ಬ್ರೇಕಿಂಗ್ ನ್ಯೂಸ್
25-04-22 08:45 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯರಿಗಾಗಿಯೇ ನಿರ್ಮಿಸಲಾಗಿದೆ ಎಂದು ಹೇಳಲಾಗಿರುವ OnePlus ಕಂಪೆನಿಯ ನೂತನ OnePlus Nord CE 2 Lite ಸ್ಮಾರ್ಟ್ಫೋನ್ ಅನ್ನು ಇದೇ ಏಪ್ರಿಲ್ 28 ರಂದು ಬಿಡುಗಡೆ ಮಾಡಲಾಗುತ್ತಿರುವ ಭರ್ಜರಿ ಸುದ್ದಿ ನಿಮಗೆಲ್ಲಾ ತಿಳಿದಿರಬಹುದು. ಇದೀಗ ಇದಕ್ಕಿಂತಲೂ ಸಂತೋಷದ ಸುದ್ದಿಯೊಂದು ಹೊರಬಿದ್ದಿದ್ದು, ನೂತನ OnePlus Nord CE 2 Lite ಸ್ಮಾರ್ಟ್ಫೋನ್ ಬೆಲೆಗಳು ಕೇವಲ 17,999 ರೂ.ಗಳಿಂದ ಆರಂಭವಾಗುತ್ತವೆ ಎಂದು ಜನಪ್ರಿಯ ಟಿಪ್ಸ್ಟರ್ ಯೋಗೇಶ್ ಬ್ರಾರ್ ಅವರು ಹೇಳಿದ್ದಾರೆ. ನೂತನ OnePlus Nord CE 2 Lite ಸ್ಮಾರ್ಟ್ಫೋನ್ ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಎರಡು ಮಾದರಿ ಫೋನ್ಗಳು ಕ್ರಮವಾಗಿ 17,999 ರೂ ಮತ್ತು 19,999 ರೂ.ಬೆಲೆಗಳನ್ನು ಹೊಂದಿರಲಿವೆ ಎಂದು ತಿಳಿಸಿದ್ದಾರೆ. ಈ ಮೂಲಕ ನೂತನ OnePlus Nord CE 2 Lite ಸ್ಮಾರ್ಟ್ಫೋನ್ ಬೆಲೆಗಳು 20,000 ಕ್ಕಿಂತ ಕಡಿಮೆ ಇರವುದು ಬಹುತೇಕ ಖಚಿತವಾಗಿದೆ.!
ಭಾರತದಲ್ಲಿ ಏಪ್ರಿಲ್ 28 ರಂದು OnePlus Nord CE 2 Lite 5G ಸ್ಮಾರ್ಟ್ಫೋನನ್ನು ಬಿಡುಗಡೆ ಮಾಡುವುದಾಗಿ OnePlus ಕಂಪೆನಿ ಈಗಾಗಲೇ ಪ್ರಕಟಿಸಿದೆ. ಏಪ್ರಿಲ್ 28 ರಂದು ಸಂಜೆ 7pm IST ಕ್ಕೆ ನಡೆಯುವ ವರ್ಚುವಲ್ ಈವೆಂಟ್ನಲ್ಲಿ OnePlus Nord CE 2 Lite 5G ಅನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ದೃಢಪಡಿಸಿರುವ ಕಂಪೆನಿಯು, ಇದೇ ಈವೆಂಟ್ ನಲ್ಲಿ ವೈರ್ಲೆಸ್ ಸ್ಟಿರಿಯೊ (TWS) ಇಯರ್ಬಡ್ಗಳ ಬಿಡುಗಡೆಯನ್ನು ಸಹ ತರುತ್ತಿರುವ ಬಗ್ಗೆ ಹೇಳಿದೆ. ಇದೀಗ ಜನಪ್ರಿಯ ಟಿಪ್ಸ್ಟಾರ್ ಯೋಗೇಶ್ ಬ್ರಾರ್ ಅವರು OnePlus Nord CE 2 Lite ಸ್ಮಾರ್ಟ್ಫೋನ್ ಬೆಲೆಗಳು ಕೇವಲ 17,999 ರೂ.ಗಳಿಂದ ಆರಂಭವಾಗುತ್ತವೆ ಎಂದು ಹೇಳಿರುವುದರಿಂದ, ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿರುವ OnePlus Nord CE 2 Lite ಸ್ಮಾರ್ಟ್ಪೋನ್ ಬರುವಿಕೆಗೆ ಬಹುನಿರೀಕ್ಷಿತವಾಗಿ ಕಾಯುತಿದ್ದ ಜನರಿಗೆ ಮತ್ತೊಂದು ಭರ್ಜರಿ ಸಿಹಿಸುದ್ದಿ ಸಿಕ್ಕಂತಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಎರಡು Nord CE ಸ್ಮಾರ್ಟ್ಫೋನ್ಗಳಿದ್ದು, ಶೀಘ್ರದಲ್ಲೇ OnePlus Nord CE 5G ಮತ್ತು OnePlus Nord CE 2 5G ಸ್ಮಾರ್ಟ್ಪೋನ್ಗಳ ಜೊತೆಗೆ ನೂತನ OnePlus Nord CE 2 Lite ಸ್ಮಾರ್ಟ್ಫೋನನ್ನು ಇದೇ ತಿಂಗಳ ಕೊನೆಯಲ್ಲಿ ನಾವು ನೋಡಬಹುದು ಎಂದು ಕಳೆದ ವಾರವಷ್ಟೇ ಯೋಗೇಶ್ ಬ್ರಾರ್ ಅವರು ತಿಳಿಸಿದ್ದರು. ಈ ನೂತನ OnePlus Nord CE 2 Lite ಸ್ಮಾರ್ಟ್ಫೋನ್ 6.58-ಇಂಚಿನ ಪೂರ್ಣ-HD LCD ಡಿಸ್ಪ್ಲೇ, Qualcomm Snapdragon 695 SoC ಪ್ರೊಸೆಸರ್, 5G, ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್, 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಮತ್ತು 5,000mAh ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ಅವರು ಹೇಳಿದ್ದರು. ಇಷ್ಟೇ ಅಲ್ಲದೇ, ಈ ಫೋನಿನ ಆರಂಭಿಕ ಬೆಲೆಗಳು ಭಾರತದಲ್ಲಿ ಕೇವಲ 20,000 ರೂಪಾಯಿಗಳಿಂದ ಆರಂಭವಾಗಲಿವೆ ಎಂದು ಅವರು ಖಚಿತಪಡಿಸಿದ್ದರು.
ಯೋಗೇಶ್ ಬ್ರಾರ್ ಅವರು ಬಹಿರಂಗಪಡಿಸಿರುವ ಮಾಹಿತಿಗಳ ಪ್ರಕಾರ, ನೂತನ OnePlus Nord CE 2 Lite ಸ್ಮಾರ್ಟ್ಫೋನ್ 120Hz ರಿಫ್ರೆಶ್ ರೇಟ್ನೊಂದಿಗೆ 6.58-ಇಂಚಿನ FHD + IPS LCD ಡಿಸ್ಪ್ಲೇಯೊಂದಿಗೆ ಬರಲಿದೆ. ಈ ಫೋನಿನಲ್ಲಿ Qualcomm Snapdragon 695 SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದ್ದು, ಸಾಧನದ ಚಿಪ್ಸೆಟ್ ಅನ್ನು 8GB RAM ಮತ್ತು 128GB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. Android 11 ಆಧಾರಿತ OyxgenOS 11 ನಲ್ಲಿ ಸ್ಮಾರ್ಟ್ಫೋನ್ ರನ್ ಆಗಬಹುದು ಎಂದು ಯೋಗೇಶ್ ಬ್ರಾರ್ ಅವರು ತಿಳಿಸಿದ್ದಾರೆ. ಛಾಯಾಗ್ರಹಣಕ್ಕಾಗಿ, 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದಿಂದ ಟ್ರಿಪಲ್ ರಿಯರ್ ಕ್ಯಾಮೆರಾವಿರುವ ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಫೋನ್ ಬರುತ್ತದೆ ಎಂದು ಯೋಗೇಶ್ ಬ್ರಾರ್ ಅವರು ತಿಳಿಸಿದ್ದು, ಕ್ಯಾಮೆರಾವು 2-ಮೆಗಾಪಿಕ್ಸೆಲ್ ಮೊನೊ ಮತ್ತು ಇನ್ನೊಂದು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಹೊಂದಿರಲಿದೆ ಎಂದು ತಿಳಿಸಿದ್ದಾರೆ.
OnePlus Nord CE 2 Lite ಸ್ಮಾರ್ಟ್ಫೋನಿನ ಕುರಿತಂತೆ ಯೋಗೇಶ್ ಬ್ರಾರ್ ಹಂಚಿಕೊಂಡ ಕೆಲವು ವಿಶೇಷಣಗಳು ಈ ಹಿಂದೆಯೇ ಸೋರಿಕೆಯಾಗಿದ್ದವು. ಬ್ಲೂಟೂತ್ SIG, ಟೆಲಿಕಮ್ಯುನಿಕೇಷನ್ಸ್ ಮತ್ತು ಡಿಜಿಟಲ್ ಗವರ್ನಮೆಂಟ್ ರೆಗ್ಯುಲೇಟರಿ ಅಥಾರಿಟಿ (TDRA), ಭಾರತೀಯ ಗುಣಮಟ್ಟಗಳ ಬ್ಯೂರೋ (BIS), Geekbench, US ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ (FCC), ಪ್ರಮಾಣೀಕರಣದಲ್ಲಿ OnePlus Nord CE 2 Lite ಫೋನ್ 6GB RAM ಜೊತೆಗೆ Qualcomm Snapdragon 695 SoC, 64-ಮೆಗಾಪಿಕ್ಸೆಲ್ ಮುಖ್ಯ ಸಂವೇದಕ, 33W SuperVOOC ಚಾರ್ಜಿಂಗ್ ಬೆಂಬಲದೊಂದಿಗೆ 4,500mAh ಬ್ಯಾಟರಿ ಮತ್ತು ಬ್ಲೂಟೂತ್ v5.1 ಅನ್ನು ಪಡೆಯುತ್ತದೆ ಎಂದು ಹೇಳಲಾಗಿತ್ತು. ಇದೀಗ OnePlus Nord CE 2 Lite ಸ್ಮಾರ್ಟ್ಫೋನಿನ ಬೆಲೆ, ವೈಶಿಷ್ಟ್ಯಗಳು ಮತ್ತು ವಿನ್ಯಾಸವು ಲೀಕ್ ಆಗಿರುವುದರಿಂದ ಬಜೆಟ್ ಬೆಲೆಯಲ್ಲಿನ ಈ ಫೋನ್ ಸುದ್ದಿ ಕೇಳಿ ದೇಶದ ಸ್ಮಾರ್ಟ್ಫೋನ್ ಮಾರುಕಟ್ಟೆಯು ಒಮ್ಮೆ ನಡುಗಿದೆ.
Oneplus Nord Ce 2 Lite Price Revealed Ahead Of The April 28 Launch.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm