ಬ್ರೇಕಿಂಗ್ ನ್ಯೂಸ್
08-07-21 01:39 pm Nayana Bj, BoldSky Kannada ಡಾಕ್ಟರ್ಸ್ ನೋಟ್
ಈ ಕೊರೊನಾ ಕಾಲದಲ್ಲಿ ಶಾಲೆ ಬಂದ್, ಸ್ವಿಮ್ಮಿಂಗ್ ಬಂದ್ ಇನ್ನಿತರೆ ಹೊರಾಂಗಣ ಆಟಗಳೆಲ್ಲವೂ ಬಂದ್ ಆಗಿ ಮಕ್ಕಳಲ್ಲಿ ಬೊಜ್ಜುತನ ಶುರುವಾಗಿದೆ. ಮಕ್ಕಳ ತೂಕ ಏರಿಕೆಯಾಗುತ್ತಿರುವುದು ಪೋಷಕರಿಗೆ ತೀವ್ರ ಆತಂಕವನ್ನುಂಟುಮಾಡಿದೆ.
ಈ ಕೊರೊನಾ ಕಾಲದಲ್ಲಿ ಶಾಲೆ ಬಂದ್, ಸ್ವಿಮ್ಮಿಂಗ್ ಬಂದ್ ಇನ್ನಿತರೆ ಹೊರಾಂಗಣ ಆಟಗಳೆಲ್ಲವೂ ಬಂದ್ ಆಗಿ ಮಕ್ಕಳಲ್ಲಿ ಬೊಜ್ಜುತನ ಶುರುವಾಗಿದೆ. ಮಕ್ಕಳ ತೂಕ ಏರಿಕೆಯಾಗುತ್ತಿರುವುದು ಪೋಷಕರಿಗೆ ತೀವ್ರ ಆತಂಕವನ್ನುಂಟುಮಾಡಿದೆ.
ಅಮೆರಿಕ, ಭಾರತ ಸೇರಿದಂತೆ ಎಲ್ಲಾ ದೇಶಗಳಲ್ಲಿಯೂ ಕೊರೊನಾ ಲಾಕ್ಡೌನ್ ವಿಧಿಸಲಾಗಿತ್ತು, ಲಾಕ್ಡೌನ್ ತೆರವುಗೊಂಡ ಬಳಿಕವೂ ಶಾಲೆಗಳು ಆರಂಭವಾಗದ ಕಾರಣ ಮಕ್ಕಳು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಟಿವಿ, ಲ್ಯಾಪ್ಟಾಪ್, ಟಿವಿ ನೋಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ, ಜತೆಗೆ ಜಂಕ್ಫುಡ್ಗಳನ್ನು ಸೇವಿಸುವುದರಿಂದ ತೂಕ ಮತ್ತಷ್ಟು ಹೆಚ್ಚಾಗುತ್ತಿದೆ.
ಮಕ್ಕಳ ತೂಕ ಹೆಚ್ಚಳ
ಅಮೆರಿಕದಲ್ಲಿ ಶೇ.40ರಷ್ಟು ಮಕ್ಕಳ ತೂಕ ಹೆಚ್ಚಳವಾಗಿದೆ, ಹಾಗೆಯೇ ಶೇ.30ರಷ್ಟು ಪೋಷಕರು ತಮ್ಮ ಮಕ್ಕಳ ತೂಕ ಹೆಚ್ಚಳವಾಗಿರುವ ಕುರಿತು ಆತಂಕ ವ್ಯಕ್ತಪಡಿಸಿದ್ದು, ವೈದ್ಯರ ಮೊರೆ ಹೋಗದ್ದಾರೆ. ಇದೇನು ಹೊಸ ವಿಷಯವಲ್ಲ, ಕೊರೊನಾ ಕಾಲದಲ್ಲಿ ಪ್ರತಿಯೊಬ್ಬರೂ ಮನೆಯಲ್ಲಿಯೇ ಇರುವ ಕಾರಣ, ವ್ಯಾಯಾಮ ಮಾಡದಿದ್ದರೆ ಪ್ರತಿಯೊಬ್ಬರ ತೂಕವು ಹೆಚ್ಚಾಗುವುದು. ಭಾರತವು ಏನು ಇದರಿಂದ ಹೊರತಾಗಿಲ್ಲ, ಭಾರತದಲ್ಲಿ ಕೂಡ ಇಂತಹ ಸಮಸ್ಯೆಗಳು ಪೋಷಕರನ್ನು ಕಾಡುತ್ತಿವೆ.
ವೈದ್ಯರ ಅಭಿಪ್ರಾಯ
ಪೀಡಿಯಾಟ್ರಿಷಿಯನ್ ಡಾ. ಕ್ರಿಸ್ಟನ್ ಸಕ್ಸೇನಾ ಹೇಳುವ ಪ್ರಕಾರ ''ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ದೊಡ್ಡವರಿಗಿಂತ ಮಕ್ಕಳಲ್ಲಿ ತೂಕ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಶಾಲೆಗಳಿಗೆ ತೆರಳುವಾಗ ಸ್ನ್ಯಾಕ್ಸ್, ಹಾಗೂ ಇನ್ನಿತರೆ ಆಹಾರದ ನೆನಪು ಬರುವುದಿಲ್ಲ ಮಿತವಾಗಿ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡುತ್ತಾರೆ. ಆದರೆ ಲಾಕ್ಡೌನ್ ಸಂದರ್ಭದಲ್ಲಿ ಆಟ-ಪಾಠವಿಲ್ಲ, ವ್ಯಾಯಾಮವಿಲ್ಲ, ಆಹಾರಕ್ಕೆ ಮಿತಿ ಎಂಬುದೇ ಇಲ್ಲದಿರುವಾಗ ಸಾಮಾನ್ಯವಾಗಿ ತೂಕ ಹೆಚ್ಚಾಗುತ್ತದೆ'' ಎಂದಿದ್ದಾರೆ.
ಸಕ್ಕರೆ ಮಿಶ್ರತ ಪಾನೀಯ
ಮಕ್ಕಳು ಸ್ನ್ಯಾಕ್ಸ್ ಜತೆಗೆ ಇಡೀ ದಿನ ಸಕ್ಕರೆ ಮಿಶ್ರಿತ ಜ್ಯೂಸ್ಗಳನ್ನು ಕುಡಿಯುತ್ತಲೇ ಇರುತ್ತಾರೆ, ಊಟದ ಮಧ್ಯೆ ನೀರು ಕುಡಿಯುವ ಬದಲು ಜ್ಯೂಸ್ ಕುಡಿಯುವ ಕಾರಣ ತೂಕವೂ ಹೆಚ್ಚಳವಾಗುತ್ತಿದೆ.
ಚಿಕ್ಕವಯಸ್ಸಿನಲ್ಲಿಯೇ ಒಬೆಸಿಟಿ ತೊಂದರೆ
ಜಂಕ್ ಫೂಡ್, ಕೊಬ್ಬು ಮಿಶ್ರಿತ ಆಹಾರ ಸೇವನೆ, ವ್ಯಾಯಾಪ ಇಲ್ಲದಿರುವುದರಿಂದ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಒಬೆಸಿಟಿ ತೊಂದರೆ ಶುರುವಾಗುತ್ತದೆ. -ಇನ್ಸುಲಿನ್ ಪ್ರಮಾಣ ಏರುಪೇರು -ದೇಹದಲ್ಲಿ ಗ್ಲೂಕೋಸ್ ವ್ಯವಸ್ಥೆ ದುರ್ಬಲ -ರಕ್ತದೊತ್ತಡ -ಅಪಧಮನಿಗಳು ಊದಿಕೊಳ್ಳಬಹುದು ಹಾಗೆಯೇ ಈ ಒಬೆಸಿಟಿಯು ಶ್ವಾಸಕೋಶ ಸಂಬಂಧಿ ಕಾಯಿಲೆ, ಹೃದಯಾಘಾತ, ಕ್ಯಾನ್ಸರ್, ಅಸ್ತಮಾ, ಮಧುಮೇಹ, ಸ್ಲೀಪ್ ಅಫ್ನಿಯಾ, ಆರ್ಥೋಪೆಡಿಕ್ ಸಮಸ್ಯೆಗಳು ಶುರುವಾಗುತ್ತವೆ.
ಮಕ್ಕಳ ತೂಕ ಸಮವಾಗಿರಿಕೊಳ್ಳಲು ಪೋಷಕರು ಏನು ಮಾಡಬೇಕು
ಸಮತೋಲನ ಆಹಾರ ಸೇವಿಸಬೇಕು, ಬೊಜ್ಜಿನ ಆಹಾರ ಸೇವನೆ ಬೇಡ, ಊಟದ ಮಧ್ಯೆ ಜ್ಯೂಸ್ ಬದಲು ನೀರನ್ನು ನೀಡಿ, ಮಕ್ಕಳಿಗೆ ದಿನಕ್ಕೆ ಎರಡು ಬಾರಿ ಮನೆಯಲ್ಲಿಯೇ ವ್ಯಾಯಾಮ ಮಾಡಿಸಿ. ಸಾಧ್ಯವಾದಷ್ಟು ಮನೆಯಲ್ಲಿಯೇ ತಯಾರಿಸಿದ ಆಹಾರ ನೀಡಿ. ಆದಷ್ಟು ತರಕಾರಿ ಸೇರಿದಂತೆ ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡಿದೆ.
(Kannada Copy of Boldsky Kannada)
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm