ಬ್ರೇಕಿಂಗ್ ನ್ಯೂಸ್
18-06-21 02:51 pm Shreeraksha, BoldSky Kannada ಡಾಕ್ಟರ್ಸ್ ನೋಟ್
ಮೊರಿಂಗಾ ಅಥವಾ ಸಾಮಾನ್ಯ ಆಡು ಭಾಷೆಯಲ್ಲಿ ನಾವು ಕರೆಯುವ ನುಗ್ಗೆ ಸೊಪ್ಪಿನಲ್ಲಿ ಉತ್ತಮವಾದ ಪೋಷಕಾಂಶಗಳಿವೆ. ಮುಖ್ಯವಾಗಿ ಮಕ್ಕಳ ಅಪೌಷ್ಟಿಕತೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಈ ನುಗ್ಗೆ ಪುಡಿಯಿಂದ ಕೂದಲಿಗೆ ಎಂತಹ ಪ್ರಯೋಜನ ಇದೆ ಗೊತ್ತಾ? ಇದು ಪ್ರೋಟೀನ್, ಜೀವಸತ್ವಗಳು, ಬೀಟಾ-ಕ್ಯಾರೋಟಿನ್, ಅಮೈನೋ-ಆಮ್ಲಗಳು ಮತ್ತು ವಿವಿಧ ಫೀನಾಲಿಕ್ಗಳ ಉತ್ತಮ ಮೂಲವಾಗಿದ್ದು, ಕೂದಲಿಗೆ ಕೆಲವು ಮಾಂತ್ರಿಕ ಪ್ರಯೋಜನಗಳನ್ನು ನೀಡುವುದು. ಅವುಗಳಾವುವು? ಅದನ್ನು ಬಳಸುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.
ನುಗ್ಗೆ ಸೊಪ್ಪಿನಿಂದ ಕೂದಲಿಗಾಗುವ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ:
ಆ್ಯಂಟಿಮೈಕ್ರೊಬಿಯಲ್ ಕ್ರಿಯೆ:
ಮೊರಿಂಗಾ ಅಥವಾ ನುಗ್ಗೆ ಸೊಪ್ಪಿನಲ್ಲಿ ಪ್ಯಾಟರಿಗೋಸ್ಪೆರ್ಮಿನ್ ಇರುವುದರಿಂದ ಇದು ತಲೆಹೊಟ್ಟು, ನೆತ್ತಿ ತುರಿಕೆ, ಸೋರಿಯಾಸಿಸ್, ಎಸ್ಜಿಮಾ ಮತ್ತು ಬ್ಯಾಕ್ಟೀರಿಯಾದ ಗುಳ್ಳೆಗಳನ್ನು ತಡೆಗಟ್ಟಲು ಸಹಾಯ ಮಾಡುವುದು. ಈ ಮೂಲಕ ಉತ್ತಮವಾದ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ-ವಿರೋಧಿಯಾಗಿ ಕಾರ್ಯನಿರ್ವಹಿಸುವುದು.

ಡಿ-ಪಿಗ್ಮೆಂಟೇಶನ್ ನ್ನು ವಿಳಂಬಗೊಳಿಸುವುದು:
ನುಗ್ಗೆ ಸೊಪ್ಪು ನಿರ್ದಿಷ್ಟ ಪೆಪ್ಟೈಡ್ ಅನ್ನು ಹೊಂದಿದ್ದು ಅದು ಕೂದಲಿನ ಆಳಕ್ಕೆ ತಲುಪುವುದು. ಅದರ ಬೀಜವು ಕೂದಲಿನ ಅಕಾಲಿಕ ಬಿಳಿಬಣ್ಣವನ್ನು ತಡೆಗಟ್ಟುವಲ್ಲಿ ಹೆಚ್ಚಿನ ಪರಿಣಾಮ ಹೊಂದಿದೆ. ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ಇದು ಆ್ಯಂಟಿ-ಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ವಿಟಮಿನ್ ಸಿ ಯಲ್ಲಿ ಸ್ವತಂತ್ರ ರಾಡಿಕಲ್ ಇರುವ ಕಾರಣ ಕೂದಲಿನ ಬಣ್ಣಕ್ಕೆ ಮುಖ್ಯವಾದ ಮೆಲನಿನ್ನ್ನು ಕಳೆದುಕೊಳ್ಳುವುದನ್ನು ವಿಳಂಬಗೊಳಿಸುವುದು.

ಕೂದಲು ಕೋಶಗಳ ಅಭಿವೃದ್ಧಿ:
ನುಗ್ಗೆ ಸೊಪ್ಪಿನಲ್ಲಿ ಅಮೈನೋ ಆಮ್ಲಗಳು ಸಮೃದ್ಧವಾಗಿದ್ದು, ಇದು ಜೀವಕೋಶಗಳ ಉತ್ಪತ್ತಿಯನ್ನು ಹೆಚ್ಚಿಸುವುದು. ಈ ಮೂಲಕ ಕೂದಲನ್ನು ಪುನರ್ಯೌವನಗೊಳಿಸಲು ಸಹಾಯ ಮಾಡುತ್ತದೆ. ಇದು ಸಣ್ಣ ಕೂದಲಿನ ಕಿರುಚೀಲಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಆ ಮೂಲಕ ಬೋಳು ಪ್ರದೇಶಗಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಇದು ಬಯೋಟಿನ್ ನ ಸಮೃದ್ಧ ಮೂಲವಾಗಿದ್ದು, ನೆತ್ತಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ ಕೂದಲು ಉದುರುವುದನ್ನು ತಡೆಗಟ್ಟಿ, ಕೂದಲ ಕೋಶಗಳ ಆಯುಷ್ಯವನ್ನು ಹೆಚ್ಚಿಸುತ್ತದೆ.

ಕೂದಲಿನ ದಪ್ಪವನ್ನು ಹೆಚ್ಚಿಸುವುದು:
ನುಗ್ಗೆ ಸೊಪ್ಪಿನಲ್ಲಿ ಒಮೆಗಾ -3 ನ ಸಮೃದ್ಧ ಮೂಲವಾಗಿದ್ದು, ಇದು ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಕೂದಲಿಗೆ ಹಚ್ಚಿದಾಗ, ಅದರಲ್ಲಿರುವ ಒಮೆಗಾ -3 ನೇರವಾಗಿ ಕೂದಲಿಗೆ ಲಭಿಸುವುದು. ಜೊತೆಗೆ ಇದು ಪೋಷಣೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುವುದು.

ಕೂದಲಿನ ಬೆಳವಣಿಗೆಗೆ ಸಹಾಯ:
ನುಗ್ಗೆ ಸೊಪ್ಪಿನಲ್ಲಿ ಸತು, ವಿಟಮಿನ್ ಎ ಮತ್ತು ಕಬ್ಬಿಣವಿದ್ದು, ಇದು ಕೂದಲಿನ ಬೆಳವಣಿಗೆಗೆ ಬಹಳ ಅವಶ್ಯಕವಾಗಿದೆ. ಸತುವು ನೆತ್ತಿಯಲ್ಲಿರುವ ತೈಲ ಗ್ರಂಥಿಗಳನ್ನು ಆರೋಗ್ಯಕರವಾಗಿಸುವುದರ ಮೂಲಕ ನೆತ್ತಿಯಲ್ಲಿ ಕೂದಲು ಬೆಳೆಯಲು ಅನುಕೂಲವಾದ ವಾತಾವರಣವನ್ನು ನಿರ್ಮಿಸುವುದು.

ನುಗ್ಗೆ ಸೊಪ್ಪಿನ ಉತ್ತಮ ಅನುಕೂಲವನ್ನು ಪಡೆಯುವ ಅದನ್ನು ಬಳಸುವ ವಿವಿಧ ವಿಧಾನಗಳು:
ಕೂದಲಿಗೆ ಎಣ್ಣೆಯಾಗಿ: ತೆಂಗಿನ ಎಣ್ಣೆ, ಜೊಜೊಬಾ ಎಣ್ಣೆ ಅಥವಾ ಹರಳೆಣ್ಣೆಯೊಂದಿಗೆ ದುರ್ಬಲಗೊಳಿಸುವ ಎಣ್ಣೆಯಾಗಿ ನುಗ್ಗೆ ಸೊಪ್ಪಿನ ಎಣ್ಣೆಯನ್ನು ಹಚ್ಚಬಹುದು.
ಹೇರ್ ಪ್ಯಾಕ್: ನುಗ್ಗೆ ಸೊಪ್ಪಿನ ಪುಡಿಯನ್ನು ಮೊಸರು, ರೋಸ್ ವಾಟರ್ ಮತ್ತು ಅಕ್ಕಿ ನೀರಿನಂತಹ ದ್ರಾವಕದೊಂದಿಗೆ ಬೆರೆಸಿ, ಹಚ್ಚುವುದು.
ಹೇರ್ ಟೋನರ್: ನುಗ್ಗೆ ಸೊಪ್ಪನ್ನು ನೀರಿನಲ್ಲಿ ಕುದಿಸಿ, ಅದರ ನೀರನ್ನು ಟೋನರ್ ಆಗಿ ಬಳಸಬಹುದು.
(Kannada Copy of Boldsky Kannada)
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 05:29 pm
HK News Staffer
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm