ಬ್ರೇಕಿಂಗ್ ನ್ಯೂಸ್
28-01-26 01:28 pm HK News Desk ದೇಶ - ವಿದೇಶ
Photo credits : AI PHOTO
ಮುಂಬೈ, ಜ.28 : ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ವಿಮಾನದಲ್ಲಿ ಅವರ ಜೊತೆಗಿದ್ದ ಐವರು ಕೂಡ ಕೊನೆಯುಸಿರೆಳೆದಿದ್ದಾರೆ. ಅಜಿತ್ ಪವಾರ್ ಅವರ ಕರ್ಮಭೂಮಿ, 1991ರಿಂದ ಸತತವಾಗಿ ಏಳು ಬಾರಿ ಗೆಲುವು ಸಾಧಿಸಿದ್ದ ತಮ್ಮ ನೆಚ್ಚಿನ ಪುಣೆ ಜಿಲ್ಲೆಯ ಬಾರಾಮತಿ ಕ್ಷೇತ್ರದಲ್ಲಿಯೇ ರಾಜಕೀಯ ಪಯಣ ಕೊನೆಯಾಗಿರುವುದು ದುರ್ದೈವ. ಬಾರಾಮತಿ ಕ್ಷೇತ್ರ ಎನ್ ಸಿಪಿ ಮತ್ತು ಅಜಿತ್ ಪವಾರ್ ಪಾಲಿಗೆ ಕರ್ಮಭೂಮಿಯೇ ಆಗಿತ್ತು. ಅಲ್ಲಿ ಅವರು ಸೋಲಿಲ್ಲದ ಸರದಾರನಾಗಿ ಗುರುತಿಸಿದ್ದರು.
ಭಾರತದ ರಾಜಕೀಯ ಚರಿತ್ರೆಯಲ್ಲಿ ವಿಮಾನ ಅಪಘಾತಗಳಲ್ಲಿ ಹಲವಾರು ರಾಜಕಾರಣಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಪ್ರಮುಖರ ಮಾಹಿತಿ ಇಲ್ಲಿದೆ.
ವಿಜಯ್ ರೂಪಾನಿ : ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಜೂನ್ 12, 2025 ರಂದು ಅಹಮದಾಬಾದ್ನಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ನಿಧನ. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿದ್ದು, ಅದರಲ್ಲಿ ರೂಪಾನಿ ಪ್ರಯಾಣಿಸುತ್ತಿದ್ದರು. ಈ ದುರಂತದಲ್ಲಿ ವಿಮಾನದಲ್ಲಿದ್ದ ಒಟ್ಟು 242 ಪ್ರಯಾಣಿಕರ ಪೈಕಿ 241 ಮಂದಿ ಸಾವನ್ನಪ್ಪಿದ್ದರು.
ದೋರ್ಜಿ ಖಂಡು : ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಅವರು ಏಪ್ರಿಲ್ 30, 2011 ರಂದು ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದರು. ಈಶಾನ್ಯ ರಾಜ್ಯದ ತವಾಂಗ್ನಿಂದ ಇಟಾನಗರಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪಶ್ಚಿಮ ಕಾಮೆಂಗ್ ಜಿಲ್ಲೆಯ ಪರ್ವತ ಪ್ರದೇಶದಲ್ಲಿ ಪತನಗೊಂಡಿದ್ದು, ದೋರ್ಜಿ ಖಂಡು ಸೇರಿದಂತೆ ಇನ್ನೂ ನಾಲ್ವರು ಸಾವನ್ನಪ್ಪಿದರು.
ವೈ.ಎಸ್. ರಾಜಶೇಖರ ರೆಡ್ಡಿ: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿ (ವೈ.ಎಸ್.ಆರ್) ಸೆಪ್ಟೆಂಬರ್ 2, 2009ರಂದು ತಿರುಪತಿ ಬಳಿಯ ದಟ್ಟ ಕಾಡಿನಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಅಂತ್ಯ ಕಂಡಿದ್ದರು. ಕೆಟ್ಟ ಹವಾಮಾನ ಕಾರಣದಿಂದಾಗಿ ಅವರ ಬೆಲ್ 430 ಹೆಲಿಕಾಪ್ಟರ್ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಪತನಗೊಂಡಿತ್ತು. ದುರಂತದಲ್ಲಿ ಹಾಲಿ ಮುಖ್ಯಮಂತ್ರಿಯಾಗಿದ್ದ ರೆಡ್ಡಿ ನಿಧನರಾಗಿದ್ದು ದೇಶವ್ಯಾಪಿ ಆಘಾತಕ್ಕೆ ಕಾರಣವಾಗಿತ್ತು.
ಓ.ಪಿ. ಜಿಂದಾಲ್ ಮತ್ತು ಸುರೇಂದರ್ ಸಿಂಗ್: 2005ರಲ್ಲಿ ಕೈಗಾರಿಕೋದ್ಯಮಿ ಹಾಗೂ ಹರಿಯಾಣದ ಸಚಿವರಾಗಿದ್ದ ಓಂ ಪ್ರಕಾಶ್ ಜಿಂದಾಲ್ ಮತ್ತು ಕೃಷಿ ಸಚಿವ ಸುರೇಂದರ್ ಸಿಂಗ್ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡಿದ್ದರು. ದೆಹಲಿಯಿಂದ ಚಂಡೀಗಢಕ್ಕೆ ತೆರಳುತ್ತಿದ್ದ ಅವರ ಹೆಲಿಕಾಪ್ಟರ್ ಉತ್ತರ ಪ್ರದೇಶದ ಸಹರಾನ್ಪುರ ಬಳಿ ಪತನಗೊಂಡಿತ್ತು.
ನಟಿ ಸೌಂದರ್ಯ : ದಕ್ಷಿಣ ಭಾರತದ ಖ್ಯಾತ ನಟಿ, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಸೌಂದರ್ಯ ಏಪ್ರಿಲ್ 17, 2004ರಂದು ಸಂಭವಿಸಿದ ವಿಮಾನ ಅಪಘಾತದಲ್ಲಿ ನಿಧನರಾದರು. ‘ಸೂರ್ಯವಂಶಂ’ ಚಿತ್ರದಿಂದ ಅಪಾರ ಜನಪ್ರಿಯತೆ ಗಳಿಸಿದ್ದ ಸೌಂದರ್ಯ ಅವರು, ಬೆಂಗಳೂರಿನಿಂದ ಕರೀಂನಗರಕ್ಕೆ ಚುನಾವಣಾ ಪ್ರಚಾರ ಸಲುವಾಗಿ ತಮ್ಮ ಸಹೋದರನೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು.
ಸಿಪ್ರಿಯನ್ ಸಂಗ್ಮಾ: 2004ರ ಸೆಪ್ಟೆಂಬರ್ 22ರಂದು ಮೇಘಾಲಯದ ಗ್ರಾಮೀಣಾಭಿವೃದ್ಧಿ ಸಚಿವ ಸಿಪ್ರಿಯನ್ ಸಂಗ್ಮಾ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಗುವಾಹಟಿಯಿಂದ ಶಿಲ್ಲಾಂಗ್ ಪ್ರಯಾಣಿಸುತ್ತಿದ್ದ ಪವನ್ ಹನ್ಸ್ ಹೆಲಿಕಾಪ್ಟರ್ ರಾಜ್ಯ ರಾಜಧಾನಿಯಿಂದ 20 ಕಿ.ಮೀ ದೂರದ ಬಾರಾಪಾನಿ ಸರೋವರದ ಬಳಿ ಪತನಗೊಂಡಿತ್ತು. ದುರಂತದಲ್ಲಿ ಸಂಗ್ಮಾ ಸೇರಿದಂತೆ ಒಟ್ಟು 10 ಮಂದಿ ಸಾವನ್ನಪ್ಪಿದ್ದರು.
ಜಿಎಂಸಿ ಬಾಲಯೋಗಿ: ಲೋಕಸಭಾ ಸ್ಪೀಕರ್ ಹಾಗೂ ತೆಲುಗು ದೇಶಂ ಪಕ್ಷದ ಹಿರಿಯ ನಾಯಕ ಜಿಎಂಸಿ ಬಾಲಯೋಗಿ ಅವರು ಮಾರ್ಚ್ 3, 2002ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಿಂದ ಹೊರಟ ಖಾಸಗಿ ಹೆಲಿಕಾಪ್ಟರ್ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕೈಕಲೂರು ಸಮೀಪದ ಕೆರೆಯಲ್ಲಿ ಪತನಗೊಂಡಿತ್ತು.
ಮಾಧವರಾವ್ ಸಿಂಧಿಯಾ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ನಾಗರಿಕ ವಿಮಾನಯಾನ ಸಚಿವ ಮಾಧವರಾವ್ ಸಿಂಧಿಯಾ ಅವರು ಸೆಪ್ಟೆಂಬರ್ 30, 2001ರಂದು ಸಂಭವಿಸಿದ ವಿಮಾನ ಅಪಘಾತದಲ್ಲಿ ನಿಧನರಾದರು. ಕಾನ್ಪುರದಲ್ಲಿ ನಡೆಯುತ್ತಿದ್ದ ರಾಜಕೀಯ ರ್ಯಾಲಿಗೆ ತೆರಳುತ್ತಿದ್ದ ವೇಳೆ, ಉತ್ತರ ಪ್ರದೇಶದ ಮಣಿಪುರಿ ಬಳಿ ಪ್ರತಿಕೂಲ ಹವಾಮಾನದ ಕಾರಣದಿಂದ 10 ಆಸನಗಳ ಖಾಸಗಿ ವಿಮಾನ ಪತನಗೊಂಡಿತ್ತು.
ಸಂಜಯ್ ಗಾಂಧಿ: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿ ಅವರು ಜೂನ್ 23, 1980ರಂದು ಸಂಭವಿಸಿದ ವಿಮಾನ ಅಪಘಾತದಲ್ಲಿ ನಿಧನರಾದರು. ದೆಹಲಿಯ ಸಫ್ದರ್ಜಂಗ್ ವಿಮಾನ ನಿಲ್ದಾಣದ ಬಳಿ, ದೆಹಲಿ ಫ್ಲೈಯಿಂಗ್ ಕ್ಲಬ್ ವಿಮಾನದಲ್ಲಿ ವೈಮಾನಿಕ ಸಾಹಸ ನಡೆಸುವ ವೇಳೆ ವಿಮಾನ ನಿಯಂತ್ರಣ ತಪ್ಪಿ ಪತನಗೊಂಡಿತ್ತು. ಅವರಿಗೆ ಆಗ ಕೇವಲ 33 ವರ್ಷವಾಗಿತ್ತು. ವಿಮಾನದ ಬಗ್ಗೆ ತುಂಬ ಕ್ರೇಜ್ ಇಟ್ಟುಕೊಂಡಿದ್ದರು.
Maharashtra Deputy Chief Minister Ajit Pawar died in a tragic plane crash in his stronghold Baramati. Over the years, several prominent Indian politicians—including Sanjay Gandhi, Madhavrao Scindia, Y.S. Rajasekhara Reddy, and others—have also lost their lives in fatal air accidents.
28-01-26 09:54 pm
HK News Desk
ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಜೂಜು, ಇಸ್ಪೀಟು ದಂ...
27-01-26 09:57 pm
ಮದುವೆಯಾದ ಎರಡೂವರೆ ತಿಂಗಳಿಗೆ ಬೇರೆ ಯುವಕನ ಹಿಂದೋಡಿದ...
27-01-26 09:34 pm
400 ಕೋಟಿ ದರೋಡೆ ; ನೋಟುಗಳ ಕಂತೆ ಗುಜರಾತ್ ರಾಜಕಾರಣಿ...
27-01-26 06:31 pm
15ಕ್ಕೂ ಹೆಚ್ಚು ಜನರನ್ನ ಮನಬಂದಂತೆ ಕಚ್ಚಿದ ಹುಚ್ಚು ನ...
27-01-26 04:50 pm
28-01-26 11:16 pm
HK News Desk
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
ಶಿಮ್ಲಾದಲ್ಲಿ ಹಿಮಪಾತ ; ರೀಲ್ಸ್ ಮಾಡಲು ಹೋಗಿದ್ದ ಹುಡ...
28-01-26 02:35 pm
ತಮ್ಮ ಕರ್ಮಭೂಮಿಯಲ್ಲೇ ಅಜಿತ್ ಪವಾರ್ ಕೊನೆಯುಸಿರು ; ವ...
28-01-26 01:28 pm
ಟ್ರಂಪ್ ಸುಂಕಾಸ್ತ್ರಕ್ಕೆ ಭಾರತದ ಬ್ರಹ್ಮಾಸ್ತ್ರ ; ಐರ...
28-01-26 11:22 am
27-01-26 10:50 pm
Mangalore Correspondent
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
ದೇಶಕ್ಕಾಗಿ ತನ್ನ ಕಾಲುಗಳನ್ನೇ ಕಳೆದುಕೊಂಡ ಯೋಧನಿಗೆ ಸ...
27-01-26 06:46 am
ಪ್ರವಾಸಿಗರನ್ನು ವಿಹಾರಕ್ಕೆ ಒಯ್ಯುತ್ತಿದ್ದ ದೋಣಿ ಸಮು...
26-01-26 05:05 pm
ರೌಡಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ; ಪೊಲೀಸರ ಕೈಗೆ...
24-01-26 11:23 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm