ಬ್ರೇಕಿಂಗ್ ನ್ಯೂಸ್
13-06-23 11:55 am Source: One India Kannada ಸಿನಿಮಾ
ರಾಮಾಯಣ ಕಾವ್ಯ ಆಧರಿಸಿ ನಿರ್ಮಿಸಿರುವ ಈ ಪೌರಾಣಿಕ ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದಾರೆ. ಓಂ ರಾವುತ್ ನಿರ್ದೇಶನದ ಈ ಚಿತ್ರದಲ್ಲಿ ಕೃತಿ ಸನೂನ್ ಸೀತೆಯಾಗಿ, ಸೈಫ್ ಅಲಿಖಾನ್ ರಾವಣನಾಗಿ ಸನ್ನಿ ಸಿಂಗ್ ಲಕ್ಷ್ಮಣನಾಗಿ ದೇವದತ್ತ ಹನುಮಂತನಾಗಿ ಬಣ್ಣ ಹಚ್ಚಿದ್ದಾರೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ದೊಡ್ಡದಾಗಿ ಸಿನಿಮಾ ರಿಲೀಸ್ ಆಗಲಿದೆ. ಪ್ರೇಕ್ಷಕರು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಟೀ ಸೀರಿಸ್ ಹಾಗೂ ರೆಟ್ರೊಪ್ಲಿಸ್ ಸಂಸ್ಥೆಗಳು ಜಂಟಿಯಾಗಿ 'ಆದಿಪುರುಷ್' ಸಿನಿಮಾ ನಿರ್ಮಾಣ ಮಾಡಿವೆ. ಇವತ್ತಿನ ಕಾಲದ ತಂತ್ರಜ್ಞಾನ ಬಹಳ ತ್ರಿಡಿಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಈಗಾಗಲೇ ಹಲವು ರೂಪಗಳಲ್ಲಿ ರಾಮಾಯಣ ನೋಡಿದ್ದರೂ 'ಆದಿಪುರುಷ್' ಸಿನಿಮಾ ಅದ್ಭುತ ಅನುಭವ ನೀಡಲಿದೆ. ಈಗಾಗಲೇ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.
ಕನ್ನಡ ಸೆಲೆಬ್ರೆಟಿ ಶೋ
ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆ 'ಆದಿಪುರುಷ್' ಕರ್ನಾಟಕ ರೈಟ್ಸ್ ಪಡೆದಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ತಯಾರಿ ನಡೀತಿದ್ದು ಭರ್ಜರಿ ಪ್ರೀಮಿಯರ್ ಶೋ ಪ್ಲಾನ್ ಮಾಡಲಾಗುತ್ತಿದೆ. ಈ ಬಗ್ಗೆ ವಿತರಕ ಕಾರ್ತಿಕ್ ಗೌಡ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಜೂನ್ 16ರಂದು ಸ್ಯಾಂಡಲ್ವುಡ್ ಸೆಲೆಬ್ರೆಟಿಗಳಿಗಾಗಿ ಮೆಗಾ ಈವೆಂಟ್ ಪ್ಲಾನ್ ಮಾಡುತ್ತಿರುವುದಾಗಿ ಹೇಳಿದ್ದಾರೆ. ನಗರದ ಒರಾಯನ್ ಮಾಲ್ನಲ್ಲಿ ಶೋ ಏರ್ಪಡಿಸುವ ಸಾಧ್ಯತೆಯಿದೆ.
ಯಶ್, ಪ್ರಶಾಂತ್ ನೀಲ್ ಭಾಗಿ?
ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳ ಸೆಲೆಬ್ರೆಟಿಗಳು ಶೋಗಳು ಯಶಸ್ವಿಯಾಗಿ ನಡೀತಿದೆ. '777 ಚಾರ್ಲಿ', 'ಗಂಧದಗುಡಿ' ಸೆಲೆಬ್ರೆಟಿ ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ 'ಆದಿಪುರುಷ್' ಸೆಲೆಬ್ರೆಟಿ ಶೋಗೆ ಕೆಆರ್ಜಿ ಸಂಸ್ಥೆ ಪ್ಲ್ಯಾನ್ ಮಾಡ್ತಿದೆ. ಶಿವಣ್ಣ, ಯಶ್, ಪ್ರಶಾಂತ್ ನೀಲ್, ಧನಂಜಯ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಮ್ಯಾ ಸೇರಿದಂತೆ ಸಾಕಷ್ಟು ತಾರೆಯರು ಸಿನಿಮಾ ನೋಡುವ ಸಾಧ್ಯತೆಯಿದೆ.
ಬುಕ್ಕಿಂಗ್ಗೆ ಭರ್ಜರಿ ರೆಸ್ಪಾನ್ಸ್
'ಆದಿಪುರುಷ್' ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಕರ್ನಾಟಕದಲ್ಲಿ ಈಗಾಗಲೇ ಆರಂಭವಾಗಿದೆ. ಪ್ರೇಕ್ಷಕರು ಟಿಕೆಟ್ ಬುಕ್ ಮಾಡಿಕೊಳ್ಳುತ್ತಿದ್ದಾರೆ. ಭಾನುವಾರ ತೆಲುಗು, ಹಿಂದಿ ವರ್ಷನ್ ಬುಕ್ಕಿಂಗ್ ಬಿಟ್ಟಿದ್ದ ಸಂಸ್ಥೆ ಈಗ ಕನ್ನಡ ವರ್ಷನ್ ಸಹ ಆರಂಭಿಸಿದೆ. 2ಡಿ ಹಾಗೂ 3ಡಿ ವರ್ಷನ್ಗಳಲ್ಲಿ ಪ್ರೇಕ್ಷಕರು ಸಿನಿಮಾ ನೋಡುವ ಅವಕಾಶ ಇದೆ. ಕೆಲವೆಡೆ ಟಿಕೆಟ್ ದರ ಹೆಚ್ಚಿಸಿರುವ ಬಗ್ಗೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
1000 ಕೋಟಿ ಕಲೆಕ್ಷನ್ ನಿರೀಕ್ಷೆ
'ಬಾಹುಬಲಿ' ಸರಣಿ ಸಿನಿಮಾಗಳಿಂದ ಪ್ರಭಾಸ್ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸ್ತಿದ್ದಾರೆ. ಹಿಂದಿನ ಎರಡು ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ 'ಆದಿಪುರುಷ್' 1000 ಕೋಟಿ ಕಲೆಕ್ಷನ್ ಮಾಡುವ ಲೆಕ್ಕಾಚಾರ ನಡೀತಿದೆ. ಈಗಾಗಲೇ ಪ್ರೀ ರಿಲೀಸ್ ಬ್ಯುಸಿನೆಸ್ ಸಖತ್ ಸದ್ದು ಮಾಡಿದೆ.
We will have a celebrity premiere for kannada version of #Adipurush on 16th of June. It will be @KRG_Studios mega event. More details soon.
— Karthik Gowda (@Karthik1423) June 12, 2023
KRG Studios planning Adipurush Kannada celebrity premiere on 16th of june.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm