ಬ್ರೇಕಿಂಗ್ ನ್ಯೂಸ್
10-06-21 03:23 pm GIZBOT Mutthuraju H M ಡಿಜಿಟಲ್ ಟೆಕ್
ಫೇಸ್ಬುಕ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಎಲ್ಲಾ ವಯೋಮಾನದವರನ್ನು ಸೆಳೆದಿರುವ ಸಾಮಾಜಿಕ ಜಾಲತಾಣ ದೈತ್ಯ. ನಗರ ಪ್ರದೇಶದಿಂದ ಹಿಡಿದು ಗ್ರಾಮೀಣ ಪ್ರದೇಶದ ಯುವಜನತೆಯ ವರೆಗೂ ಫೇಸ್ಬುಕ್ ಪ್ರಭಾವ ಬೀರಿದೆ. ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದೇ ಕಾರಣಕ್ಕೆ ಫೇಸ್ಬುಕ್ ಕೂಡ ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಡ್ಯುಯೆಲ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ವಾಚ್ ಪರಿಚಯಿಸಲು ಮುಂದಾಗಿದೆ.
ಹೌದು, ಸೊಶೀಯಲ್ ಮೀಡಿಯಾ ದೈತ್ಯ ಫೇಸ್ಬುಕ್ ಎರಡು ಕ್ಯಾಮೆರಾಗಳನ್ನು ಒಳಗೊಂಡಿರುವ ಮೊದಲ ಸ್ಮಾರ್ಟ್ವಾಚ್ ಅನ್ನು ಪರಿಚಯಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಎರಡು ಕ್ಯಾಮೆರಾಗಳಲ್ಲಿ ಒಂದನ್ನು ವೀಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ ಅಳವಡಿಸಲಾಗುವುದು, ಹಾಗೆಯೇ ಇನ್ನೊಂದು ಕ್ಯಾಮೆರಾವನ್ನು ಸ್ಟೇನ್ಲೆಸ್ ಸ್ಟೀಲ್ ಫ್ರೇಮ್ನಿಂದ ಬೇರ್ಪಡಿಸಿದ ನಂತರ ತುಣುಕನ್ನು ಸೆರೆಹಿಡಿಯಲು ಉದ್ದೇಶಿಸಲಾಗಿದೆ. ಹಾಗಾದ್ರೆ ಈ ಸ್ಮಾರ್ಟ್ವಾಚ್ ವಿನ್ಯಾಸ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಯಾವಾಗಲೂ ಹೊಸತನಕ್ಕೆ ಮಿಡಿಯುವ ಫೇಸ್ಬುಕ್ ಡ್ಯುಯೆಲ್ ಕ್ಯಾಮೆರಾವನ್ನು ಒಳಗೊಂಡ ಸ್ಮಾರ್ಟ್ವಾಚ್ ಪರಿಚಯಿಸುವುದಕ್ಕೆ ಮುಂದಾಗಿದೆ. ಈ ಮೂಲಕ ಸ್ಮಾರ್ಟ್ವಾಚ್ ಪ್ರಿಯರನ್ನು ಸೆಳೆಯುವುದಕ್ಕೆ ಮುಂದಾಗಿದೆ. ಇನ್ನು ಮುಂದಿನ ವರ್ಷ ಈ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಲು ಫೇಸ್ಬುಕ್ ಉದ್ದೇಶಿಸಿದೆ ಎಂದು ದಿ ವರ್ಜ್ನ ವರದಿಯಲ್ಲಿ ಹೇಳಲಾಗಿದೆ, ಆದರೆ ಇದು ಇನ್ನೂ ದೃಡೀಕರಿಸಿಲ್ಲ. ಇಬ್ಬರು ಅನಾಮಧೇಯ ಉದ್ಯೋಗಿಗಳ ಪ್ರಕಾರ, ಕ್ಯಾಮೆರಾ ಹಬ್ಗಾಗಿ ಬಿಡಿಭಾಗಗಳನ್ನು ರಚಿಸಲು ಸಾಮಾಜಿಕ ಮಾಧ್ಯಮ ದೈತ್ಯ ಇತರ ಕಂಪನಿಗಳೊಂದಿಗೆ ಸಹಭಾಗಿತ್ವದಲ್ಲಿದೆ ಎಂದು ವರದಿಯಾಗಿದೆ.
ಇನ್ನು ಯುಎಸ್ನಲ್ಲಿ ನೆಟ್ವರ್ಕ್ ವಾಹಕಗಳೊಂದಿಗೆ ಪಾಲುದಾರರಾಗಲು ಫೇಸ್ಬುಕ್ ಯೋಜಿಸುತ್ತಿದೆ. ಇದರಿಂದಾಗಿ ಮುಂಬರುವ ಸ್ಮಾರ್ಟ್ ವಾಚ್ ಎಲ್ ಟಿಇ ಸಂಪರ್ಕವನ್ನು ಬೆಂಬಲಿಸುತ್ತದೆ ಎನ್ನಲಾಗಿದೆ. ಸದ್ಯದ ಪ್ರಕಟಣೆಯ ಪ್ರಕಾರ, ಸ್ಮಾರ್ಟ್ ವಾಚ್ ಕಪ್ಪು, ಚಿನ್ನ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಸ್ಮಾರ್ಟ್ ವಾಚ್ ಅನ್ನು ಫಿಟ್ನೆಸ್ ಸಾಧನವಾಗಿ ಮಾರಾಟ ಮಾಡುವ ನಿರೀಕ್ಷೆಯಿರುವುದರಿಂದ ಹೃದಯ ಬಡಿತ ಮಾನಿಟರ್ ಅನ್ನು ಸಹ ಹೊಂದಿರಲಿದೆ ಎನ್ನಲಾಗಿದೆ.
ಈ ಸ್ಮಾರ್ಟ್ ವಾಚ್ನ ಮುಂದಿನ ಆವೃತ್ತಿಗಳಿಗಾಗಿ, ಫೇಸ್ಬುಕ್ ತನ್ನ ಎಆರ್ ಗ್ಲಾಸ್ಗಳಲ್ಲಿ ಪ್ರಮುಖ ಪಾತ್ರ ವಹಿಸಲು ಉದ್ದೇಶಿಸಿದೆ. ಸಿಟಿಆರ್ಎಲ್-ಲ್ಯಾಬ್ಗಳನ್ನು ಸ್ವಾಧೀನಪಡಿಸಿಕೊಂಡ ನಂತರ ಗಳಿಸಿದ ತಂತ್ರಜ್ಞಾನವನ್ನು ಬಳಸಲು ಉದ್ದೇಶಿಸಿದೆ. ಎಆರ್ ಕನ್ನಡಕದ ಕನಸನ್ನು ನನಸಾಗಿಸಲು ಫೇಸ್ಬುಕ್ ರೇ-ಬಾನ್ ಜೊತೆ ಪಾಲುದಾರಿಕೆ ಮಾಡಲು ಯೋಜಿಸುತ್ತಿದೆ. ಇದಲ್ಲದೆ, ಫೇಸ್ಬುಕ್ 2022 ರಲ್ಲಿ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಮತ್ತು ಈಗಾಗಲೇ ಅದರ ಎರಡನೆಯ ಮತ್ತು ಮೂರನೇ ತಲೆಮಾರಿನ ಅಭಿವೃದ್ಧಿಯನ್ನು ಪ್ರಾರಂಭಿಸಿದೆ. ಅಲ್ಲದೆ ಈ ಸ್ಮಾರ್ಟ್ ವಾಚ್ಗೆ ಅಂದಾಜು $ 400 (ಅಂದಾಜು 29,000 ರೂ.) ವೆಚ್ಚವಾಗಬಹುದು ಎಂದು ಹೇಳಲಾಗಿದೆ.
(Kannada Copy of Gizbot Kannada)
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm