ಬ್ರೇಕಿಂಗ್ ನ್ಯೂಸ್
25-03-22 11:25 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯ ಸ್ಮಾರ್ಟ್ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ OnePlus 10 Pro ಸ್ಮಾರ್ಟ್ಪೋನ್ ಬಿಡುಗಡೆ ದಿನಾಂಕವನ್ನು ಇದೇ ಮಾರ್ಚ್ 31 ಕ್ಕೆ ನಿಗದಿಪಡಿಸಲಾಗಿದೆ ಎಂದು OnePlus ಕಂಪನಿ ಬಹಿರಂಗಪಡಿಸಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ದೇಶದಲ್ಲಿ OnePlus 10 Pro ಸ್ಮಾರ್ಟ್ಫೋನನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಬಗ್ಗೆ ಒನ್ಪ್ಲಸ್ ಸೂಚನೆ ನೀಡಿತ್ತು. ಅದರಂತೆ, ಇಂದು ದೇಶದಲ್ಲಿ OnePlus 10 Pro ಸ್ಮಾರ್ಟ್ಪೋನ್ ಬಿಡುಗಡೆಯ ಅಧಿಕೃತ ದಿನಾಂಕವನ್ನು ಕಂಪೆನಿ ಪ್ರಕಟಿಸಿದೆ. ಚೀನಾದಲ್ಲಿ ಜನವರಿಯಲ್ಲಿ ಬಿಡುಗಡೆಯಾದ ಚೀನೀ ಮಾದರಿಯಂತೆಯೇ ಬಾರತದಲ್ಲಿಯೂ ಸಹ OnePlus 10 Pro ಸ್ಮಾರ್ಟ್ಪೋನ್ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಕಂಪೆನಿ ಮಾಹಿತಿ ನೀಡಿದ್ದು, ದೇಶದಲ್ಲಿ OnePlus 10 Pro ಸ್ಮಾರ್ಟ್ಫೋನ್ ಬಿಡುಗಡೆ ಕಾರ್ಯಕ್ರಮವು ಇದೇ ಮಾರ್ಚ್ 31 ರಂದು 7:30pm IST (2pm GMT / 10am EDT) ಕ್ಕೆ ನಡೆಯಲಿದೆ ಎಂದು ಕಂಪನಿ ತಿಳಿಸಿದೆ.
ಚೀನಾದ ಟೆಕ್ ದೈತ್ಯ OnePlus ಕಂಪನಿಯು MWC 2022 ರಲ್ಲಿ OnePlus 10 Pro ಅನ್ನು ಜಾಗತಿಕ ಮೊಬೈಲ್ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿತ್ತು. ಆದರೆ, ಜನವರಿಯಲ್ಲಿ ಚೀನಾದಲ್ಲಿ ಮೊದಲು ಬಿಡುಗಡೆಯಾದ OnePlus 10 Pro ಸ್ಮಾರ್ಟ್ಫೋನ್ ತನ್ನ ಬೆಲೆ ಮತ್ತು ವೈಶಿಷ್ಟ್ಯಗಳಿಂದಲೇ ಭರ್ಜರಿ ಗಮನ ಸೆಳೆದಿತ್ತು. ಇದೀಗ ಭಾರತದಲ್ಲಿಯೂ ಸಹ OnePlus 10 Pro ಸ್ಮಾರ್ಟ್ಪೋನ್ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು OnePlus ಕಂಪೆನಿ ತಿಳಿಸಿರುವುದರಿಂದ, ನೂತನ OnePlus 10 Pro ಸ್ಮಾರ್ಟ್ಪೋನಿನಲ್ಲಿ ಸ್ನಾಪ್ಡ್ರಾಗನ್ 8 Gen 1 SoC ಪ್ರೊಸೆಸರ್, 120Hz AMOLED ಡಿಸ್ಪ್ಲೇ ಮತ್ತು 80W ವೇಗದ ಚಾರ್ಜಿಂಗ್ಗೆ ಬೆಂಬಲವಿರುವುದು ಖಚಿತವಾಗಿದೆ ಮತ್ತು ಡ್ಯುಯಲ್-ಸಿಮ್ (ನ್ಯಾನೋ) ಸಾಮರ್ಥದ OnePlus 10 Pro ಸ್ಮಾರ್ಟ್ಫೋನ್ ಕಂಪನಿಯ ಇತ್ತೀಚಿನ ColorOS 12.1 ಜೊತೆಗೆ Android 12 ನಲ್ಲಿ ಕಾರ್ಯನಿರ್ವಹಿಸುತ್ತದೆ.
ನೂತನ OnePlus 10 Pro ಸ್ಮಾರ್ಟ್ಪೋನ್ 6.7-ಇಂಚಿನ QHD+ (1,440x3,216 ಪಿಕ್ಸೆಲ್ಗಳು) ಬಾಗಿದ LTPO 2.0 AMOLED ಡಿಸ್ಪ್ಲೇ ಜೊತೆಗೆ 1Hz ಮತ್ತು 120Hz ನಡುವಿನ ಡೈನಾಮಿಕ್ ರಿಫ್ರೆಶ್ ದರವನ್ನು ಹೊಂದಿರಲಿದೆ. ಸ್ಮಾರ್ಟ್ಫೋನಿನ ಪ್ರದರ್ಶನವು 1,300 ನಿಟ್ಗಳ ಗರಿಷ್ಠ ಹೊಳಪನ್ನು ನೀಡುತ್ತದೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯೊಂದಿಗೆ ಬರುತ್ತದೆ.ಈ ಸ್ಮಾರ್ಟ್ಫೋನಿನಲ್ಲಿ ಪ್ರಮುಖ Snapdragon 8 Gen 1 SoC ಪ್ರೊಸೆಸರ್ ಅನ್ನು12GB ಯ LPDDR5 RAM ನೊಂದಿಗೆ ಜೋಡಿಸಲಾಗಿದೆ. ಇನ್ನು ಕ್ಯಾಮರಾ ಮುಂಭಾಗದಲ್ಲಿ, OnePlus 10 Pro ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದು 48-ಮೆಗಾಪಿಕ್ಸೆಲ್ ಸೋನಿ IMX789 ಪ್ರಾಥಮಿಕ ಸಂವೇದಕವನ್ನು f/1.8 ಲೆನ್ಸ್, 50-ಮೆಗಾಪಿಕ್ಸೆಲ್ Samsung ISOCELL JN1 ಸಂವೇದಕದೊಂದಿಗೆ f/2.2 ಲೆನ್ಸ್ ಅನ್ನು ಹೊಂದಿದೆ. ವಿಶಾಲ ಛಾಯಾಗ್ರಹಣಕ್ಕಾಗಿ 3.3x ಆಪ್ಟಿಕಲ್ ಜೂಮ್ನೊಂದಿಗೆ 8-ಮೆಗಾಪಿಕ್ಸೆಲ್ ಟೆಲಿಫೋಟೋ ಶೂಟರ್ ಅನ್ನು ಸಹ ನಾವು ನೋಡಬಹುದು
OnePlus 10 Pro ಸ್ಮಾರ್ಟ್ಪೋನಿನಲ್ಲಿ ಸೆಲ್ಫಿಗಾಗಿ ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೋನಿ IMX615 ಕ್ಯಾಮೆರಾವನ್ನು f/2.4 ಲೆನ್ಸ್ನೊಂದಿಗೆ ಹೊಂದಿಸಲಾಗಿದೆ. ಇನ್ನು ಈ ಫೋನ್ 256GB ವರೆಗೆ UFS 3.1 ಸಂಗ್ರಹಣೆಯನ್ನು ನೀಡುತ್ತದೆ, ಆದರೆ, ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಲಾಗುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು.. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಹಾಗೆಯೇ USB ಟೈಪ್-C ಪೋರ್ಟ್ ಸೇರಿವೆ. ಬೋರ್ಡ್ನಲ್ಲಿರುವ ಸಂವೇದಕಗಳಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್, ಸಾಮೀಪ್ಯ ಸಂವೇದಕ ಮತ್ತು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಸೇರಿವೆ. OnePlus 10 Pro 80W ಸೂಪರ್ ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ (ವೈರ್ಡ್) ಮತ್ತು 50W ಫ್ಲ್ಯಾಶ್ ಚಾರ್ಜ್ (ವೈರ್ಲೆಸ್) ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.
Oneplus 10 Pro India Launch Date Set For March 31.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm