ಬ್ರೇಕಿಂಗ್ ನ್ಯೂಸ್
09-06-21 03:25 pm GIZBOT Mantesh ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಸಂಸ್ಥೆ ವಿವೋ ಕಂಪೆನಿ ಈಗಾಗಲೇ ಹಲವು ವೈವಿಧ್ಯಮಯ ಸ್ಮಾರ್ಟ್ಫೋನ್ಗಳನ್ನ ಪರಿಚಯಿಸಿದೆ. ಕಂಪನಿಯು ಇದೀಗ ಹೊಸದಾಗಿ ವಿವೋ Y53s 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ನಲ್ಲಿದೆ. ಹಾಗೆಯೇ ಅಧಿಕ ಬ್ಯಾಟರಿ ಬಾಳಿಕೆಯನ್ನು ಹೊಂದಿರುವುದು ಆಕರ್ಷಕ ಎನಿಸಿಕೊಂಡಿದೆ.
ಹೌದು, ವಿವೋ ಸ್ಮಾರ್ಟ್ಫೋನ್ ಕಂಪೆನಿ ತನ್ನ ಹೊಸ ವಿವೋ Y53s 5G ಸ್ಮಾರ್ಟ್ಫೋನ್ ಅನ್ನು ಚೀನಾದ ಮೊಬೈಲ್ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480 SoC ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದೆ. 8GB RAM + 128GB, 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ನ ಆಯ್ಕೆಯನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ 5,000mAh ಬ್ಯಾಟರಿ ಬ್ಯಾಕ್ಅಪ್ ಹೊಂದಿದೆ. ಹಾಗಾದರೇ ವಿವೋ Y53s 5G ಸ್ಮಾರ್ಟ್ಫೋನ್

ಡಿಸ್ಪ್ಲೇ ರಚನೆ
ವಿವೋ Y53s 5G ಸ್ಮಾರ್ಟ್ಫೋನ್ ಅಧಿಕ ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.58 ಇಂಚಿನ ಫುಲ್ ಹೆಚ್ಡಿ+ ಡಿಸ್ಪ್ಲೇಯನ್ನ ಹೊಂದಿದೆ. ಅಲ್ಲದೆ ಈ ಡಿಸ್ಪ್ಲೇಯು ಪಂಚ್ಹೋಲ್ ವಿನ್ಯಾಸವನ್ನ ಹೊಂದಿದ್ದು, 19.5: 9 ರಚನೆಯ ಅನುಪಾತವನ್ನ ಒಳಗೊಂಡಿದೆ. ಸ್ಕ್ರೀನ್ 90Hz ರೀಫ್ರೇಶ್ ರೇಟ್ ಹೊಂದಿದೆ. 163.95x75.3x8.5mm ಸುತ್ತಳತೆ ಪಡೆದಿದ್ದು, 189 ಗ್ರಾಂ ತೂಕವನ್ನು ಹೊಂದಿದೆ.

ಪ್ರೊಸೆಸರ್ ಕಾರ್ಯ
ವಿವೋ Y53s 5G ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480 SoC ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಈ ಸ್ಮಾರ್ಟ್ಫೋನ್ 8GB RAM ಮತ್ತು 256GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಒಳಗೊಂಡಿದೆ.

ಕ್ಯಾಮೆರಾ ವಿನ್ಯಾಸ
ವಿವೋ Y53s 5G ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ ಬೇಸಿಕ್ ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇನ್ನು 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ
ವಿವೋ Y53s 5G ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಅನ್ನು ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವುದಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, GPS ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್ಫೋನ್ನಲ್ಲಿ ಅಕ್ಸೆಲೆರೊಮೀಟರ್, ಗೈರೊಸ್ಕೋಪ್, ಆಂಬಿಯೆಂಟ್ ಲೈಟ್ ಸೆನ್ಸಾರ್ ಮತ್ತು ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ವಿವೋ Y53s 5G ಸ್ಮಾರ್ಟ್ಫೋನ್ 8GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆಯು ಚೀನಾದಲ್ಲಿ CNY 1,799 (ಭಾರತದಲ್ಲಿ ಅಂದಾಜು 20,500ರೂ) ಆಗಿದೆ. 8GB RAM + 128GB ವೇರಿಯಂಟ್ ಬೆಲೆಯು CNY 1,999 (ಭಾರತದಲ್ಲಿ ಅಂದಾಜು 22,800ರೂ.) ಎನ್ನಲಾಗಿದೆ. ಇನ್ನು ಈ ಫೋನ್ ಸೀ ಸಾಲ್ಟ್ ಹಾಗೂ ಸ್ಟಾರೀ ನೈಟ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
(Kannada Copy of Gizbot Kannada)
28-10-25 10:03 pm
Bangalore Correspondent
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
28-10-25 08:36 pm
Mangalore Correspondent
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm