ಬ್ರೇಕಿಂಗ್ ನ್ಯೂಸ್
07-11-26 10:39 am HK News Staffer ಕ್ರೈಂ
ಬೆಂಗಳೂರು, ನ. 7 : ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಸೈಕೋ ಕಿಲ್ಲರ್ ಇಂದುಶೇಖರ್ ಕರಾಳ ಮುಖ ಬಯಲಾಗಿದ್ದು ಒಟ್ಟು ಒಂಬತ್ತು ಮಂದಿಯನ್ನು ಕೊಲ್ಲುವ ಸಂಚು ರೂಪಿಸಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಹತ್ಯೆಯ ಬಳಿಕ ಮೃತರ ಚಿನ್ನಾಭರಣ ದೋಚಿ ಮಾರಾಟ ಮಾಡಿದ್ದಲ್ಲದೆ, ಪೊಲೀಸರ ಕಣ್ತಪ್ಪಿಸಲು ನಾಪತ್ತೆಯಾದವರ ಮೊಬೈಲ್ಗಳಿಂದಲೇ ಸುಳ್ಳು ಸಂದೇಶಗಳನ್ನು ಕಳುಹಿಸಿದ್ದ. ಆದರೆ ಕನ್ನಡದಲ್ಲಿ ಬಂದ ಮೆಸೇಜ್ಗಳೇ ಆತನಿಗೆ ಮುಳುವಾಗಿ ತನಿಖೆಗೆ ಮಹತ್ವದ ಸುಳಿವು ನೀಡಿವೆ.
15 ದಿನಗಳಲ್ಲಿ ಏಳು ಕೊಲೆ; ಅಕ್ಟೋಬರ್ 16ರಿಂದಲೇ ಹತ್ಯಾಕಾಂಡ!
ಅಕ್ಟೋಬರ್ 16ರಿಂದ ಒಬ್ಬೊಬ್ಬರನ್ನೇ ಮುಗಿಸುತ್ತ ಬಂದ ಆರೋಪಿ, 15 ದಿನಗಳ ಅವಧಿಯಲ್ಲಿ ಏಳು ಮಂದಿಯನ್ನು ಕೊಂದಿದ್ದಾನೆ. ಅಕ್ಟೋಬರ್ 31ರಂದು ಶಂಕರ್ ತನ್ನ ತಂಗಿ ಸುನೀತಾ ಮನೆಗೆ ಬಾಡೂಟಕ್ಕೆ ಹೋಗುವುದಾಗಿ ಸ್ನೇಹಿತರಿಗೆ ತಿಳಿಸಿದ್ದ. ಪತ್ನಿ ನಳಿನಿ ಕೂಡ ತನ್ನ ಪೋಷಕರಿಗೆ ನಾದಿನಿ ಮನೆಗೆ ಮಾಂಸದೂಟಕ್ಕೆ ಹೋಗುತ್ತಿರುವುದಾಗಿ ಫೋನ್ ಮಾಡಿ ಹೇಳಿದ್ದಳು. ಆದರೆ ಎರಡು ದಿನ ಕಳೆದರೂ ಶಂಕರ್, ನಳಿನಿ ಮತ್ತು ಅವರ ಮಗ ಮನೆಗೆ ವಾಪಸ್ ಬಂದಿರಲಿಲ್ಲ. ಈ ನಡುವೆ ಶಂಕರ್ ಮತ್ತು ನಳಿನಿಯ ಮೊಬೈಲ್ಗಳಿಂದ ಸ್ನೇಹಿತರು ಹಾಗೂ ಕುಟುಂಬದವರಿಗೆ ಸಂದೇಶಗಳು ಬಂದಿದ್ದವು. ಉತ್ತರ ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದೇವೆ, ಮೊಬೈಲ್ ಅಧಿಕಾರಿಗಳ ಬಳಿ ಇದೆ, ಇಲ್ಲಿ ನೆಟ್ವರ್ಕ್ ಸಮಸ್ಯೆ ಇದೆ, ಕರೆ ಮಾಡಬೇಡಿ ಎಂಬ ಸಂದೇಶಗಳ ಜೊತೆಗೆ ಮಗನ ಧ್ವನಿಯಲ್ಲಿರುವ ವಾಯ್ಸ್ ನೋಟ್ ಕೂಡ ಕಳುಹಿಸಲಾಗಿತ್ತು ಎನ್ನಲಾಗಿದೆ.
ಕನ್ನಡದಲ್ಲಿ ಟೈಪ್ ಮಾಡಿದ ಮೆಸೇಜ್ನಿಂದಲೇ ಅನುಮಾನ!
ಆದರೆ ಈ ಸಂದೇಶಗಳೇ ಆರೋಪಿಯ ನಾಟಕಕ್ಕೆ ತಿರುವು ನೀಡಿದವು. ಶಂಕರ್ಗೆ ಕನ್ನಡದಲ್ಲಿ ಸರಾಗವಾಗಿ ಟೈಪ್ ಮಾಡಲು ಬರುವುದಿಲ್ಲ ಎಂಬುದು ಆತನ ಸ್ನೇಹಿತರಿಗೆ ಚೆನ್ನಾಗಿ ತಿಳಿದಿತ್ತು. ಹೀಗಾಗಿ ಆತನ ಮೊಬೈಲ್ನಿಂದ ಕನ್ನಡದಲ್ಲಿ ಸಂದೇಶಗಳು ಬಂದಿರುವುದು ಸ್ನೇಹಿತರಲ್ಲಿ ಅನುಮಾನ ಮೂಡಿಸಿತ್ತು. ತಕ್ಷಣ ನಳಿನಿಯ ಪೋಷಕರನ್ನು ಸಂಪರ್ಕಿಸಿ ವಿಚಾರಿಸಿದಾಗ, ಅವರಿಗೂ ಇದೇ ಮಾದರಿಯ ಸಂದೇಶಗಳು ಬಂದಿರುವುದು ಗೊತ್ತಾಯಿತು. ಬಳಿಕ ನವೆಂಬರ್ 2ರಂದು ನಳಿನಿಯ ತಾಯಿ ಶ್ರೀರಾಮಪುರ ಪೊಲೀಸ್ ಠಾಣೆಗೆ ದೂರು ನೀಡಿದರು. ತಮ್ಮ ಮಗಳು ನಳಿನಿ, ಅಳಿಯ ಶಂಕರ್ ಮತ್ತು 11 ವರ್ಷದ ಮೊಮ್ಮಗ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ದೂರಿನ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದರು.
ಏಳಲ್ಲ, ಒಂಬತ್ತು ಮಂದಿಯೇ ಟಾರ್ಗೆಟ್?
ಪೊಲೀಸರ ವಿಚಾರಣೆಯಲ್ಲಿ ಮತ್ತೊಂದು ಆಘಾತಕಾರಿ ಸಂಗತಿ ಹೊರಬಂದಿದೆ. ಆರೋಪಿ ಒಟ್ಟು ಒಂಬತ್ತು ಮಂದಿಯನ್ನು ಹತ್ಯೆ ಮಾಡುವ ಯೋಜನೆ ರೂಪಿಸಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಶಂಕರ್ ಮತ್ತು ನಳಿನಿಯ 11 ವರ್ಷದ ಮಗನನ್ನು ಮೂರು ದಿನಗಳ ಕಾಲ ತನ್ನ ವಶದಲ್ಲಿಟ್ಟುಕೊಂಡಿದ್ದರೂ ಆತನನ್ನು ಕೊಲೆ ಮಾಡಿರಲಿಲ್ಲ. ನಾಪತ್ತೆ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ದಾಖಲಾಗಿರುವ ವಿಚಾರ ತಿಳಿದ ಬಳಿಕ ಆರೋಪಿ ತನ್ನ ಯೋಜನೆ ಬದಲಿಸಿದ್ದಾನೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸೇಲಂ ಕಾಡಿನಲ್ಲಿ ಪತ್ತೆಯಾದ ಎರಡು ಮೃತದೇಹ
ಇನ್ನೊಂದೆಡೆ, ಪ್ರಕರಣದಲ್ಲಿ ಮೃತದೇಹಗಳ ಪತ್ತೆ ಕಾರ್ಯ ಮುಂದುವರಿದಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ಘಾಟ್ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಎರಡು ಮೃತದೇಹಗಳನ್ನು ಆರೋಪಿ ಇಂದುಶೇಖರ್ ತನ್ನ ಪತ್ನಿ ಸುನೀತಾ ಮತ್ತು ಅತ್ತೆ ರೂಪವತಿಯ ಮೃತದೇಹಗಳೆಂದು ಗುರುತಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಧ್ಯರಾತ್ರಿ ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದಾಗ ಮೃತದೇಹಗಳನ್ನು ಗುರುತಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಅವರನ್ನು ಸೇಲಂಗೆ ಕರೆದೊಯ್ಯುವ ಪ್ರಕ್ರಿಯೆ ನಡೆದಿದೆ. ಕುಟುಂಬದವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹಗಳನ್ನು ಹಸ್ತಾಂತರಿಸುವ ಕುರಿತು ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.
ಇನ್ನೂ ನಾಲ್ವರ ಮೃತದೇಹ ಪತ್ತೆಯಾಗಿಲ್ಲ..
ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಇದುವರೆಗೆ ಮೂರು ಮೃತದೇಹಗಳು ಪತ್ತೆಯಾಗಿವೆ. ನಂದಿಬೆಟ್ಟದ ಬಳಿ ಏಳು ವರ್ಷದ ಬಾಲಕ ಪುನೀತ್ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ತಮಿಳುನಾಡಿನ ಎರ್ಕಾಡ್ ಅರಣ್ಯ ಪ್ರದೇಶದಲ್ಲಿ ಮತ್ತಿಬ್ಬರ ಮೃತದೇಹಗಳು ಪತ್ತೆಯಾಗಿವೆ ಎನ್ನಲಾಗಿದೆ. ಅವುಗಳ ಗುರುತು ದೃಢಪಡಿಸಲು ಕುಟುಂಬಸ್ಥರನ್ನು ಪೊಲೀಸರು ಕರೆದೊಯ್ದಿದ್ದಾರೆ. ಉಳಿದ ನಾಲ್ವರ ಮೃತದೇಹಗಳ ಪತ್ತೆಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಹತ್ಯೆಯ ಬಳಿಕ ಚಿನ್ನಾಭರಣ ದೋಚಿದ ಹಂತಕ!
ಹತ್ಯೆಯ ಬಳಿಕ ಅತ್ತೆ ಮತ್ತು ನಾದಿನಿಯರ ಮೈಮೇಲಿದ್ದ ಚಿನ್ನಾಭರಣಗಳನ್ನು ಕಿತ್ತುಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಕ್ತದ ಕಲೆಗಳಿದ್ದ ಚಿನ್ನದ ಸರ, ಕಿವಿಯೋಲೆ ಮತ್ತು ಉಂಗುರ ಸೇರಿದಂತೆ ಹಲವು ಆಭರಣಗಳನ್ನು ಸಂಗ್ರಹಿಸಿ, ಬಳಿಕ ಅವುಗಳನ್ನು ತೊಳೆದು ಸ್ವಚ್ಛಗೊಳಿಸಿದ್ದಾನೆ. ಕೆಲವು ಆಭರಣಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಖರ್ಚು ಮಾಡಿದ್ದರೆ, ಉಳಿದ ಆಭರಣಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ. ಬಳಿಕ ಅವುಗಳನ್ನು ಗಿರವಿ ಇಟ್ಟು ಪಡೆದ ಹಣದಿಂದ ವಾಹನಗಳಿಗೆ ಡೀಸೆಲ್ ಹಾಕಿಸಿಕೊಂಡು ಪ್ರಯಾಣಿಸಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಬೆಂಗಳೂರು ಟು ಮಂಗಳೂರು, ಚೆನ್ನೈ, ನಂದಿಬೆಟ್ಟ… ಹಂತಕನ ಓಡಾಟ!
ಹತ್ಯೆಯ ಬಳಿಕ ಆರೋಪಿ ಇಂದುಶೇಖರ್ ಬೆಂಗಳೂರು– ಮಂಗಳೂರು, ಬೆಂಗಳೂರು –ಚೆನ್ನೈ ಹಾಗೂ ಬೆಂಗಳೂರು– ನಂದಿಬೆಟ್ಟ ಸೇರಿದಂತೆ ಹಲವು ಕಡೆಗಳಿಗೆ ಪ್ರಯಾಣಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ತನ್ನ ಮಗಳಿಗೆ ಕೆಲವು ಒಡವೆಗಳನ್ನು ನೀಡಿದ್ದ ವಿಚಾರವಾಗಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಪ್ರಾಪ್ತ ಮಗಳು, ತಂದೆ ಹೇಳಿದ ಕೆಲಸಗಳನ್ನು ಮಾಡುತ್ತಿದ್ದೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಮಗಳಿಗೆ ಈ ಪ್ರಕರಣದಲ್ಲಿ ಯಾವ ಪಾತ್ರವಿದೆ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಒಂದೆಡೆ ಸುಳ್ಳು ಸಂದೇಶಗಳ ಮೂಲಕ ಕುಟುಂಬದವರು ಪ್ರವಾಸದಲ್ಲಿದ್ದಾರೆ ಎಂಬ ಭ್ರಮೆ ಮೂಡಿಸುವ ಪ್ರಯತ್ನ, ಮತ್ತೊಂದೆಡೆ ಮೃತದೇಹಗಳನ್ನು ಬೇರೆ ಬೇರೆ ಅರಣ್ಯ ಪ್ರದೇಶಗಳಲ್ಲಿ ಎಸೆದು ಸಾಕ್ಷ್ಯ ಮರೆಮಾಚುವ ಯತ್ನ, ಜೊತೆಗೆ ಚಿನ್ನಾಭರಣ ದೋಚಿದ ಆರೋಪ—ಇವೆಲ್ಲವೂ ಇಂದುಶೇಖರ್ ವಿರುದ್ಧದ ತನಿಖೆಯಲ್ಲಿ ಹೊರಬರುತ್ತಿವೆ. ಉಳಿದ ಮೃತದೇಹಗಳ ಪತ್ತೆ, ಹತ್ಯೆಯ ಸಂಪೂರ್ಣ ಸಂಚು ಮತ್ತು ಆರೋಪಿಗೆ ಸಹಕರಿಸಿದವರಿದ್ದಾರೆಯೇ ಎಂಬುದರ ಬಗ್ಗೆ ಪೊಲೀಸರ ತನಿಖೆ ಮುಂದುವರಿದಿದೆ.
03-11-26 09:48 pm
HK News Desk
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲ...
03-11-26 01:01 pm
ಹಿರಿಯ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ, ಹಿರಿಯ ವಕೀಲ ಬ...
30-10-26 08:26 pm
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
06-11-26 11:03 pm
HK News Desk
ಕಾಂಗ್ರೆಸ್ ಕಾಲದಲ್ಲಿ 11 ಬಾರಿ ಎಸ್ಐಆರ್ ಲೀಗಲ್, ಈಗ...
06-11-26 09:35 pm
ಮಂಗಳೂರು ಮೂಲದ ಯಾಯಿನ್ ಕಿರಣ್ ರೈ ಯುಎಇ ಅಂಡರ್-19 ಕ್...
06-11-26 09:21 pm
ಪಿಲಿಕುಳ ನಿಸರ್ಗಧಾಮದ 356 ಎಕರೆ ಭೂ ಗುತ್ತಿಗೆ ರದ್ದು...
05-11-26 09:42 pm
ಬೆಂಗಳೂರಿನಿಂದ LSD ಡ್ರಗ್ಸ್ ಸಪ್ಲೈ: ಮಂಗಳೂರಿನ ವಿದ...
05-11-26 03:23 pm
07-11-26 10:39 am
HK News Staffer
Mangalorr Police, Arrest: ವಾಕಿಂಗ್ ಮಾಡುತ್ತಿದ್ದ...
06-11-26 08:08 pm
Naresh Bhat, Wife Murder: ಪತ್ನಿ ವಿಷ ಕುಡಿದು ಆತ...
06-11-26 05:01 pm
ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ ; ಪತ್ನಿ ಮೇಲಿನ ಸಿ...
06-11-26 10:55 am
Mangalore, Veerendra Shetty: ಜಾಗದ ವಿಚಾರದಲ್ಲಿ...
05-11-26 10:45 pm