ಬ್ರೇಕಿಂಗ್ ನ್ಯೂಸ್
23-09-26 08:12 pm HK News Staffer ಕ್ರೈಂ
ಮಂಗಳೂರು, ಸೆ.23: ಮೂಡುಬಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೊಲೆ ಪ್ರಕರಣ ಒಂದಕ್ಕೆ ಸಂಬಂಧಿಸಿ ಮಂಗಳೂರು ಕೋರ್ಟಿಗೆ ಹಾಜರಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾದ ಆರೋಪಿಯೊಬ್ಬ ಕೋರ್ಟಿನ ಆವರಣದಲ್ಲೇ ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಘಟನೆ ಸೆ.22ರಂದು ನಡೆದಿದೆ.
2018ರ ಸುದರ್ಶನ್ ಜೈನ್ ಕೊಲೆ ಪ್ರಕರಣದಲ್ಲಿ ಸಿದ್ದಕಟ್ಟೆ ನಿವಾಸಿ ಪ್ರಸಾದ್ ಸೇರಿದಂತೆ ಐದು ಮಂದಿ ಆರೋಪಿಗಳು ಕೋರ್ಟಿಗೆ ವಿಚಾರಣೆ ಸಲುವಾಗಿ ಹಾಜರಾಗಿದ್ದರು. ಸಂದೀಪ್ ಶೆಟ್ಟಿ, ಬಾಲರಾಜ್, ಪ್ರಭಾಕರ್ ಪರವಾಗಿ ವಕೀಲರು ಹಾಜರಾಗಿ ಜಾಮೀನಿಗೆ ವ್ಯವಸ್ಥೆ ಮಾಡಿದ್ದರು. ಪ್ರಸಾದ್ ಪರವಾಗಿ ಯಾವುದೇ ವಕೀಲ ಹಾಜರಾಗಿರಲಿಲ್ಲ. ಅಲ್ಲದೆ, ಈ ಹಿಂದೆ ವಿಚಾರಣಾ ದಿನಕ್ಕೆ ಹಾಜರಾಗಿರದ ಹಿನ್ನೆಲೆಯಲ್ಲಿ ಆರೋಪಿ ಪ್ರಸಾದ್ ವಿರುದ್ಧ ವಾರೆಂಟ್ ಜಾರಿ ಮಾಡಲಾಗಿತ್ತು.
ಸೆ.22ರಂದು ನಾಲ್ಕು ಮಂದಿ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದು, ಈ ಪೈಕಿ ಆರೋಪಿ ಪ್ರಸಾದ್ ಪರವಾಗಿ ವಕೀಲ ಹಾಜರಾಗದೇ ಇದ್ದುದರಿಂದ ಈತನನ್ನು ನ್ಯಾಯಾಧೀಶರು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಬಳಿಕ ಆರೋಪಿಯನ್ನು ರಿಮಾಂಡ್ ವಾರೆಂಟ್ ನೊಂದಿಗೆ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದಾಗ ಕೋರ್ಟ್ ಸಂಕೀರ್ಣದ ಶೌಚಾಲಯಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋದವನು ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ಮೂಡುಬಿದ್ರೆ ಪೊಲೀಸ್ ಅಶೋಕ್ ನೀಡಿದ ದೂರಿನಂತೆ ಮಂಗಳೂರಿನ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋದರನನ್ನೇ ಕೊಲೆಗೈದಿದ್ದ ಪ್ರಕರಣ
2018ರ ಆಗಸ್ಟ್ 11ರಂದು ಮೂಡುಬಿದ್ರೆಯಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದ ಹೊಸಬೆಟ್ಟು ನಿವಾಸಿ ಸುದರ್ಶನ್ ಜೈನ್ ನಾಪತ್ತೆಯಾಗಿದ್ದು, ವಾರದ ಬಳಿಕ ಫಲ್ಗುಣಿ ನದಿಯಲ್ಲಿ ಶವ ಪತ್ತೆಯಾಗಿತ್ತು. ಕುತ್ತಿಗೆ ಬಿಗಿದು ಕೊಲೆಗೈದ ಸ್ಥಿತಿಯಲ್ಲಿ ಶವ ಇದ್ದುದರಿಂದ ಕೊಲೆಯೆಂಬ ಶಂಕೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದರು. ಪ್ರಕರಣದಲ್ಲಿ ಸುದರ್ಶನ್ ಜೈನ್ ಸೋದರ ಸುಧೀರ್ ಜೈನ್, ಸಿದ್ದಕಟ್ಟೆಯ ಸಂದೀಪ್ ಶೆಟ್ಟಿ, ಅರಂಬೋಡಿ ನಿವಾಸಿ ಬಾಲರಾಜ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಆನಂತರ, ಪ್ರಸಾದ್ ಕೈವಾಡ ಪತ್ತೆಯಾಗಿದ್ದರಿಂದ ಆತನನ್ನೂ ಬಂಧಿಸಲಾಗಿತ್ತು.
ಕೊಲೆಗೆ ಹೇತುವಾಗಿದ್ದ ಹಣದಾಸೆ
ಸುದರ್ಶನ್ ಮತ್ತು ಸುಧೀರ್ ಅವರ ತಾಯಿ ಹೊಸಬೆಟ್ಟು ಕರಂಬಾರು ಗುತ್ತಿನವರಾಗಿದ್ದು ಊರಿನಲ್ಲಿ 2.7 ಎಕ್ರೆ ಜಾಗವನ್ನು ಮಾರಾಟ ಮಾಡಿದ್ದರು. ಇದರ ಅಡ್ವಾನ್ಸ್ ಹಣ 6 ಲಕ್ಷ ಸಿಕ್ಕಿತ್ತು. ಅದರಲ್ಲಿ 3 ಲಕ್ಷ ಹಣವನ್ನು ಪಡೆದಿದ್ದ ಸುಧೀರ್, ನಿನ್ನ ಪಾಲು ಮೂರು ಲಕ್ಷವನ್ನೂ ತನಗೆ ನೀಡಬೇಕೆಂದು ಸೋದರ ಸುದರ್ಶನ್ ಗೆ ಕಿರುಕುಳ ನೀಡುತ್ತಿದ್ದ. ಹಣ ನೀಡಲು ನಿರಾಕರಿಸಿದ್ದಕ್ಕೆ ಸುದರ್ಶನ್ ಕೊಲೆಗೆ ಸುಧೀರ್ ಸಂಚು ರೂಪಿಸಿದ್ದ. ಮೂಡುಬಿದ್ರೆಯಲ್ಲಿ ಕೆಲಸಕ್ಕಿದ್ದ ಸುದರ್ಶನನ್ನು ಆಗಸ್ಚ್ 11ರಂದು ಸುಧೀರ್ ತನ್ನದೇ ಬೈಕಿನಲ್ಲಿ ಹೊಸಬೆಟ್ಟಿಗೆ ಕರೆದುಕೊಂಡು ಬಂದಿದ್ದ. ಅಷ್ಟರಲ್ಲಿ ಕಾರಿನಲ್ಲಿ ಕಾದು ಕುಳಿತಿದ್ದ ಇತರರು ಸೇರಿ ಸುದರ್ಶನನ್ನು ಕಾರಿನೊಳಕ್ಕೆ ತಳ್ಳಿ ಉಸಿರುಕಟ್ಟಿಸಿ ಬಳಿಕ ನಿರ್ಜನ ಪ್ರದೇಶಕ್ಕೊಯ್ದು ಕೊಲೆ ಮಾಡಿ ಪುಚ್ಚಮೊಗರಿನಲ್ಲಿ ಫಲ್ಗುಣಿ ನದಿಗೆ ಎಸೆದಿದ್ದರು. ಆಗಸ್ಟ್ 17ರಂದು ಮರವೂರು ಡ್ಯಾಮ್ ನಲ್ಲಿ ಸುದರ್ಶನ್ ಶವ ಪತ್ತೆಯಾಗಿತ್ತು. ಕೃತ್ಯದಲ್ಲಿ ಆರೋಪಿ ಪ್ರಸಾದ್ ಕಾರು ಚಾಲಕನಾಗಿ ಸಹಕರಿಸಿದ್ದ ಆರೋಪ ಇತ್ತು.
An accused in the 2018 Sudarshan Jain murder case allegedly escaped from police custody at the Mangaluru court complex on September 22 while being taken to the district jail after being remanded to police custody.
23-09-26 05:14 pm
HK News Staffer
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
ಅರಣ್ಯ ಇಲಾಖೆ ಎಂದರೆ ಜನರಿಗೆ ಕಷ್ಟ ಕೊಡುವ ಇಲಾಖೆ ; ನ...
22-09-26 08:30 pm
23-09-26 04:21 pm
HK News Staffer
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
23-09-26 10:47 pm
HK News Desk
ಉತ್ತರಾಖಂಡದ ಯಮುನೋತ್ರಿಯಲ್ಲಿ ಕುಂಪಲದ ವ್ಯಕ್ತಿ ಹೃದಯ...
23-09-26 09:55 am
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
23-09-26 09:28 pm
HK News Staffer
ಕರ್ತವ್ಯ ಲೋಪ, ಲಂಚಬಾಕತನ, ಅನುಚಿತ ವರ್ತನೆ ಬಗ್ಗೆ ದೂ...
23-09-26 09:24 pm
ಶಾರ್ಜಾದಲ್ಲಿ ಆಲ್ವಿನ್ ಪ್ರಕಾಶ್ ಕುಂದರ್ ಬರ್ಬರ ಹತ್ಯ...
23-09-26 09:22 pm
sudarshan jain, murder, manglore: ಮೂಡುಬಿದ್ರೆ...
23-09-26 08:12 pm
ಪತ್ನಿಯ ಮೃತದೇಹ ಕೆರೆಯಲ್ಲಿ ಪತ್ತೆ ಬೆನ್ನಲ್ಲೇ ಪತಿ ನ...
23-09-26 05:12 pm