ಬ್ರೇಕಿಂಗ್ ನ್ಯೂಸ್
09-03-22 09:50 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ ಇಂದು Redmi Note 11 Pro 5G ಸರಣಿ ಸ್ಮಾರ್ಟ್‌ಫೋನ್‌ಗಳೊಂದಿಗೆ ಬಹುನಿರೀಕ್ಷಿತ Redmi Watch Lite 2 ಕೂಡ ಬಿಡುಗಡೆಗೊಂಡಿದೆ. ಫಿಟ್ನೆಸ್ ಅನ್ನು ಪ್ರೀತಿಸುವ ಜನರಿಗಾಗಿಯೇ ತಯಾರಿಸಲಾದ ವಿಶೇಷ ವಾಚ್ ಇದಾಗಿದ್ದು, SPO2 ಮಾನಿಟರಿಂಗ್ ವೈಶಿಷ್ಟ್ಯದೊಂದಿಗೆ, 24-ಗಂಟೆಗಳ ಹೃದಯ ಬಡಿತ ಟ್ರ್ಯಾಕಿಂಗ್ ಮತ್ತು 10 ದಿನಗಳ ಬ್ಯಾಟರಿ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ನೀವು ಮಧ್ಯ ಬೆಲೆ ಶ್ರೇಣಿಯ ವಿಭಾಗದಲ್ಲಿ ಸ್ಮಾರ್ಟ್ ವಾಚ್ ಅನ್ನು ಹುಡುಕುತ್ತಿದ್ದರೆ, ಕೈಗೆಟುಕುವ ಬೆಲೆಯಲ್ಲಿ ಲಾಂಚ್ ಆಗಿರುವ Redmi Watch Lite 2 ಸ್ಮಾರ್ಟ್‌ವಾಚ್ ನಿಮ್ಮ ಅತ್ಯುತ್ತಮ ಆಯ್ಕೆಯಾಗಬಹುದು. ಹಾಗಾದರೆ, ಇಂದು ಮಾರುಕಟ್ಟೆಗೆ ಎಂಟ್ರಿ ನೀಡಿರುವ ನೂತನ Redmi Watch Lite 2 ಸ್ಮಾರ್ಟ್‌ವಾಚ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ
ರೆಡ್‌ಮಿ ಪರಿಚಯಿಸಿರುವ ನೂತನ Redmi Watch Lite 2 ಸ್ಮಾರ್ಟ್‌ವಾಚ್ ವೈಶಿಷ್ಟ್ಯಗಳನ್ನು ನೋಡುವುದಾದರೆ, ಈ ಹೊಸ Redmi Watch Lite 2 ಸ್ಮಾರ್ಟ್‌ವಾಚ್ 1.55-ಇಂಚಿನ ಟಿಎಫ್ಟಿ ಪ್ರದರ್ಶನವನ್ನು 450nits ನ ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ. ಸಾಧನದ ಬಳಕೆದಾರರು 120 ವಾಚ್ ಫೇಸ್‌ಗಳನ್ನು ಮತ್ತು 100 ವ್ಯಾಯಾಮ ವಿಧಾನಗಳನ್ನು ಪ್ರವೇಶಿಸಬಹುದು ಮತ್ತು ಇದು 17 ವೃತ್ತಿಪರ ವಿಧಾನಗಳನ್ನು ಯೋಗ ಮತ್ತು ಹಿಯಿಟ್ (ಉನ್ನತ-ತೀವ್ರತೆಯ ಮಧ್ಯಂತರ ತರಬೇತಿ) ಒಳಗೊಂಡಿರುತ್ತದೆ. ಈ ಸ್ಮಾರ್ಟ್‌ವಾಚ್ 5ATM ರೇಟೆಡ್ ಆಗಿದ್ದು, ಇದು ಡೈವಿಂಗ್, ರಾಫ್ಟಿಂಗ್ ಮತ್ತು ಸ್ನಾರ್ಕಲಿಂಗ್ಗೆ ಬೆಂಬಲ ಹೊಂದಿರುವ 50 ಮೀಟರ್ಗಳಷ್ಟು ನೀರು-ನಿರೋಧಕವಾಗಿದೆ. ಈ ಸಾಧನವು ಅಂತರ್ಗತ ಜಿಪಿಎಸ್ ಟ್ರ್ಯಾಕಿಂಗ್ನೊಂದಿಗೆ ಬರುತ್ತದೆ ಅಂದರೆ ಇದು ಸ್ಮಾರ್ಟ್‌ಫೋನ್‌ಗೆ ಸಂಪರ್ಕ ಹೊಂದಿರಬೇಕಿಲ್ಲ
Redmi Watch Lite 2 ಸಾಧನವು 24-ಗಂಟೆಗಳ ಹೃದಯದ ಬಡಿತದ ಟ್ರ್ಯಾಕಿಂಗ್ನೊಂದಿಗೆ ನಿರಂತರ SPO2 ಮಾನಿಟರಿಂಗ್ ಅನ್ನು ನೀಡುತ್ತದೆ. ಹಾಗೂ ಈ ಸಾಧನವನ್ನು ಬಳಸಿಕೊಂಡು ಬಳಕೆದಾರರು ತಮ್ಮ ನಿದ್ರೆ ಮತ್ತು ಒತ್ತಡವನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಇದು ಉಸಿರಾಟದ ವ್ಯಾಯಾಮ ಮತ್ತು ಮುಟ್ಟಿನ ಚಕ್ರಗಳನ್ನು ಟ್ರ್ಯಾಕ್ ಮಾಡಲು ಸಹ ಬೆಂಬಲಿಸುತ್ತದೆ. ಕಂಪೆನಿಯು ಈ Redmi Watch Lite 2 ಸ್ಮಾರ್ಟ್‌ವಾಚ್ 262MAH ಬ್ಯಾಟರಿಯನ್ನು ಹೊಂದಿದ್ದು, ಈ ಸಾಧನವು 14 ಗಂಟೆಗಳ ನಿರಂತರ ಜಿಪಿಎಸ್-ಶಕ್ತಗೊಂಡ ಫಿಟ್ನೆಸ್ ಟ್ರ್ಯಾಕಿಂಂಗ್ ಸಾಮರ್ಥ್ಯವನ್ನು ಹೊಂದಿದೆ. ಒಂದೇ ಚಾರ್ಜ್‌ನಲ್ಲಿ 10 ದಿನಗಳವರೆಗೆ ಕೆಲಸ ನಿರ್ವಹಿಸುವ ಬಗ್ಗೆ ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಸಾಧನವನ್ನು ಮ್ಯಾಗ್ನೆಟಿಕ್ಚಾರ್ಜಿಂಗ್ ಪೋರ್ಟ್ ಮೂಲಕ ಚಾರ್ಜ್ ಕೂಡ ಮಾಡಬಹುದಾಗಿದೆ.
Redmi Watch Lite 2 ಬ್ಲೂಟೂತ್ v5 ಸಂಪರ್ಕವನ್ನು ಬೆಂಬಲಿಸುತ್ತದೆ ಮತ್ತು ಆಂಡ್ರಾಯ್ಡ್ 6.0 ಅಥವಾ ಐಒಎಸ್ 10 ಮತ್ತು ನಂತರ ಸಾಧನಗಳಿಗೆ ಸಂಪರ್ಕ ಹೊಂದುತ್ತದೆ. ಸಂಗೀತ ನಿಯಂತ್ರಣ, ಹವಾಮಾನ, ಸಂದೇಶ ಅಧಿಸೂಚನೆಗಳು, ಒಳಬರುವ ಕರೆ ಅಧಿಸೂಚನೆಗಳು ಮತ್ತು ನನ್ನ ಫೋನ್ ಅನ್ನು ಕಂಡುಕೊಳ್ಳುವ ಫೀಚರ್ಸ್ ಹೊಂದಿದೆ. ಕಂಪನಿಯ ಪ್ರಕಾರ ಸ್ಮಾರ್ಟ್ ವಾಚ್ ಸುಮಾರು 35 ಗ್ರಾಂ ತೂಗುತ್ತದೆ. ಇನ್ನು ನೂತನ Redmi Watch Lite 2 ಸ್ಮಾರ್ಟ್‌ವಾಚ್ ಭಾರತದಲ್ಲಿ 4,999 ರೂ.ಗಳಿಗೆ ಬಿಡುಗಡೆಯಾಗಿದೆ. ಮೊದಲ ಮಾರಾಟವು ಮಾರ್ಚ್ 15 ರಿಂದ ಅಮೆಜಾನ್, ರಿಲಯನ್ಸ್ ಡಿಜಿಟಲ್, MI ಯ ಅಧಿಕೃತ ವೆಬ್ಸೈಟ್ ಮತ್ತು ಚಿಲ್ಲರೆ ಅಂಗಡಿಗಳ ಮೂಲಕ ಪ್ರಾರಂಭವಾಗುತ್ತದೆ. ನೀಲಿ, ಕಪ್ಪು ಮತ್ತು ದಂತ ಬಣ್ಣಗಳಲ್ಲಿ ಈ ಸ್ಮಾರ್ಟ್‌ವಾಚ್ ಖರೀದಿಗೆ ಲಭ್ಯವಿರುತ್ತದೆ.
Redmi Watch 2 Lite Launched In India For Very Affordable Price
13-09-25 04:31 pm
HK News Desk
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm