ಬ್ರೇಕಿಂಗ್ ನ್ಯೂಸ್
27-06-23 01:54 pm Source: Vijayakarnataka ಸಿನಿಮಾ
ಹರೀಶ್ ಬಸವರಾಜ್:
ನಟ 'ಕಿಚ್ಚ' ಸುದೀಪ್ ಅವರ ಮುದ್ದಿನ ಮಗಳು ಸಾನ್ವಿ ಸುದೀಪ್ ಕೂಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ಆದರೆ ನಟಿಯಾಗಿ ಅಲ್ಲ, ಬದಲಾಗಿ ಹಿನ್ನೆಲೆ ಗಾಯಕಿಯಾಗಿ ಅವರು ಸ್ಯಾಂಡಲ್ವುಡ್ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸುದೀಪ್ ಸಹೋದರಿಯ ಪುತ್ರ ಸಂಚಿತ್ ಸಂಜೀವ್ ಅವರು ‘ಜಿಮ್ಮಿ’ ಚಿತ್ರದ ಮೂಲಕ ನಾಯಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರೇ ನಿರ್ದೇಶನ ಮಾಡುತ್ತಿರುವ 'ಜಿಮ್ಮಿ' ಸಿನಿಮಾದ ಮುಹೂರ್ತ ಸಹ ನಡೆದಿತ್ತು. ಈಗ ಅದೇ ಸಿನಿಮಾ ಮೂಲಕ ಸುದೀಪ್ ಪುತ್ರಿ ಸಾನ್ವಿ ಕೂಡ ಚಿತ್ರರಂಗಕ್ಕೆ ಗಾಯಕಿಯಾಗಿ ಬರುತ್ತಿದ್ದಾರೆ.

ಸಾನ್ವಿ ಗಾಯನಕ್ಕೆ ವಾಸುಕಿ ವೈಭವ್ ಮೆಚ್ಚುಗೆ:
ಈ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿರುವ ಸಾಫ್ಟ್ ರಾಕ್ ಶೈಲಿಯ ಹಾಡನ್ನು ಸಾನ್ವಿ ಹಾಡಿದ್ದಾರೆ. ಅವರ ಗಾಯನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ‘ಜಿಮ್ಮಿ’ ಸಿನಿಮಾದ ಸಂಗೀತ ನಿರ್ದೇಶಕ ವಾಸುಕಿ ವೈಭವ್, ‘ಸಾನ್ವಿ ಧ್ವನಿ ಪವರ್ಫುಲ್ ಮತ್ತು ಪ್ರಬುದ್ಧವಾಗಿದೆ. ಅವರು ಬಹಳ ಸೊಗಸಾಗಿ ಹಾಡಿದ್ದಾರೆ. ಟೈಟಲ್ ಟೀಸರ್ನಲ್ಲಿರುವ ಹಾಡನ್ನು ಅವರೇ ಬರೆದು ಹಾಡಿದ್ದು, ಅವರು ತುಂಬಾ ಒಳ್ಳೆಯ ಗಾಯಕಿ ಆಗುತ್ತಾರೆ. ಸಾನ್ವಿ ಸುದೀಪ್ ಸಾಹಿತ್ಯ ಬರೆದು ಹಾಡುವಷ್ಟು ಪ್ರೌಢಿಮೆ ಹೊಂದಿದ್ದಾರೆ. ‘ಜಿಮ್ಮಿ’ ಸಿನಿಮಾದ ಟೈಟಲ್ ಟೀಸರ್ ಬಹಳ ಜನರಿಗೆ ಇಷ್ಟವಾಗಲು ಈ ಹಾಡು ಕೂಡ ಒಂದು ಕಾರಣ' ಎಂದಿದ್ದಾರೆ.

ಮಗಳ ಗಾಯನದ ಬಗ್ಗೆ ಸುದೀಪ್ ಮಾತು:
ಈ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿಯೂ ಸಾನ್ವಿ ಸುದೀಪ್ ಇದೇ ಹಾಡು ಹಾಡಿದ್ದಾರೆ. ಈ ಬಗ್ಗೆ ಹೇಳಿರುವ ಸುದೀಪ್, 'ನನ್ನ ಮಗಳು ಹಾಡಿದ್ದು ನೋಡಿ ಖುಷಿಯಾಯ್ತು. ಅವಳು ಚೆನ್ನಾಗಿ ಹಾಡುತ್ತಾಳೆ ಅಂತ ಗೊತ್ತಿತ್ತು. ಆದರೆ ಇಷ್ಟು ಚೆನ್ನಾಗಿ ಹಾಡುತ್ತಾಳೆ ಅಂತ ಇವತ್ತೇ ಗೊತ್ತಾಗಿದ್ದು' ಎಂದು ಮುದ್ದಿನ ಮಗಳಿಗೆ ಹೊಗಳಿದ್ದಾರೆ.
ಜಿಮ್ಮಿ' ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮ ಈಚೆಗೆ ಅದ್ಧೂರಿಯಾಗಿ ನಡೆಯಿತು. ಸ್ಯಾಂಡಲ್ವುಡ್ ನಟರಾದ 'ಕ್ರೇಜಿ ಸ್ಟಾರ್' ರವಿಚಂದ್ರನ್ ಮತ್ತು 'ಹ್ಯಾಟ್ರಿಕ್ ಹೀರೋ' ಶಿವರಾಜ್ಕುಮಾರ್ ಅವರು ಸಂಚಿತ್ ಸಂಜೀವ್ಗೆ ಶುಭ ಕೋರಿದರು. ಕೆ ಪಿ ಶ್ರೀಕಾಂತ್, ಮನೋಹರ್ ನಾಯ್ಡು ಮತ್ತು ಪ್ರಿಯಾ ಸುದೀಪ್ ಅವರು ಜಂಟಿಯಾಗಿ 'ಜಿಮ್ಮಿ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಶೂಟಿಂಗ್ ಆರಂಭವಾಗಲಿದೆ. ನಾಯಕಿ ಯಾರು? ಯಾರೆಲ್ಲ ತಂತ್ರಜ್ಞರು ಈ ಸಿನಿಮಾಕ್ಕಾಗಿ ಕೆಲಸ ಮಾಡಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಟೈಟಲ್ ಟೀಸರ್ ಮೆಚ್ಚಿಕೊಂಡ ಶಿವಣ್ಣ:
'ಜಿಮ್ಮಿ ಸಿನಿಮಾದಲ್ಲಿ ಉತ್ತಮ ಗುಣಮಟ್ಟ ಕಾಣಿಸುತ್ತಿದೆ. ಓರ್ವ ನಟ ತನ್ನ ಮೊದಲ ಸಿನಿಮಾವನ್ನು ತಾನೇ ನಿರ್ದೇಶನ ಮಾಡಿಕೊಳ್ಳುತ್ತಿರುವುದು ಬಹುಶಃ ಇದೇ ಮೊದಲಿರಬೇಕು. ಸಂಚಿತ್ ತುಂಬ ಹ್ಯಾಂಡ್ಸಮ್ ಆಗಿ ಕಾಣಿಸ್ತಾ ಇದ್ದೀರಾ. ನಿಮ್ಮಲ್ಲಿ ನಿಮ್ಮ ತಾಯಿ ಅವರ ಮುಖ, ನಿಮ್ಮ ತಾತ ಸಂಜೀವ್ ಅವರ ಗಾಂಭೀರ್ಯ, ಸುದೀಪ್ ವಾಯ್ಸ್ ಎಲ್ಲವೂ ನಿಮ್ಮಲ್ಲಿದೆ' ಎಂದು ಹೊಗಳಿದರು ಶಿವಣ್ಣ.
Kiccha Sudeeps daughter Saanvi debut to sandalwood as a singer with Sanchith Sanjeev starrer Jimmy movie.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
02-11-25 10:23 pm
Mangalore Correspondent
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm