ಬ್ರೇಕಿಂಗ್ ನ್ಯೂಸ್
06-05-22 08:13 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಅತ್ಯಂತ ವಿಶ್ವಾಸಾರ್ಹ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ Samsung ತನ್ನ ಅತ್ಯಂತ ಶಕ್ತಿಯುತ ಪ್ರೀಮಿಯಂ Samsung Jet™cordless stick ವ್ಯಾಕ್ಯೂಮ್ ಕ್ಲೀನರ್ ಸಾಧನಗಳನ್ನು ದೇಶದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಸುಲಭ ನಿಯಂತ್ರಣ ಮತ್ತು ಚಲನೆಯೊಂದಿಗೆ ನಿಮ್ಮ ಮನೆಯನ್ನು ಸಲೀಸಾಗಿ ಸ್ವಚ್ಛಗೊಳಿಸುವಂತಹ ಹಾಗೂ ದೀರ್ಘ ಶುಚಿಗೊಳಿಸುವ ಸಾಮರ್ಥ್ಯದಲ್ಲಿ Samsung Jet™cordless stick ವ್ಯಾಕ್ಯೂಮ್ ಕ್ಲೀನರ್ ಸಾಧನಗಳನ್ನು ಬಿಡುಗಡೆ ಮಾಡಿರುವುದಾಗಿ ಕಂಪೆನಿ ಹೇಳಿಕೊಂಡಿದ್ದು, ಇದು ಶೇ.99.999ರಷ್ಟು ಸೂಕ್ಷ್ಮ ಕಣಗಳು ಮತ್ತು ಅಲರ್ಜೆನ್ ಅನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಸದೃಢ ಡಿಜಿಟಲ್ ಇನ್ವರ್ಟರ್ ಮೋಟಾರ್ನಲ್ಲಿ ನಡೆಯುವ Samsung Jet™cordless stick ವ್ಯಾಕ್ಯೂಮ್ ಕ್ಲೀನರ್ ತನ್ನ ಅಲ್ಟ್ರಾಸಾನಿಕ್ ವೆಲ್ಡೆಡ್ ಏರ್ಫಾಯಿಲ್ ಬ್ಲೇಡ್ಗಳು ಉನ್ನತ ಶಕ್ತಿಯ ದಕ್ಷತೆ ನೀಡುತ್ತದೆ, ಜೆಟ್ 70, ಜೆಟ್75 ಮತ್ತು ಜೆಟ್90 ಸ್ಯಾಮ್ಸಂಗ್ ವ್ಯಾಕ್ಯೂಮ್ ಕ್ಲೀನರ್ಗಳು ಉನ್ನತ ವೇಗ ಮತ್ತು ಉನ್ನತೀಕರಿಸಿದ ಸ್ವಚ್ಛತೆಯನ್ನು ಗ್ರಾಹಕರಿಗೆ ಒದಗಿಸುತ್ತದೆ ಎಂದು ಕಂಪೆನಿ ಮಾಹಿತಿ ನೀಡಿದೆ.
“ಸಾಂಕ್ರಾಮಿಕ ನಂತರದ ಯುಗದಲ್ಲಿ ಸುರಕ್ಷತೆ, ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಗ್ರಾಹಕರು ಚುರುಕಿನ ಮತ್ತು ದಕ್ಷ ಗೃಹ ಸ್ವಚ್ಛತೆಯ ಪರಿಹಾರಗಳನ್ನು ನಿರೀಕ್ಷಿಸುತ್ತಿದ್ದಾರೆ. ನಮ್ಮ ಹೊಚ್ಚಹೊಸ ಸ್ಯಾಮ್ಸಂಗ್ ಜೆಟ್ ಕಾರ್ಡ್ಲೆಸ್ ಸ್ಟಿಕ್ ವ್ಯಾಕ್ಯೂಮ್ ಕ್ಲೀನರ್ಗಳು ನಮ್ಮ ಗ್ರಾಹಕರಿಗೆ ತಡೆರಹಿತ ಸ್ವಚ್ಛತೆಯ ಅನುಭವಕ್ಕೆ ಈ ವರ್ಗದ ಅತ್ಯುತ್ತಮ ವಿಶೇಷತೆಗಳ ಮೂಲಕ ಸರಿಸಾಟಿ ಇರದ ಅನುಕೂಲ ನೀಡುತ್ತವೆ. ಮಲ್ಟಿ-ಲೇಯರ್ಡ್ ಫಿಲ್ಟರೇಷನ್ ಸಿಸ್ಟಂನಂತಹ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಈ ವ್ಯಾಕ್ಯೂಮ್ ಕ್ಲೀನರ್ಗಳು ಶೇ.99.999ರಷ್ಟು ಸೂಕ್ಷ್ಮ ಧೂಳು ಮತ್ತು ಅಲರ್ಜೆನ್ಗಳನ್ನು ಹಿಡಿಯುತ್ತವೆ. ಸ್ಯಾಮ್ಸಂಗ್ ಜೆಟ್ನ ಗಮನಾರ್ಹ ಶಕ್ತಿಯುತ ಹೀರಿಕೊಳ್ಳುವ ಸಾಮಥ್ರ್ಯಗಳ ನಡುವೆಯೂ ಅದರ ಬಾಡಿಯನ್ನು ಹಗುರವಾಗಿ ವಿನ್ಯಾಸಗೊಳಿಸಲಾಗಿದ್ದು ನಮ್ಮಗ್ರಾಹಕರಿಗೆ ಜೆಟ್ ಸುಲಭ ಬಳಕೆಯ ವಿಶೇಷತೆಗಳನ್ನು ಅನುಕೂಲಕರವಾಗಿ ಬಳಸಲು ಅವಕಾಶ ನೀಡುತ್ತವೆ” ಎಂದು ಸ್ಯಾಮ್ಸಂಗ್ ಇಂಡಿಯಾದ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಬಿಸಿನೆಸ್ನ ಹಿರಿಯ ಉಪಾಧ್ಯಕ್ಷ ಮೋಹನ್ದೀಪ್ ಸಿಂಗ್ ಅವರು ಹೇಳಿದ್ದಾರೆ.
Samsung Jet™cordless stick ವ್ಯಾಕ್ಯೂಮ್ ಕ್ಲೀನರ್ಗಳು ಅತ್ಯಂತ ದಕ್ಷ ಮೋಟಾರೈಸ್ಡ್ ಬ್ರಷ್ಗಳೊಂದಿಗೆ ಸನ್ನದ್ಧವಾಗಿದ್ದು, ಇದು ವಿವಿಧ ಗ್ರಾಹಕರ ಜೀವನಶೈಲಿಗಳು, ಸ್ವಚ್ಛತೆಯ ಅಭ್ಯಾಸಗಳು ಮತ್ತು ನೆಲದ ಬಗೆಗಳಿಗೆ ಹೊಂದುವ ವೈವಿಧ್ಯಮಯ ಸ್ವಚ್ಛತೆಯ ಪರಿಹಾರಗಳನ್ನು ನೀಡುತ್ತದೆ. ಸಾಫ್ಟ್ ಆಕ್ಷನ್ ಬ್ರಷ್ ಕಠಿಣ ನೆಲದ ಮೇಲಿನ ಸೂಕ್ಷ್ಮ ಧೂಳು ಸ್ವಚ್ಛಗೊಳಿಸಲು ಗರಿಷ್ಠ ಪರಿಹಾರ ನೀಡುತ್ತದೆ. ಟರ್ಬೊ ಆಕ್ಷನ್ ಬ್ರಷ್ ಕಾರ್ಪೆಟ್ಗಳು ಮತ್ತು ರಗ್ಗಳನ್ನು ನಿಮಿಷಕ್ಕೆ 3,750 ಬಾರಿ ಸುತ್ತುವ ಮೂಲಕ ಸ್ವಚ್ಛಗೊಳಿಸುತ್ತದೆ ಮತ್ತು ಅದರ 180 ಡಿಗ್ರಿ ಸ್ವಿವೆಲ್ ಹೆಡ್ ನಿಮಗೆ ಸುಲಭವಾಗಿ ದಿಕ್ಕು ಬದಲಿಸಲು ಮತ್ತು ಪ್ರತಿ ಮೂಲೆಯನ್ನೂ ಸ್ವಚ್ಛಗೊಳಿಸಲು ಅವಕಾಶ ನೀಡುತ್ತದೆ. ಮಿನಿ ಟರ್ಬೊ ಬ್ರಷ್ ಧೂಳಿನ ಕಣಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಸೋಫಾಗಳು, ಹಾಸಿಗೆಗಳು ಮತ್ತು ಮ್ಯಾಟ್ರೆಸ್ಗಳ ಮೇಲೆ ಧೂಳನ್ನು ಸ್ವಚ್ಛಗೊಳಿಸುತ್ತದೆ. ಸ್ಪಿನ್ನಿಂಗ್ ಸ್ವೀಪರ್ ವಿಲೇವಾರಿ ಮಾಡಬಲ್ಲ ತೇವದ ಬಟ್ಟೆಯೊಂದಿಗೆ ಬಂದಿದ್ದು ನಿಮಗೆ 80 ನಿಮಿಷಗಳವರೆಗೆ ಸ್ವಚ್ಛಗೊಳಿಸಲು ಅವಕಾಶ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.
ಪರಿಸರ ಸ್ನೇಹಿ ಕಾಗದ ಮತ್ತು ಜೈವಿಕ ಆಧರಿತ ಪ್ಲಾಸ್ಟಿಕ್ ಪ್ಯಾಕೇಜಿಂಜ್ನೊಂದಿಗೆ ಬಿಡುಗಡೆಗೊಂಡಿರುವ ಹೊಚ್ಚಹೊಸ ಶ್ರೇಣಿಯ Samsung Jet™cordless stick ವ್ಯಾಕ್ಯೂಮ್ ಕ್ಲೀನರ್ ಸಾಧನಗಳು Jet 70, Jet 75 and Jet 90 ಮೂರು ಮಾದರಿಗಳಲ್ಲಿ ಲಭ್ಯವಿದ್ದು, 36,990 ರೂ.ಗಳಿಂದ 52,990 ರೂ.ಬೆಲೆಗಳಲ್ಲಿ ಬಿಡುಗಡೆಗೊಂಡಿವೆ. Samsung Jet™cordless stick Jet 70, Jet 75 and Jet 90 ಈ ಎಲ್ಲಾ ಮೂರು ಮಾದರಿಗಳು Samsung ಕಂಪೆನಿಯ ಅಧಿಕೃತ ಆನ್ಲೈನ್ ಸ್ಟೋರ್ ಸ್ಯಾಮ್ಸಂಗ್ ಶಾಪ್ ಹಾಗೂ ಫ್ಲಿಪ್ಕಾರ್ಟ್ನಲ್ಲಿ ಮೇ 04, 2022 ರಿಂದ ಖರೀದಿಗೆ ಲಭ್ಯವಿರುಲಿವೆ. ಮೇ 04 ಮತ್ತು ಮೇ 09, 2022ರ ನಡುವಿನ ಸೀಮಿತ ಅವಧಿಗೆ Samsung Jet™cordless stick ವ್ಯಾಕ್ಯೂಮ್ ಕ್ಲೀನರ್ಗಳನ್ನು ಖರೀದಿವವರು 12 ತಿಂಗಳವರೆಗೆ ಕೇವಲ 2,799 ರೂ.ಗಳಿಂದ ನೋ ಕಾಸ್ಟ್ ಇಎಂಐ ಲಾಭಗಳನ್ನು ಪಡೆಯಬಹುದು. ಅಲ್ಲದೇ, ಗ್ರಾಹಕರು Samsung Jet™cordless stick ವ್ಯಾಕ್ಯೂಮ್ ಕ್ಲೀನರ್ಗಳ ಮೇಲೆ ಒಂದು ವರ್ಷ ವಾರೆಂಟಿ ಪಡೆಯುತ್ತಾರೆ ಎಂದು Samsung ಕಂಪೆನಿ ತಿಳಿಸಿದೆ.
Samsung Launches High Performance Premium Jet Cordless Stick Vacuum Cleaners In India.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am