ಬ್ರೇಕಿಂಗ್ ನ್ಯೂಸ್
20-05-22 07:24 pm Source: Vijayakarnataka ಡಿಜಿಟಲ್ ಟೆಕ್
ಅತ್ಯುತ್ತಮ ಬಜೆಟ್ ಸ್ಮಾರ್ಟ್ಫೋನ್ಗಳ ತಯಾರಿಕೆಗೆ ಹೆಸರಾಗಿರುವ ಜನಪ್ರಿಯ Infinix ಕಂಪೆನಿ ತನ್ನ ವಿನೂತನ Infinix Note 12 ಸರಣಿಯ ಸ್ಮಾರ್ಟ್ಫೋನ್ಗಳನ್ನು ದೇಶದಲ್ಲಿಂದು ಪರಿಚಯಿಸಿದೆ. Infinix Note 12 ಸರಣಿಯಲ್ಲಿ Infinix Note 12 ಮತ್ತು Note 12 Turbo ಎಂಬ ಎರಡು ಸ್ಮಾರ್ಟ್ಫೋನ್ಗಳು AMOLED ಸ್ಕ್ರೀನ್, MediaTek Helio G ಚಿಪ್ಸೆಟ್, ಟ್ರಿಪಲ್ ಪ್ರೈಮರಿ ಕ್ಯಾಮೆರಾ ಮತ್ತು 33W ಫಾಸ್ಟ್ ಚಾರ್ಜಿಂಗ್ ಬೆಂಬಲದಂತಹ ವೈಶಿಷ್ಟ್ಯಗಳನ್ನು ಹೊತ್ತು ಅತ್ಯಂತ ಬಜೆಟ್ ಬೆಲೆಯಲ್ಲಿ ಬಿಡುಗಡೆಗೊಂಡಿವೆ. ದೇಶದ ಬಜೆಟ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಛಾಪು ಮೂಡಿಸಲು ಬಂದಿರುವ ನೂತನ Infinix Note 12 ಮತ್ತು Note 12 Turbo ಎರಡೂ ಸ್ಮಾರ್ಟ್ಫೋನ್ಗಳ ವೈಶಿಷ್ಟ್ಯಗಳು ಯಾವುವು ಮತ್ತು ಸಂಪೂರ್ಣ ಬೆಲೆಗಳು ಎಷ್ಟು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.
Infinix Note 12 ವೈಶಿಷ್ಟ್ಯಗಳು
ನೂತನ Infinix Note 12 ಸ್ಮಾರ್ಟ್ಫೋನಿನಲ್ಲಿ 6.7-ಇಂಚಿನ HD+ ರೆಸಲ್ಯೂಶನ್ AMOLED ಫುಲ್ ಡಿಸ್ಪ್ಲೇಯನ್ನು ಅಳವಡಿಸಲಾಗಿದ್ದು, ಈ ಡಿಸ್ಪ್ಲೇಯು 60Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಮ್ಲಿಂಗ್ ರೇಟ್ ಬೆಂಬಲವನ್ನು ಹೊಂದಿದೆ. ಆಕ್ಟಾ-ಕೋರ್ 2.0GHz MediaTek Helio G88 ಪ್ರೊಸೆಸರ್, 50MP ಪ್ರೈಮರಿ ಕ್ಯಾಮೆರಾ, 2MP ಡೆಪ್ತ್-ಸೆನ್ಸಿಂಗ್ ಸ್ನ್ಯಾಪರ್ ಮತ್ತು AI ಲೆನ್ಸ್ ಅನ್ನು ಒಳಗೊಂಡಿರುವ ಟ್ರಿಪಲ್ ಕ್ಯಾಮೆರಾ ಸೆಟಪ್, 16MP ಸೆಲ್ಫಿ ಕ್ಯಾಮೆರಾ, ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸಂವೇದಕ, 33W ಸ್ಪೀಡ್ ಸಾಮರ್ಥ್ಯದ 5,000 mAh ಬ್ಯಾಟರಿ, DTS ಆಡಿಯೊದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 11-ಆಧಾರಿತ XOS 10 ಆಪರೇಟಿಂಗ್ ಸಿಸ್ಟಮ್ನಲ್ಲಿ ಕೆಲಸ ಮಾಡಲಿದೆ ಎಂದು ಕಂಪೆನಿ ತಿಳಿಸಿದೆ.
Infinix Note 12 Turbo ವೈಶಿಷ್ಟ್ಯಗಳು
Infinix Note 12 ಸರಣಿಯಲ್ಲಿ ಪ್ರೊ ಮಾದರಿ ಸ್ಮಾರ್ಟ್ಫೋನ್ ಆಗಿರುವ Infinix Note 12 Turbo ಕೂಡ 60Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಮ್ಲಿಂಗ್ ರೇಟ್ ಸಾಮರ್ಥ್ಯದ 6.7-ಇಂಚಿನ HD+ ರೆಸಲ್ಯೂಶನ್ AMOLED ಫುಲ್ ಡಿಸ್ಪ್ಲೇಯನ್ನು ಹೊಂದಿದೆ. ಆದರೆ, ಪ್ರೊ ಮಾದರಿಯ Infinix Note 12 Turbo ಸ್ಮಾರ್ಟ್ಫೋನಿನಲ್ಲಿ ಗೇಮಿಂಗ್-ಕೇಂದ್ರಿತ MediaTek Helio G96 ಪ್ರೊಸೆಸರ್ ಮತ್ತು 10-ಪದರದ ಗ್ರ್ಯಾಫೀನ್ ಕೂಲಿಂಗ್ ವ್ಯವಸ್ಥೆ ಅನ್ನು ಅಳವಡಿಸಲಾಗಿದೆ. 8GB RAM ಮತ್ತು 256GB ಆಂತರಿಕ ಮೆಮೊರಿಯ ಒಂದೇ ಮಾದರಿಯಲ್ಲಿ Infinix Note 12 Turbo ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ಇನ್ನುಳಿದಂತೆ Infinix Note 12 ಸ್ಮಾರ್ಟ್ಫೋನ್ ಹೊಂದಿರುವ ಕ್ಯಾಮೆರಾ, ಬ್ಯಾಟರಿ ಮತ್ತು ಭದ್ರತಾ ವೈಶಿಷ್ಟ್ಯಗಳೆಲ್ಲವೂ ಈ Infinix Note 12 Turbo ಫೋನಿನಲ್ಲಿಯೂ ಇವೆ.
Infinix Note 12 ಸರಣಿ ಫೋನ್ಗಳ ಬೆಲೆಗಳು
ಭಾರತದಲ್ಲಿ Infinix Note 12 ಸರಣಿ ಸ್ಮಾರ್ಟ್ಫೋನ್ ಬೆಲೆಗಳು 11,999 ರೂ.ಗಳಿಂದ ಆರಂಭವಾಗಿವೆ. 4GB / 64GB ಸಾಮರ್ಥ್ಯದ Infinix Note 12 ಸ್ಮಾರ್ಟ್ಫೋನ್ 11,999 ರೂ.ಗಳ ಬೆಲೆಯಲ್ಲಿ ಬಿಡುಗಡೆಯಾಗಿದ್ದರೆ, 6GB / 128GB ಸಾಮರ್ಥ್ಯದ ಫೋನ್ ಬೆಲೆ 12,999 ರೂ.ಗಳಾಗಿವೆ. ಇನ್ನು ಒಂದೇ ರೂಪಾಂತರದಲ್ಲಿ ಬಿಡುಗಡೆಯಾಗಿರುವ Infinix Note 12 Turbo ಸ್ಮಾರ್ಟ್ಫೋನ್ 14,999 ರೂ.ಗಳಿಗೆ ಬಿಡುಗಡೆಯಾಗಿದೆ.
Infinix Note 12 Series Launched With Amoled Display, 33w Fast Charging.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm