ಬ್ರೇಕಿಂಗ್ ನ್ಯೂಸ್
23-03-22 09:22 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಒಪ್ಪೊವಿನ ಜನಪ್ರಿಯ K-ಸರಣಿ ಸ್ಮಾರ್ಟ್‌ಫೋನ್‌ಗಳ ಪಟ್ಟಿಗೆ ಇಂದು ನೂತನ 'Oppo K10' ಸ್ಮಾರ್ಟ್‌ಫೋನ್ ಸೇರ್ಪಡೆಗೊಂಡಿದೆ. ಇಂದು Oppo ಕಂಪೆನಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ 'Oppo K10' ಸ್ಮಾರ್ಟ್‌ಫೋನನ್ನು ಸರಳವಾಗಿ ಬಿಡುಗಡೆ ಮಾಡಲಾಗಿದ್ದು, 8GB RAM ನೊಂದಿಗೆ ಜೋಡಿಸಲ್ಪಟ್ಟಿರುವ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್, 33W ವೇಗದ ಚಾರ್ಜಿಂಗ್‌ಗೆ ಬೆಂಬಲದ 5,000mAh ಬ್ಯಾಟರಿ ಮತ್ತು 90Hz ರಿಫ್ರೆಶ್ ದರದಂತಹ ವೈಶಿಷ್ಟ್ಯ ಗಳೊಂದಿಗೆ 'Oppo K10' ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ತರಲಾಗಿದೆ. 'Oppo K10' ಸ್ಮಾರ್ಟ್‌ಫೋನ್ ಬೆಲೆಗಳು 14,990 ರೂ.ಗಳಿಂದ ಆರಭಗೊಂಡಿದ್ದು, ಸ್ಮಾರ್ಟ್‌ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಮತ್ತು ಬೆಲೆಗಳ ಬಗ್ಗೆ ತಿಳಿಯೋಣ ಬನ್ನಿ.
ಭಾರತದಲ್ಲಿ ಹೊಸ Oppo K10 ಸ್ಮಾರ್ಟ್‌ಫೋನಿನ ಬೆಲೆ ಮತ್ತು ಲಭ್ಯತೆ ಕುರಿತಂತೆ ಮೊದಲು ನೋಡುವುದಾದರೆ, ದೇಶದಲ್ಲಿ Oppo K10 ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆಯು 6GB RAM + 128GB ಸ್ಟೋರೇಜ್ ಮಾದರಿಗೆ 14,990 ರೂ.ಗಳಾಗಿವೆ.ಹಾಗೂ 8GB + 128GB ಸ್ಟೋರೇಜ್ ರೂಪಾಂತರದಲ್ಲಿಯೂ ಫೋನ್ ಖರೀದಿಗೆ ಲಭ್ಯವಿದ್ದು 16,990 ರೂ.ಗಳ ಬೆಲೆಯನ್ನು ಹೊಂದಿದೆ. ಇದೇ ಮಾರ್ಚ್ 29 ರಿಂದ ಫ್ಲಿಪ್‌ಕಾರ್ಟ್ ಮತ್ತು Oppo ಆನ್‌ಲೈನ್ ಸ್ಟೋರ್‌ನಲ್ಲಿ Oppo K10 ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿರುತ್ತದೆ. SBI ಬ್ಯಾಂಕ್ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ 2,000 ರೂ. ಹಾಗೂ ಸ್ಟ್ಯಾಂಡರ್ಡ್ ಚಾರ್ಟರ್ಡ್ ಮತ್ತು ಬ್ಯಾಂಕ್ ಆಫ್ ಬರೋಡ್ಸ್ ಗ್ರಾಹಕರು 1,000 ರೂ.ಗಳ ರಿಯಾಯಿತಿಯನ್ನು ಪಡೆಯಲಿದ್ದಾರೆ ಎಂದು ಕಂಪೆನಿ ತಿಳಿಸಿದೆ.
ಡ್ಯುಯಲ್ ಸಿಮ್ (ನ್ಯಾನೋ) ಸಾಮರ್ಥ್ಯದ Oppo K10 ಸ್ಮಾರ್ಟ್‌ಫೋನ್, ಕಂಪನಿಯ ColorOS 11.1 ನೊಂದಿಗೆ ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. 90Hz ರಿಫ್ರೆಶ್ ದರದೊಂದಿಗೆ 6.59-ಇಂಚಿನ ಪೂರ್ಣ-HD+ (1,080x2,412 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿರುವ ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಹೊಂದಿದೆ. Oppo K10 ಫೋನ್ ಸ್ನಾಪ್‌ಡ್ರಾಗನ್ 680 SoC ನಿಂದ ಚಾಲಿತವಾಗಿದ್ದು, 8GB RAM ನೊಂದಿಗೆ ಜೋಡಿಸಲಾಗಿದೆ. ಕಂಪೆನಿ ಪ್ರಕಾರ, 'Oppo K10' ಸ್ಮಾರ್ಟ್‌ಫೋನ್ ಬಳಕೆಯಾಗದ ಸಂಗ್ರಹಣೆಯನ್ನು ಬಳಸಿಕೊಂಡು ಹೆಚ್ಚುವರಿ ಡೈನಾಮಿಕ್ 'RAM ವಿಸ್ತರಣೆಯನ್ನು' ಬೆಂಬಲಿಸುತ್ತದೆ. 128GB ಅಂತರ್ಗತ ಸಂಗ್ರಹಣೆಯನ್ನು ಹೊಂದಿರುವ ಫೋನಿನಲ್ಲಿ ಮೀಸಲಾದ ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಹುದು ಎಂದು ಕಂಪೆನಿ ಹೇಳಿದೆ.
ಇನ್ನು Oppo K10 ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2-ಮೆಗಾಪಿಕ್ಸೆಲ್ ಬೊಕೆ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ. ಕಂಪನಿಯ ಪ್ರಕಾರ, ಕಡಿಮೆ ಬೆಳಕಿನ ಛಾಯಾಗ್ರಹಣಕ್ಕಾಗಿ ಇದು ನೈಟ್‌ಸ್ಕೇಪ್ ಮೋಡ್ ಅನ್ನು ಒಳಗೊಂಡಿದೆ ಮತ್ತು 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆಗೊಂಡಿದೆ. ಹ್ಯಾಂಡ್‌ಸೆಟ್‌ನಲ್ಲಿ ಸ್ಟಿರಿಯೊ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿನ ಸಂಪರ್ಕ ಆಯ್ಕೆಗಲ್ಲಿ Wi-Fi, 4G LTE, ಬ್ಲೂಟೂತ್ v5, ಮತ್ತು GPS/ A-GPS ಮತ್ತು 3.5mm ಆಡಿಯೋ ಜ್ಯಾಕ್ ಸೇರಿಕೊಂಡಿವೆ. USB ಟೈಪ್-C ಮಾದರಿಯಲ್ಲಿ 33W SuperVOOC ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಈ ಹ್ಯಾಂಡ್‌ಸೆಟ್ ನಲ್ಲಿ 5,000mAh ಬ್ಯಾಟರಿಯನ್ನು ಅಳವಡಿಸಲಾಗಿದೆ.
Oppo K10 With Snapdragon 680 Launched In India Price, Specifications.
13-09-25 04:31 pm
HK News Desk
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm