ಬ್ರೇಕಿಂಗ್ ನ್ಯೂಸ್
16-08-21 02:50 pm Gizbot, Mutthuraju H M ಡಿಜಿಟಲ್ ಟೆಕ್
ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ ವಲಯಕ್ಕೆ ಹೆಚ್ಚಿನ ಒತ್ತನ್ನು ನೀಡಿದೆ. ಅದರಂತೆ ಹೊಸಹೊಸ ಸ್ಟಾರ್ಟ್ಅಪ್ಗಳು, ಅಪ್ಲಿಕೇಶನ್ ಡೆವಲಪರ್ಗಳಿಗೆ ಉತ್ತೇಜನ ನೀಡುತ್ತಿದೆ. ವೋಕಲ್ ಫಾರ್ ಲೋಕಲ್ ಎಂಬ ಸ್ಲೋಗನ್ ಮಾದರಿಯಲ್ಲಿ ಸ್ವದೇಶದಲ್ಲಿ ಕ್ರಿಯೆಟ್ ಆದ ಅಪ್ಲಿಕೇಶನ್ಗಳ ಬಳಸುವಂತೆ ಹೇಳಿದೆ. ಇದಕ್ಕೆ ಅನುಗುಣವಾಗಿ ಸಾಕಷ್ಟು ಅಪ್ಲಿಕೇಶನ್ಗಳು ಭಾರತದಲ್ಲಿ ಲಾಂಚ್ ಆಗಿವೆ. ಭಾರತದ ಯುವ ಅಪ್ಲಿಕೇಶನ್ ಡೆವಲಪರ್ಗಳು ಹೊಸ ಹೊಸ ಅಪ್ಲಿಕೇಶನ್ ಪರಿಚಯಿಸುವುದಕ್ಕೆ ಮುಂದಾಗಿದ್ದಾರೆ.
ಹೌದು, ಭಾರತ ಸರ್ಕಾರ ಕಳೆದ ವರ್ಷ, ಭಾರತದಲ್ಲಿ ಅತ್ಯಂತ ಜನಪ್ರಿಯ ಗೇಮ್ ಎನಿಸಿಕೊಂಡಿದ್ದ, PUBG ಮೊಬೈಲ್, ಕಿರು ವೀಡಿಯೋ ಪ್ಲಾಟ್ಫಾರ್ಮ್ ಟಿಕ್ಟಾಕ್ ಮತ್ತು ಕ್ಯಾಮ್ಕ್ಯಾನರ್, PUBG ಮೊಬೈಲ್ ಲೈಟ್, ಶೇನ್ ಒಳಗೊಂಡಂತೆ ಹಲವಾರು ಚೀನೀ ಅಪ್ಲಿಕೇಶನ್ಗಳನ್ನು ದೇಶದಲ್ಲಿ ನಿಷೇಧಿಸಿತು. ಜೊತೆಗೆ ಜಾಗತಿಕವಾಗಿ ಜನಪ್ರಿಯತೆ ಪಡೆದುಕೊಂಡಿರುವ ಅಪ್ಲಿಕೇಶನ್ಗಳಿಗೆ ಪರ್ಯಾಯವಾಗಿ ಹೊಸ ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸಲು ಭಾರತೀಯ ಆಪ್ ಡೆವಲಪರ್ಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಹಾಗಾದ್ರೆ ಭಾರತದಲ್ಲಿಯೇ ತಯಾರಾಗಿರುವ ಪ್ರಮುಖ ಅಪ್ಲಿಕೇಶನ್ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಭಾರತದಲ್ಲಿ ಚೀನಾ ಮೂಲದ ಅಪ್ಲಿಕೇಶನ್ಗಳು ಬ್ಯಾನ್ ಆದ ನಂತರ ಅದಕ್ಕೆ ಪಯಾರ್ಯವಾಗಿ ಹಲವು ಅಪ್ಲಿಕೇಶನ್ಗಳು ಸ್ವದೇಶಿ ಡೆವಲಪರ್ಗಳಿಂದ ಅಭಿವೃದ್ದಿಯಾಗಿವೆ. ಹಲವಾರು ಆಪ್ ಡೆವಲಪರ್ಗಳು ಮತ್ತು ಸ್ಟಾರ್ಟಪ್ಗಳು ಜೋಶ್, ಚಿಂಗಾರಿ, ಮಿಟ್ರಾನ್, ಮೊಜ್, ರೊಪೊಸೊ ಸೇರಿದಂತೆ ಹಲವು ಶಾರ್ಟ್ ವೀಡಿಯೊಸ್ ಅಪ್ಲಿಕೇಶನ್ಗಳ ಮೂಲಕ ಟಿಕ್ಟಾಕ್ ಪ್ರತಿಸ್ಪರ್ಧಿಗಳನ್ನು ಪರಿಚಯಿಸಿವೆ. PUBG ಮೊಬೈಲ್ಗೆ FAU-G ನಂತಹ ಪರ್ಯಾಯಗಳನ್ನು ಪರಿಚಯಿಸಿದ ಹಲವಾರು ಡೆವಲಪರ್ಗಳು ಸಹ ಇದ್ದಾರೆ. ಸದ್ಯ ಭಾರತದಲ್ಲಿ ತಯಾರಿಸಿದ 5 ಸಾಮಾಜಿಕ ಅಪ್ಲಿಕೇಶನ್ಗಳನ್ನು ಕೆಳಗಿನ ಹಂತಗಳಲ್ಲಿ ತಿಳಿಯಿರಿ.
ಜೋಶ್
ಜೋಶ್ ಭಾರತದ ಅತಿದೊಡ್ಡ ಶಾರ್ಟ್ ವಿಡಿಯೋ ಮೇಕರ್ ಆಪ್ ಆಗಿದೆ. ಟಿಕ್ಟಾಕ್ ಪ್ರಿಯರನ್ನು ಸೆಳೆಯುತ್ತಿರುವ ಮುಂಚೂಣಿಯಲ್ಲಿ ಶಾರ್ಟ್ ವೀಡಿಯೋ ಮೇಕರ್ ಅಪ್ಲಿಕೇಶನ್ ಇದಾಗಿದೆ. ಈಗಾಗಲೇ ಜೋಶ್ ಅಪ್ಲಿಕೇಶನ್ ಸಾಕಷ್ಟು ಬಳಕೆದಾರರನ್ನು ಸೆಳೆದಿದ್ದು, ಇದೀಗ ಇನ್ನೂ ಹೆಚ್ಚಿನ ಗನ ಸೆಳೆಯುತ್ತಿದೆ. ನಿಮ್ಮ ಮೆಚ್ಚಿನ ಮನರಂಜನೆಯನ್ನು ಅನುಸರಿಸಲು ಈ ವೀಡಿಯೊ ಸಮುದಾಯ ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ.
ಮೊಜ್ -ಶಾರ್ಟ್ ವೀಡಿಯೊ ಅಪ್ಲಿಕೇಶನ್
ಮೊಜ್ ಇದೀಗ ದೇಶದಲ್ಲಿ ಲಭ್ಯವಿರುವ ಜನಪ್ರಿಯ ಶಾರ್ಟ್ ವಿಡಿಯೋ ಪ್ಲಾಟ್ಫಾರ್ಮ್ಗಳಲ್ಲಿ ಒಂದಾಗಿದೆ. ಕಳೆದ ವರ್ಷ ಭಾರತದಲ್ಲಿ ಟಿಕ್ಟಾಕ್ ಅನ್ನು ನಿಷೇಧಿಸಿದ ನಂತರ, ಭಾರತದಲ್ಲಿ ತಯಾರಿಸಿದ ಶಾರ್ಟ್ ವೀಡಿಯೋ ಅಪ್ಲಿಕೇಶನ್ಗಳನ್ನು ಪರಿಚಯಿಸಲಾಗಿದೆ. ಅವುಗಳಲ್ಲಿ ಮೋಜು ಕೂಡ ಒಂದು. ಮೊಜ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಲ್ಲೂ ಡೌನ್ಲೋಡ್ ಮಾಡಲು ಲಭ್ಯವಿದೆ.
ಚಿಂಗಾರಿ ಅಪ್ಲಿಕೇಶನ್
ಟಿಕ್ಟಾಕ್ಗೆ ಪ್ರತಿಸ್ಪರ್ಧಿಯಾಗಿರುವ ಚಿಂಗಾರಿ ಅಪ್ಲಿಕೇಶನ್ ಟಿಕ್ಟಾಕ್ ಮಾದರಿಯನ್ನೇ ಹೊಂದಿದೆ. ಈ ಶಾರ್ಟ್ ವೀಡಿಯೊ ಪ್ಲಾಟ್ಫಾರ್ಮ್ ಚಿಂಗಾರಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಲ್ಲೂ ಡೌನ್ಲೋಡ್ ಮಾಡಲು ಲಭ್ಯವಿದೆ. ಆಪ್ ಡೆವಲಪರ್ಗಳು ಅಲ್ಲಿ ಸೃಷ್ಟಿಕರ್ತರಿಗೆ ವಿಶೇಷ ಫೀಚರ್ಸ್ಗಳನ್ನು ಪರಿಚಯಿಸಲು ಮುಂದಾಗಿದ್ದಾರೆ. ಇನ್ನು ಈಗಾಗಲೇ ಗೂಗಲ್ ಪ್ಲೇ ಸ್ಟೋರ್ನಲ್ಲಿ, ಚಿಂಗಾರಿ ಆಪ್ ಅನ್ನು ಒಂದು ಕೋಟಿ ಆಂಡ್ರಾಯ್ಡ್ ಬಳಕೆದಾರರು ಡೌನ್ಲೋಡ್ ಮಾಡಿದ್ದಾರೆ.
ಕೂ ಅಪ್ಲಿಕೇಶನ್
ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಗೆ ಪ್ರತಿಸ್ಪರ್ಧಿಯಾಗಿ ಭಾರತದಲ್ಲಿ ಕೂ ಎಂಬ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಕೂ ಆಪ್ ದೇಶದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿದೆ. ವಿಶೇಷವಾಗಿ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಮತ್ತು ಭಾರತೀಯ ಸರ್ಕಾರದ ನಡುವೆ ಹೊಸ ಐಟಿ ನಿಯಮಗಳ ಕುರಿತು ಚರ್ಚೆ ನಡೆಯುತ್ತಿದ್ದಾಗ ಇದು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಕೊ ಆಪ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಲ್ಲೂ ಡೌನ್ಲೋಡ್ ಮಾಡಲು ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ, ಕೂ ಆಪ್ ಅನ್ನು 5,000,000 ಕ್ಕೂ ಹೆಚ್ಚು ಡೌನ್ಲೋಡ್ ಹೊಂದಿದೆ.
ಸಂದೇಶ ಆಪ್
ಸಂದೇಶ್ ಅನ್ನು NIC eGov ಮೊಬೈಲ್ ಆಪ್ಸ್ ಅಭಿವೃದ್ಧಿಪಡಿಸಿದೆ. ಇದು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಲು ಲಭ್ಯವಿದೆ. ಸಂದೇಶ್ ಅಪ್ಲಿಕೇಶನ್ ವಾಟ್ಸಾಪ್ಗೆ ಪರ್ಯಾಯವಾಗಿದೆ. ಇನ್ನು ಈ ಅಪ್ಲಿಕೇಶನ್ ಆರಂಭದಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಲಭ್ಯವಿತ್ತು, ಆದರೆ ಈಗ ಎಲ್ಲರಿಗೂ ಲಭ್ಯವಿದೆ.
(Kannada Copy of Gizbot Kannada)
17-03-25 11:54 am
Bangalore Correspondent
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
17-03-25 11:02 pm
Udupi Correspondent
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
Mangalore, Chakravarthy Sulibele, FIR: ಅನ್ಯಧರ...
17-03-25 04:27 pm
Mangalore Accident, Harekala, Death: ಹರೇಕಳದಲ್...
17-03-25 11:29 am
UT Khader, Mangalore, Tulu Academy: ತುಳು ಕಲಿತ...
16-03-25 10:55 pm
17-03-25 07:51 pm
Mangalore Correspondent
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm