ಬ್ರೇಕಿಂಗ್ ನ್ಯೂಸ್
04-05-22 08:14 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ OnePlus Nord CE 2 Lite 5G ಮತ್ತು Nord Buds ಸಾಧನಗಳ ಜೊತೆಗೆ ಇತ್ತಿಚಿಗಷ್ಟೇ ಬಿಡುಗಡೆಯಾಗಿರುವ OnePlus 10R 5G ಸ್ಮಾರ್ಟ್ಫೋನ್ ದೇಶದಲ್ಲಿಂದು ಮಾರಾಟಕ್ಕೆ ಬಂದಿದೆ. ಮೇ 4 ರಂದು, ಅಂದರೆ ಇಂದು ಮಧ್ಯಾಹ್ನ 12 ಗಂಟೆಯಿಂದಲೇ OnePlus 10R 5G ಸ್ಮಾರ್ಟ್ಫೋನ್ ಅನ್ನು ಮಾರಾಟಕ್ಕೆ ತರಲಾಗಿದ್ದು, ಜನಪ್ರಿಯ ಇ-ಕಾಮರ್ಸ್ ತಾಣ Amazon, OnePlus ಹಾಗೂ OnePlus ಎಕ್ಸ್ಕ್ಲೂಸಿವ್ ಸ್ಟೋರ್ಗಳು ಮತ್ತು ರಿಲಯನ್ಸ್ ಡಿಜಿಟಲ್ ಸ್ಟೋರ್ಗಳಲ್ಲಿ ಹೊಸ OnePlus 10R 5G ಸ್ಮಾರ್ಟ್ಫೋನ್ ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ. ಇನ್ನು OnePlus 10R 5G ಸ್ಮಾರ್ಟ್ಫೋನಿನ ಬಿಡುಗಡೆ ಕೊಡುಗೆಗಳಾಗಿ, OnePlus 10R 5G ಖರೀದಿದಾರರು ICICI ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 2,000 ಇನ್ಸ್ಟಂಟ್ ರಿಯಾಯಿತಿ, OnePlus.in, Amazon India ಮತ್ತು OnePlus ಸ್ಟೋರ್ ಅಪ್ಲಿಕೇಶನ್ನಲ್ಲಿ 2,000 ಹೆಚ್ಚುವರಿ ವಿನಿಮಯ ಬೋನಸ್ ಹಾಗೂ OnePlus 10R 5G ಸ್ಮಾರ್ಟ್ಫೋನ್ ಖರೀದಿಸಿದ ನಂತರ ಜಿಯೋ ಪ್ರಿಪೇಯ್ಡ್ ಪ್ಲಯಾನ್ ಚಂದಾದಾರರು 7,200 ರೂ. ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು ಎಂದು ಕಂಪೆನಿ ಮಾಹಿತಿ ನೀಡಿದೆ..
ದೇಶದಲ್ಲಿ OnePlus 10R 5G ಬೆಲೆಗಳು 38,999 ರೂ.ಗಳಿಂದ ಆರಂಭವಾಗಿವೆ. 80W SuperVOOC ಚಾರ್ಜಿಂಗ್ನೊಂದಿಗೆ ಬರುವ 8GB RAM + 128GB ಸ್ಟೋರೇಜ್ ರೂಪಾಂತರದ ಫೋನ್ ಬೆಲೆ 38,999 ರೂ.ಗಳಾದರೆ, 80W SuperVOOC ಚಾರ್ಜಿಂಗ್ ಬೆಲೆಯೊಂದಿಗೆ 12GB RAM + 256GB ರೂಪಾಂತರದ ಫೋನ್ನ್ ಬೆಲೆ ರೂ. 42,999 ರೂ.ಗಳಾಗಿವೆ. ಇವುಗಳಲ್ಲದೇ, 150W SuperVOOC ವೇಗದ ಚಾರ್ಜಿಂಗ್ ಅನ್ನು ಒಳಗೊಂಡಿರುವ OnePlus 10R 5G ಸ್ಮಾರ್ಟ್ಫೋನ್ ಒಂದೇ 12GB RAM + 256GB ರೂಪಾಂತರದಲ್ಲಿ 43,999 ರೂ.ಗಳಲ್ಲಿ ಬಿಡುಗಡೆಯಾಗಿದೆ. 80W ಚಾರ್ಜಿಂಗ್ನೊಂದಿಗೆ OnePlus 10R 5G ಮಾದರಿಗಳು ಫಾರೆಸ್ಟ್ ಗ್ರೀನ್ ಮತ್ತು ಸಿಯೆರಾ ಬ್ಲಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರದ್ದರೆ, 150W ಚಾರ್ಜಿಂಗ್ ಹೊಂದಿರುವ ಫೋನ್ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿರುತ್ತದೆ. 80W SuperVOOC ಚಾರ್ಜಿಂಗ್, ಮೀಡಿಯಾ ಟೆಕ್ ಡೈಮೆನ್ಸಿಟಿ 8100-ಮ್ಯಾಕ್ಸ್ SoC ಪ್ರೊಸೆಸರ್, 50-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 120Hz ಸಾಮರ್ಥ್ಯದ ಡಿಸ್ಪ್ಲೇ ಹೊಂದಿರುವ ಸಾಮರ್ಥ್ಯದಲ್ಲಿ ಬಿಡುಗಡೆಗೊಂಡಿರುವ OnePlus 10R 5G ಸ್ಮಾರ್ಟ್ಫೋನಿನ ಸಂಪೂರ್ಣ ವೈಶಿಷ್ಟ್ಯಗಳು ಈ ಕೆಳಕಂಡಂತಿವೆ.
ನೂತನ OnePlus 10R 5G ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು ಯಾವುವು?
ನೂತನ OnePlus 10R 5G ಸ್ಮಾರ್ಟ್ಫೋನಿನಲ್ಲಿ 20:9 ಆಕಾರ ಅನುಪಾತದೊಂದಿಗೆ 6.7-ಇಂಚಿನ ಫುಲ್ HD+ (1,080x2,412 ಪಿಕ್ಸೆಲ್ಗಳು) AMOLED ಡಿಸ್ಪ್ಲೇಯನ್ನು ತರಲಾಗಿದೆ. ಇದರ ಪ್ರದರ್ಶನವು 120Hz ಡೈನಾಮಿಕ್ ರಿಫ್ರೆಶ್ ರೇಟ್ ಮತ್ತು 720Hz ಟಚ್ ರೆಸ್ಪಾನ್ಸ್ ರೇಟ್ ಸಾಮರ್ಥ್ಯಗಳಲ್ಲಿದ್ದು, ಡಿಸ್ಪ್ಲೇಯ ರಕ್ಷಣೆಗಾಗಿ 2.5D ಕರ್ವ್ಡ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಅಳವಡಿಸಲಾಗಿದೆ. ಛಾಯಾಗ್ರಹಣಕ್ಕಾಗಿ, OnePlus 10R 5G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಅನ್ನು ಬೆಂಬಲಿಸುವ 50-ಮೆಗಾಪಿಕ್ಸೆಲ್ ಸೋನಿ IMX766 ಪ್ರಾಥಮಿಕ ಸಂವೇದಕ ಹಾಗೂ 8-ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾ-ವೈಡ್ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ಮ್ಯಾಕ್ರೋ ಶೂಟರ್ ಕ್ಯಾಮೆರಾಗಳನ್ನು ಹೊಂದಿದೆ. ಇನ್ನು ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಸಾಮರ್ಥ್ಯದ ಸ್ಯಾಮ್ಸಂಗ್ ISOCELL S5K3P9 ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗೆ EIS (Electronic image stabilization) ಬೆಂಬಲವನ್ನು ಸಹ ಹೊಂದಿದೆ.
OnePlus 10R 5G ಸ್ಮಾರ್ಟ್ಫೋನಿನಲ್ಲಿ 12GB LPDDR5 RAM ಜೊತೆ ಜೋಡಿಯಾಗಿರುವ MediaTek Dimensity 8100-Max ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. OnePlus ಕಂಪೆನಿ ಹೇಳುವಂತೆ, ಈ MediaTek Dimensity 8100-Max ಪ್ರೊಸೆಸರ್ 11 ಪ್ರತಿಶತ ಉತ್ತಮ ಮಲ್ಟಿ-ಕೋರ್ ಕಾರ್ಯಕ್ಷಮತೆ, 20 ಪ್ರತಿಶತ ಸುಧಾರಿತ GPU ಕಾರ್ಯಕ್ಷಮತೆ, 25 ಪ್ರತಿಶತ ಸುಧಾರಿತ ವಿದ್ಯುತ್ ದಕ್ಷತೆ ಮತ್ತು 80 ಪ್ರತಿಶತ ಉತ್ತಮ AI ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಚಿಪ್ಸೆಟ್ ಅನ್ನು 3D ಪ್ಯಾಸಿವ್ ಕೂಲಿಂಗ್ ತಂತ್ರಜ್ಞಾನದೊಂದಿಗೆ ಜೋಡಿಸಲಾಗಿದ್ದು, ಇದು ತಾಪಮಾನವನ್ನು ನಿಯಂತ್ರಣದಲ್ಲಿಡಲು 4,100mm ಚದರ ವೇಪರ್ ಚೇಂಬರ್ ಅನ್ನು ಬಳಸುತ್ತಎಂದು ಕಂಪೆನಿ ತಿಳಿಸಿದೆ. ಇಷ್ಡೇ ಅಲ್ಲದೇ, ಹೈಪರ್ಬೂಸ್ಟ್ ಗೇಮಿಂಗ್ ಎಂಜಿನ್ ಮತ್ತು ಜನರಲ್ ಪರ್ಫಾರ್ಮೆನ್ಸ್ ಅಡಾಪ್ಟರ್ (ಜಿಪಿಎ) ಫ್ರೇಮ್ ಸ್ಟೆಬಿಲೈಸರ್ ಹೊಂದಿರುವ ಈ ಪ್ರೊಸೆಸರ್ ಸ್ಮಾರ್ಟ್ಫೋನಿನಲ್ಲಿ ಸುಗಮ ಗೇಮಿಂಗ್ ಕಾರ್ಯಕ್ಷಮತೆಯನ್ನು ಯನ್ನು ನೀಡಲಿದೆ ಎಂದು OnePlus ಕಂಪೆನಿ ಹೇಳಿಕೊಂಡಿದೆ.
ನೂತನ OnePlus 10R 5G ಸ್ಮಾರ್ಟ್ಫೋನ್ 256GB ವರೆಗಿನ UFS 3.1 ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. OnePlus 10R 5G ಫೋನಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಗಳಿವೆ ಸೇರಿವೆ. ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕದೊಂದಿಗೆ ಬಂದಿರುವ ಈ ಸ್ಮಾರ್ಟ್ಫೋನ್ನಲ್ಲಿರುವ ಇತರ ಸಂವೇದಕಗಳಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಸಾಮೀಪ್ಯ ಸಂವೇದಕಗಳು ಸೇರಿವೆ. ಈ ನೂತನ OnePlus 10R 5G ಸ್ಮಾರ್ಟ್ಫೋನಿನ ವಿಶೇಷ ಆವೃತ್ತಿಯ ಫೋನ್ 4,500mAh ಬ್ಯಾಟರಿಯೊಂದಿಗೆ 150W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಆದರೆ, 80W SuperVOOC ವೇಗದ ಚಾರ್ಜಿಂಗ್ ಹೊಂದಿರುವ ಫೋನ್ಗಳು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿವೆ. ಈ ಮೂರು ಫೋನ್ಗಳು ಡ್ಯುಯಲ್ ಸ್ಟಿರಿಯೊ ಸ್ಪೀಕರ್ಗಳು ಮತ್ತು ಶಬ್ದ ರದ್ದತಿ ಬೆಂಬಲವನ್ನು ಒಳಗೊಂಡಿರುವುದನ್ನು ನಾವು ಗಮನಿಸಬಹುದು.
Oneplus 10r 5g First Sale In India Discounts And Offers Details.
17-03-25 11:54 am
Bangalore Correspondent
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
17-03-25 11:02 pm
Udupi Correspondent
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
Mangalore, Chakravarthy Sulibele, FIR: ಅನ್ಯಧರ...
17-03-25 04:27 pm
Mangalore Accident, Harekala, Death: ಹರೇಕಳದಲ್...
17-03-25 11:29 am
UT Khader, Mangalore, Tulu Academy: ತುಳು ಕಲಿತ...
16-03-25 10:55 pm
17-03-25 07:51 pm
Mangalore Correspondent
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm