ಬ್ರೇಕಿಂಗ್ ನ್ಯೂಸ್
13-09-26 09:00 pm HK News ದೇಶ - ವಿದೇಶ
ಮುಂಬೈ, ಸೆ.13 ಗಲ್ಫ್ ರಾಷ್ಟ್ರಗಳ ಮಾದರಿಯಲ್ಲಿ ಸಮುದ್ರದ ಉಪ್ಪು ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಮುಂಬೈ ಮಹಾನಗರ ಪಾಲಿಕೆ ಮುಂದಾಗಿದೆ. 2029ರ ವೇಳೆಗೆ ಎದುರಾಗಲಿರುವ ಭೀಕರ ನೀರಿನ ಅಭಾವವನ್ನು ಎದುರಿಸಲು ₹4,007 ಕೋಟಿ ವೆಚ್ಚದಲ್ಲಿ ಮುಂಬೈ ಮಹಾನಗರ ಪಾಲಿಕೆ ಯೋಜನೆ ಕೈಗೆತ್ತಿಕೊಂಡಿದೆ.
2009ರಲ್ಲಿ ಮುಂಬೈ ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸಿತ್ತು. ಸರೋವರಗಳು ಬತ್ತಿ ಹೋಗಿದ್ದವು. ಮಾನ್ಸೂನ್ ಮಳೆಯ ಅವಲಂಬನೆಯನ್ನು ಕಡಿಮೆ ಮಾಡಲು ಸಮುದ್ರದ ನೀರನ್ನು ಶುದ್ಧೀಕರಿಸುವ ಪ್ರಸ್ತಾಪ ಮುಂದಿಡಲಾಗಿತ್ತು. ಸುಮಾರು 15 ವರ್ಷಗಳಿಂದ ಚರ್ಚೆಯಲ್ಲಿದ್ದ ಈ ಯೋಜನೆಗೆ ಇದೀಗ ಅಂತಿಮ ರೂಪ ಸಿಕ್ಕಿದೆ. ವಾಯುವ್ಯ ಮುಂಬೈನ ಮಲಾಡ್ ಬಳಿಯ ಸಮುದ್ರ ತೀರ ಮನೋರಿ ಗ್ರಾಮದ 12 ಎಕರೆ ಜಾಗದಲ್ಲಿ ಬೃಹತ್ ಉಪ್ಪು ನೀರು ಶುದ್ಧೀಕರಣ ಘಟಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಮೊದಲ ಹಂತವಾಗಿ ನಿತ್ಯ 200 ಮಿಲಿಯನ್ ಲೀಟರ್ (20 ಕೋಟಿ ಲೀಟರ್) ನೀರು ಸಂಸ್ಕರಣೆ, ಎರಡನೇ ಹಂತದಲ್ಲಿ ನಿತ್ಯ 400 ಮಿಲಿಯನ್ ಲೀಟರ್ (40 ಕೋಟಿ ಲೀಟರ್) ನೀರು ಪೂರೈಕೆ ಆಗಲಿದೆ. 2030ರ ಮಧ್ಯಭಾಗದ ವೇಳೆಗೆ ಈ ಘಟಕವು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದ್ದು, ಇದು ದೇಶದಲ್ಲೇ ಅತಿ ದೊಡ್ಡ ಉಪ್ಪುನೀರು ಶುದ್ಧೀಕರಣ ಘಟಕ ಎನಿಸಿಕೊಳ್ಳಲಿದೆ.
ಇಸ್ರೇಲ್ ಮೂಲದ ಪ್ರಸಿದ್ಧ ಐಡಿಇ ಟೆಕ್ನಾಲಜೀಸ್ ಸಂಸ್ಥೆಯು ನಿರ್ವಹಣೆ ಗುತ್ತಿಗೆ ವಹಿಸಿದ್ದು, 20 ವರ್ಷ ಕಾಲ ನಿರ್ವಹಣೆ ವಹಿಸಲಿದೆ. ಮೂಲಸೌಕರ್ಯ ಹಾಗೂ ನಾಗರಿಕ ಕಾಮಗಾರಿಗಳನ್ನು ಹೈದರಾಬಾದ್ ಮೂಲದ ಜಿವಿಪಿಆರ್ ಎಂಜಿನಿಯರ್ಸ್ ಸಂಸ್ಥೆ ನಡೆಸಿಕೊಡಲಿದೆ. ಯೋಜನೆಗೆ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಗಳಿಂದ (CRZ) ಕಠಿಣ ಷರತ್ತುಗಳೊಂದಿಗೆ ಅನುಮತಿ ದೊರೆತಿದೆ. ತ್ಯಾಜ್ಯ ನೀರನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಮರಳಿಸುವುದು. ಕಡಲಾಚೆಯ ಪೈಪ್‌ಲೈನ್‌ಗಳಿಗಾಗಿ ವಿಶೇಷ ಟನಲ್ ಬೋರಿಂಗ್ ಬಳಸುವುದು. ಪ್ಲಾಂಟ್‌ಗೆ ಅಗತ್ಯವಿರುವ ವಿದ್ಯುತ್ ಶಕ್ತಿಯನ್ನು ನವೀಕರಿಸಬಹುದಾದ ಇಂಧನದಿಂದ ಪಡೆದುಕೊಳ್ಳುವಂತೆ ಕಡ್ಡಾಯ ಮಾಡಲಾಗಿದೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm