ಬ್ರೇಕಿಂಗ್ ನ್ಯೂಸ್
23-08-21 01:48 pm Gizbot, Mutthuraju H M ಡಿಜಿಟಲ್ ಟೆಕ್
ಪ್ರಸ್ತುತ ದಿನಗಳಲ್ಲಿ ಕ್ರಿಪ್ಟೋಕರೆನ್ಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಡಿಜಿಟಲ್ ಕರೆನ್ಸಿ ಜನಪ್ರಿಯತೆಯನ್ನು ಹ್ಯಾಕರ್ಗಳು ಕೂಡ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಗೂಗಲ್ ತನ್ನ ಪ್ಲೇ ಸ್ಟೋರ್ನಲ್ಲಿ ಕ್ರಿಪ್ಟೋಕರೆನ್ಸಿಗೆ ಸಂಬಂದಿಸಿದ 8 ಅಪಾಯಕಾರಿ ಆಪ್ಗಳನ್ನು ನಿಷೇಧಿಸಿದೆ. ಒಂದು ವೇಳೆ ನೀವು ಈ ಅಪ್ಲಿಕೇಶನ್ಗಳನ್ನು ನಿಮ್ಮ ಮೊಬೈಲ್ ಫೋನ್ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದರೆ, ತಕ್ಷಣ ಅವುಗಳನ್ನು ಡಿಲೀಟ್ ಮಾಡಿ.
ಹೌದು, ಗೂಗಲ್ ಪ್ಲೇ ಸ್ಟೋರ್ ಕ್ರಿಪ್ಟೋಕರೆನ್ಸಿ ಮೈನಿಂಗ್ಗೆ ಸಂಬಂಧಿಸಿದ ಎಂಟು ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡಿದೆ. ಏಕೆಂದರೆ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರ ಮೇಲೆ ದಾಳಿ ಮಾಡಲು ಹ್ಯಾಕರ್ಗಳು ಈ ಅಪ್ಲಿಕೇಸನ್ಗಳನ್ನು ಬಳಸುತ್ತಿದ್ದಾರೆ ಅನ್ನೊದು ಬಹಿರಂಗವಾಗಿದೆ. ಈ ಆಪ್ಗಳನ್ನು ಬಳಸಿ, ಹ್ಯಾಕರ್ಗಳು ರಹಸ್ಯವಾಗಿ ಅಪಾಯಕಾರಿ ಮಾಲ್ವೇರ್ ಮತ್ತು ಆಡ್ವೇರ್ ಹೊಂದಿರುವ ದುರುದ್ದೇಶಪೂರಿತ ಆಪ್ಗಳನ್ನು ಸ್ಥಾಪಿಸುತ್ತಿದ್ದಾರೆ. ಆದರಿಂದ ಈ ಅಪ್ಲಿಕೇಶನ್ಗಳನ್ನು ನಿಷೇದಿಸಲಾಗಿದೆ. ಹಾಗಾದ್ರೆ ಗೂಗಲ್ ಪ್ಲೇ ಸ್ಟೋರ್ ಬ್ಯಾನ್ ಮಾಡಿದ ಅಪ್ಲಿಕೇಶನ್ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೆಕ್ಯುರಿಟಿ ಸಂಸ್ಥೆಯಾದ ಟ್ರೆಂಡ್ ಮೈಕ್ರೊದಿಂದ ಬಂದ ವರದಿಯ ಪ್ರಕಾರ, ಬ್ಯಾನ್ ಆದ ಎಲ್ಲಾ 8 ಆಪ್ಗಳು ಆಂಡ್ರಾಯ್ಡ್ ಬಳಕೆದಾರರನ್ನು ಜಾಹೀರಾತುಗಳನ್ನು ನೋಡುವಂತೆ ಮೋಸಗೊಳಿಸುತ್ತಿವೆ. ಅಲ್ಲದೆ ಬಳಕೆದಾರರು ಈ ಅಪ್ಲಿಕೇಶನ್ಗಳನ್ನು ತಮ್ಮ ಸ್ಮಾರ್ಟ್ಫೋನ್ನಲ್ಲಿ ಇನ್ಸ್ಟಾಲ್ ಮಾಡಲು ಹಣ ಪಾವತಿಸಬೇಕಾಗಿತ್ತು. ಸದ್ಯ ಭದ್ರತಾ ಸಂಸ್ಥೆಯು ತನ್ನ ಸಂಶೋಧನೆಗಳನ್ನು ವರದಿ ಮಾಡಿದ ತಕ್ಷಣ, ಗೂಗಲ್ ಎಲ್ಲಾ 8 ಅಪ್ಲಿಕೇಶನ್ಗಳನ್ನು ಪ್ಲೇ ಸ್ಟೋರ್ನಿಂದ ತಕ್ಷಣವೇ ತೆಗೆದುಹಾಕಿದೆ. ಗೂಗಲ್ ಈ ಆಪ್ಗಳನ್ನು ಪ್ಲೇ ಸ್ಟೋರ್ನಿಂದ ತೆಗೆದುಹಾಕಿದ್ದರೂ, ಅವುಗಳನ್ನು ಅನೇಕ ಬಳಕೆದಾರರು ಡೌನ್ಲೋಡ್ ಮಾಡಿರಬಹುದು. ಆದ್ದರಿಂದ, ನಿಮ್ಮ ಫೋನ್ನಲ್ಲಿ ಈ 8 ಆಪ್ಗಳನ್ನು ಇನ್ಸ್ಟಾಲ್ ಮಾಡಿದ್ದರೆ, ತಕ್ಷಣವೇ ಡಿಲೀಟ್ ಮಾಡಿ.

ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆದು ಹಾಕಲಾದ ಅಪ್ಲಿಕೇಶನ್ಗಳು
* ಬಿಟ್ಫಂಡ್ಗಳು - ಕ್ರಿಪ್ಟೋ ಕ್ಲೌಡ್ ಮೈನಿಂಗ್
* ಬಿಟ್ ಕಾಯಿನ್ ಮೈನರ್ - ಕ್ಲೌಡ್ ಮೈನಿಂಗ್
* ಬಿಟ್ಕಾಯಿನ್ (ಬಿಟಿಸಿ) - ಪೂಲ್ ಮೈನಿಂಗ್ ಕ್ಲೌಡ್ ವಾಲೆಟ್
* ಕ್ರಿಪ್ಟೋ ಹೋಲಿಕ್ - ಬಿಟ್ ಕಾಯಿನ್ ಕ್ಲೌಡ್ ಮೈನಿಂಗ್
* ದೈನಂದಿನ ಬಿಟ್ಕಾಯಿನ್ ಬಹುಮಾನಗಳು - ಕ್ಲೌಡ್ ಆಧಾರಿತ ಗಣಿಗಾರಿಕೆ ವ್ಯವಸ್ಥೆ
* ಬಿಟ್ಕಾಯಿನ್ 2021
* ಮೈನ್ಬಿಟ್ ಪ್ರೊ - ಕ್ರಿಪ್ಟೋ ಕ್ಲೌಡ್ ಮೈನಿಂಗ್ ಮತ್ತು ಬಿಟಿಸಿ ಮೈನರ್ಸ್
* Ethereum (ETH) - ಪೂಲ್ ಮೈನಿಂಗ್ ಕ್ಲೌಡ್
ಇನ್ನೂ 120 ಕ್ಕೂ ಹೆಚ್ಚು ನಕಲಿ ಕ್ರಿಪ್ಟೋಕರೆನ್ಸಿ ಮೈನಿಂಗ್ ಆಪ್ಗಳು ಆನ್ಲೈನ್ನಲ್ಲಿ ಲಭ್ಯವಿವೆ ಎಂದು ಸಂಶೋಧನಾ ವರದಿ ಹೇಳಿದೆ. "ಕ್ರಿಪ್ಟೋಕರೆನ್ಸಿ ಮೈನಿಂಗ್ ಸಾಮರ್ಥ್ಯಗಳನ್ನು ಹೊಂದಿರದ ಮತ್ತು ಅಪ್ಲಿಕೇಶನ್ನಲ್ಲಿನ ಜಾಹೀರಾತುಗಳನ್ನು ನೋಡುವಂತೆ ಬಳಕೆದಾರರನ್ನು ಮೋಸಗೊಳಿಸುವ ಈ ಆಪ್ಗಳು ಜುಲೈ 2020 ರಿಂದ ಜುಲೈ 2021 ರವರೆಗೆ ಜಾಗತಿಕವಾಗಿ 4,500 ಕ್ಕೂ ಹೆಚ್ಚು ಬಳಕೆದಾರರ ಮೇಲೆ ಪರಿಣಾಮ ಬೀರಿವೆ" ಎಂದು ವರದಿ ಹೇಳಿದೆ.

ನಕಲಿ ಕ್ರಿಪ್ಟೋಮಿನಿಂಗ್ ಅಪ್ಲಿಕೇಶನ್ ಅನ್ನು ನೀವು ಗುರುತಿಸುವುದು ಹೇಗೆ?
(Kannada Copy of Gizbot Kannada)
28-10-25 10:03 pm
Bangalore Correspondent
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
29-10-25 06:55 pm
Mangalore Correspondent
ಸುಳ್ಳು ಕೇಸು ಹಾಕುತ್ತಿದ್ದಾರೆಂದು ಮನವಿ ಕೊಡಲು ಬಂದವ...
29-10-25 03:57 pm
ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸಲು ಸ್ಪೀಕರ್ ಖಾದರ್ ನ...
29-10-25 03:16 pm
Smart City, Kadri Park Road: ಕದ್ರಿ ಪಾರ್ಕ್ ರಸ್...
28-10-25 08:36 pm
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
29-10-25 02:53 pm
Mangalore Correspondent
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm
ಕೋಟಿ ರೂ. ಚೀಟಿ ವ್ಯವಹಾರ ಇದೆ, ಹಣ ಸಾಲ ಕೊಟ್ಟರೆ ದುಪ...
27-10-25 05:29 pm
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm