ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ ಕೊಡಬಾರದು ; ಇನ್ನೂ ಎರಡೂವರೆ ವರ್ಷ ನೀವೇ ಮುಂದುವರೆಯಿರಿ, ಸಿದ್ದು ಪರ ರೆಡ್ಡಿ ಬ್ಯಾಟಿಂಗ್ ! 

29-01-26 10:48 pm       Bangalore Correspondent   ಕರ್ನಾಟಕ

ಬಳ್ಳಾರಿ ಪ್ರಕರಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್​ ನಡೆದುಕೊಂಡ ರೀತಿ ನೋಡಿದರೆ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವರಿಗೆ ಅವಕಾಶ ಮಾಡಿ ಕೊಡಬಾರದು. ಮುಖ್ಯಮಂತ್ರಿಯಾಗಿ ನೀವೇ ಎರಡೂವರೆ ವರ್ಷ ಮುಂದುವರಿಯಬೇಕು ಎಂದು ಶಾಸಕ ಜನಾರ್ದನ ರೆಡ್ಡಿ ಆಶಿಸಿದರು.

ಬೆಂಗಳೂರು, ಜ 29 : ಬಳ್ಳಾರಿ ಪ್ರಕರಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್​ ನಡೆದುಕೊಂಡ ರೀತಿ ನೋಡಿದರೆ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವರಿಗೆ ಅವಕಾಶ ಮಾಡಿ ಕೊಡಬಾರದು. ಮುಖ್ಯಮಂತ್ರಿಯಾಗಿ ನೀವೇ ಎರಡೂವರೆ ವರ್ಷ ಮುಂದುವರಿಯಬೇಕು ಎಂದು ಶಾಸಕ ಜನಾರ್ದನ ರೆಡ್ಡಿ ಆಶಿಸಿದರು.

ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಲೆ ಬಳ್ಳಾರಿ ಗಲಾಟೆ ಪ್ರಕರಣ ವಿಷಯ ಪ್ರಸ್ತಾಪಿಸಿದ ಜನಾರ್ದನ ರೆಡ್ಡಿ, 'ಬಳ್ಳಾರಿ ಪ್ರಕರಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್​​ ನಡೆದುಕೊಂಡ ರೀತಿ ನೋಡಿದರೆ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವರಿಗೆ ಅವಕಾಶ ಮಾಡಿ ಕೊಡಬಾರದು. ಮುಖ್ಯಮಂತ್ರಿಯಾಗಿ ನೀವೇ ಎರಡೂವರೆ ವರ್ಷ ಮುಂದುವರಿಯಬೇಕು. ರಾಜ್ಯದ ಕಾನೂನನ್ನು ನೀವು ಕಾಪಾಡಿ. ವಿಶೇಷವಾಗಿ ಬಳ್ಳಾರಿಯಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಒಳ್ಳೆಯ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿ' ಎಂದು ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡಿದರು.

'ಬಳ್ಳಾರಿಯಲ್ಲಿ ಅಂದು ಎಲ್ಲರೂ ಮದ್ಯ ಕುಡಿದು ಬಂದಿದ್ದರು. ನೆರೆದಿದ್ದ ಜನ ಕಲ್ಲು ಹೊಡೆದರೆ. ಅಂಗರಕ್ಷಕರು ಗುಂಡು ಹಾರಿಸಿದರು. ಅದೆಲ್ಲವೂ ನಮ್ಮ ಮನೆಗೆ ಬಂದು ಹೊಡೆದಿದೆ. ಈ ಘಟನೆ ಸಂಬಂಧ ಫಾರೆನ್ಸಿಕ್​ ಲ್ಯಾಬ್‌ನವರು ಬಂದು ಸಾಕ್ಷ್ಯ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ನಮ್ಮ ಮನೆಗೆ SP ಮತ್ತು IG ಬಂದರು. ಜನಾರ್ದನ ರೆಡ್ಡಿ ಅವರೇ ನೀವು ಹೆದರಬೇಡಿ ಅಂದರು. ಅವರಿಗೆ ಈಗಾಗಲೇ ವರದಿ ಬಂದಿರಬಹದು. ಎಸ್​ಪಿ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ನಮ್ಮ‌ ಮನೆ ಮೇಲೆ ಕಲ್ಲು ತೂರುತ್ತಿದ್ದರು. ಈ ವೇಳೆ ಪೊಲೀಸರು ಲಾಟಿ ಚಾರ್ಜ್ ಮಾಡುತ್ತಿದ್ದರು. ಈ ವೇಳೆ ವಾಪಸ್ ಓಡುವಾಗ ಗನ್ ಪಾಯಿಂಟ್‌ಗೆ ಸಿಕ್ಕಿ ಕಾರ್ಯಕರ್ತ ಡೆತ್ ಆಗಿದ್ದಾನೆ' ಎಂದು ವಿವರಿಸಿದರು.

'ಎಂಎಲ್‌ಎ ಅಲ್ಲೇ ಇದ್ದ, ನನ್ನ ಮನೆ ಮುಂದೆಯೇ ಕಾರ್ಯಕರ್ತ ಅಸು ನೀಗಿದ್ದ. ಕಾರ್ಯಕರ್ತನ ಸಾವಿಗೆ ನಾವು ಕಾರಣ ಅಂತ ಮನೆ ಮುಂದೆ ಪ್ರತಿಭಟನೆ ಮಾಡಿದರು. ಜನಾರ್ದನ ರೆಡ್ಡಿ ಮನೆ ಮೇಲೆ ಸಾವಿರಾರು ಜನ ದಾಳಿ ಮಾಡಿದ್ದಾರೆ ಅಂತ ಎಸ್ಪಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಸಿಎಂ ಸೂಚನೆ ಮೇರೆಗೆ ಪೊಲೀಸರು ಕರ್ತವ್ಯ ಮಾಡಿದ್ದಾರೆ. ಆದರೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಐ ಸ್ಟಾಂಡ್ ವಿತ್ ಅವರ್ ಎಂಎಲ್‌ಎ ಅಂತ ಹೇಳಿದ್ದಾರೆ. ಅವರು ಅವರ ಎಂಎಲ್‌ಎ ಅವರ ಪರವಾಗಿ ನಿಲ್ಲಲಿ. ಆದರೆ ಎಂಥವರ ಪರ ನಿಲ್ಲಬೇಕು.?. ನಾನೂ ಬಳ್ಳಾರಿಯಲ್ಲಿ ರಾಜಕಾರಣ ಮಾಡಿದ್ದೇನೆ. ಆದರೆ ನಿಮ್ಮ‌ ಹುದ್ದೆಗೆ ನೀವು ಗೌರವ ಕೊಟ್ಟಿಲ್ಲ' ಎಂದು ದೂರಿದರು.

'ನೀವು ಆ ಕುರ್ಚಿಯಲ್ಲಿ ಕೂರಲು ಯೋಗ್ಯರೋ, ಇಲ್ಲವೋ ಗೊತ್ತಿಲ್ಲ. ಅದನ್ನು ನಿಮ್ಮ ಪಕ್ಷವೇ ತೀರ್ಮಾನ ಮಾಡಲಿ. ಇಷ್ಟೆಲ್ಲಾ ಘಟನೆ ನಡೆದರೂ ಕ್ರಮ ಆಗಿಲ್ಲ. ಮುಖ್ಯಮಂತ್ರಿಗಳಿಗೆ ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ. ನೀವು ಪಾದಯಾತ್ರೆ ಮಾಡಿದ್ದೀರಿ, ಏನೆಲ್ಲಾ ಮಾಡಿದ್ದೀರಿ. ನಾನು ಜೈಲಿಗೆ ಹೋಗೋದು, ಮತ್ತೆ ಆಯ್ಕೆಯಾಗಿ ಬರೋದು ಎಲ್ಲಾ ಭಗವಂತನ ಇಚ್ಚೆ. ಬಳ್ಳಾರಿಯಲ್ಲಿ ನಾವೇ ಸಂಪೂರ್ಣ ಗೆಲ್ಲಬಹುದು, ಸೋಲಬಹುದು. ನೀವು ಅಧಿಕಾರ ಬಳಸಿಕೊಂಡು ಅಭಿವೃದ್ಧಿ ಮಾಡಿ. ಅದು ಬಿಟ್ಟು ಬಳ್ಳಾರಿಯಲ್ಲಿ ಬಾಂಬು, ಗನ್ ಮಾತನಾಡುತ್ತಿದೆ. ಇಡೀ ಪ್ರಕರಣ CBI ತನಿಖೆಗೆ ನೀಡಬೇಕು. CBI ಮೇಲೆ ನಂಬಿಕೆ ಇಲ್ಲದಿದ್ದರೆ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಗೆ ತನಿಖೆಗೆ ನೀಡಬೇಕು. ಈ ಮೂಲಕ ಬಳ್ಳಾರಿ ಜನತೆಯ ಹಿತ ಕಾಪಾಡಬೇಕು. ಕಾನೂನು ಕ್ರಮ ಕೂಡಲೇ ತೆಗೆದುಕೊಳ್ಳಬೇಕು' ಎಂದು ಒತ್ತಾಯಿಸಿದರು.

'ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ, ನಾನು ಕಾನೂನು ಹೋರಾಟ ಮಾಡುತ್ತೇನೆ. ನನ್ನ ಕಚೇರಿಯ ಹತ್ತು ಅಡಿ ದೂರದಲ್ಲೇ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಗುಂಡು ಹಾರಿಸಲಾಯಿತು. ಶಾಸಕನ ಖಾಸಗಿ ಗನ್‌ಮ್ಯಾನ್‌ಗಳಿಂದಲೇ ಫೈರಿಂಗ್ ಆಗಿದ್ದು ಅಂತ ಎಸ್‌ಪಿ ಹೇಳಿದರು. ಸಿಎಂ ಅವರು ಗಂಭೀರವಾಗಿ ಅವರ ಮನೆ ಬಳಿ ಬ್ಯಾನರ್ ಯಾಕೆ ಕಟ್ಟಿದ್ರು ಅಂತ ಹೇಳಿದರು. ಆದರೆ ಡಿಸಿಎಂ ಅವರು ತಮ್ಮ ಪಕ್ಷದ ಶಾಸಕನ ಪರ ನಿಂತ್ಕೊಂಡರು. ಆ ಶಾಸಕನ ತಪ್ಪಿದರೂ ಡಿಸಿಎಂ ಪರ ನಿಂತರು" ಎಂದು ದೂರಿದರು.

"ನಾನು ಈ ಪ್ರಕರಣ ಇಲ್ಲಿಗೇ ಬಿಡಲ್ಲ, ಹೋರಾಟ ಮಾಡುತ್ತೇನೆ. ಬಳ್ಳಾರಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಗರದ ವಾರ್ಡ್​ಗಳಲ್ಲಿ ಯಂಗ್‌ಸ್ಟರ್ಸ್ ಗ್ಯಾಂಗ್‌ಸ್ಟರ್ಸ್ ಆಗಿ ಹೋಗಿದ್ದಾರೆ. ಜನಾರ್ದನ ರೆಡ್ಡಿ ಕುಟುಂಬ ಅಂತ್ಯ ಮಾಡಲು ಹೊರಟಿದ್ದಾರೆ. ಸಿಎಂ ಅವರಿಗೆ ನಾನು ಕೈಜೋಡಿಸಿ ಕೇಳಿಕೊಳ್ಳುತ್ತೇನೆ. ರಾಜಕೀಯವಾಗಿ ನಮ್ಮ ನಿಮ್ಮ ಹೋರಾಟ, ಪಾದಯಾತ್ರೆ ಬೇರೆ. ದೇವರಿಚ್ಚೆ ಇತ್ತೇನೋ ನಾನು ಜೈಲಿಗೆ ಹೋಗಿ ಬಂದೆ. ಬಳ್ಳಾರಿಯಲ್ಲಿ ಕಾನೂನು ಕಾಪಾಡಿ, ನಗರಕ್ಕೆ ಒಳ್ಳೆಯ ಅಧಿಕಾರಿಗಳನ್ನು ಹಾಕಿ. ಅಧಿಕಾರ ಇರಲಿ ಬಿಡಲಿ ಬಳ್ಳಾರಿಯಲ್ಲಿ ಶಾಂತಿ ನೆಲೆಸಬೇಕು. ಬಳ್ಳಾರಿಯಲ್ಲಿ ಶಾಸಕರು ಅಭಿವೃದ್ಧಿ ಮಾಡಲಿ, ತಮಗೆ ಸಿಕ್ಕ ಅವಕಾಶ ಬಳಸಿಕೊಳ್ಳಲಿ. ಗ್ಯಾಂಗ್ ಇಟ್ಕೊಂಡು ಗನ್, ರೈಫಲ್ ಇಟ್ಕೊಂಡು ಓಡಾಡೋದು ಸರಿಯಲ್ಲ" ಎಂದು ವಾಗ್ದಾಳಿ ನಡೆಸಿದರು.

In the Assembly, MLA Janardhana Reddy strongly criticised Deputy CM D.K. Shivakumar over the Ballari incident and urged that Siddaramaiah continue as Chief Minister for the next two-and-a-half years, demanding strict law and order measures and an impartial probe into the violence.