ಬ್ರೇಕಿಂಗ್ ನ್ಯೂಸ್
20-09-21 02:18 pm Gizbot, Mantesh ಡಿಜಿಟಲ್ ಟೆಕ್
ಒಪ್ಪೋ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ ನೂತನವಾಗಿ ಒಪ್ಪೋ A16 ಸ್ಮಾರ್ಟ್ಫೋನ್ ಅನ್ನು ಲಾಂಚ್ ಮಾಡಿದೆ. ಈ ಹೊಸ ಫೋನ್ ಹಿಂದಿನ ಒಪ್ಪೊ A15 ನಂತೆ ಬಜೆಟ್ ಪ್ರೈಸ್ ಟ್ಯಾಗ್ನಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಹಿಲಿಯೋ P35 SoC ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೂ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಅನ್ನು ಪಡೆದುಕೊಂಡಿದೆ.
ಹೌದು, ಒಪ್ಪೋ ಕಂಪನಿಯು ನೂತನವಾಗಿ ಒಪ್ಪೋ A16 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ 4GB RAM ಮತ್ತು 64GB ಆಂತರಿಕ ಸ್ಟೋರೇಜ್ನ ಒಂದೇ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಪಡೆದಿದೆ. ಇನ್ನು ಬಜೆಟ್ ದರದಲ್ಲಿ ಕಾಣಿಸಿಕೊಂಡಿರುವ ಈ ಸ್ಮಾರ್ಟ್ಫೋನಿನ ಆರಂಭಿಕ ಬೆಲೆಯು 13,990ರೂ.ಗಳಾಗಿದ್ದು, ಕ್ರಿಸ್ಟಲ್ ಬ್ಲ್ಯಾಕ್ ಹಾಗೂ ಪರ್ಲ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನುಳಿದಂತೆ ಒಪ್ಪೋ A16 ಫೋನ್ ಯಾವೆಲ್ಲಾ ಇತರೆ ಫೀಚರ್ಸ್ಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಡಿಸ್ಪ್ಲೇ ರಚನೆ ಹೇಗಿದೆ
ಒಪ್ಪೋ A16 ಸ್ಮಾರ್ಟ್ಫೋನ್ 720 x 1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.52 ಇಂಚಿನ HD + LCD ಮಾದರಿಯ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್ಪ್ಲೇ 60Hz ರಿಫ್ರೆಶ್ ರೇಟ್, 60Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದೆ. ಹಾಗೆಯೇ 480 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಅನ್ನು ಪಡೆದಿದ್ದು, ಇದರ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 269ppi ಆಗಿದೆ. ಇದು 88.7 ಶೇಕಡಾ ಸ್ಕ್ರೀನ್ ಟು ಬಾಡಿ ಅನುಪಾತ ಮತ್ತು 1,500: 1 ಕಾಂಟ್ರಾಸ್ಟ್ ರೇಷನ್ ಅನ್ನು ಪಡೆದಿದೆ.

ಪ್ರೊಸೆಸರ್ ಬಲ ಯಾವುದು
ಒಪ್ಪೋ A16 ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ಆಧಾರಿತ ಕಲರ್ ಓಎಸ್ 11.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವೇರಿಯಂಟ್ ಆಯ್ಕೆ ಅನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 256GB ವರೆಗೂ ಬಾಹ್ಯಾ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾದ ಆಯ್ಕೆಯನ್ನು ಹೊಂದಿದೆ.
ಕ್ಯಾಮೆರಾ ಸೆನ್ಸಾರ್ ಎಷ್ಟಿದೆ
ಒಪ್ಪೋ A16 ಸ್ಮಾರ್ಟ್ಫೋನ್ ಹಿಂಬದಿಯಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ಮೂರನೆ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮೊನೊ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಒಪ್ಪೋ A16 ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಹಾಗೆಯೇ ಒಪ್ಪೋ A16 ಫೋನ್ ಫೇಸ್ ಅನ್ಲಾಕ್ ಫೀಚರ್ ಮತ್ತು ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೊಂದಿಗೆ ಬರುತ್ತದೆ. ಸ್ಲ್ಯಾಶ್ ಪ್ರತಿರೋಧಕ ಸೌಲಭ್ಯ ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4ಜಿ, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ ವಿ 5, ಜಿಪಿಎಸ್, 3.5 ಎಂಎಂ ಹೆಡ್ಫೋನ್ ಜ್ಯಾಕ್ ಮತ್ತು ಚಾರ್ಜಿಂಗ್ಗಾಗಿ ಯುಎಸ್ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಒಪ್ಪೋ A16 ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿದ್ದು, ಇದರ ಬೆಲೆಯು 13,990ರೂ. ಆಗಿದೆ. ಕ್ರಿಸ್ಟಲ್ ಬ್ಲ್ಯಾಕ್ ಹಾಗೂ ಪರ್ಲ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಜನಪ್ರಿಯ ಇ ಕಾಮರ್ಸ್ ತಾಣ ಅಮೆಜಾನ್ ಹಾಗೂ ಪ್ರಮುಖ ರೀಟೇಲ್ ಸ್ಟೋರ್ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಅಮೆಜಾನ್ ತಾಣದಲ್ಲಿ ಮೂರು ತಿಂಗಳ ನೋ ಕಾಸ್ಟ್ ಇಎಮ್ಐ ಸೌಲಭ್ಯ ಸಿಗಲಿದೆ. ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೇ 750 ರೂ ಇನ್ಸ್ಟಂಟ್ ಡಿಸ್ಕೌಂಟ್ ಸಹ ಲಭ್ಯವಾಗಲಿದೆ.
31-10-25 08:10 pm
HK News Desk
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
31-10-25 10:47 pm
Mangalore Correspondent
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm