ಮೈಸೂರಿನಲ್ಲಿ ಮತ್ತೆ ಡ್ರಗ್ಸ್ ಫ್ಯಾಕ್ಟರಿ ಶಂಕೆಯಲ್ಲಿ ದೆಹಲಿ ಪೊಲೀಸರ ದಾಳಿ ; ಹೆಬ್ಬಾಳು ಕೈಗಾರಿಕಾ ಸಂಕೀರ್ಣದಲ್ಲಿ ಪರಿಶೀಲನೆ, ಡ್ರಗ್ಸ್ ಸಿಕ್ಕಿಲ್ಲ ಎಂದ ಕಮಿಷನರ್ 

28-01-26 09:54 pm       HK News Desk   ಕರ್ನಾಟಕ

ಮೈಸೂರಿನಲ್ಲಿ ಮತ್ತೊಂದು ಅಕ್ರಮ ಡ್ರಗ್ಸ್ ಫ್ಯಾಕ್ಟರಿ ಇರುವ ಶಂಕೆಯಲ್ಲಿ ದೆಹಲಿ ಪೊಲೀಸರು ದಾಳಿ ನಡೆಸಿದ್ದಾರೆ. ಟುಕ್ ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ಅಂಡ್ ಮ್ಯಾನುಫ್ಯಾಕ್ಟರಿಂಗ್ ಎನ್ನುವ ಫ್ಯಾಕ್ಟರಿಗೆ ದಾಳಿ ನಡೆಸಲಾಗಿದೆ. 

Photo credits : AI IMAGE

ಮೈಸೂರು, ಜ.28 : ಮೈಸೂರಿನಲ್ಲಿ ಮತ್ತೊಂದು ಅಕ್ರಮ ಡ್ರಗ್ಸ್ ಫ್ಯಾಕ್ಟರಿ ಇರುವ ಶಂಕೆಯಲ್ಲಿ ದೆಹಲಿ ಪೊಲೀಸರು ದಾಳಿ ನಡೆಸಿದ್ದಾರೆ. ಟುಕ್ ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ಅಂಡ್ ಮ್ಯಾನುಫ್ಯಾಕ್ಟರಿಂಗ್ ಎನ್ನುವ ಫ್ಯಾಕ್ಟರಿಗೆ ದಾಳಿ ನಡೆಸಲಾಗಿದೆ. 

ಹೆಬ್ಬಾಳ‌ ಕೈಗಾರಿಕಾ ಪ್ರದೇಶದಲ್ಲಿ ದಾಳಿ ಕಾರ್ಯಾಚರಣೆ ನಡೆದಿದ್ದು ಸದ್ಯಕ್ಕೆ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ. ಕಾರ್ಯಾಚರಣೆ ಮುಂದುವರಿದಿದೆ ಎಂದು ಮೈಸೂರು ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ. ‌ಇತ್ತೀಚೆಗೆ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿದಾಗ, ಮೈಸೂರಿನಲ್ಲಿ 400 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು.  ಮುಂಬೈ ಪೊಲೀಸರ ಬಳಿಕ ಈಗ ದೆಹಲಿ ಪೊಲೀಸರು ಡ್ರಗ್ಸ್ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. 

ದಾಳಿ ಹಿನ್ನೆಲೆ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಮತ್ತೊಂದು ಡ್ರಗ್ಸ್ ತಯಾರಿಕಾ ಫ್ಯಾಕ್ಟರಿ ಇರುವ ಶಂಕೆ ವ್ಯಕ್ತವಾಗಿದೆ. ‌ಅಲ್ಲದೆ, ನೂರಾರು ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾದ ಬಗ್ಗೆಯೂ ಶಂಕೆ ಇದೆ.‌ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾಲಾಟ್ಕರ್, ಡಿಸಿಪಿ ಸುಂದರ್ ರಾಜ್ ತೆರಳಿ ತಲಾಶ್ ಕೈಗೊಂಡಿದ್ದಾರೆ.‌ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಅಧಿಕಾರಿಗಳು ಹಾಗೂ ಮೈಸೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. 

ದಾಳಿ ನಡೆದ ಕಟ್ಟಡ ಮತ್ತು ಸ್ಥಳ ಬೋರೇಗೌಡ ಎಂಬವರಿಗೆ ಸೇರಿದ್ದು ಕಳೆದ ಒಂದು ವರ್ಷದ ಹಿಂದೆ ಈ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಬ್ರೋಕರ್ ಒಬ್ಬರ ಮೂಲಕ ಗಣಪತ್ ಲಾಲ್ ಎನ್ನುವವರಿಗೆ ಬಾಡಿಗೆಗೆ ಕೊಟ್ಟಿದ್ದರು. ಇನ್ನೂ ವರ್ಕ್ ಶುರು ಮಾಡಿರಲಿಲ್ಲ. ಗುಜರಾತ್ ನಲ್ಲಿ ಓರ್ವನನ್ನು ಡ್ರಗ್ಸ್ ಸಂಬಂಧಿಸಿ ವಶಕ್ಕೆ ಪಡೆಯಲಾಗಿದ್ದು ಆತನ ಮಾಹಿತಿ ಮೇರೆಗೆ ದೆಹಲಿ ಪೊಲೀಸರು ದಾಳಿ ಮಾಡಿದ್ದಾರೆ ಎಂದು ಕಟ್ಟಡ ಮಾಲೀಕ ಬೋರೇಗೌಡರ ಪರ ವಕೀಲ ಭರತ್ ಹೇಳಿಕೆ ನೀಡಿದ್ದಾರೆ. 

ದಾಳಿ ಬಗ್ಗೆ ಮೈಸೂರಿನಲ್ಲಿ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹೇಳಿಕೆ ನೀಡಿದ್ದು ಇದೊಂದು ಫಾಲೋ ಆಫ್ ಕೇಸ್. ಗುಜರಾತ್ ನಲ್ಲಿ ಓರ್ವ ಆರೋಪಿ ಸಿಕ್ಕಿದ್ದಾನೆ. ಆತನ ಸಂಬಂಧಿ ಈ ಗಣಪತ್ ಲಾಲ್. ಈತ ಇಲ್ಲಿ ಫಿನಾಯಿಲ್ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಅನುಮಾನ ಬಂದ ಹಿನ್ನಲೆ ಇಲ್ಲಿಯೂ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಮಾದಕ ವಸ್ತುಗಳು ಪತ್ತೆ ಆಗಿಲ್ಲ.‌ ನಮ್ಮ ಪೊಲೀಸರು NCB ಅಧಿಕಾರಿಗಳಿಗೆ ಸಹಕಾರ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

Delhi Police, along with NCB and Mysuru Police, conducted a raid at a factory in Hebbal Industrial Area suspecting illegal drug manufacturing. Mysuru Police Commissioner Seema Latkar clarified that no drugs were found during the inspection and termed it a follow-up investigation based on leads from Gujarat.