ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರಟಿದ್ದೀರಾ..? ವಂದೇ ಮಾತರಂ ವಿವಾದ ಬಗ್ಗೆ ಕಾಂಗ್ರೆಸಿಗೆ ಪ್ರಹ್ಲಾದ ಜೋಷಿ ಪ್ರಶ್ನೆ

21-09-26 09:49 pm       HK News Staffer   ಕರಾವಳಿ

ಸ್ವಾತಂತ್ರ್ಯ ಕಾಲದಲ್ಲಿ ಮುಸ್ಲಿಂ ಲೀಗ್ ವಿರೋಧ ಕಾರಣಕ್ಕೆ ವಂದೇ ಮಾತರಂ ರಾಷ್ಟ್ರಗೀತೆ ಮಾಡಿರಲಿಲ್ಲ. 150 ವರ್ಷಗಳ ಬಳಿಕ ರಾಷ್ಟ್ರೀಯ ಗೀತೆಯ ಮಾನ್ಯತೆ ನೀಡಲಾಗಿದೆ. ಈಗ ಯಾಕೆ ಕಾಂಗ್ರೆಸಿಗರು ವಿರೋಧ ಮಾಡುತ್ತಿದ್ದಾರೆ, ಕೇರಳದ ಮುಸ್ಲಿಂ ಲೀಗ್ ಮೆಚ್ಚಿಸಲು ಹೀಗೆ ಮಾಡುತ್ತಿದ್ದೀರಾ..? ನೀವೇ ಮುಸ್ಲಿಂ ಲೀಗ್ ಆಗುತ್ತಿದ್ದೀರಾ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ ಜೋಷಿ ಪ್ರಶ್ನೆ ಮಾಡಿದ್ದಾರೆ.

ಮಂಗಳೂರು, ಸೆ. 21: ಸ್ವಾತಂತ್ರ್ಯ ಕಾಲದಲ್ಲಿ ಮುಸ್ಲಿಂ ಲೀಗ್ ವಿರೋಧ ಕಾರಣಕ್ಕೆ ವಂದೇ ಮಾತರಂ ರಾಷ್ಟ್ರಗೀತೆ ಮಾಡಿರಲಿಲ್ಲ. 150 ವರ್ಷಗಳ ಬಳಿಕ ರಾಷ್ಟ್ರೀಯ ಗೀತೆಯ ಮಾನ್ಯತೆ ನೀಡಲಾಗಿದೆ. ಈಗ ಯಾಕೆ ಕಾಂಗ್ರೆಸಿಗರು ವಿರೋಧ ಮಾಡುತ್ತಿದ್ದಾರೆ, ಕೇರಳದ ಮುಸ್ಲಿಂ ಲೀಗ್ ಮೆಚ್ಚಿಸಲು ಹೀಗೆ ಮಾಡುತ್ತಿದ್ದೀರಾ..? ನೀವೇ ಮುಸ್ಲಿಂ ಲೀಗ್ ಆಗುತ್ತಿದ್ದೀರಾ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ ಜೋಷಿ ಪ್ರಶ್ನೆ ಮಾಡಿದ್ದಾರೆ. 

ಮೂಡುಬಿದ್ರೆಯಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ತುಷ್ಟೀಕರಣದ ಪರಾಕಾಷ್ಠೆಗೆ ತಲುಪಿದೆ. ವಂದೇ ಮಾತರಂ ವಿಚಾರದಲ್ಲಿ ಕಾಂಗ್ರೆಸಿಗೆ ವಿರೋಧ ಇದ್ದರೆ ಸಂಸತ್ತಿನಲ್ಲಿ ಚರ್ಚೆ ಮಾಡಬೇಕಿತ್ತು. ಅದು ಬಿಟ್ಟು ಈ ರೀತಿಯ ರಾಜಕೀಯ ಮಾಡಬಾರದು. ಇದರಿಂದ ತುಷ್ಟೀಕರಣದ ಲಾಭ ಆದೀತು ಬಿಟ್ಟರೆ ಬೇರಾವುದೇ ಲಾಭ ಆಗದು. ವಂದೇ ಮಾತರಂ ಪೂರ್ತಿ ಹಾಡುವುದರಿಂದ ಆಗುವ ನಷ್ಟವೇನು ಹೇಳಿ. ಇವರು ಮತ್ತೆ ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರಟಿದ್ದಾರೆ ಎಂದು ಟೀಕಿಸಿದರು. 

ಯುಪಿಐ ಹಣ ವರ್ಗಾವಣೆಯ ಮೇಲೆ ತೆರಿಗೆ ವಿಧಿಸುವ ಔಚಿತ್ಯದ ಬಗ್ಗೆ ಕೇಳಿದ ಪ್ರಶ್ನೆಗೆ, ಇದರಿಂದ 96 ಶೇ. ಜನರಿಗೆ ತೊಂದರೆ ಆಗುವುದಿಲ್ಲ. ಕೇವಲ ನಾಲ್ಕು ಪರ್ಸೆಂಟ್ ಜನರಿಗಷ್ಟೇ ತೊಂದರೆಯಾಗೋದು. ಇದರ ಬಗ್ಗೆ ಸಮಗ್ರ ಉತ್ತರವನ್ನು ಈಗಾಗಲೇ ಕೊಟ್ಟಿದ್ದೇನೆ ಎಂದು ಹೇಳಿದರು.