ಬ್ರೇಕಿಂಗ್ ನ್ಯೂಸ್
15-04-22 10:24 pm Source: Vijayakarnataka ಡಿಜಿಟಲ್ ಟೆಕ್
ಇದೇ ಏಪ್ರಿಲ್ 7 ರಂದು ಭಾರತದ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಬಹುನಿರೀಕ್ಷಿತ Realme GT 2 Pro ಫ್ರೀಮಿಯಂ ಫ್ಲಾಗ್ಶಿಪ್ ಸ್ಮಾರ್ಟ್ಫೋನ್ ದೇಶದಲ್ಲಿಂದು ಮಾರಾಟಕ್ಕೆ ಬಂದಿದೆ. ಇಂದು ಮಧ್ಯಾಹ್ನ (ಏಪ್ರಿಲ್ 14 ) 12 ಗಂಟೆಗೆ Realme.com, Flipkart ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳ ಮೂಲಕ Realme GT 2 Pro ಸ್ಮಾರ್ಟ್ಫೋನನ್ನು ಮಾರಾಟ ಮಾಡಲಾಗುತ್ತಿದ್ದು, HDFC ಬ್ಯಾಂಕ್ ಮತ್ತು SBI ಬ್ಯಾಂಕ್ ಕಾರ್ಡ್ಗಳು ಮತ್ತು EMI ವಹಿವಾಟುಗಳ ಮೇಲೆ 5,000 ತ್ವರಿತ ರಿಯಾಯಿತಿಯ ಜೊತೆಗೆ, Realme GT 2 Pro ಫೋನ್ ಖರೀದಿದಾರರಿಗೆ 4,999.ರೂ ಮೌಲ್ಯದ ರಿಯಲ್ಮಿ ವಾಚ್ ಎಸ್ ಸ್ಮಾರ್ಟ್ವಾಚ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಕಂಪೆನಿ ತಿಳಿಸಿದೆ. ಸ್ನಾಪ್ಡ್ರಾಗನ್ 8 Gen 1 SoC ಪ್ರೊಸೆಸರ್ ಮತ್ತು LTPO 2.0-ಬೆಂಬಲಿತ 'ಸೂಪರ್ ರಿಯಾಲಿಟಿ' ಡಿಸ್ಪ್ಲೇಯಂತಹ ಪ್ರೀಮಿಯಂ ಫೀಚರ್ಸ್ಗಳನ್ನು ಹೊತ್ತು ಕೇವಲ 44,999 ರೂ.ಗಳ ಆರಂಭಕ ಬೆಲೆಯಲ್ಲಿ ದೇಶದ ಮಾರುಕಟ್ಟೆಗೆ ಆಗಮಿಸಿರುವ ನೂತನ Realme GT 2 Pro ಸ್ಮಾರ್ಟ್ಫೋನ್ ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ.
ನೂತನ Realme GT 2 Pro ಸ್ಮಾರ್ಟ್ಫೋನಿನ ಫೀಚರ್ಸ್ಗಳನ್ನು ನೋಡುವುದಾದರೆ, ಡ್ಯುಯಲ್-ಸಿಮ್ ಸಾಮರ್ಥ್ಯದ Realme GT 2 Pro ಸ್ಮಾರ್ಟ್ಫೋನ್ Android 12-ಆಧಾರಿತ Realme UI 3.0 ನಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ರಿಯಲ್ಮಿ ಕಂಪೆನಿ ತಿಳಿಸಿದೆ. 6.7-ಇಂಚಿನ 2K (1,440x3,216 ಪಿಕ್ಸೆಲ್ಗಳು) LTPO 2.0 AMOLED ಡಿಸ್ಪ್ಲೇಯು 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಸ್ಕ್ರೀನ್ ರಕ್ಷಣೆಯನ್ನು ಹೊಂದಿದೆ. ಇತ್ತೀಚಿನ ಸ್ನಾಪ್ಡ್ರಾಗನ್ 8 Gen 1 SoC ನಿಂದ ಚಾಲಿತವಾಗಿರುವ Realme GT 2 Pro ಸ್ಮಾರ್ಟ್ಫೋನನ್ನು 12GB ಯ RAM ನೊಂದಿಗೆ ಜೋಡಿಸಲಾಗಿದ್ದು, ಈ ಫೋನ್ 512GB ವರೆಗೆ ಅಂತರ್ಗತ ಸಂಗ್ರಹಣೆಯನ್ನು ಸಹ ಹೊಂದಿದೆ. ಇನ್ನು Realme GT 2 Pro ಸ್ಮಾರ್ಟ್ಫೋನಿನಲ್ಲಿ 5,000mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು 65W ಸೂಪರ್ಡಾರ್ಟ್ ಚಾರ್ಜ್ ವರ್ಧಿತ ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ ಎಂದು ಕಂಪೆನಿ ಹೇಳಿದೆ.
![]()
ನೂತನ Realme GT 2 Pro ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಸಾಮರ್ಥ್ಯದಲ್ಲಿ, 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದ ಜೊತೆಗೆ 50-ಮೆಗಾಪಿಕ್ಸೆಲ್ ಸೋನಿ IMX766 ಪ್ರಾಥಮಿಕ ಸಂವೇದಕ ಹಾಗೂ 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾಗಳನ್ನು ಸ್ಮಾರ್ಟ್ಪೋನ್ ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಫೋನಿನ ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಿರುವುದನ್ನು ನಾವು ನೋಡಬಹುದು. Realme GT 2 Pro ಸ್ಮಾರ್ಟ್ಫೋನಿನ ಸಂಪರ್ಕ ಆಯ್ಕೆಗಳಲ್ಲಿ 5G (10-ಗಿಗಾಬಿಟ್), 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿರುವ ಈ ಸ್ಮಾರ್ಟ್ಫೋನಿನಲ್ಲಿ ಸ್ಟೇನ್ಲೆಸ್ ಸ್ಟೀಲ್ ಆವಿ ಕೂಲಿಂಗ್ ಮ್ಯಾಕ್ಸ್ ವೈಶಿಷ್ಟ್ಯವನ್ನು ಕೂಲಿಂಗ್ಗಾಗಿ ತರಲಾಗಿದೆ.

ಭಾರತದಲ್ಲಿ Realme GT 2 Pro ಸ್ಮಾರ್ಟ್ಫೋನಿನ ಆರಂಭಿಕ ಬೆಲೆಗಳು 49,999 ರೂ.ಗಳಿಂದ ಆರಂಭವಾಗಿದೆ. 8GB + 128GB ಸ್ಟೋರೇಜ್ ಮಾದರಿ ಫೋನ್ ಬೆಲೆ 49,999 ರೂ.ಗಳಾದರೆ, 12GB + 256GB ಸ್ಟೋರೇಜ್ ಆಯ್ಕೆಯ ಫೋನ್ ಬೆಲೆಯು 57,999 ರೂ.ಗಲಾಗಿವೆ. ಆದರೆ, ಪರಿಚಯಾತ್ಮಕ ಕೊಡುಗೆಯಾಗಿ ಈ ಎರಡೂ ಸ್ಮಾರ್ಟ್ಫೋನ್ಗಳನ್ನು ಕ್ರಮವಾಗಿ 44,999 ಮತ್ತು 52,999 ರೂ.ಗಳಿಗೆ ಮಾರಾಟ ಮಾಡುವುದಾಗಿ ಕಂಪೆನಿ ಹೇಳಿದೆ. ಪೇಪರ್ ಗ್ರೀನ್, ಪೇಪರ್ ವೈಟ್ ಮತ್ತು ಸ್ಟೀಲ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿರುವ ಈ ಸ್ಮಾರ್ಟ್ಫೋನನ್ನು HDFC ಬ್ಯಾಂಕ್ ಮತ್ತು SBI ಬ್ಯಾಂಕ್ ಕಾರ್ಡ್ಗಳು ಮತ್ತು EMI ವಹಿವಾಟುಗಳ ಮೇಲೆ 5,000 ತ್ವರಿತ ರಿಯಾಯಿತಿಯ ಜೊತೆಗೆ ಖರೀದಿಸಬಹುದು, Realme GT 2 Pro ಫೋನ್ ಖರೀದಿದಾರರಿಗೆ ವಿಶೇಷವಾಗಿ 4,999.ರೂ ಮೌಲ್ಯದ ರಿಯಲ್ಮಿ ವಾಚ್ ಎಸ್ ಸ್ಮಾರ್ಟ್ವಾಚ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಕಂಪೆನಿ ತಿಳಿಸಿದೆ.
Realme Gt 2 Pro Goes On Sale For The First Time In India Today.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
14-06-26 04:49 pm
HK News Staffer
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
ದಿನಕ್ಕೆ ಒಂದು ವಾಹನಕ್ಕೆ 200 ಲೀಟರ್ ಡೀಸೆಲ್ ಮಾತ್ರ...
13-06-26 03:01 pm
4,399 ದಿನಗಳ ಸುದೀರ್ಘ ಆಡಳಿತ, ಭಾರತದ ಇತಿಹಾಸದಲ್ಲೇ...
10-06-26 06:42 pm
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
14-06-26 02:37 pm
HK News Staffer
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
ಮಧ್ಯರಾತ್ರಿ ಎದೆನೋವಿನಿಂದ ಮನೆಯಲ್ಲೇ ಕುಸಿದು ಬಿದ್ದ...
12-06-26 10:48 pm
ಎಂಬಿಎ ಲ್ಯಾಬ್ ಶುಲ್ಕ ಅಕ್ರಮ; ಮಂಗಳೂರು ವಿವಿಯ ಆಡಳಿತ...
12-06-26 08:44 pm
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸಿಎಂ ವಿಜಯ್ ಜೋಸೆ...
12-06-26 04:31 pm
14-06-26 05:08 pm
HK News Staffer
ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಅಪಪ್ರಚಾರ; ಸ್ನೇಹಿ...
13-06-26 09:17 pm
ಬೆಂಗಳೂರಿನ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಲ್ಲಿ ಅನ್...
13-06-26 08:43 pm
ಕಾಲೇಜು ಫೀಸ್ಗೆ ಕೊಟ್ಟ 10 ಸಾವಿರವೇ ಜೀವ ತೆಗೆಯಿತು!...
13-06-26 06:14 pm
ಪತ್ನಿ ಹತ್ಯೆಗೆ ಜೈಲಿನಿಂದಲೇ ಸುಪಾರಿ ; ಬುರ್ಖಾ ಧರಿಸ...
12-06-26 11:58 am