ಬ್ರೇಕಿಂಗ್ ನ್ಯೂಸ್
25-09-21 01:48 pm Gizbot, Mantesh ಡಿಜಿಟಲ್ ಟೆಕ್
ಪ್ರತಿಷ್ಠಿತ ಮೊಬೈಲ್ ತಯಾರಕರು ಕಂಪನಿಗಳು ಟೆಕ್ ಮಾರುಕಟ್ಟೆಗೆ ಅಪ್ಡೇಟ್ ಆವೃತ್ತಿಯ ನೂತನ ಫೋನ್ಗಳ ಅನಾವರಣ ಮಾಡುತ್ತ ಸಾಗಿವೆ. ಅವುಗಳಲ್ಲಿ ಕೆಲವು ಸಂಸ್ಥೆಗಳು ಈಗಾಗಲೇ ಜನಪ್ರಿಯ ಆಗಿರುವ ತಮ್ಮ ಸ್ಮಾರ್ಟ್ಫೋನ್ ಸರಣಿಗಳ ಹೆಸರಿನಲ್ಲಿಯೇ ನೂತನ ಮಾಡೆಲ್ ಫೋನ್ ಬಿಡುಗಡೆ ಮಾಡುತ್ತವೆ. ಹಾಗೆಯೇ ಮತ್ತೆ ಕೆಲವು ಕಂಪನಿಗಳು ಹೊಸ ತರಹದ ಫೋನ್ ಅನಾವರಣ ಮಾಡುತ್ತವೆ. ಪ್ರಸ್ತುತ ಈ ವರ್ಷದಲ್ಲಿ ಬಿಡುಗಡೆ ಕಂಡ ಹಲವು ಫೋನ್ಗಳು ಈಗಾಗಲೇ ಸದ್ದು ಮಾಡುತ್ತಿವೆ. ಭಾರತದಲ್ಲಿ ಮುಂದಿನ ವಾರ ಮತ್ತೆ ಕೆಲವು ಕುತೂಹಲಕಾರಿ ಫೀಚರ್ಸ್ಗಳ ಫೋನ್ಗಳು ಲಗ್ಗೆ ಇಡಲಿವೆ.
ಹೌದು, ಮೊಬೈಲ್ ಕಂಪನಿಗಳು ಪ್ರಸಕ್ತ ವರ್ಷದಲ್ಲಿ ಹಲವು ಆಕರ್ಷಕ ಫೀಚರ್ಸ್ಗಳ ಫೋನ್ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿವೆ. ಆ ಪೈಕಿ ಮುಂದಿನ ವಾರ ವಿವೋ, ಶಿಯೋಮಿ ಹಾಗೂ ಸ್ಯಾಮ್ಸಂಗ್ ಸೇರಿದಂತೆ ಕೆಲವು ಬ್ರ್ಯಾಂಡ್ಗಳು ಹೊಸ ಫೋನ್ ಬಿಡುಗಡೆ ಮಾಡುವುದಾಗಿ ಸೂಚಿಸಿವೆ. ಅವುಗಳಲ್ಲಿ ಬಹುತೇಕ ಫೋನ್ಗಳು ಬಜೆಟ್ ದರದಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹಾಗಾದರೇ ಮುಂದಿನ ವಾರ ಗ್ರ್ಯಾಂಡ್ ಎಂಟ್ರಿ ಪಡೆಯಲಿರುವ ಫೋನ್ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಸ್ಯಾಮ್ಸಂಗ್ ಗ್ಯಾಲಕ್ಸಿ M52 5G
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ಈಗಾಗಲೇ ಗ್ಯಾಲಕ್ಸಿ ಸರಣಿಯಲ್ಲಿ ಹಲವು ಫೋನ್ ಪರಿಚಯಿಸಿ ಭಾರೀ ಸದ್ದು ಮಾಡಿದೆ. ಇದೀಗ 5G ಮಾಡೆಲ್ಗಳಿಗೆ ಕಾಲಿಟ್ಟಿದ್ದು, ನೂತನವಾಗಿ ಸ್ಯಾಮ್ಸಂಗ್ ಗ್ಯಾಲಕ್ಸಿ M52 5G ಫೋನ್ ಅನ್ನು ಇದೇ ಸೆಪ್ಟೆಂಬರ್ 28 ಕ್ಕೆ ಬಿಡುಗಡೆ ಮಾಡುವುದಾಗಿ ನಿಗದಿಯಾಗಿದೆ. ಇ ಕಾಮರ್ಸ್ ದೈತ್ಯ ಅಮೆಜಾನ್ ಲಿಸ್ಟ್ ಪ್ರಕಾರ, ಗ್ಯಾಲಕ್ಸಿ M52 5G ಫೋನ್ 120Hz ರೀಫ್ರೇಶ್ ರೇಟ್ ಪಡೆದಿರಲಿದ್ದು, AMOLED ಮಾದರಿಯ ಡಿಸ್ಪ್ಲೇ ಹೊಂದಿರಲಿದೆ. ಹಾಗೆಯೇ ಸ್ನಾಪ್ಡ್ರಾಗನ್ 778G SoC ಪ್ರೊಸೆಸರ್ ಪಡೆದಿರಲಿದ್ದು, ಆಂಡ್ರಾಯ್ಡ್ 11 ಓಎಸ್ ಇರಲಿದೆ. ಹಾಗೆಯೇ ಟ್ರಿಪಲ್ ರಿಯರ್ ಕ್ಯಾಮೆರಾ ಸೆನ್ಸಾರ್ ರಚನೆ ಪಡೆದಿರಲಿದೆ. ಜೊತೆಗೆ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್ ನೀಡುತ್ತದೆ ಎನ್ನಲಾಗಿದೆ.
ಶಿಯೋಮಿ ಮಿ 11 ಲೈಟ್ 5G NE
ಶಿಯೋಮಿ ಈ ಹೊಸ ಸ್ಮಾರ್ಟ್ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.55-ಇಂಚಿನ ಫುಲ್ ಹೆಚ್ಡಿ + ಡಿಸ್ಪ್ಲೇಯನ್ನು ಹೊಂದಿರಲಿದೆ. ಇನ್ನು ಈ ಡಿಸ್ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ 90Hz ರಿಫ್ರೆಶ್ ರೇಟ್ ಹೊಂದಿರಲಿದೆ ಎನ್ನಲಾಗಿದೆ. ಹಾಗೆಯೇ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778G SoC ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ MIUI 12.5 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಇದು 8GB RAM ಮತ್ತು 256GB ವರೆಗೆ ಇಂಟರ್ ಸ್ಟೋರೇಜ್ ಆಯ್ಕೆಯನ್ನು ಒದಗಿಸಲಿದೆ.
ವಿವೋ X 70 ಸರಣಿ
ವಿವೋ ಕಂಪೆನಿ ಹೊಸ ವಿವೋ X 70 ಸ್ಮಾರ್ಟ್ಫೋನ್ ಸರಣಿಯನ್ನು ಭಾರತದಲ್ಲಿ ಲಾಂಚ್ ಮಾಡಲಿದೆ. ಈ ಸ್ಮಾರ್ಟ್ಫೋನ್ ಸರಣಿ ವಿವೋ X70, ವಿವೋ X70 ಪ್ರೊ ಮತ್ತು ವಿವೋ X70 ಪ್ರೊ+ ಅನ್ನು ಒಳಗೊಂಡಿದೆ. ಇನ್ನು ಈ ಮೂರು ಸ್ಮಾರ್ಟ್ಫೋನ್ಗಳು 12GB RAM ಅನ್ನು ಪಡೆದುಕೊಂಡಿವೆ.ಅಲ್ಲದೆ ವಿವೋ X70 ಸರಣಿಯ ಕ್ಯಾಮರಾಗಳನ್ನು Zeiss ಟ್ಯೂನ್ ಮಾಡಲಾಗಿದೆ. ಇದರಲ್ಲಿ ವಿವೋ X70 ಸ್ಮಾರ್ಟ್ಫೋನ್ 6.56 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ವಿವೋ X70 ಪ್ರೊ ಪ್ಲಸ್ ಸ್ಮಾರ್ಟ್ಫೋನ್ 6.78 ಇಂಚಿನ ಹೆಚ್ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಸೆ.30 ಲಾಂಚ್ ಎನ್ನಲಾಗಿದೆ.
ಒಪ್ಪೋ F19s
ಜನಪ್ರಿಯ ಒಪ್ಪೋ ಕಂಪನಿಯು ನೂತನವಾಗಿ ಒಪ್ಪೋ F19s ಫೋನ್ ಅನ್ನು ಭಾರತದಲ್ಲಿ ಇದೇ ಸೆಪ್ಟೆಂಬರ್ 27 ರಂದು ಬಿಡುಗಡೆ ಮಾಡಲಿದೆ. ಹೊಸ ಒಪ್ಪೋ ಫೋನ್ ಈಗಿರುವ ಜನಪ್ರಿಯವಾಗಿರುವ ಒಪ್ಪೋ F19 ಲಿಸ್ಟ್ಗೆ ಸೇರುತ್ತದೆ. ಇನ್ನು ಈ ಫೋನ್ 5,000mAh ಬ್ಯಾಟರಿ ಬ್ಯಾಕ್ಅಪ್ ಅನ್ನು ಹೊಂದಿರುತ್ತದೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ 33W VOOC ಫ್ಲ್ಯಾಶ್ ಚಾರ್ಜ್ ಟೆಕ್ ಅನ್ನು ಬೆಂಬಲಿಸುತ್ತದೆ. ಸ್ನ್ಯಾಪ್ಡ್ರಾಗನ್ 662 SoC ಇರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 OS ಇರಲಿದೆ.
17-03-25 11:54 am
Bangalore Correspondent
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
17-03-25 11:02 pm
Udupi Correspondent
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
Mangalore, Chakravarthy Sulibele, FIR: ಅನ್ಯಧರ...
17-03-25 04:27 pm
Mangalore Accident, Harekala, Death: ಹರೇಕಳದಲ್...
17-03-25 11:29 am
UT Khader, Mangalore, Tulu Academy: ತುಳು ಕಲಿತ...
16-03-25 10:55 pm
17-03-25 07:51 pm
Mangalore Correspondent
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm