಿದ್ದು ನೀವು 'ಡಿಜಿಟಲ್ ಬಂಧನ'ಕ್ಕೆ ಒಳಗಾಗಿದ್ದೀರಿ ಎಂದು ಬೆದರಿಸಿ ಪರಿಶೀಲನೆಗಾಗಿ ಬ್ಯಾಂಕ್ ಖಾತೆ ವಿವರಗಳನ್ನು ಕೇಳಿ ಪಡೆದಿದ್ದರು. ಇದೇ ವೇಳೆ, ಡಿಜಿಟಲ್ ಬಂಧನದಿಂದ ಪಾರಾಗಲು ಆರ್ ಬಿಐ ಪರಿಶೀಲನೆಗೆ ಒಳಪಡುವಂತೆ ನಂಬಿಸಿದ್ದರು. ಬಳಿಕ ಬಂಧನದಿಂದ ತಪ್ಪಿಸಿಕೊಳ್ಳಲು 1,19,35,000 ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸುವಂತೆ ಮಾಡಿದ್ದರು.
ವಂಚನೆ ಬಗ್ಗೆ ಅರಿವಾದ ಬಳಿಕ ವೈದ್ಯರು ಕಾಸರಗೋಡು ಸೈಬರ್‌ಪೊಲೀಸ್ ಪ್ರಕರಣ ದಾಖಲಿಸಿದ್ದರು. ತನಿಖೆಯ ಸಂದರ್ಭದಲ್ಲಿ ದೂರುದಾರರ ನೀಲೇಶ್ವರದ ರಾಷ್ಟ್ರೀಕೃತ ಬ್ಯಾಂಕ್ ಖಾತೆಯಿಂದ 2025ರ ಡಿ.17ರಂದು 46,25,000 ರೂ. ನಾಗಾಲ್ಯಾಂಡ್‌ನ ಪುರಾಣ ಬಜಾರ್ ಶಾಖೆಗೆ ತಲುಪಿರುವುದು ಪತ್ತೆಯಾಯಿತು. ಅದೇ ದಿನ ಈ ಮೊತ್ತದಿಂದ 9,60,000 ರೂ. ಅನ್ನು ಎರಡು ವಹಿವಾಟುಗಳ ಮೂಲಕ ಆರೋಪಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮಂಜೇರಿ ಶಾಖೆಯ ಖಾತೆಗೆ ವರ್ಗಾಯಿಸಿಕೊಂಡಿದ್ದ. ಈ ಪೈಕಿ 9 ಲಕ್ಷ ರೂ. ಅನ್ನು ಚೆಕ್ ಮೂಲಕ ಹಿಂಪಡೆದು ಖರ್ಚು ಮಾಡಿರುವುದನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ. ಪ್ರಕರಣದಲ್ಲಿ ಯಾರು ಹಣ ಹಂಚಿಕೊಂಡಿದ್ದಾರೆ, ವಿದೇಶದಲ್ಲೇ ಇದು ಕೃತ್ಯ ನಡೆಸಿದ್ದಾ? ಯಾರೆಲ್ಲ ಭಾಗಿಯಾಗಿದ್ದಾರೆ ಇತ್ಯಾದಿ ವಿವರ ತನಿಖೆ ಬಳಿಕ ತಿಳಿಯಬೇಕಿದೆ.
Kasaragod Cyber Crime Police have arrested a man working abroad in connection with a digital arrest scam in which an 80-year-old doctor was allegedly threatened and duped of more than ₹1.19 crore.
23-09-26 11:05 am
HK News Staffer
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
ಅರಣ್ಯ ಇಲಾಖೆ ಎಂದರೆ ಜನರಿಗೆ ಕಷ್ಟ ಕೊಡುವ ಇಲಾಖೆ ; ನ...
22-09-26 08:30 pm
ಎಡಪಂಥೀಯ ಉಗ್ರವಾದ ಹೆಸರಲ್ಲಿ 'ಮಿಷನರಿ ಚಟುವಟಿಕೆ' ;...
21-09-26 12:58 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
23-09-26 09:55 am
HK News Staffer
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
23-09-26 09:32 am
HK News Staffer
Inspector Balakrishna Arrest, Police: ಮೇಲಧಿಕಾ...
22-09-26 09:00 pm
ಅತಿ ವೇಗದ ಚಾಲನೆ ; ಮರೋಳಿಯಲ್ಲಿ ಹೈಟೆನ್ಶನ್ ವಿದ್ಯುತ...
22-09-26 07:05 pm
ದುಬೈನಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ಶವ...
22-09-26 06:59 pm
ಪೆರ್ನೆಯಲ್ಲಿ ಇಬ್ಬರು ಮಕ್ಕಳ ಬಾವಿಗೆ ಎಸೆತ ಪ್ರಕರಣ :...
22-09-26 02:57 pm