ಬ್ರೇಕಿಂಗ್ ನ್ಯೂಸ್
27-01-26 05:15 pm Mangalore Correspondent ಕ್ರೈಂ
ಮಂಗಳೂರು, ಜ.27 : ಆರ್ ಟಿಐ ಏಕ್ಟಿವಿಸ್ಟ್ ಫಾರ್ ಜಸ್ಟೀಸ್ ಎಂಬ ಸಂಸ್ಥೆಯು ಸಲ್ಲಿಸಿದ ಖಾಸಗಿ ದೂರಿಗೆ ಸಂಬಂಧಿಸಿದಂತೆ ಮೂಡುಬಿದ್ರೆಯ ಜೆಎಂಎಫ್ ನ್ಯಾಯಾಲಯವು ಕಿನ್ನಿಗೋಳಿಯ ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆ ಮತ್ತು ಅದರ ನಿರ್ದೇಶಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿದೆ.
ಮುಲ್ಕಿ ಕಿನ್ನಿಗೋಳಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕೆನರಾ ಲೈಟಿಂಗ್ಸ್ ಇಂಡಸ್ಟ್ರೀಸ್ ಸಂಸ್ಥೆ ಮತ್ತು ಅದರ ನಿರ್ದೇಶಕರಾದ ನೇಹಾ ಖರೆ, ಅರುಣ್ ಕುಮಾರ್ ಎ.ಎಸ್, ಗೌರವ್ ಖರೆ, ಅಜೀತ್ ಖರೆ, ಕಿರಣ್ ಖರೆ ಎಂಬವರು ಕೊಲ್ಕತಾ ಮಹಾನಗರ ಪಾಲಿಕೆ ವ್ಯಾಪ್ತಿಯ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಒಳಪಟ್ಟ ಮಂದಿರಗಳಿಗೆ ಸೌಂಡ್ಸ್, ಲೈಟಿಂಗ್ ಅಳವಡಿಸುವುದಕ್ಕೆ ಟೆಂಡರ್ ಪಡೆದಿದ್ದರು. 2018-19ರಲ್ಲಿ ಈ ಟೆಂಡರ್ ಪಡೆದಿದ್ದು, ಇದಕ್ಕಾಗಿ ಗುಲ್ಬರ್ಗಾ ವಿಭಾಗೀಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಹೆಸರಲ್ಲಿ ಲೈಟಿಂಗ್ ಮತ್ತು ಉಪಕರಣಗಳನ್ನು ಸರ್ಕಾರದಿಂದ ಪೂರೈಸಿದ್ದಾಗಿ ಪೋರ್ಜರಿ ದಾಖಲೆಗಳನ್ನು ನೀಡಿದ್ದರು. ಈ ಬಗ್ಗೆ ಆರ್ಟಿಐ ಏಕ್ಟಿವಿಸ್ಟ್ ಸಂಸ್ಥೆಯು ಮಾಹಿತಿಗಳನ್ನು ಸಂಗ್ರಹಿಸಿ ಮುಲ್ಕಿ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿ ಸ್ಥಾನದಲ್ಲಿ ಹಿರಿಯ ಅಧಿಕಾರಿಯೊಬ್ಬರನ್ನು ಕಾಣಿಸಿದ್ದರಿಂದ ದೂರು ಪಡೆದಿರಲಿಲ್ಲ.

ಹೀಗಾಗಿ ಮೂಡುಬಿದ್ರೆ ಜೆಎಂಎಫ್ ಕೋರ್ಟಿನಲ್ಲಿ ಖಾಸಗಿ ದೂರು ದಾಖಲಿಸಿದ್ದು, ಪೂರಕ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇದರಂತೆ, ವಾದ ಆಲಿಸಿದ ಕೋರ್ಟ್ ಮೇಲ್ನೋಟಕ್ಕೆ ತಪ್ಪುಗಳು ಕಂಡುಬಂದಿರುವುದಾಗಿ ಹೇಳಿದ್ದು, ಕ್ರಿಮಿನಲ್ ತನಿಖೆಗೆ ಒಪ್ಪಿಗೆ ನೀಡಿದೆ. ಆದರೆ ಐಎಎಸ್ ಅಧಿಕಾರಿಯ ವಿರುದ್ಧ ತೋರಿಸಲಾದ ಸಾಕ್ಷ್ಯ ಸಾಲದು ಎಂಬ ಕಾರಣಕ್ಕಾಗಿ ಅವರ ಮೇಲಿನ ತನಿಖೆಗೆ ಒಪ್ಪಿಗೆ ನೀಡಿಲ್ಲ.
ಸುಳ್ಳು ದಾಖಲೆಗಳನ್ನು ತೋರಿಸಿ ಕೋಲ್ಕತ್ತಾ ಮಹಾನಗರ ಪಾಲಿಕೆಯ ಪ್ರಾಧಿಕಾರದಿಂದ 3.96 ಕೋಟಿ ಮೊತ್ತದ ಟೆಂಡರ್ ಪಡೆದಿದ್ದಾಗಿ ಆರ್ಟಿಐ ಏಕ್ಟಿವಿಸ್ಟ್ ಸಂಸ್ಥೆ ಆರೋಪಿಸಿದೆ. ಪ್ರಕರಣದಲ್ಲಿ ಕೆನರಾ ಇಂಡಸ್ಟ್ರೀಸ್ ಸಂಸ್ಥೆಯ ನಿರ್ದೇಶಕರಿಗೆ ಸಮನ್ಸ್ ನೀಡಲು ಕೋರ್ಟ್ ಆದೇಶಿಸಿದ್ದು, ಮುಂದಿನ ವಿಚಾರಣೆಯನ್ನು 2026ರ ಮಾರ್ಚ್ 10ರಂದು ನಡೆಸಲಿದೆ. ದೂರುದಾರರ ಪರವಾಗಿ ನವೀನ್ ಜಿ. ಮತ್ತು ಕುಮಾರ್ ಸತ್ಯನಾರಾಯಣ ವಾದಿಸಿದ್ದರು.
The Moodbidri JMFC court has permitted a criminal investigation against Canara Lighting Industries and its directors over allegations of securing a ₹3.96 crore Kolkata Municipal Corporation tender using forged documents in the name of an IAS officer. However, the court declined approval to probe the IAS officer citing insufficient evidence and issued summons to the company’s directors, with the next hearing set for March 10, 2026.
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
10-05-26 12:26 pm
HK News Staffer
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
ಬಂಗಾಳದಲ್ಲಿ ಕೇಸರಿ ಯುಗಾರಂಭ ; ಮೊದಲ ಬಿಜೆಪಿ ಸಿಎಂ ಆ...
08-05-26 06:45 pm
ದ್ರಾವಿಡರ ನಾಡಲ್ಲಿ ದಳಪತಿ ವಿಜಯ್ ಸರ್ಕಾರ್ ! ಮ್ಯಾಜಿ...
08-05-26 06:38 pm
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am