ಬ್ರೇಕಿಂಗ್ ನ್ಯೂಸ್
08-04-22 08:40 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುವಂತಹ ಅತ್ಯಂತ ಕಡಿಮೆ ಬೆಲೆಯಲ್ಲಿ ದೇಶದಲ್ಲಿಂದು ನೂತನ Moto G22 ಸ್ಮಾರ್ಟ್ಫೋನ್ ಬಿಡುಗಡೆಗೊಂಡಿದೆ. ಕಳೆದ ತಿಂಗಳು ಯುರೋಪ್ನಲ್ಲಿ ಬಿಡುಗಡೆಯಾಗಿದ್ದ ಅದೇ ಹೋಲ್-ಪಂಚ್ ಡಿಸ್ಪ್ಲೇ ವಿನ್ಯಾಸ ಮತ್ತು ಕ್ವಾಡ್ ರಿಯರ್ ಕ್ಯಾಮೆರಾಗಳ ವಿನ್ಯಾಸದಲ್ಲಿ ದೇಶದ ಮೊಬೈಲ್ ಮಾರುಕಟ್ಟೆಗೆ Moto G22 ಸ್ಮಾರ್ಟ್ಫೋನ್ ಭರ್ಜರಿ ಎಂಟ್ರಿ ನೀಡಿದ್ದು, 10,999 ರೂ.ಗಳ ಬೆಲೆಯಲ್ಲಿ ಏಕೈಕ ರೂಪಾಂತರದಲ್ಲಿ ಬಿಡುಗಡೆಗೊಂಡಿರುವ ಈ ಸ್ಮಾರ್ಟ್ಫೋನಿನಲ್ಲಿ 90Hz ಡಿಸ್ಪ್ಲೇ 5,000mAh ಬ್ಯಾಟರಿ ಸೇರಿದಂತೆ ಹಲವು ಪ್ರಮುಖ ವೈಶಿಷ್ಟ್ಯಗಳನ್ನು ತರಲಾಗಿದೆ. Redmi 10, Infinix Note 11S, Realme C25Y ಮತ್ತು Samsung Galaxy M12 ಸ್ಮಾರ್ಟ್ಫೋನ್ಗಳ ವಿರುದ್ಧ ಸ್ಪರ್ಧಿಸುವಂತಿರುವ ನೂತನ Moto G22 ಸ್ಮಾರ್ಟ್ಫೋನ್ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ ಬನ್ನಿ.
ಡ್ಯುಯಲ್-ಸಿಮ್ (ನ್ಯಾನೋ) ಸಾಮರ್ಥ್ಯದ ನೂತನ Moto G22 ಸ್ಮಾರ್ಟ್ಫೋನ್ ಆಂಡ್ರಾಯ್ಡ್ 12 ಔಟ್-ಆಫ್-ಬಾಕ್ಸ್ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್ 6.5-ಇಂಚಿನ HD+ (720x1,600 ಪಿಕ್ಸೆಲ್ಗಳು) ಮ್ಯಾಕ್ಸ್ ವಿಷನ್ ಡಿಸ್ಪ್ಲೇ ಜೊತೆಗೆ 20:9 ಆಕಾರ ಅನುಪಾತ ಮತ್ತು 90Hz ರಿಫ್ರೆಶ್ ದರವನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಆಕ್ಟಾ-ಕೋರ್ MediaTek Helio G37 SoC ಪ್ರೊಸೆಸರ್ ಜೊತೆಗೆ IMG PowerVR GE8320 GPU ಮತ್ತು 4GB RAM ಅನ್ನು ಸ್ಮಾರ್ಟ್ಫೋನಿನಲ್ಲಿ ನೀಡಲಾಗಿದ್ದು ಜೊತೆಗೆ SD ಕಾರ್ಡ್ ಮೂಲಕ (1TB ವರೆಗೆ) ಮೀಸಲಾದ ಸ್ಲಾಟ್ ಮೂಲಕ ವಿಸ್ತರಿಸಬಹುದಾದ 64GB ಆನ್ಬೋರ್ಡ್ ಸಂಗ್ರಹಣೆಯೊಂದಿಗೆ ಬರುತ್ತದೆ. ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಸಾಮೀಪ್ಯ ಸಂವೇದಕವನ್ನು ಒಳಗೊಂಡಿರುವ ಈ ಫೋನಿನಲ್ಲಿ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ಅಳವಡಿಸಿರುವುನ್ನು ನಾವು ನೋಡಬಹುದು.

Moto G22 ಸ್ಮಾರ್ಟ್ಫೋನಿನಲ್ಲಿ f/1.8 ಲೆನ್ಸ್ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಹೊಂದಿರುವ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಇದ್ದು, ಇದು 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್, 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಸಹ ಒಳಗೊಂಡಿದೆ. ಈ ಹಿಂಬದಿಯ ಕ್ಯಾಮೆರಾ ಸೆಟಪ್ 30fps ಫ್ರೇಮ್ ದರದಲ್ಲಿ ಪೂರ್ಣ-HD ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಸೆಲ್ಫಿಗಳು ಮತ್ತು ವೀಡಿಯೊ ಚಾಟ್ಗಳಿಗಾಗಿ, Moto G22 ಸ್ಮಾರ್ಟ್ಫೋನಿ ಮುಂಭಾಗದಲ್ಲಿ f/2.45 ಲೆನ್ಸ್ ಜೊತೆಗೆ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಂವೇದಕವನ್ನು ನೀಡಲಾಗಿದೆ., Moto G22 ನಲ್ಲಿನ ಸಂಪರ್ಕ ಆಯ್ಕೆಗಳಲ್ಲಿ 4G LTE, Wi-Fi 802.11ac, ಬ್ಲೂಟೂತ್ v5.0, FM ರೇಡಿಯೋ, GPS/ A-GPS, USB ಟೈಪ್-C, ಮತ್ತು 3.5mm ಹೆಡ್ಫೋನ್ ಜ್ಯಾಕ್ ಅನ್ನು ಒಳಗೊಂಡಿರುವುದನ್ನು ನಾವು ತಿಳಿಯಬಹುದು.

ಇನ್ನು ಮೊದಲೇ ಹೇಳಿದಂತೆ, ಭಾರತದಲ್ಲಿ Moto G22 ಸ್ಮಾರ್ಟ್ಫೋನನ್ನು ಏಕೈಕ 4GB + 64GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಸ್ಮಾರ್ಟ್ಫೋನಿನ ಬೆಲೆಯನ್ನು 10,999 ರೂ.ಗಳಿಗೆ ನಿಗಧಿಪಡಿಸಲಾಗಿದೆ. ಕಾಸ್ಮಿಕ್ ಬ್ಲ್ಯಾಕ್, ಐಸ್ಬರ್ಗ್ ಬ್ಲೂ ಮತ್ತು ಮಿಂಟ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿರಲಿರುವ ಈ ಸ್ಮಾರ್ಟ್ಫೋನನ್ನು ಇದೇ 13 ರಿಂದ ಫ್ಲಿಪ್ಕಾರ್ಟ್ ಮೂಲಕ ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ. Moto G22 ಸ್ಮಾರ್ಟ್ಪೋನಿನ ಬಿಡುಗಡೆಯ ಕೊಡುಗೆಯಾಗಿ ಫ್ಲಿಪ್ಕಾರ್ಟ್ ನಲ್ಲಿ ಇದೇ ಏಪ್ರಿಲ್ 13-14 ರ ನಡುವೆ ಸೀಮಿತ ಸ್ಟಾಕ್ಗಳ ಸ್ಮಾರ್ಟ್ಫೋನನ್ನು ಖರೀದಿಸಿದವರಿಗೆ 1,000 ಬ್ಯಾಂಕ್ ರಿಯಾಯಿತಿಯನ್ನು ನೀಡಲಾಗುತ್ತಿದೆ ಎಂದು ಕಂಪೆನಿ ಹೇಳಿದೆ. ಯುರೋಪ್ನಲ್ಲಿ ಬಿಡುಗಡೆಯಾಗಿದ್ದ ಇದೇ 4GB + 64GB ಮಾದರಿ ಸಾಮರ್ಥ್ಯದ Moto G22 ಸ್ಮಾರ್ಟ್ಫೋನ್ EUR 169.99 (ಸರಿಸುಮಾರು ರೂ. 14,000) ಗಳಲ್ಲಿ ಬಿಡುಗಡೆಯಾಗಿದ್ದನ್ನು ನಾವಿಲ್ಲಿ ಗಮನಿಸಬಹುದು.
Moto G22 With Quad Rear Cameras Launched In India Price, Specifications.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm