ಬ್ರೇಕಿಂಗ್ ನ್ಯೂಸ್
10-03-22 08:12 pm Source: Vijayakarnataka ಡಿಜಿಟಲ್ ಟೆಕ್
ಚೀನಾ ಮೂಲದ ವಿಶ್ವದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವ OnePlus ಕಂಪೆನಿ ಇತ್ತೀಚೆಗೆ ತನ್ನ OnePlus 10 Pro ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿತ್ತು. ಚೀನಾದಲ್ಲಿ ಈ OnePlus 10 Pro ಸ್ಮಾರ್ಟ್‌ಫೋನ್ ಭರ್ಜರಿ ಮಾರಾಟವಾದ ನಂತರದ ಕೆಲ ದಿನಗಳ ನಂತರ ಭಾರತದಲ್ಲಿ OnePlus 10 Pro ಸ್ಮಾರ್ಟ್‌ಫೋನ್ ಬಿಡುಗಡೆಯ ಬಗ್ಗೆ ಸಾಕಷ್ಟು ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಇದೀಗ ಭಾರತದಲ್ಲಿ ಬಹುತೇಕ ಖಚಿತವಾಗಬಹುದಾದ ದಿನಾಂಕಗಳನ್ನು ಹೊತ್ತು ಹೊಸದೊಂದು ಸುದ್ದಿ ಬಂದಿದೆ.! ಹೌದು, ಜನಪ್ರಿಯ ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರು ಹೇಳುವಂತೆ, ಭಾರತದಲ್ಲಿ OnePlus 10 Pro ಸ್ಮಾರ್ಟ್‌ಫೋನ್ ಅನ್ನು ಮಾರ್ಚ್ 22 ಅಥವಾ ಮಾರ್ಚ್ 24 ರಂದು ಬಿಡುಗಡೆ ಮಾಡಬಹುದು ಎಂದು ಹೇಳಲಾಗಿದೆ.
ಮುಂಬರುವ ಕೆಲವೇ ದಿನಗಳಲ್ಲಿ ಭಾರತದಲ್ಲಿ OnePlus 10 Pro ಅನ್ನು ಟೀಸಿಂಗ್ ಮಾಡಲು ಬ್ರ್ಯಾಂಡ್ ಪ್ರಾರಂಭಿಸಲಿದೆ ಎಂದು ತಿಳಿದಿರುವ ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರು, OnePlus 10 Pro ಸ್ಮಾರ್ಟ್‌ಫೋನ್ ಅನ್ನು ಮಾರ್ಚ್ 22 ಅಥವಾ ಮಾರ್ಚ್ 24 ರಂದು ಪ್ರಾರಂಭಿಸುವ ಬಗ್ಗೆ ಹೇಳಿದ್ದಾರೆ. ಇದಲ್ಲದೆ, ಬೆಲೆಯ ಬಗ್ಗೆ ಯಾವುದೇ ಅಧಿಕೃತ ಪದಗಳಿಲ್ಲದಿದ್ದರೂ ಸಹ, ಬ್ರಾರ್ ಅವರು ನೂತನ OnePlus 10 Pro ಸ್ಮಾರ್ಟ್‌ಫೋನ್‌ನ ಟಾಪ್ ಬೆಲೆ ಸುಮಾರು 60,000 ರೂ.ಗಳಾಗಿರಬಹುದು ಎಂದು ಹೇಳಿದ್ದಾರೆ. ಸದ್ಯಕ್ಕೆ OnePlus ಕಂಪೆನಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಲ್ಲವಾದರೂ ನಾವು ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರ ಮಾಹಿತಿಗಳನ್ನು ಖಂಡಿತವಾಗಿ ಪರಿಗಣಿಸಲೇಬೇಕು ಎನ್ನುವಷ್ಟು ಅವರಿದಂದ ಹೊರಬಿದ್ದ ಸುದ್ದಿಗಳು ನಿಜವಾಗಿರುತ್ತವೆ.
ಇನ್ನು ಚೀನಾದಲ್ಲಿ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ OnePlus 10 Pro ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳನ್ನು ನೀಡುವುದಾದರೆ, ನೂತನ OnePlus 10 Pro ಸ್ಮಾರ್ಟ್‌ಫೋನ್ ದೊಡ್ಡದಾದ 6.7-ಇಂಚಿನ QHD+ (1,440×3,216 ಪಿಕ್ಸೆಲ್‌ಗಳು) ಬಾಗಿದ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 20.1:9 ಆಕಾರ ಅನುಪಾತದೊಂದಿಗೆ ಮತ್ತು 1Hz ಮತ್ತು 120Hz ನಡುವಿನ ಡೈನಾಮಿಕ್ ರಿಫ್ರೆಶ್ ದರವನ್ನು ಒಳಗೊಂಡಿರುವ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯು 1300ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದೆ ಮತ್ತು ರಕ್ಷಣೆಯ ಹೆಚ್ಚುವರಿ ಪದರಕ್ಕಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಅನ್ನು ಒಳಗೊಂಡಿದೆ. ಈ OnePlus 10 Pro ಸಾಧನವು ಡ್ಯುಯಲ್ ನ್ಯಾನೊ ಸಿಮ್ ಸ್ಲಾಟ್‌ಗಳನ್ನು ಹೊಂದಿದೆ ಮತ್ತು ಆಂಡ್ರಾಯ್ಡ್ 12 ನಿಂದ ಕಲರ್ ಓಎಸ್ 12.1 ಜೊತೆಗೆ ಚಾಲಿತವಾಗಿದೆ.
ಈ ಹ್ಯಾಂಡ್ಸೆಟ್ ನಲ್ಲಿ ಕ್ವಾಲ್ಕಾಮ್ನ ಸ್ನಾಪ್ಡ್ರಾಗನ್ 8 Gen1 ಚಿಪ್ಸೆಟ್ ಅನ್ನು 12GB RAM ನೊಂದಿಗೆ ಜೋಡಿಸಲಾಗಿದೆ. ಸಾಧನವು 256GB ಯ ಆಂತರಿಕ ಸಂಗ್ರಹಣೆಯನ್ನು ನೀಡುತ್ತದೆ. ಕ್ಯಾಮರಾ ಮಾಡ್ಯೂಲ್ ಅನ್ನು ನೋಡುವುದಾದರೆ, ಈ OnePlus 10 Pro 48MP ಪ್ರಾಥಮಿಕ ಸಂವೇದಕದಿಂದ 50MP ಅಲ್ಟ್ರಾ-ವೈಡ್-ಆಂಗಲ್ ಸಂವೇದಕ ಮತ್ತು 8MP ಟೆಲಿಫೋಟೋ ಸಂವೇದಕದಿಂದ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ನೊಂದಿಗೆ ಬರುತ್ತದೆ. ಸಾಧನವು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲವನ್ನು ಸಹ ಹೊಂದಿದೆ. ಸಾಧನದ ಮುಂಭಾಗವು 32MP ಸೆಲ್ಫಿ ಶೂಟರ್ ಅನ್ನು ಹೊಂದಿದೆ. 5,000mAh ಬ್ಯಾಟರಿಯಿಂದ ಬೆಂಬಲಿತವಾಗಿರುವ ಈ ಫೋನ್ 80W ಸೂಪರ್ ಫ್ಲ್ಯಾಶ್ ಚಾರ್ಜ್ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಫ್ಲ್ಯಾಶ್ ಚಾರ್ಜ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ.
Oneplus 10 Pro Could Arrive On This Date In India.
13-09-25 04:31 pm
HK News Desk
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm