ಬ್ರೇಕಿಂಗ್ ನ್ಯೂಸ್
11-04-22 08:12 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯರು 20,000 ಕ್ಕಿಂತ ಕಡಿಮೆ ಬೆಲೆಯಲ್ಲಿ ನೂತನ Apple iPhone ಅನ್ನು ಖರೀದಿಸಬಹುದಾದ ಭರ್ಜರಿ ಅವಕಾಶ ಒಂದನ್ನು ಜನಪ್ರಿಯ ಇ-ಕಾಮರ್ಸ್ ಜಾಲತಾಣ ಫ್ಲಿಪ್ಕಾರ್ಟ್ ಪ್ರಕಟಿಸಿದೆ. ಆಪಲ್ ಕಂಪೆನಿಯ ಇತ್ತೀಚಿನ iPhone SE 2022 ಸ್ಮಾರ್ಟ್ಪೋನ್ ಬಿಡುಗಡೆಯಾದ ನಂತರ ಹಳೆಯ ಮಾದರಿ iPhone SE 2020 ಸ್ಮಾರ್ಟ್ಫೋನ್ ಬೆಲೆಗಳು ಭಾರೀ ಇಳಿಕೆಯಾಗಿದ್ದು, ಇದೀಗ ಕೇವಲ 17,499 ರೂ.ಗಳಲ್ಲಿ iPhone SE 2020 ಸ್ಮಾರ್ಟ್ಫೋನ್ ಖರೀದಿಸಲು ಅವಕಾಶವಿದೆ. ನೀವು ಮೊದಲ ಬಾರಿಗೆ ಐಫೋನ್ ಒಂದನ್ನು ಖರೀದಿಸಬೇಕು ಎಂಬ ಇಚ್ಚೆಯನ್ನು ಹೊಂದಿದ್ದರೆ, ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಹೆಚ್ಚು ಜನರು ಬಯಸುವ ಸ್ಮಾರ್ಟ್ಫೋನ್ಗಳಲ್ಲಿ ಒಂದಾದ iPhone SE 2020 ಸ್ಮಾರ್ಟ್ಫೋನ್ ಇದೀಗ ಮೊದಲ ಬಾರಿಗೆ ಇಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.
ಹೌದು, iPhone SE 2020 ಸ್ಮಾರ್ಟ್ಪೋನಿನ ಪ್ರಸ್ತುತ ಮಾರುಕಟ್ಟೆ ಬೆಲೆ 39,900 ರೂ.ಗಳಾಗಿದ್ದು, ಫ್ಲಿಪ್ಕಾರ್ಟ್ ಇದೀಗ ಶೇ. 23 ಶೇಕಡಾ ರಿಯಾಯಿತಿಯನ್ನು ಪ್ರಕಟಿಸಿದೆ. ಇದರಿಂದ iPhone SE 2020 ಫೋನ್ ಬೆಲೆ 30,499 ಕ್ಕೆ ಇಳಿಕೆಯಾಗಿದೆ. ಇದಲ್ಲದೇ, iPhone SE 2020 ಸ್ಮಾರ್ಟ್ಪೋನ್ ಮೇಲೆ ಎಕ್ಸ್ಚೇಂಜ್ ಸ್ಕೀಮ್ ಅನ್ನು ಸಹ ಫ್ಲಿಪ್ಕಾರ್ಟ್ ನೀಡುತ್ತಿದ್ದು, ಹಳೆಯ ಸ್ಮಾರ್ಟ್ಫೋನ್ಗಳ 13,000 ರೂ.ವರೆಗಿನ ವಿನಿಮಯ ದರದಲ್ಲಿ ಸ್ಮಾರ್ಟ್ಫೋನನ್ನು ಖರೀದಿಸುವ ಅವಕಾಶವನ್ನು ನೀಡಿದೆ. ಶೇಕಡಾ 23 ರಷ್ಟು ರಿಯಾಯಿತಿ ಮತ್ತು 13,000 ರೂ.ವರೆಗಿನ ವಿನಿಮಯ ಯೋಜನೆಯೊಂದಿಗೆ, ಕೇವಲ 17,499 ರೂಗಳಲ್ಲಿ ಐಫೋನ್ ಅನ್ನು ಖರೀದಿಸಬಹುದಾಗಿದೆ. ಇದು ಐಫೋನ್ ಒಂದನ್ನು ಖರೀದಿಸುವ ಹಾತೊರೆಯುತ್ತಿರುವ ಎಲ್ಲಾ ಸ್ಮಾರ್ಟ್ಫೋನ್ ಅಭಿಮಾನಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ.
4.7-ಇಂಚಿನ ರೆಟಿನಾ HD ಡಿಸ್ಪ್ಲೇ, 12MP ಹಿಂಬದಿಯ ಮತ್ತು 7MP ಮುಂಭಾಗದ ಕ್ಯಾಮರಾ, A13 ಬಯೋನಿಕ್ ಚಿಪ್ನಿಂದ 3 ನೇ ಜನರಲ್ ನ್ಯೂರಲ್ ಇಂಜಿನ್ ಪ್ರೊಸೆಸರ್ ಹಾಗೂ IP67 ರೇಟಿಂಗ್ಗಳೊಂದಿಗೆ ನೀರು ಮತ್ತು ಧೂಳು ನಿರೋಧಕವಾಗಿರುವ iPhone SE 2020 ಸ್ಮಾರ್ಟ್ಫೋನ್, 64GB, 128GB ಮತ್ತು 256GB ಮಾದರಿಗಳಲ್ಲಿ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, ಫ್ಲಿಪ್ಕಾರ್ಟ್ನಲ್ಲಿ iPhone SE 2020 64GB ಫೋನ್ ಮಾದರಿಯ ಬೆಲೆ 30,499 ರೂ.ಗೆ ಇಳಿಕೆಯಾಗಿದ್ದರೆ, 128GB ಮಾದರಿಯು 35,099 ರೂ.ಗೆ, ಹಾಗೂ 256GB ಮಾದರಿಯ ಫೋನನ್ನು 45,099 ರೂ.ಗಳಿಗೆ ಫ್ಲಿಪ್ಕಾರ್ಟ್ ಪಟ್ಟಿ ಮಾಡಿದೆ. 128GB ಮಾದರಿಯ ಮೇಲೆ 21 ಶೇಕಡಾ ರಿಯಾಯಿತಿ ಮತ್ತು 256GB ರೂಪಾಂತರದ ಮೇಲೆ ಶೇ. 17 ಶೇಕಡಾ ರಿಯಾಯಿತಿಯನ್ನು ನೀಡಲಾಗಿದೆ.
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಕಳೆದ ಹಲವು ದಿನಗಳಿಂದಲೂ ಭಾರೀ ನಿರೀಕ್ಷೆ ಮೂಡಿಸಿದ್ದ ಆಪಲ್ ಕಂಪೆನಿಯ ನೂತನ iPhone SE 2022 ಸ್ಮಾರ್ಟ್ಫೋನ್ ಇತ್ತಿಚಿಗಷ್ಟೇ ಮಾರುಕಟ್ಟೆಗೆ ಬಿಡುಗಡೆಗೊಂಡಿತ್ತು. ಆಪಲ್ ತನ್ನ ನೂತನ iPhone SE 2022 ಸ್ಮಾರ್ಟ್ಫೋನ್ ವಿನ್ಯಾಸವನ್ನು ಐಫೋನ್ 8 ಸರಣಿಯ ವಿನ್ಯಾಸದಲ್ಲೇ ಉಳಿಸಿಕೊಂಡಿದ್ದು, ಪ್ರಸ್ತುತ ಐಫೋನ್ 13 ಸರಣಿಯ ಸ್ಮಾರ್ಟ್ಫೋನ್ಗಳಿಗೆ ಶಕ್ತಿ ನೀಡುವ A15 ಬಯೋನಿಕ್ SoC ಅನ್ನು ತನ್ನ ನೂತನ ಬಜೆಟ್ ಫೋನಿನಲ್ಲಿ ಅಳವಡಿಸಿದೆ. ನೂತನ iPhone SE 2022 ಸ್ಮಾರ್ಟ್ಫೋನಿನ ಬೆಲೆಗಳು ಭಾರತದಲ್ಲಿ 64GB ರೂಪಾಂತರಕ್ಕೆ 43,900 ರೂ.ಗಳಿಂದ ಪ್ರಾರಂಭವಾಗುತ್ತದೆ. ಇದು 128GB ಮತ್ತು 256GB ರೂಪಾಂತರಗಳಲ್ಲಿಯೂ ಲಭ್ಯವಿದ್ದು, ಇವುಗಳ ಬೆಲೆ ಕ್ರಮವಾಗಿ 48,900 ರೂ. ಮತ್ತು 58,900 ರೂ.ಗಳಾಗಿವೆ.
Own An Iphone Se Under Rs 20k After Flipkart Announces Massive Price Cut.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
17-03-25 11:29 am
Mangalore Correspondent
UT Khader, Mangalore, Tulu Academy: ತುಳು ಕಲಿತ...
16-03-25 10:55 pm
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm