ಬ್ರೇಕಿಂಗ್ ನ್ಯೂಸ್
27-01-26 03:21 pm Mangaluru Staffer ಕ್ರೈಂ
ಮಂಗಳೂರು, ಜ.27: ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ಎಂದು ಸೈಬರ್ ವಂಚಕರು ಹಿರಿಯ ನಾಗರಿಕರೊಬ್ಬರಿಗೆ ಕರೆ ಮಾಡಿದ್ದು ಅದನ್ನು ನಂಬಿದ ವ್ಯಕ್ತಿ ವಂಚಕರಿಗೆ ಒಟಿಪಿ ನಂಬರ್ ನೀಡಿ 3 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ.
ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವರ ಮೊಬೈಲಿಗೆ ಅಪರಿಚಿತರು (ಮೊಬೈಲ್ ನಂಬ್ರ-9582276944) ಕರೆ ಮಾಡಿದ್ದು, ಈ ವೇಳೆ ಕ್ರೆಡಿಟ್ ಕಾರ್ಡ್ ಬೋನಸ್ ಬಂದಿದೆ, ಅದನ್ನು ಪಡೆದುಕೊಳ್ಳಲು ನಾವು ಕಳಿಸಿರುವ ಎಪಿಕೆ ಫೈಲ್ ಮೂಲಕ ಏಪ್ ಡೌನ್ಲೋಡ್ ಮಾಡಲು ಹೇಳಿದ್ದಾರೆ. ಬಳಿಕ ಸೈಬರ್ ವಂಚಕರು ಬೋನಸ್ ಡೆಪಾಸಿಟ್ ಮಾಡಲು ಎಟಿಎಂ ಕಾರ್ಡ್ ನಂಬ್ರ ತಿಳಿಸಲು ಹೇಳಿದ್ದಾರೆ. ಅದರಂತೆ ವ್ಯಕ್ತಿ ಕಾರ್ಡ್ ನಂಬರ್ ತಿಳಿಸಿದ್ದು ಕೆಲ ಸಮಯದ ನಂತರ ಮತ್ತೊಂದು (ಮೊಬೈಲ್ ನಂಬ್ರ-8937098978) ನಂಬರಿನಿಂದ ಕರೆ ಮಾಡಿ ಒ ಟಿ ಪಿ ತಿಳಿಸಿದರೇ ಮಾತ್ರ ಬೊನಸ್ ಜಮಾ ಆಗುವುದು ಎಂದು ಹೇಳಿದ್ದಾರೆ.
ಇದರಂತೆ ಹಲವು ಬಾರಿ ಒಟಿಪಿ ನಂಬರ್ ಕೇಳಿದ್ದು ಇವರು ಹೇಳಿದ್ದಾರೆ. ಕೆಲ ಹೊತ್ತಿನಲ್ಲೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಂದ 19,551 ರಂತೆ ಎರಡು ಬಾರಿ ಹಣ ಕಡಿತವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆಯಿಂದ ಜ.16ರಿಂದ 21ರ ವರೆಗೆ 2,93,144 ರೂ. ಹಣ ಕಡಿತವಾಗಿದೆ.
ಇದೇ ವೇಳೆ, ವ್ಯಕ್ತಿಯ ಪತ್ನಿಗೆ ಏನೋ ಸಂಶಯ ಬಂದು ಮಗನಿಗೆ, ನಿನ್ನ ತಂದೆ ಯಾರಿಗೋ ಓಟಿಪಿ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ಮಗ ಬಂದು ವಿಚಾರಿಸಿದಾಗ ಅವರ ಐಸಿಐಸಿ ಐ ಬ್ಯಾಂಕ್ ಕ್ರೆಡಿಟ್ ಕಾರ್ಡ ನಿಂದ 39,103 ರೂ. ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾನಿಂದ ರೂ.293144 ರಂತೆ ಹಣ ಕಡಿತವಾದ ಬಗ್ಗೆ ತಿಳಿದುಬಂದಿದೆ. ಒಟ್ಟು ಮೊತ್ತ ರೂ. 3,32,247 ರೂ. ಹಣವನ್ನು ಸೈಬರ್ ವಂಚಕರು ವಂಚಿಸಿದ್ದಾರೆ.
Cyber fraudsters have cheated a senior citizen in Mangaluru of ₹3.32 lakh by luring him with a fake claim of a credit card bonus. According to the complaint registered at the Barke Police Station, unknown persons called the victim from mobile number 9582276944, claiming that a bonus amount had been credited to his credit card. They instructed him to download an application through an APK file sent to his phone to process the bonus.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
16-08-26 04:14 pm
HK News Staffer
ಸ್ವಾತಂತ್ರ್ಯ ದಿನಾಚರಣೆ ವೇಳೆ ವಂದೇ ಮಾತರಂ ಗೀತೆಗೆ ಸ...
16-08-26 03:47 pm
ಚರಕದಿಂದ ನೂಲು ತೆಗೆದು, ಸಮುದ್ರ ಕಿನಾರೆಯಲ್ಲಿ ಉಪ್ಪು...
15-08-26 10:08 pm
Mangalore City Centre KFC raided: Six-month-o...
15-08-26 09:30 pm
ಗುಟ್ಕಾ, ಪಾನ್ ಮಸಾಲ ಪ್ರತ್ಯೇಕ ಕೊಟ್ಟರೆ ನಿರ್ಬಂಧ ಇಲ...
15-08-26 04:52 pm
15-08-26 09:06 pm
HK News Staffer
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm