ಬ್ರೇಕಿಂಗ್ ನ್ಯೂಸ್
30-08-23 01:29 pm Source: News18 Kannada ಸಿನಿಮಾ
ಬಿಗ್ ಬಜೆಟ್ ಸಿನಿಮಾ ಕಲ್ಕಿ 2898 ಚಿತ್ರದ ಶೂಟಿಂಗ್ ಶೇ.80ರಷ್ಟು ಕಂಪ್ಲೀಟ್ ಆಗಿದೆ. ಕ್ಕೂ ಹೆಚ್ಚು ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ಯಾನ್ ವರ್ಲ್ಡ್ ಚಿತ್ರ ಮೂಡಿ ಬರ್ತಿದ್ದು, ಈ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದ್ಧೂರಿ ಬಜೆಟ್ನಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಕಮಲ್ ಹಾಸನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅವರು ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಜೊತೆಗೆ ತೆಲುಗಿನ ಟಾಪ್ ನಿರ್ದೇಶಕ ರಾಜಮೌಳಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರದಲ್ಲಿ ರಾಜಮೌಳಿ 10 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿದೆ.
ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿ ಹಬ್ಬದಂದು ಈ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ರು. ಆದ್ರೆ ಈ ಸಿನಿಮಾ ಕೆಲಸಗಳು ಮುಗಿಯದ ಹಿನ್ನೆಲೆ ಡೇಟ್ ಮುಂದೂಡಬಹುದು ಎನ್ನಲಾಗಿದೆ. ಗ್ರಾಫಿಕ್ಸ್ ಕೆಲಸಗಳು ನಡೆಯಬೇಕಿರುವುದರಿಂದ ಮುಂದಿನ ಸಂಕ್ರಾಂತಿಯ ಬದಲು ಮೇ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ.



ಈ ಸಿನಿಮಾದ ಥಿಯೇಟ್ರಿಕಲ್ ರೈಟ್ಸ್ ಭಾರೀ ಬೆಲೆಗೆ ಮಾರಾಟವಾಗಿದೆ. ಏಷ್ಯನ್ ಕಂಪನಿಯೊಂದು 70 ಕೋಟಿಗೆ ನಿಜಾಮ್ ಹಕ್ಕನ್ನು ಪಡೆದುಕೊಂಡಿದೆಯಂತೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಈ ಸಿನಿಮಾ ಭಾರತೀಯ ಮಹಾಕಾವ್ಯ ಮಹಾಭಾರತದಿಂದ ಪ್ರೇರಿತವಾಗಿದ್ದು ಮೂರನೇ ಮಹಾಯುದ್ಧದ ಹಿನ್ನೆಲೆಯ ಸಿನಿಮಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಈ ಚಿತ್ರದಲ್ಲಿ ಪ್ರಭಾಸ್ ಕರ್ಣನನ್ನು ಹೋಲುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬೃಹತ್ ಚಿತ್ರದಲ್ಲಿ 5 ದೀರ್ಘ ಆಕ್ಷನ್ ಬ್ಲಾಕ್ಗಳಿವೆ. ನಾಗ್ ಅಶ್ವಿನ್ ಈ ಸಾಹಸ ದೃಶ್ಯವನ್ನು ಇಲ್ಲಿಯವರೆಗೆ ಯಾರು ನೋಡದ ರೀತಿ ಅತ್ಯುತ್ತಮವಾಗಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅಮಿತಾಬ್ ಬಚ್ಚನ್ ಮಹಾಭಾರತದ ಅಶ್ವತ್ಥಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಸಂಪೂರ್ಣವಾಗಿ ಬ್ಲೂ ಮ್ಯಾಟ್ನಲ್ಲಿ ಚಿತ್ರೀಕರಿಸಲಾಗುತ್ತಿದೆಯಂತೆ. ಅಶ್ವಿನಿದತ್ ಈ ಚಿತ್ರವನ್ನು 600 ಕೋಟಿಗೂ ಹೆಚ್ಚು ಬಜೆಟ್ನಲ್ಲಿ ನಿರ್ಮಿಸುತ್ತಿದ್ದಾರೆ.



ಈ ಚಿತ್ರದ ಶೂಟಿಂಗ್ಗಾಗಿ 8 ಕೋಟಿ ಕ್ಯಾಮೆರಾ ತರಲಾಗಿದೆ ಎಂಬುದು ಲೇಟೆಸ್ಟ್ ಟಾಕ್. ಈ ಸಿನಿಮಾ ಫ್ಯಾಂಟಸಿ ಆಗಿರುವುದರಿಂದ ಈ ಹೊಸ ರೀತಿಯ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಅದರ ಭಾಗವಾಗಿ ಚಿತ್ರತಂಡ ‘ಆರಿ ಅಲೆಕ್ಸಾ 65’ ಎಂಬ ಕ್ಯಾಮೆರಾ ಬಳಸುತ್ತಿದೆ. ಹಾಲಿವುಡ್ ಸಿನಿಮಾಗಳಾದ 'ಅವೆಂಜರ್ಸ್', 'ಗಾಡ್ಜಿಲ್ಲಾ', 'ಕಿಂಗ್ ಕಾಂಗ್' ಶೂಟಿಂಗ್ ಮಾಡಲು ಈ ಕ್ಯಾಮೆರಾ ಬಳಸಿದ್ರು. ಪ್ರಭಾಸ್ , ಓಂ ರಾವುತ್ ನಿರ್ದೇಶನದಲ್ಲಿ 'ಆದಿಪುರುಷ' ಎಂಬ ಚಿತ್ರವನ್ನು ಮಾಡಿದ್ರು ಆದ್ರೆ, ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಇದು ರಾಮಾಯಣ ಕಥಾ ಕಾವ್ಯದ ದೃಶ್ಯ ರೂಪ. ಈ ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ. ಕೃತಿ ಸನನ್ ಸೀತೆಯಾಗಿ, ಸೈಫ್ ಅಲಿ ಖಾನ್ ರಾವಣನಾಗಿ, ಸನ್ನಿ ಸಿಂಗ್ ಲಕ್ಷ್ಮಣನಾಗಿ ಕಾಣಿಸಿಕೊಂಡಿದ್ರು. ಈ ಚಿತ್ರ ಜೂನ್ 16 ರಂದು ರಿಲೀಸ್ ಆಗಿ ನೆಲಕಚ್ಚಿತು.
ಆದಿಪುರುಷ' 400 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಈ ಚಿತ್ರಕ್ಕಾಗಿ ಪ್ರಭಾಸ್ 150 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಹಾಗೆಯೇ ಪ್ರಭಾಸ್ ಮಾರುತಿ ನಿರ್ದೇಶನದಲ್ಲಿ ಹಾರರ್ ಕಾಮಿಡಿ ಜಾನರ್ ನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಈ ಸಿನಿಮಾದ ಶೂಟಿಂಗ್ ಬಹುಪಾಲು ಒಂದೇ ಮನೆಯಲ್ಲಿ ನಡೆಯುತ್ತದೆ. ಆ ಮನೆಯ ಸೆಟ್ಗೆ ಸುಮಾರು 6 ಕೋಟಿ ಖರ್ಚು ಮಾಡಲಾಗಿದೆ.
Director Rajamouli to Play Key in Role Prabhas Kalki.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm