ಬ್ರೇಕಿಂಗ್ ನ್ಯೂಸ್
27-04-22 08:30 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಮೊಬೈಲ್ ಮಾರುಕಟ್ಟೆಗೆ ಇಂದು ಜನಪ್ರಿಯ ಸ್ಮಾರ್ಟ್ಪೋನ್ ಬ್ರ್ಯಾಂಡ್ 'ನೋಕಿಯಾ'ದ ವಿನೂತನ 'Nokia G21' ಸ್ಮಾರ್ಟ್ಪೋನ್ ಸದ್ದಿಲ್ಲದಂತೆ ಎಂಟ್ರಿ ನೀಡಿದೆ. ಕಳೆದ ಫೆಬ್ರವರಿಯಲ್ಲಿ ರಷ್ಯಾದಲ್ಲಿ ಮೊದಲು ಬಿಡುಗಡೆ ಮಾಡಲಾಗಿದ್ದ ಅದೇ ಮಾದರಿಯಲ್ಲಿ Nokia G21 ದೇಶದಲ್ಲಿಂದು ಸ್ಮಾರ್ಟ್ಫೋನನ್ನು ಹೆಚ್ಎಂಡಿ ಗ್ಲೋಬಲ್ ಸಂಸ್ಥೆಯು ಪರಿಚಯಿಸಿದ್ದು, 5050mAh ಬ್ಯಾಟರಿ ಸಾಮರ್ಥ್ಯ, ಟ್ರಿಪಲ್ ಹಿಂಬದಿಯ ಕ್ಯಾಮೆರಾಗಳು ಮತ್ತು ವಾಟರ್ಡ್ರಾಪ್-ಶೈಲಿಯ ಡಿಸ್ಪ್ಲೇ ನಾಚ್ ವೈಶಿಷ್ಟ್ಯಗಳನ್ನು ಹೊತ್ತು ದೇಶದಲ್ಲಿ ಕೇವಲ 12,999 ರೂ.ಗಳ ಆರಂಭಿಕ ಬೆಲೆಯೊಂದಿಗೆ 'Nokia G21' ಸ್ಮಾರ್ಟ್ಪೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಹಾಗಾದರೆ, ನೂತನ Nokia G21 ಸ್ಮಾರ್ಟ್ಫೋನಿನ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆಗಳು ಎಷ್ಟು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.
ದೇಶದಲ್ಲಿ ಇಂದು ಬಿಡುಗಡೆಯಾಗಿರುವ ನೂತನ Nokia G21 ಸ್ಮಾರ್ಟ್ಫೋನಿನಲ್ಲಿ 20:9 ಆಕಾರ ಅನುಪಾತದಲ್ಲಿ 6.5-ಇಂಚಿನ HD+ (720x1,600 ಪಿಕ್ಸೆಲ್ಗಳು) ಡಿಸ್ಪ್ಲೇಯನ್ನು ಅಳವಡಿಸಲಾಗಿದ್ದು, ಇದು 90Hz ರಿಫ್ರೆಶ್ ರೇಟ್, 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 400 ನಿಟ್ಗಳ ಗರಿಷ್ಠ ಹೊಳಪನ್ನು ಬೆಂಬಲಿಸಲಿದೆ. ಈ ಫೋನ್ ಆಕ್ಟಾ-ಕೋರ್ ಯುನಿಸೊಕ್ T606 SoC ನಿಂದ ಚಾಲಿತವಾಗಿದ್ದು ಆಂಡ್ರಾಯ್ಡ್ 11 ಮೂಲಕ ಕೆಲಸ ಮಾಡಲಿದೆ ಎಂದು ಕಂಪೆನಿ ತಿಳಿಸಿದೆ, 6GB RAM 128GB ವರೆಗಿನ ಆನ್ಬೋರ್ಡ್ ಸಂಗ್ರಹಣೆಯನ್ನು ಹೊಂದಿರುವ ಈ ಫೋನಿನ ಆಂತರಿಕ ಮೆಮೊರಿಯನ್ನು SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದು. ಇನ್ನು ಈ ಫೋನ್ 18W ವೇಗದ ಚಾರ್ಜಿಂಗ್ ಬೆಂಬಲಿಸುವ 5,050mAh ಬ್ಯಾಟರಿಯನ್ನು ಹೊಂದಿದೆ. ಆದರೆ, ಚಾರ್ಜರ್ 10W ಔಟ್ಪುಟ್ ಸಾಮರ್ಥದಲ್ಲಿದೆ.
Nokia G21 ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದು f/1.8 ಲೆನ್ಸ್ ಜೊತೆಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್ಗಳಿಗಾಗಿ ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11ac, ಬ್ಲೂಟೂತ್ v5.0, FM ರೇಡಿಯೋ, GPS/ A-GPS, USB ಟೈಪ್-C, ಮತ್ತು 3.5mm ಹೆಡ್ಫೋನ್ ಜ್ಯಾಕ್ ವೈಶಿಷ್ಟ್ಯಗಗಳನ್ನು ನಾವು ನೋಡಬಹುದು. ಇನ್ನು ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸಂವೇದಕವನ್ನು ಸಹ ಒಳಗೊಂಡಿರುವ ಈ ಪೋನ್ ಸ್ಪಾಟಿಯಲ್ ಆಡಿಯೊ ಕ್ಯಾಪ್ಚರ್ ಬೆಂಬಲದೊಂದಿಗೆ ಬರುತ್ತದೆ ಮತ್ತು ಎರಡು ಮೈಕ್ರೊಫೋನ್ಗಳನ್ನು ಒಳಗೊಂಡಿದೆ.
ಭಾರತದಲ್ಲಿ Nokia G21 ಬೆಲೆ ಮತ್ತು ಲಭ್ಯತೆ
ಮೊದಲೇ ಹೇಳಿದಂತೆ, ಭಾರತದಲ್ಲಿ Nokia G21 ಸ್ಮಾರ್ಟ್ಫೋನ್ 12,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಂಡಿದೆ. 4GB RAM + 64GB ಸ್ಟೋರೇಜ್ ರೂಪಾಂತರದ Nokia G21 ಸ್ಮಾರ್ಟ್ಫೋನ್ ಬೆಲೆ 12,999 ರೂ.ಗಳಾದರೆ, 6GB + 128GB ರೂಪಾಂತರದ ಸ್ಮಾರ್ಟ್ಫೋನನ್ನು 14,999 ರೂ.ಗಳಿಗೆ ಬಿಡುಗಡೆ ಮಾಡಲಾಗಿದೆ. ಡಸ್ಕ್ ಮತ್ತು ನಾರ್ಡಿಕ್ ಬ್ಲೂ ಬಣ್ಣಗಳಲ್ಲಿ ಬಿಡುಗಡೆಯಾಗಿರುವ Nokia G21 ಸ್ಮಾರ್ಟ್ಫೋನ್ ಇದೀಗ Nokia.com ಸೈಟ್ ಮೂಲಕ ಖರೀದಿಗೆ ಲಭ್ಯವಿದ್ದು, ಶೀಘ್ರದಲ್ಲೇ ಪ್ರಮುಖ ಇ-ಕಾಮರ್ಸ್ ಸೈಟ್ಗಳ ಮೂಲಕವೂ ಸ್ಮಾರ್ಟ್ಫೋನ್ ಮಾರಾಟವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಗಮನಿಸುವುದಾದರೆ, 4GB + 64GB ಮಾದರಿಯ Nokia G21 ಸ್ಮಾರ್ಟ್ಫೋನ್ ರಷ್ಯಾದಲ್ಲಿ RUB 15,999 (ಸುಮಾರು 16,700 ರೂ.)ಗಳಿಗೆ ಬಿಡುಗಡೆಯಾಗಿತ್ತು.
Nokia G21 With 90hz Display Launched In India: Price, Specifications.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm