ಬ್ರೇಕಿಂಗ್ ನ್ಯೂಸ್
18-04-22 08:10 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್ಫೋನ್ ತಯಾರಿಕಾ ಕಂಪೆನಿ samsung ತನ್ನ ನೂತನ Galaxy M53 5G ಸ್ಮಾರ್ಟ್ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡುವ ಬಗ್ಗೆ ಅಧಿಕೃತವಾಗಿ ಖಚಿತಪಡಿಸಿದೆ. ಈ ತಿಂಗಳ ಆರಂಭದಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾದ Galaxy M53 5G ಸ್ಮಾರ್ಟ್ಫೋನನ್ನು ದೇಶದಲ್ಲಿ ಇದೇ ಏಪ್ರಿಲ್ 22 ರಂದು ಬಿಡುಗಡೆ ಮಾಡುವ ಬಗ್ಗೆ ಕಂಪೆನಿಯು ಟೀಸರ್ ಒಂದರ ಮೂಲಕ ತಿಳಿಸಿದ್ದು, 108-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಬದಿಯ ಕ್ಯಾಮರಾ, 120Hz ಸೂಪರ್ AMOLED+ ಹೋಲ್-ಪಂಚ್ ಡಿಸ್ಪ್ಲೇ, 25W ಫಾಸ್ಟ್ ಚಾರ್ಜಿಂಗ್ ಬೆಂಬಲ ಸೇರಿದಂತೆ ಹಲವು ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು Galaxy M53 5G ಸ್ಮಾರ್ಟ್ಪೋನ್ ಎಂಟ್ರಿ ನೀಡಲಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ samsung Galaxy M53 5G ಸ್ಮಾರ್ಟ್ಫೋನ್ ಅದೇ ವೈಶಿಷ್ಟ್ಯಗಳಲ್ಲಿ ದೇಶದ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದ್ದು, ಇದು 6.7-ಇಂಚಿನ ಪೂರ್ಣ-HD+ (1,080x2,400 ಪಿಕ್ಸೆಲ್ಗಳು) ಇನ್ಫಿನಿಟಿ-O ಸೂಪರ್ AMOLED+ ಡಿಸ್ಪ್ಲೇ ಜೊತೆಗೆ 120Hz ಪೀಕ್ ರಿಫ್ರೆಶ್ ದರವನ್ನು ಹೊಂದಿರಲಿದೆ. ಹಾಗೆಯೇ, ಆಕ್ಟಾ-ಕೋರ್ SoC ನಿಂದ ಚಾಲಿತವಾಗಿರಲಿರುವ Samsung Galaxy M53 5G ಸ್ಮಾರ್ಟ್ಪೋನ್ ಮೈಕ್ರೋ SD ಕಾರ್ಡ್ ಬಳಸಿ (1TB ವರೆಗೆ) ಸಂಗ್ರಹಣೆ ವಿಸ್ತರಣೆಯನ್ನು ಬೆಂಬಲಿಸಲಿದೆ. ಮತ್ತು 5,000mAh ಬ್ಯಾಟರಿಯನ್ನು ಹೊಂದಿರುವ Galaxy M53 5G ಸ್ಮಾರ್ಟ್ಫೋನ್ 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಇನ್ನು ಮೊದಲೇ ಹೇಳಿದಂತೆ, Samsung Galaxy M53 5G ಸ್ಮಾರ್ಟ್ಫೋನ್ 108-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಒಳಗೊಂಡಂತೆ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು,8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್, 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಕ್ಯಾಮೆರಾಗಳಿವೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್ಗಳಿಗಾಗಿ, ಫೋನಿನ ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 802.11ac, ಬ್ಲೂಟೂತ್ 5.2, GPS/ A-GPS, ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳು ಸೇರಿವೆ. ಹಾಗೆಯೇ, ಫೋನ್ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸಂವೇದಕವನ್ನು ಸಹ ಹೊಂದಿದೆ.
ಭಾರತದಲ್ಲಿ Samsung Galaxy M53 5G ಸ್ಮಾರ್ಟ್ಫೋನ್ ಬಿಡುಗಡೆಗಾಗಿ samsung india ಮತ್ತು Amazon ತಾಣಗಳಲ್ಲಿ ಪ್ರತ್ಯೇಕವಾಗಿ ಮೀಸಲಾದ ವೆಬ್ಪುಟವನ್ನು ರಚಿಸಲಾಗಿದೆ. ಆದರೆ, ಏಪ್ರಿಲ್ 22 ರಂದು ಮಧ್ಯಾಹ್ನ 12 ಗಂಟೆಗೆ ದೇಶದಲ್ಲಿ ಬಿಡುಗಡೆಯಾಗಲಿರುವ ನೂತನ Samsung Galaxy M53 5G ಸ್ಮಾರ್ಟ್ಫೋನ್ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಆದಾಗ್ಯೂ, ಇದು Samsung Galaxy M52 5G ಸ್ಮಾರ್ಟ್ಪೋನಿ ಬೆಲೆಗಳಿಗೆ ಹೊಂದಿಕೆಯಾಗಬಹುದು. ಕಳೆದ ವರ್ಷದ Samsung Galaxy M53 5G ಮಾದರಿಯು ಭಾರತದಲ್ಲಿ ಬೇಸ್ 6GB RAM + 128GB ಸ್ಟೋರೇಜ್ ಕಾನ್ಫಿಗರೇಶನ್ಗಾಗಿ 29,999 ರೂ. ಮತ್ತು 8GB + 128GB ಆಯ್ಕೆಗೆ 31,999 ರೂ.ಗಳಿಗೆ ಬಿಡುಗಡೆಗೊಂಡಿತ್ತು.
Samsung Galaxy M53 5g India Launch Date Set For April 22.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm