ಬ್ರೇಕಿಂಗ್ ನ್ಯೂಸ್
30-06-21 05:24 pm Source: Vijaya Karnataka ಡಿಜಿಟಲ್ ಟೆಕ್
ಸ್ಮಾರ್ಟ್ಫೋನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಒನ್ ಪ್ಲಸ್ ಕಂಪೆನಿಯಿಂದ ಮೂರು ಹೊಸ ಮೊಬೈಲ್ ಬಿಡುಗಡೆ ಆಗಿದೆ. ಒನ್ ಪ್ಲಸ್ 9, ಒನ್ ಪ್ಲಸ್ 9 ಪ್ರೋ ಮತ್ತು ಒನ್ ಪ್ಲಸ್ 9R ಸ್ಮಾರ್ಟ್ಫೋನುಗಳು ಮಾರ್ಚ್ 23 ರಂದು ಸಂಜೆ 7:30ಕ್ಕೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದರ ಜೊತೆಗೆ ಒನ್ ಪ್ಲಸ್ ಕಂಪೆನಿ ತನ್ನ ಮೊದಲ ಸ್ಮಾರ್ಟ್ ವಾಚ್ ಅನ್ನೂ ರಿಲೀಸ್ ಮಾಡಿದೆ.
ಈ ಫೋನ್ ಸಾಕಷ್ಟು ಹೊಸತನದಿಂದ ಕೂಡಿದ್ದು, ಆಕರ್ಷಕ ಫೀಚರ್ ಗಳನ್ನು ನೀಡಿದೆ. ಒನ್ ಪ್ಲಸ್ 9 ಹಾಗೂ ಒನ್ ಪ್ಲಸ್ 9 ಪ್ರೋ ಸ್ಮಾರ್ಟ್ಫೋನ್ ಚೀನಾದ ಪ್ರತಿಷ್ಠಿತ ವೆಬ್ ಸೈಟ್ 3C (CCC) ಮತ್ತು Ministry of Industry and Information Technology (MIIT) ನಲ್ಲಿ ಕಂಡುಬಂದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾದ್ರೆ ಈ ಮೂರು ಸ್ಮಾರ್ಟ್ಫೋನ್ ಪೈಕಿ ಒನ್ಪ್ಲಸ್ 9 ಮೊಬೈಲ್ ಹೇಗಿದೆ?, ಏನು ವಿಶೇಷತೆ? ಎಂಬ ಬಗೆಗಿನ ವಿಮರ್ಶೆ ಇಲ್ಲಿದೆ.
ಒನ್ಪ್ಲಸ್ 9 ಕ್ಯಾಮೆರಾ:
ಒನ್ಪ್ಲಸ್ 9 ಸ್ಮಾರ್ಟ್ಫೋನ್ ನೋಡಲು ಥೇಟ್ ಒನ್ಪ್ಲಸ್ 8T ಮಾದರಿಯಲ್ಲಿದೆ. ವಿಶೇಷವಾಗಿ ಕ್ಯಾಮೆರಾಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ವೃತ್ತಿಪರ ಕ್ಯಾಮೆರಾ ತಯಾರಿಸುವ ಹ್ಯಾಸೆಲ್ಬ್ಲಾಡ್ ಕಂಪನಿಯ ಜೊತೆ ಒಪ್ಪಂದ ಮಾಡಿ ಹಿಂಭಾಗದಲ್ಲಿ 3 ಕ್ಯಾಮೆರಾ ಅಳವಡಿಸಲಾಗಿದ್ದು, 48 ಮೆಗಾಫಿಕ್ಸೆಲ್ನ ಸೋನಿ IMX689 ಪ್ರೈಮರಿ ಕ್ಯಾಮೆರಾ, 50 ಮೆಗಾಫಿಕ್ಸೆಲ್ನ IMX766 ಆಲ್ಟ್ರಾ ವೈಡ್ ಕ್ಯಾಮೆರಾ ಹಾಗೂ 2 ಮೆಗಾಫಿಕ್ಸೆಲ್ನ ಮೋನೋಕ್ರೊಮ್ ಕ್ಯಾಮೆರಾ ಇದರಲ್ಲಿದೆ. ಇದು ತುಂಬಾನೇ ವಿಶೇಷವಾಗಿದ್ದು ಇದರಲ್ಲಿ ತೆಗೆದ ಫೋಟೋಗಳು ನ್ಯಾಚುರಲ್ ಆಗಿ ಬರುತ್ತವೆ. ಕತ್ತಲ ಪ್ರದೇಶದಲ್ಲಿ ಹೆಚ್ಚು ಲೈಟಿಂಗ್ ಹೊಂದಿ ಉತ್ತಮ ಫೋಟೋ ಪಡೆಯಬಹುದು. ಅಂತೆಯೆ ಬೆಳಕಿನ ಪ್ರದೇಶದಲ್ಲೂ ವಿವಿಧ ಆಯ್ಕೆಯ ಮೂಲಕ ಫೋಟೋ ತೆಗೆಯಬಹುದು. ಇನ್ನೂ 16 ಮೆಗಾಫಿಕ್ಸೆಲ್ನ ಸೆಲ್ಫಿ ಕ್ಯಾಮೆರಾ ಕೂಡ ಉತ್ತಮವಾಗಿದೆ. ಸೆಲ್ಫಿ ಲವರ್ಸ್ಗೆ ಈ ಕ್ಯಾಮೆರಾ ಹೇಳಿಮಾಡಿಸಿದಂತಿದೆ. ಕಲರ್ ಅನ್ನು ತುಂಬಾ ಚೆನ್ನಾಗಿ ಇದು ಅರ್ಥಹಿಸುತ್ತದೆ. ಹಿಂದಿನ ಒನ್ಪ್ಲಸ್ ಫೋನಿಗೆ ಹೋಲಿಸಿದರೆ ಈ ಬಾರಿಯ ವಿಡಿಯೋ ಕ್ಯಾಮೆರಾ ಕೂಡ ಸಾಕಷ್ಟು ಬೆಳವಣಿಗೆ ಕಂಡಿದೆ.
ಡಿಸ್ ಪ್ಲೇ ಹೇಗಿದೆ?:
ಒನ್ಪ್ಲಸ್ 9 ಸ್ಮಾರ್ಟ್ಫೋನಿನ 6.55 ಇಂಚಿನ ಹೆಚ್ಡಿ AMOLED ಡಿಸ್ಪ್ಲೇ ಅತ್ಯುತ್ತಮವಾಗಿದೆ. 2400x1080p ಸ್ಕ್ರೀನ್ ರೆಸೊಲೂಷನ್ ಹೊಂದಿದ್ದು, 625 nits ಬ್ರೈಟ್ ನೆಸ್ ಸಾಮರ್ಥ್ಯ ಇದೆ. ಇದು ಬ್ರೈಟ್ ಲೈಟ್ ಇರುವ ಜಾಗದಲ್ಲಿ ಉತ್ತಮವಾಗಿ ಗೋಚರಿಸುತ್ತದೆ. ಜೊತೆಗೆ ಡಿಸ್ ಪ್ಲೇ ತುಂಬಾನೆ ಸ್ಮೂತ್ ಆಗಿದೆ. ನೇರ ಸೂರ್ಯನ ಬೆಳಕಿನಲ್ಲಿ ಮೊಬೈಲ್ ವೀಕ್ಷಿಸುವಾಗ ಓದಲು ಅಥವಾ ಗೇಮ್ ಆಡಲು ಯಾವುದೇ ಅಡ್ಡಿ-ಆತಂಕ ಕಂಡಿಲ್ಲ. ಕೈಬೆರಳಿನಿಂದ ಮೊಬೈಲ್ ಅನ್ನು ತಲುಪಲು ಸುಲಭ ಮತ್ತು ಮುಖ್ಯವಾಗಿ, ಪೋನನ್ನು ಅನ್ ಲಾಕ್ ಮಾಡಲು ಮತ್ತು ಮಾಡೆಲ್ ಅನ್ನು ಗುರುತಿಸಲು ಇದರ ಬಯೋಮ್ಯಾಟ್ರಿಕ್ ಸೆನ್ಸಾರ್ ಹೆಚ್ಚು ವೇಗವಾಗಿ ಕೆಲಸ ಮಾಡುತ್ತದೆ.
ಕಾರ್ಯನಿರ್ವಹಣೆ:
ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 ಪ್ರೊಸೆಸರ್ ಅನ್ನು ಹೊಂದಿದ್ದು, 5ಜಿ ಸ್ಮಾರ್ಟ್ಫೋನ್ ಆಗಿದೆ. ಇದು ಅತಿ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಗೇಮಿಂಗ್ ಆಡುವಾಗ ಯಾವುದೇ ರೀತಿಯ ತೊಂದರೆ ಎದುರಾಗಿಲ್ಲ. ವಿಡಿಯೋ ನೋಡುವಾಗ ಅಥವಾ ಆ್ಯಪ್ ಓಪನ್ ಮಾಡುವಾಗ ಹ್ಯಾಂಗ್ ಆದ ಅನುಭವ ಆಗಿಲ್ಲ. 12GB RAM ಮತ್ತು 258GB ಇಂಟರ್ ಸ್ಟೋರೇಜ್ ಸಾಮರ್ಥ್ಯ ಕೂಡ ಉತ್ತಮವಾಗಿದೆ. ಸಾಧಾರಣ ಗೇಮ್ ಆಡಲು ನಮಗೆ 8GB ಸಾಕಾಗುತ್ತದೆ. ಆದರೆ, ಈ ಮೊಬೈಲ್ನಲ್ಲಿ 12GB ಇರುವುದು ಮತ್ತಷ್ಟು ಉಪಕಾರಿ. ಇನ್ನೂ ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 11 ಮೂಲಕ ಕಾರ್ಯನಿರ್ವಹಿಸುತ್ತದೆ. ಸ್ಯಾಮ್ಸಂಗ್ಒನ್ಯುಐನ ಕೆಲವು ಅಂಶಗಳು ಕೂಡ ಇದರಲ್ಲಿ ಅಡಗಿವೆ. ಹೀಗಾಗಿ ಒನ್ಪ್ಲಸ್ 9 ಅನ್ನು ಮಾರುಕಟ್ಟೆಯಲ್ಲಿರುವ ಅತಿ ವೇಗದ ಸ್ಮಾರ್ಟ್ಫೋನ್ ಎಂದು ಹೇಳಬಹುದು. ಕರೆ ಮಾಡುವಾಗ/ಸ್ವೀಕರಿಸುವಾಗ ಉತ್ತಮ ನಿರ್ವಹಣೆ ನೀಡುವುದು. ಒಂದಕ್ಕಿಂತ ಹೆಚ್ಚು ಆ್ಯಪ್ಸ್ ಬಳಸುವಾಗ ಅಥವಾ ಗೇಮ್ ಆಡುವಾಗ ವೇಗ ಯಾವುದೆ ಕಾರಣಕ್ಕೂ ನಿಧಾನವಾಗುವುದಿಲ್ಲ. ವಿಡಿಯೋ ಎಡಿಟಿಂಗ್ ಮಾಡುವಾಗ ಕೂಡ ಯಾವುದೇ ತೊಂದರೆ ಅನುಭವಿಸಿಲ್ಲ.
ಬ್ಯಾಟರಿ ಹೇಗಿಗೆ?:
ಒನ್ಪ್ಲಸ್ 9 ಸ್ಮಾರ್ಟ್ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಪವರ್ ಹೊಂದಿದೆ. ನೀವು ದಿನ ಪೂರ್ತಿ ಸತತ ಉಪಯೋಗಿಸಿದರೂ ಇದು ಒಂದು ದಿನ ಚಾರ್ಜ್ ಬರುವುದರಲ್ಲಿ ಅನುಮಾನವಿಲ್ಲ. ಜೂಮ್ ಮೀಟಿಂಗ್, 2-3 ಗಂಟೆ ಮ್ಯೂಸಿಕ್, ಯೂಟ್ಯೂಬ್ ವಿಡಿಯೋ, ಗೇಮ್ ಆಡಿ ಆಡಿ ಬೋರ್ ಆಯಿತಷ್ಟೆ ವಿನಃ ಬ್ಯಾಟರಿ ಪವರ್ ಕಡಿಮೆ ಆಗಿಲ್ಲ. ವಿಶೇಷ ಎಂದರೆ ಕೇವಲ 29 ನಿಮಿಷಗಳಲ್ಲಿ ಇದು ಫುಲ್ ಚಾರ್ಜ್ ಆಗುತ್ತದೆ. 32 ಗಂಟೆಗಳ ಬ್ಯಾಟರಿ ಲೈಫ್ ಇದು ನೀಡುತ್ತದೆ.
ನೆಗೆಟಿವ್ – ಪಾಸಿಟಿವ್ ಏನು:
ಈವರೆಗೆ ನೀವು ಆ್ಯಪಲ್ ಫೋನ್ ಉಪಯೋಗಿಸುತ್ತಿದ್ದರೆ ನಿಮಗೆ ಇದು ಅಷ್ಟೊಂದು ಇಷ್ಟವಾಗುವುದಿಲ್ಲ. ವೈಯರ್ ಲೆಸ್ ಚಾರ್ಜಿಂಗ್ ಸಪೋರ್ಟ್ ಇಲ್ಲ. ಅಲ್ಲದೆ ಇಂಟರ್ನಲ್ ಸ್ಟೋರೆಜ್ ಅನ್ನು ಹೆಚ್ಚಿಸುವ ಆಯ್ಕೆ ಕೂಡ ಇಲ್ಲ. ಡಿಸ್ಲೇ, ಹೊಸ ವಿನ್ಯಾಸದ ಕ್ಯಾಮೆರಾ, ಕಾರ್ಯಕ್ಷಮತೆ ಮತ್ತು ಬ್ಯಾಟರಿ ಉತ್ತಮವಾಗಿದೆ. ನೀವು ಕ್ಯಾಮೆರಾಕ್ಕೆ ಹೆಚ್ಚು ಒತ್ತು ನೀಡುವವರಾಗಿದ್ದರೆ ಈ ಫೋನ್ ಅನ್ನು ತೆಗೆದುಕೊಳ್ಳಬಹುದು. ಒನ್ಪ್ಲಸ್ 6 ಹಾಗೂ ಒನ್ಪ್ಲಸ್ 5ಟಿ ಗೆ ಹೋಲಿಸಿದರೆ ಒನ್ಪ್ಲಸ್ 9 ಅತ್ಯುತ್ತಮವಾಗಿದೆ.
(Kannada Copy of Vijaya Karnataka)
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm